JEE Main 2021: Study Material, Tips And Tricks: ಜೆಇಇ ಮುಖ್ಯ ಪರೀಕ್ಷೆಗೆ ತಯಾರಿ ನಡೆಸಲು ಇಲ್ಲಿದೆ ಸಲಹೆ

ಜೆಇಇ ಮುಖ್ಯ ಪರೀಕ್ಷೆ ತಯಾರಿಗೆ ಇಲ್ಲಿದೆ ಸುಲಭವಾದ ಟಿಪ್ಸ್

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಜೆಇಇ ಮುಖ್ಯ ಮೇ ಪರೀಕ್ಷೆಯನ್ನು ಮುಂದೂಡಿದೆ. ದೇಶಾದ್ಯಂತ COVID-19 ಪ್ರಕರಣಗಳು ಹೆಚ್ಚಾದ ಕಾರಣದಿಂದಾಗಿ ಜಂಟಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ. ನಾಲ್ಕನೇ ಸೆಷನ್ ಪರೀಕ್ಷೆಯನ್ನು ಮೇ 24, 25, 26, 27 ಮತ್ತು 28 ,2021 ಈ ದಿನಾಂಕಗಳಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂದೂಡಲಾಗಿದೆ. ಪರೀಕ್ಷಾ ಪರಿಷ್ಕೃತ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಿದ್ದು, ಅಲ್ಲಿಯವರೆಗೆ ಪರೀಕ್ಷೆಗೆ ಹೇಗೆ ತಯಾರಿ ಹೇಗೆ ನಡೆಸಬೇಕು ಎಂಬ ಸಲಹೆಯನ್ನು ಇಲ್ಲಿ ನೀಡಲಾಗಿದೆ.

ಸಮಯ ನಿರ್ವಹಣೆ:

ಸಮಯ ನಿರ್ವಹಣೆ:

ಅಭ್ತರ್ಥಿಗಳು ಅಗತ್ಯ ಸಾಮಗ್ರಿಗಳೊಂದಿಗೆ ಓದಲು ಆರಂಭಿಸಿ. ಇನ್ನು ಉಳಿದಿರುವ ದಿನಗಳಲ್ಲಿ ಪರೀಕ್ಷಾ ಕೇಂದ್ರದಲ್ಲಿ ಸಮಯ ನಿರ್ವಹಣೆ ಹೇಗೆ ಮಾಡಬೇಕು ಅದಕ್ಕೆ ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಂಡು ಅಧ್ಯಯನ ಮಾಡಬೇಕು ಎಂದು ಯೋಜನೆ ಹಾಕಿಕೊಳ್ಳಿ. ಪರೀಕ್ಷೆಗೆ ಅಧ್ಯಯನ ಜೊತೆಗೆ ಸಮಯವೂ ಅಷ್ಟೇ ಪ್ರಮುಖವಾದದ್ದು ಎಂದು ತಿಳಿದಿರಲಿ. ಹಾಗಾಗಿ ಹೆಚ್ಚಾಗಿ ಸಮಯ ನಿರ್ವಹಣೆ ಮಾಡುವುದನ್ನು ಕಲಿಯಿರಿ.

ಎಲ್ಲಾ ವಿಷಯಗಳನ್ನು ಕವರ್ ಮಾಡಿ:

ಎಲ್ಲಾ ವಿಷಯಗಳನ್ನು ಕವರ್ ಮಾಡಿ:

ಜೆಇಇ ಮುಖ್ಯ ಪರೀಕ್ಷೆ 2021ರ ಪಠ್ಯಕ್ರಮ ಮತ್ತು ಪರೀಕ್ಷೆಯ ಮಾದರಿಯನ್ನು ವಿದ್ಯಾರ್ಥಿಗಳು ಚೆನ್ನಾಗಿ ತಿಳಿದಿರಬೇಕು. ಪರೀಕ್ಷೆಯಲ್ಲಿ ಯಾವ ಪ್ರಶ್ನೆಗಳನ್ನು ಕೇಳಲಾಗುತ್ತದೆ ಯಾವೆಲ್ಲಾ ವಿಷಯಗಳಿಗೆ ಆದ್ಯತೆ ನೀಡಲಾಗಿದೆ. ಇನ್ನು ಪರೀಕ್ಷೆಯ ಮಾದರಿ ಹೇಗಿರುತ್ತದೆ. ಪಠ್ಯಕ್ರಮದಲ್ಲಿ ಯಾವೆಲ್ಲಾ ಪ್ರಮುಖ ಅಂಶಗಳನ್ನು ಕೇಂದ್ರೀಕರಿಸಲಾಗಿರುತ್ತದೆ ಎಂಬೆಲ್ಲಾ ಮಾಹಿತಿಯನ್ನು ಮೊದಲು ತಿಳಿಯಿರಿ. ಆಗ ಮಾತ್ರ ಪರೀಕ್ಷೆಗೆ ಅಗತ್ಯವಾದ ಜ್ಞಾನ ಮತ್ತು ಆತ್ಮಸ್ಥೈರ್ಯ ನಿಮ್ಮದಾಗುತ್ತದೆ.

ಅಧ್ಯಯನ ಸಾಮಗ್ರಿಗಳು:

ಅಧ್ಯಯನ ಸಾಮಗ್ರಿಗಳು:

ಜೆಇಇ ಮುಖ್ಯ 2021 ಪರೀಕ್ಷೆಯನ್ನು ಬರೆಯಲಿರುವ ಅಭ್ಯರ್ಥಿಗಳು ನಿಮಗೆ ಅಗತ್ಯವಿರುವ ಅಧ್ಯಯನ ಸಾಮಗ್ರಿಗಳು ನಿಮ್ಮ ಬಳಿ ಇವೆಯೇ ಎಂದು ಮೊದಲು ಖಚಿತಪಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಪದೇ ಪದೇ ಓದಬೇಕು. ಪರಿಕಲ್ಪನೆಗಳ ಮೇಲೆ ಬಲವಾದ ಹಿಡಿತವನ್ನು ಹೊಂದಿರುವುದು ಯಾವಾಗಲೂ ಜೆಇಇ ಮುಖ್ಯ ಪರೀಕ್ಷೆ 2021ಗೆ ಸಹಾಯ ಮಾಡುತ್ತದೆ. ಜೆಇಇ ಮುಖ್ಯ ಪರೀಕ್ಷೆ 2021ಗೆ ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಹೊರತುಪಡಿಸಿ ನಿಮಗೆ ಕೆಲವು ಪುಸ್ತಕಗಳು ಬೇಕಾಗುತ್ತವೆ. ಜೆಇಇ ಮುಖ್ಯ 2021 ರ ಪರೀಕ್ಷೆಗೆ ಅಧ್ಯಯನ ಮಾಡಲು ಶಿಫಾರಸು ಮಾಡಲಾಗುವ ಪುಸ್ತಕಗಳು ಈ ಕೆಳಗಿನಂತಿವೆ.

ಗಣಿತ:
ವಸ್ತುನಿಷ್ಠ ಗಣಿತ ಬೈ ಆರ್ ಡಿ ಶರ್ಮಾ, ಅರಿಹಂತ್ ಮತ್ತು ಸೆಂಗೇಜ್ ಪಬ್ಲಿಕೇಶನ್, ಕೆ.ಸಿ. ಸಿನ್ಹಾ, ಎಂ.ಎಲ್. ಖನ್ನಾ ಮತ್ತು ಜೆಇಇ ಮುಖ್ಯ ಟಿಎಂಎಚ್‌ಗಾಗಿ ಸಂಪೂರ್ಣ ಗಣಿತ.

ಭೌತಶಾಸ್ತ್ರ:
ಎನ್‌ಸಿಇಆರ್‌ಟಿ, ಫಂಡಮೆಂಟಲ್ಸ್ ಆಫ್ ಫಿಸಿಕ್ಸ್ ಬೈ ಹ್ಯಾಲಿಡೇ, ರೆಸ್ನಿಕ್ & ವಾಕರ್, ಎಚ್‌ಸಿ ವರ್ಮಾ, ಡಿಸಿ ಪಾಂಡೆ

ರಸಾಯನಶಾಸ್ತ್ರ:
ಎನ್‌ಸಿಇಆರ್‌ಟಿ ಮತ್ತು ಕೋಚಿಂಗ್ ಮೆಟೀರಿಯಲ್ (ಯಾವುದಾದರೂ ಇದ್ದರೆ)

ಚೆನ್ನಾಗಿ ಅಭ್ಯಾಸ ಮಾಡಿ:

ಚೆನ್ನಾಗಿ ಅಭ್ಯಾಸ ಮಾಡಿ:

ಈ ಎಲ್ಲಾ ಪುಸ್ತಕಗಳನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ನಂತರ ನೀವು ಜೆಇಇ ಮುಖ್ಯ ಪರೀಕ್ಷೆಯ ಹಿಂದಿನ ವರ್ಷದ ಪ್ರಶ್ನೆಪತ್ರಿಕೆಯನ್ನು ಪರಿಹರಿಸಲು ಪ್ರಾರಂಭಿಸಿದರೆ ಉತ್ತಮ. ನಿಮ್ಮ ಪರಿಕಲ್ಪನೆಗಳು ಮತ್ತು ಪ್ರಶ್ನೆ ಪರಿಹರಿಸುವಲ್ಲಿ ನೀವು ಬಲಶಾಲಿಯಾಗುತ್ತಾ ಹೋಗಬಹುದು.

ಜೆಇಇ ಮುಖ್ಯ ಅಣಕು ಪರೀಕ್ಷೆಗಳು:

ಜೆಇಇ ಮುಖ್ಯ ಅಣಕು ಪರೀಕ್ಷೆಗಳು:

ಜೆಇಇ ಮುಖ್ಯ ಪರೀಕ್ಷೆಗೆ ಹಿಂದಿನ ವರ್ಷದ ಪತ್ರಿಕೆಗಳನ್ನು ಪರಿಹರಿಸಿದ ನಂತರ ನೀವು ಜೆಇಇ ಮುಖ್ಯ ಅಣಕು ಪರೀಕ್ಷೆಗಳ ಸರಣಿಯನ್ನು ಸಹ ತೆಗೆದುಕೊಳ್ಳಬಹುದು. ಈ ಅಭ್ಯಾಸದಿಂದ ನಿಮ್ಮ ಆತ್ಮ ವಿಶ್ವಾಸ, ನಿಖರತೆ ಮತ್ತು ಸಮಯ ನಿರ್ವಹಣೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಪುನರ್‌ಮನನ:

ಪುನರ್‌ಮನನ:

ವಿದ್ಯಾರ್ಥಿಗಳು ವಿಷಯವಾರು ಪುನರ್‌ಮನನ ಮಾಡಲು ಯೋಜನೆಯನ್ನು ಹಾಕಿಕೊಳ್ಳಿ ಮತ್ತು ಪ್ರತಿಯೊಂದು ವಿಷಯಕ್ಕೂ ಇಂತಿಷ್ಟೆ ಸಮಯ ಕೊಟ್ಟು ಅಧ್ಯಯನ ಮಾಡಬೇಕು ಎಂದು ನಿರ್ಧರಿಸಿಕೊಳ್ಳಿ. ಆಗ ಮಾತ್ರ ನಿಮ್ಮ ಓದಿಗೆ ಅರ್ಥ ಸಿಗುತ್ತದೆ ಮತ್ತು ನಿಮ್ಮ ಅಧ್ಯಯನಕ್ಕೆ ಉತ್ತಮ ಫಲಿತಾಂಶ ದೊರೆಯುತ್ತದೆ.

For Quick Alerts
ALLOW NOTIFICATIONS  
For Daily Alerts

English summary
JEE Main 2021: Here is the materials, tips and tricks to crack the exam. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X