Facts About Kannada Rajyotsava : ಕರ್ನಾಟಕ ರಚನೆ ದಿನದ ಹಿಂದಿರುವ ಸ್ವಾರಸ್ಯಕರ ಸಂಗತಿಗಳು

ಕರ್ನಾಟಕದಲ್ಲಿ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಕರ್ನಾಟಕ ಎಂಬ ಏಕೈಕ ರಾಜ್ಯವನ್ನು ರಚಿಸಲಾಯಿತು ಈ ಹಿನ್ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

 
ಕರ್ನಾಟಕ ರಚನೆಯ ದಿನದ ಹಿಂದಿರುವ ಸ್ವಾರಸ್ಯಕರ ಸಂಗತಿಗಳು ಇಲ್ಲಿವೆ

ಕನ್ನಡ ರಾಜ್ಯೋತ್ಸವದಂದು ಕರ್ನಾಟಕದಲ್ಲಿ ಸರ್ಕಾರಿ ರಜೆ ಎಂದು ಘೋಷಿಸಲಾಗಿದೆ ಮತ್ತು ಈ ದಿನವನ್ನು ಕರ್ನಾಟಕ ಸಂಸ್ಥಾಪನಾ ದಿನ ಎಂದೂ ಕರೆಯಲಾಗುತ್ತದೆ. ಇಂದಿನ ದಿನ ನಾನು ನಿಮಗೆ ಗೊತ್ತಿರದ ಅಥವಾ ಆಸಕ್ತಿದಾಯಕ ಸಂಗತಿಗಳನ್ನು ತಿಳಿಸಬಯಸುತ್ತೇನೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿ ಕನ್ನಡ ರಾಜ್ಯೋತ್ಸವ ಮತ್ತು ಕರ್ನಾಟಕ ರಚನೆ ಹಿಂದಿರುವ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯಿರಿ.

* ಭಾರತದ ರಾಜಕಾರಣಿ, ಬರಹಗಾರ, ಪತ್ರಕರ್ತ, ಕ್ರಾಂತಿಕಾರಿ ಮತ್ತು ಇತಿಹಾಸಕಾರ ಆಲೂರು ವೆಂಕಟ ರಾವ್ ಅವರು ದಕ್ಷಿಣ ಭಾರತದ ಎಲ್ಲಾ ಕನ್ನಡ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನಾಗಿ ಮಾಡುವ ಕನಸು ಕಂಡಿದ್ದರು.

* ಆಲೂರು ವೆಂಕಟ ರಾವ್ ಅವರು 1905 ರಲ್ಲಿ ಕನ್ನಡ ಏಕೀಕರಣ ಚಳವಳಿಯ ಸಮಯದಲ್ಲಿ ಕರ್ನಾಟಕ ರಾಜ್ಯವನ್ನು ರಚಿಸಲು ಬಯಸಿದ್ದರು.

* ಭಾರತಕ್ಕೆ ಸ್ವಾತಂತ್ರ್ಯ ದೊರೆತು ಗಣರಾಜ್ಯವಾದ ನಂತರ 195೬ ರಲ್ಲಿ ದೇಶದಲ್ಲಿ ಹಲವಾರು ರಾಜ್ಯಗಳನ್ನು ರಚಿಸಲಾಯಿತು. ಪ್ರತಿಯೊಂದು ಪ್ರದೇಶದಲ್ಲಿ ಪ್ರಚಲಿತದಲ್ಲಿರುವ ಭಾಷೆಗಳು ಮತ್ತು ಸಂಸ್ಕೃತಿಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಗಿದೆ.

* ನವೆಂಬರ್ 1,1956 ರಂದು ಮದ್ರಾಸ್, ಮುಂಬಯಿ ಮತ್ತು ಹೈದರಾಬಾದ್ ಪ್ರಾಂತ್ಯದ ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ವಿಲೀನಗೊಂಡು ಮೈಸೂರು ರಾಜ್ಯ ಉದಯವಾಯಿತು. ಆಗಿನ ರಾಜ ಮನೆತನಗಳು ರಾಜ್ಯವನ್ನು ಆಳುತ್ತಿದ್ದವು.

* ಏಕೀಕೃತ ಕನ್ನಡ-ಮಾತನಾಡುವ ರಾಜ್ಯವನ್ನು ರೂಪಿಸಲು ಸಲುವಾಗಿ ಮೈಸೂರು ರಾಜ್ಯವನ್ನು ಮಾಡಲಾಯಿತು.

* ಅಂದು ಹೊಸದಾಗಿ ರೂಪುಗೊಂಡ ರಾಜ್ಯವನ್ನು ಮೈಸೂರು ಎಂದು ಕರೆಯಲಾಗುತ್ತಿತ್ತು. ಆದರೆ ಇದು ಸಂಸ್ಥಾನದೊಂದಿಗೆ ಸಂಬಂಧ ಹೊಂದಿದ್ದರಿಂದ ಉತ್ತರ ಕರ್ನಾಟಕಕ್ಕೆ ಸೇರಿದವರು ಇದನ್ನು ವಿರೋಧಿಸಿದರು.

 

* ಅನೇಕ ಕಾರಣಗಳಿಂದಾಗಿ ನವೆಂಬರ್ 1,1973 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.

* ಅಂದು ದೇವರಾಜ್ ಅರಸು ಅವರು ರಾಜ್ಯದ ಮೊದಲ ಮುಖ್ಯಮಂತ್ರಿಯಾದರು.

* ಈ ದಿನವನ್ನು ಕನ್ನಡ ರಾಜ್ಯೋತ್ಸವ ಎಂದು ಕರೆಯಲಾಗುತ್ತದೆ ಅಂದರೆ ಇದೊಂದು ರಾಜ್ಯದ ಹಬ್ಬ.

* ಈ ದಿನದಂದು ಇಡೀ ರಾಜ್ಯವು ಕೆಂಪು ಮತ್ತು ಹಳದಿ ಬಣ್ಣದ ಧ್ವಜಗಳಿಂದ ಅಲಂಕರಿಸಿರುತ್ತದೆ. ಇದು ಹಬ್ಬದಂತೆ ಕಣ್ಣಿಗೆ ಮತ್ತು ಮನಸ್ಸಿಗೆ ಬಿಂಬಿಸುತ್ತದೆ.

* ರಾಜ್ಯದ ವಿವಿಧ ಸ್ಥಳಗಳಲ್ಲಿ ಕನ್ನಡ ಧ್ವಜಗಳನ್ನು ಹಾರಿಸಲಾಗುತ್ತದೆ ಮತ್ತು ರಾಜ್ಯದ ಕನ್ನಡ ಗೀತೆಯನ್ನು ಹಾಡಲಾಗುತ್ತದೆ.

* ಈ ದಿನ ಹಲವಾರು ಯುವಕರು ವಿವಿಧ ವಾಹನಗಳಲ್ಲಿ ಮೆರವಣಿಗೆಗಳನ್ನು ನಡೆಸುತ್ತಾರೆ.

* ಸಾಮಾನ್ಯವಾಗಿ ವಿವಿಧ ರಾಜಕೀಯ ಪಕ್ಷಗಳ ಕಚೇರಿಗಳಲ್ಲಿ ಧ್ವಜಗಳನ್ನು ಹಾರಿಸಲಾಗುತ್ತದೆ.

* ರಾಜ್ಯದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಶ್ರಮಿಸಿದ ಜನರಿಗೆ ರಾಜ್ಯ ಸರ್ಕಾರವು ಇಂದು ಪ್ರಶಸ್ತಿ ನೀಡಿ ಗೌರವಿಸುತ್ತದೆ.

* ಪ್ರತಿ ವರ್ಷ ಈ ದಿನದಂದು ಬೆಂಗಳೂರಿನ ಕ್ರಾಂತಿವೀರ ಕ್ರೀಡಾಂಗಣದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿಯವರು ಉದ್ಘಾಟಿಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Kannada rajyotsava is on november 1. Here is the interesting facts about karnataka formation day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X