ಜೆಇಇ ಪರೀಕ್ಷೆ ತಯಾರಿ ವೇಳೆ 13 ಅಂಶಗಳನ್ನ ನೆನಪಿನಲ್ಲಿಟ್ಟುಕೊಂಡ್ರೆ ಸಕ್ಸಸ್ ಗ್ಯಾರಂಟಿ

Written By: Nishmitha B

ಜಾಯಿಂಟ್ ಎಂಟ್ರೆಸ್ ಎಕ್ಸಾಂ ಇದು ದೇಶದ ಪ್ರಮುಖ ಪರೀಕ್ಷೆಗಳಲ್ಲಿ ಒಂದಾಗಿದೆ. ಎಪ್ರಿಲ್ 8, 15 ಹಾಗೂ 16ರಂದು ಈ ಪರೀಕ್ಷೆ ನಡೆಯಲಿದೆ. ಹಾಗಾಗಿ ಎಪ್ರಿಲ್ 8ಕ್ಕೆ ಪೆನ್ ಪೇಪರ್ ರೆಡಿಮಾಡಿಟ್ಟುಕೊಳ್ಳಿ ಜತೆಗೆ ಎಪ್ರಿಲ್ 15, 16ಕ್ಕೆ ಕಂಪ್ಯೂಟರ್‌ . ಇಂಜಿನಿಯರಿಂಗ್ ಕ್ಷೇತ್ರಕ್ಕೆ ಕಾಲಿಡಬೇಕೆಂದು ಕಾಯುತ್ತಿರುವ ಅದೆಷ್ಟೋ ಮಂದಿ ವಿದ್ಯಾರ್ಥಿಗಳು ಈ ದಿನಕ್ಕಾಗಿ ಕಾಯುತ್ತಿರುತ್ತಾರೆ. ದೇಶದ ಟಾಪ್ ಕಾಲೇಜುಗಳಲ್ಲಿ ಸೀಟು ಪಡೆಯಲು ಈ ಪರೀಕ್ಷೆಗಾಗಿ ಹಗಲು ರಾತ್ರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ

ಜೆಇಇ ಪರೀಕ್ಷೆ ತಯಾರಿ ವೇಳೆ 13 ಅಂಶಗಳನ್ನ ನೆನಪಿನಲ್ಲಿಟ್ಟುಕೊಂಡ್ರೆ ಸಕ್ಸಸ್ ಗ್ಯಾರಂಟಿ

ನಮಗೆ ಗೊತ್ತಿದೆ ಜಾಯಿಂಟ್ ಎಂಟ್ರೆಸ್ ಎಕ್ಸಾಂ ಗೆ ಸಿಲೇಬಸ್ ತುಂಬಾ ಇದ್ದು, ಇದೀಗ ಪರೀಕ್ಷೆಗೆ ಬರೀ ಒಂದು ತಿಂಗಳು ಮಾತ್ರ ಬಾಕಿ ಇದೆ. ಹಾಗಾಗಿ ಈ ಕೊನೆಯ ತಿಂಗಳಿನಲ್ಲಿ ಎಲ್ಲಾ ಸಬ್‌ಜೆಕ್ಟ್ ಕಂಪ್ಲೀಟ್ ಮಾಡುವುದು ಅಸಾಧ್ಯ. ಹಾಗಾಗಿ ಸರಿಯಾಗಿ ಪ್ಲ್ಯಾನ್ ಮಾಡಿ ಓದುವುದು ಈ ಎಕ್ಸಾಂಗೆ ಇರೋ ಉತ್ತಮ ಉಪಾಯ. ಅದಕ್ಕಾಗಿ ಕೆರಿಯರ್ ಇಂಡಿಯಾ ನಿಮಗೆ ಕೆಲವೊಂದು ಸಲಹೆ ಗಳನ್ನ ನೀಡುತ್ತಿದೆ ಓದಿ

ಜೆಇಇ ಪರೀಕ್ಷೆ ತಯಾರಿ ವೇಳೆ 13 ಅಂಶಗಳನ್ನ ನೆನಪಿನಲ್ಲಿಟ್ಟುಕೊಂಡ್ರೆ ಸಕ್ಸಸ್ ಗ್ಯಾರಂಟಿ

ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ 13 ಅಂಶಗಳು

1. ನೀವೇ ನೋಟ್ಸ್ ತಯಾರು ಮಾಡಿಕೊಳ್ಳುವುದು ಬೆಸ್ಟ್ ಐಡಿಯಾ. ಇದರಿಂದ ಎಲ್ಲಾ ಮಾಹಿತಿಗಳು ನಿಮ್ಮ ಬೆರಳ ಪಕ್ಕನೇ ಇರುವಂತೆ ಫೀಲ್ ಆಗುತ್ತದೆ

2. ಈ ನೋಟ್ಸ್ ತಯಾರು ಮಾಡಿಕೊಳ್ಳುವಾಗ ಎಲ್ಲಾ ರೀತಿಯ ಶಾರ್ಟ್ ಕಟ್ ಹಾಗೂ ಪ್ರಮುಖ ವೇಯನ್ನ ಬಳಸಿಕೊಳ್ಳಿ

3. ಹಿಂದಿನ ಪರೀಕ್ಷೆಯ ಪಶ್ನಾಪತ್ರಿಕೆಗೆ ಮೊದಲ ಆದ್ಯತೆ ನೀಡಿ. ಒಂದು ಬಾರಿ ಹಿಂದಿನ ಪ್ರಶ್ನಾಪತ್ರಿಕೆ ಸ್ಟಡಿ ಮಾಡಿ ಆಗಿದ್ದರೆ ನೀವು ಎಕ್ಸಾಂ ರೂಲ್ ಮಾಡ್ತೀರಾ ನೋಡಿ

4. ಪಠ್ಯಕ್ಕೆ ಸಂಬಂಧಪಟ್ಟ ಪ್ರಶ್ನೆಗೆ ಉತ್ತರ ಸರ್ಚ್ ಮಾಡಲು ಬೆಳಗ್ಗೆ ೯ ರಿಂದ ಮಧ್ಯಾಹ್ನ ೧೨ ಗಂಟೆ ಬೆಸ್ಟ್.. ಯಾಕೆಂದ್ರೆ ಈ ಅವಧಿಯಲ್ಲಿ ಮೆದುಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತದೆ

5. ಪ್ರ್ಯಾಕ್ಟೀಸ್ ಟೆಸ್ಟ್ ಅಂಕವನ್ನ ಇತರ ಅಂಕದ ಜತೆ ಹೋಲಿಕೆ ಮಾಡಬೇಡಿ. ಇದು ನಿಮ್ಮಲ್ಲಿ ಕೀಳರಿಮೆಯ ಭಾವನೆ ಮೂಡಿಸುತ್ತದೆ

6. ಹೆಚ್ಚು ಅಂಕವಿರುವ ಪ್ರಶ್ನೆಗೆ ಮೊದಲು ಉತ್ತರಿಸಿ, ಆಮೇಲೆ ನೀವು ಬೇಕಾದ್ರೆ ರೆಸ್ಟ್ ತೆಗೊಳುಬಹುದು

7. ಇಂತಹ ಪರೀಕ್ಷೆಗಳಿಗೆ ಗ್ರೂಪ್ ಸ್ಟಡೀಸ್ ವಿಧಾನ ಬೆಸ್ಟ್. ಇಂತಹ ಚರ್ಚೆಯಲ್ಲಿ ನೀವು ಪಾಲ್ಗೊಂಡರೆ ನಿಮಗೆ ಪಠ್ಯಕ್ಕೆ ಸಂಬಂಧಪಟ್ಟಂತೆ ಹಲವಾರು ಐಡಿಯಾಗಳು ಸಿಗುವುದು

ಜೆಇಇ ಪರೀಕ್ಷೆ ತಯಾರಿ ವೇಳೆ 13 ಅಂಶಗಳನ್ನ ನೆನಪಿನಲ್ಲಿಟ್ಟುಕೊಂಡ್ರೆ ಸಕ್ಸಸ್ ಗ್ಯಾರಂಟಿ

8. ಸಂಘಟಿತ ರೀತಿಯಲ್ಲಿನ ರಿವಿಷನ್ ಯಾವತ್ತೂ ಹೊಸ ಟಾಪಿಕ್ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುವುದಿಲ್ಲ

9. ಕೊನೆಯ ಈ ತಿಂಗಳಿನಲ್ಲಿ ಅತೀ ಹೆಚ್ಚು ಅಂಕದ ಪ್ರಶ್ನೆ ಓದಿ ಟೈಂ ವೇಸ್ಟ್ ಮಾಡಬೇಡಿ

10. ಎನ್ ಸಿಇಆರ್ ಟಿ ಪುಸ್ತಕ ಓದಲು ಮರೆಯದಿರಿ. ಇಂತಹ ಪರೀಕ್ಷೆಗೆ ನೇರವಾಗಿ ಈ ಪುಸ್ತಕದಿಂದ ಪ್ರಶ್ನೆಗಳು ಬಂದಿರುತ್ತದೆ

11. ನೀವು ಕಾಂಫಿಡೆಂಟ್ ಆಗಿದ್ದರೆ, ಫಿಸಿಕ್ಸ್ ಹಾಗೂ ಕೆಮೆಸ್ಟ್ರಿ ಸಬ್‌ಜೆಕ್ಟ್ ಗಿಂತ ಗಣಿತ ಸಬ್‌ಜೆಕ್ಟ್ ಗೆ ಅತೀ ಕಡಿಮೆ ಸಮಯ ಮೀಸಲಡಿಬಹುದು. ಯಾಕೆಂದ್ರೆ ಈ ಸಬ್‌ಜೆಕ್ಟ್ ನಲ್ಲಿ ಅತೀ ಹೆಚ್ಚು ಪಾಠಗಳು ಬೋರ್ಡ್ ಎಕ್ಸಾಂ ವೇಳೆ ಕವರ್ ಆಗಿರುತ್ತದೆ

12. ನಿಮಗೆ ಕಂಫರ್ಟೇಬಲ್ ಆಗುವಂತೆ ಪ್ರತಿ ಸಬ್‌ಜೆಕ್ಟ್ ಗೂ ಸಮನಾಗಿ ಟೈಂ ಹಂಚಿಕೆ ಮಾಡಿಕೊಂಡು ಓದಿಕೊಳ್ಳಿ

13. ಇದೀಗ ಪರೀಕ್ಷೆಗೆ ಸಮಯ ಕಡಿಮೆ ಇರುವುದರಿಂದ ಟುಟೋರೀಯಲ್ ವಿಡಿಯೋಗಳನ್ನ ಚೆಕ್ ಮಾಡಿಕೊಳ್ಳಿ. ಇದು ನಿಮಗೆ ಸಹಾಯಕವಾಗುವುದು

ಜಾಯಿಂಟ್ ಎಂಟ್ರೆಸ್ ಎಕ್ಸಾಂನಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡುಬೇಕು ಎಂದು ನೀವು ಅಂದುಕೊಂಡಿದ್ದರೆ ಈ ಮೇಲೆ ಹೇಳಿರುವ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಅಭ್ಯಾಸ ಮುಂದುವರೆಸಿ. ನಿಮ್ಮ ಸ್ನೇಹಿತರು, ಜ್ಯೂನಿಯರ್ಸ್, ಸೀನಿಯರ್ಸ್ಮ ಸಹೋದರಿ/ಸಹೋದರ ಯಾರಾದ್ರೂ ಈ ಎಕ್ಸಾಂ ಬರೆಯುವವರಾಗಿದ್ದರೆ ಈ ಸಲಹೆ ಅವರಿಗೂ ಫಾವರ್ಡ್ ಮಾಡಲು ಮರೆಯದಿರಿ

English summary
One of India's reputed examinations, Joint Entrance Examination (JEE), is all set to be held on Apr 8, 2018 (pen and paper) and Apr 15 and 16 (computer). The budding engineers from all parts of the country might be waiting for this day to grab a seat in the top engineering college/institution.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia