ಬ್ಯೂಟಿ ಇಂಡಸ್ಟ್ರಿಯಲ್ಲಿ ಈ ಕೆರಿಯರ್ ನಿಮ್ಮದಾಗಿಸಿಕೊಂಡ್ರೆ ಕೈ ತುಂಬಾ ಹಣ

By Kavya

ಪ್ರತಿಯೊಬ್ಬರಿಗೆ ನಾವು ಸುಂದರವಾಗಿ ಕಾಣಬೇಕು ಎಂಬ ಆಸೆ ಇದ್ದೇ ಇರುತ್ತದೆ. ಇನ್ನು ನೈಸರ್ಗಿಕವಾಗಿ ಎಲ್ಲರಿಗೂ ಸೌಂದರ್ಯ ಒಲಿದಿರುವುದಿಲ್ಲ. ಆದ್ರೆ ನೀವು ಕೂಡಾ ಮುಖಕ್ಕೆ ಮೇಕಪ್ ಮಾಡಿಕೊಂಡು ಕೂದಲು ಗ್ರೂಮಿಂಗ್ ಮಾಡಿಕೊಂಡರೆ ನಿಮ್ಮ ಲುಕ್ ಕಂಪ್ಲೀಟ್ ಡಿಫರೆಂಟ್ ಆಗಿ ಕಾಣುವಂತೆ ಮಾಡಬಹುದು.

ಬ್ಯೂಟಿ ಇಂಡಸ್ಟ್ರಿಯಿಂದ ಸಖತ್ ಹಣ ಸಂಪಾದಿಸಬಹುದು

 

ಬ್ಯೂಟಿ ಇಂಡಸ್ಟ್ರಿ ಬಗ್ಗೆ ಹೇಳೋದಾದ್ರೆ:

ಕಳೆದ 50 ವರ್ಷಗಳ ಹಿಂದೆ ಬ್ಯೂಟಿ ಇಂಡಸ್ಟ್ರಿ ಅಷ್ಟೊಂದು ಫೇಮಸ್ ಆಗಿರಲಿಲ್ಲ. ಆದ್ರೆ ಇದೀಗ ಬ್ಯೂಟಿ ಇಂಡಸ್ಟ್ರಿ ಬಹು ಫೇಮಸ್ ಉದ್ಯಮವಾಗಿ ಬೆಳೆಯುತ್ತಿದೆ. ಇನ್ನು ಕೆಲವು ಜನರಲ್ಲಿ ಈ ಬ್ಯೂಟಿ ಎಂಬುವುದು ಅವರ ಲೈಫ್ ಸ್ಟೈಲ್ ನಲ್ಲಿ ಒಂದಾಗಿದೆ.

ಪ್ರೊಫೆಶನಲ್ ಮೇಕಪ್ ಆರ್ಟಿಸ್ಟ್:

ಮೇಕಪ್ ಮಾಡುವುದು ಕೂಡಾ ಒಂದು ಕಲೆ ಇದ್ದಂತೆ. ಅಷ್ಟೇ ಅಲ್ಲ ಈ ಜಾಬ್ ಮಾಡುವವರಿಗೆ ಸೌಂದರ್ಯದ ರುಚಿ ಇರಬೇಕು. ಸ್ಕಿನ್ ಟೋನ್, ವಯಸ್ಸು, ಕಾಸ್ಟೂಮ್, ಓಕೇಶನ್ ಬಗ್ಗೆ ಅವರಿಗೆ ಜ್ಞಾನ ವಿರಬೇಕು. ಅಷ್ಟೇ ಅಲ್ಲ ಸೌಂದರ್ಯ ಪ್ರೊಡಕ್ಟ್ ಗಳ ಬಗ್ಗೆ ಜ್ಞಾನವಿರಬೇಕು. ಕಸ್ಟಮರ್ಸ್ ಲುಕ್ ಮತ್ತಷ್ಟು ಚೆಂದ ಮಾಡುವಂತಹ ಟ್ಯಾಲೆಂಟ್ ಇರಬೇಕು.

ಅಷ್ಟೇ ಅಲ್ಲ ಇದೀಗ ಮೇಕಪ್ ಗೆ ಸಂಬಂಧಿಸಿದಂತೆ ನಮ್ಮಲ್ಲಿ ಅದೆಷ್ಟೋ ಕೋರ್ಸ್ ಗಳು ಕೂಡಾ ಇದೆ. 12ನೇ ಬೋರ್ಡ್ ಎಕ್ಸಾಂ ಮುಗಿದ ಬಳಿಕ ನಿಮಗೆ ಆಸಕ್ತಿ ಇದ್ರೆ ಈ ಕೋರ್ಸ್ ಮಾಡಿ ಸೌಂದರ್ಯ ಕ್ಷೇತ್ರದಲ್ಲಿ ನಿಮ್ಮ ಕೆರಿಯರ್ ರೂಪಿಸಿಕೊಳ್ಳಬಹುದು. ಒಮ್ಮೆ ಈ ಕ್ಷೇತ್ರದಲ್ಲಿ ನೀವು ಫೇಮಸ್ ಆದ್ರೆ ಮತ್ತೆ ಅತೀ ಹೆಚ್ಚು ಹಣ ಕೂಡಾ ಸಂಪಾದನೆ ಮಾಡಬಹುದು

ಉಗುರು ಟೆಕ್ನಿಷನ್:

ಯಾರೇ ಹೊಸ ವ್ಯಕ್ತಿಯನ್ನ ನೀವು ಮೊದಲ ಬಾರಿ ಮೀಟ್ ಮಾಡುವುದಾದ್ರೆ ಅವರು ನಿಮ್ಮ ಉಗುರುಗಳನ್ನ ಮೊದಲು ಗಮನಿಸುತ್ತಾರೆ. ಹಾಗಾಗಿ ಮಧ್ಯಮ ವರ್ಗದ ಜನರು ಕೂಡಾ ಪೆಡ್ಯುಕೂರ್ ಹಾಗೂ ಮೆನ್ಯೂಕೂರ್ ಮಾಡಿಸಿಕೊಳ್ಳುತ್ತಾರೆ. ಪ್ರತಿ ತಿಂಗಳಿಗೆ ಎರಡು ಬಾರಿಯಾದ್ರೂ ಬ್ಯೂಟಿ ಪಾರ್ಲರ್ ಗೆ ಹೋಗಿ ಈ ಸರ್ವೀಸ್ ಮಾಡಿಸಿಕೊಳ್ಳುತ್ತಾರೆ.

ನೇಲ್ ಟೆಕ್ನಿಷನ್ ಕೋರ್ಸ್ ನಲ್ಲಿ ನೀವು ಪದವಿ ಪಡೆದಿದ್ದರೆ, ನಿಮಗೆ ಮನೆಯಲ್ಲೇ ಕುಳಿತು ಸಂಪಾದನೆ ಮಾಡಬಹುದು. ಅಷ್ಟೇ ಅಲ್ಲ ಇತ್ತೀಚಿಗಿನ ದಿನಗಳಲ್ಲಿ ಅದೆಷ್ಟೋ ಬ್ಯೂಟಿ ಟ್ರೈನಿಂಗ್ ಇನ್‌ಸ್ಟಿಟ್ಯೂಟ್‌ ಗಳಿವೆ ಕೂಡಾ.

 

ಬ್ಯೂಟಿ ಸೇಲ್ಸ್ ರೆಪ್ರೆಸೆಂಟೇಟಿವ್:

ಇವರ ಜವಾಬ್ದಾರಿ ಏನಂದ್ರೆ ಶಾಪ್ ಗಳಿಗೆ ಬ್ಯೂಟಿ ಪಾರ್ಲರ್ ಹಾಗೂ ಮನೆ ಮನೆ ಹೋಗಿ ಸಂಬಂಧಪಟ್ಟ ಕಂಪನಿಯ ಬ್ಯೂಟಿ ಪ್ರಾಡಕ್ಟ್‌ಗಳನ್ನ ಸೇಲ್ ಮಾಡುವುದು. ಲೋಶನ್, ಜೆಲ್, ಲಿಪ್ ಸ್ಟಿಕ್, ಫೇಸ್ ಕ್ರೀಂ, ನೇಲ್ ಪಾಲೀಶ್ ಸೇರಿದಂತೆ ಬ್ಯೂಟಿಗೆ ಸಂಬಂಧಿಸಿದ ಪ್ರೊಡಕ್ಟ್ ಗಳನ್ನ ಇವರು ಸೇಲ್ ಮಾಡುತ್ತಾರೆ.

ಇನ್ನು ಈ ಕೆರಿಯರ್ ನಿಮ್ಮದಾಗಿಸಿಕೊಳ್ಳಬೇಕಾದ್ರೆ ಉತ್ತಮ ಮಾತುಗಾರರಾಗಿರಬೇಕು. ಅಷ್ಟೇ ಅಲ್ಲ ಮಾರ್ಕೆಟಿಂಗ್ ಅಬಿಲಿಟಿ ಕೂಡಾ ನಿಮ್ಮಲ್ಲಿ ಇರಬೇಕು. ಅಷ್ಟೇ ಅಲ್ಲ ಸ್ಥಳೀಯ ಭಾಷೆಯ ಬಗ್ಗೆ ನಿಮಗೆ ಜ್ಞಾನವಿರಬೇಕು.

ಹೇರ್ ಟೆಕ್ನಿಷನ್:

ಹೆಚ್ಚಿನ ಮಂದಿಗೆ ಅತೀ ಉದ್ದವಾದ ಕೂದಲು ಇರುತ್ತದೆ. ಹಾಗಂತ ಎಲ್ಲರಿಗೂ ಉದ್ದವಾದ ಕೂದಲು ಗಿಫ್ಟ್ ಆಗಿ ಬರುವುದಿಲ್ಲ. ಅಷ್ಟೇ ಅಲ್ಲ ಇತ್ತಿಚಿಗಿನ ಸ್ಟ್ರೆಸ್, ಧೂಳು, ಪ್ರದೂಷಣೆಯಿಂದ ಹಲವಾರು ಮಂದಿ ಕೂದಲು ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹಾಗಾಗಿ ಇದೀಗ ಬ್ಯೂಟಿ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಬೇಡಿಕೆ ಇರುವ ವೃತ್ತಿ ಹೇರ್ ಟೆಕ್ನಿಷನ್ ಆಗಿದೆ. ಇನ್ನು ಈ ವಿಷಯದ ಬಗ್ಗೆ ನಿಮಗೆ ಬ್ಯಾಚುಲರ್ ಪದವಿ ಕೂಡಾ ಲಭ್ಯವಿದೆ.

ಬ್ಯೂಟಿ ಕಂಸಲ್ಟೆಂಟ್:

ಶೇ 100 ರಷ್ಟು ಸೌಂದರ್ಯ ಎಂಬುವುದು ಯಾರಿಗೂ ಇರುವುದಿಲ್ಲ. ಆದ್ರೆ ಪ್ರತಿಯೊಬ್ಬರಿಗೂ ತಾನು ಚೆನ್ನಾಗಿ ಕಾಣಬೇಕು ಎಂಬ ಆಸೆಯಿರುತ್ತದೆ. ಅದಕ್ಕಾಗಿ ಮಾರ್ಕೆಟ್ ನಲ್ಲಿ ಲಭ್ಯವಿರುವ ಪ್ರೊಡಕ್ಟ್ ಬಳಸುತ್ತಾರೆ. ಆದ್ರೆ ಒಂದು ವಿಷಯ ನೆನಪಿಟ್ಟು ಕೊಳ್ಳಿ ಪ್ರತಿಯೊಬ್ಬರ ತ್ವಜೆ ಭಿನ್ನವಾಗಿರುತ್ತದೆ ಹಾಗೂ ಭಿನ್ನ ತ್ವಜೆಗೆ ವಿಭಿನ್ನ ಕ್ರೀಂಗಳು ಇರುತ್ತದೆ. ಆದ್ರೆ ನಿಮಗೆ ಅದರ ಬಗ್ಗೆ ತಿಳುವಳಿಕೆ ಇರುವುದಿಲ್ಲ. ಹಾಗಾಗಿ ನೀವು ಬ್ಯೂಟಿ ತಜ್ಞರ ಸಲಹೆ ಪಡೆದು ಖರೀದಿಸಬಹುದಾಗಿದೆ.

ಇನ್ನು ನೀವು ಬ್ಯೂಟಿ ತಜ್ಞರಾಗಿ ಕೆರಿಯರ್ ಪ್ರಾರಂಭಿಸಬೇಕಂದು ಇದ್ದರೆ ನೀವು 12ನೇ ತರಗತಿ ಬಳಿಕ ಡಿಪ್ಲೋಮಾ ಕೋರ್ಸ್ ಮಾಡಬೇಕಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
All of us want to look good. However, not everyone is naturally gifted to be able to look good round the clock. That is where the role of personal grooming and cosmetics come into picture. With the aid of these, anyone can undergo a complete makeover and look totally different from their actual self. All of this has cumulatively led to the birth of the beauty industry.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more