Karnataka SSLC Exam 2022 Tips : ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಈ ಮುಖ್ಯ ವಿಷಯಗಳನ್ನು ಅನುಸರಿಸಿ

ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗೆ ಹಾಜರಾಗುವ ಮುನ್ನ ಈ ಸರಳ ಸೂತ್ರಗಳನ್ನು ಪಾಲಿಸಿ

ಇಂದಿನಿಂದ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳು ಪ್ರಾರಂಭವಾಗಲಿದೆ. ಇದು ಪಬ್ಲಿಕ್ ಪರೀಕ್ಷೆಯಾಗಿರುವುದರಿಂದ, ವಿದ್ಯಾರ್ಥಿಗಳು ಮತ್ತು ಪೋಷಕರು ಟೆನ್ಷನ್‌ಗೆ ಒಳಗಾಗಿರುತ್ತಾರೆ. ಪರೀಕ್ಷೆಯನ್ನು ಉತ್ತಮವಾಗಿ ಎದುರಿಸಲು ಪರೀಕ್ಷೆಯ ದಿನದಂದು ಅನುಸರಿಸಬೇಕಾದ ಸರಳವಾದ ವಿಷಯಗಳು ಇಲ್ಲಿವೆ.

1) ಬ್ಯಾಗ್ ಪ್ಯಾಕಿಂಗ್ :

1) ಬ್ಯಾಗ್ ಪ್ಯಾಕಿಂಗ್ :

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಹಾಲ್ ಟಿಕೆಟ್, ಬರವಣಿಗೆ ಫಲಕ, ಪೆನ್ನುಗಳು, ಪೆನ್ಸಿಲ್‌ಗಳು, ಎರೇಸರ್, ಶಾರ್ಪ್ನರ್, ಸಣ್ಣ ನೀರಿನ ಬಾಟಲಿಗಳು ಮತ್ತು ಪರೀಕ್ಷೆಗೆ ಬೇಕಾದ ಅಗತ್ಯ ವಸ್ತುಗಳನ್ನು ಒಳಗೊಂಡಿರುವ ಬ್ಯಾಗ್ ಅನ್ನು ಸಿದ್ಧಪಡಿಸಿ ತೆಗೆದುಕೊಂಡು ಹೋಗಿ. ಹೆಚ್ಚು ಭಾರವಾಗುವ ವಸ್ತುಗಳನ್ನು ಬ್ಯಾಗ್ ನಲ್ಲಿ ಕೊಂಡೊಯ್ಯದಿರಿ.

2) ಬೇಗ ಎದ್ದೇಳುವುದು :

2) ಬೇಗ ಎದ್ದೇಳುವುದು :

ಪರೀಕ್ಷಾರ್ಥಿಗಳು ಮೊದಲು ಉತ್ತಮ ನಿದ್ದೆಯನ್ನು ಹೊಂದಿರಬೇಕು ಹಾಗಾಗಿ ಪರೀಕ್ಷಾ ಹಿಂದಿನ ದಿನ ಬೇಗನೆ ಮಲಗಬೇಕು. ಪರೀಕ್ಷಾ ದಿನ ಬೇಗನೆ ಏಳಬೇಕು, ಈ ಅಭ್ಯಾಸಗಳನ್ನು ಪಾಲಿಸುವುದು ವಿದ್ಯಾರ್ಥಿಗಳಿಗೆ ಒಳಿತು.

3) ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳ ಅಧ್ಯಯನ :

3) ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳ ಅಧ್ಯಯನ :

ವಿದ್ಯಾರ್ಥಿಗಳು ಪರೀಕ್ಷಾ ದಿನದಂದು ಹೆಚ್ಚಿನ ವಿಷಯಗಳನ್ನು ಓದುವುದು ಅಥವಾ ಹೊಸ ವಿಷಯಗಳನ್ನು ಓದಬೇಡಿ. ಬದಲಿಗೆ ನಿರ್ದಿಷ್ಟ ವಿಷಯದ ಪಠ್ಯಕ್ರಮದ ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳ ಟಿಪ್ಪಣಿಯನ್ನು ನೀವು ಸಿದ್ಧಪಡಿಸಿದ್ದರೆ ಅದನ್ನು ಒಮ್ಮೆ ಮೆಲುಕು ಹಾಕಿ.

4) ಲಘು ಉಪಹಾರ ಸೇವಿಸಿ :

4) ಲಘು ಉಪಹಾರ ಸೇವಿಸಿ :

ಪರೀಕ್ಷಾ ದಿನದಂದು ವಿದ್ಯಾರ್ಥಿಗಳು ಭಾರವಾದ ಅಥವಾ ಎಣ್ಣೆಯುಕ್ತ ಉಪಹಾರವನ್ನು ಸೇವಿಸಬೇಡಿ ಏಕೆಂದರೆ ಅದು ನಿಮಗೆ ನಿದ್ರೆ ಮತ್ತು ನಿಷ್ಕ್ರಿಯತೆಯನ್ನು ಉಂಟುಮಾಡಬಹುದು. ಚಾಕೊಲೇಟ್, ಕ್ರೀಮ್ ಬಿಸ್ಕತ್ತುಗಳು ಅಥವಾ ಸಿಹಿಯನ್ನು ಒಯ್ಯಿರಿ ಏಕೆಂದರೆ ಸಕ್ಕರೆ ಉತ್ಸಾಹವನ್ನು ಹೆಚ್ಚಿಸುತ್ತದೆ.

5) ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಹಾಲ್ ಅನ್ನು ತಲುಪಿ :

5) ಸಮಯಕ್ಕೆ ಮುಂಚಿತವಾಗಿ ಪರೀಕ್ಷಾ ಹಾಲ್ ಅನ್ನು ತಲುಪಿ :

ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತಡವಾಗಿ ಆಗಮಿಸಿ ಪರೀಕ್ಷೆ ಬರೆಯಲು ನಿಯೋಜಿತವಾಗಿರುವ ಕೊಠಡಿ ಸಂಖ್ಯೆ ಮತ್ತು ಸಾಲನ್ನು ಉದ್ರಿಕ್ತವಾಗಿ ಹುಡುಕಬೇಡಿ. ಬದಲಿಗೆ ಕನಿಷ್ಠ ಅರ್ಧ ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿ ಮತ್ತು ನಿಮ್ಮ ಹುಡುಕಾಟವನ್ನು ಮುಂಚಿತವಾಗಿ ಪೂರ್ಣಗೊಳಿಸಿ.

6) ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿ :

6) ಪ್ರಶ್ನೆ ಪತ್ರಿಕೆಯನ್ನು ಚೆನ್ನಾಗಿ ಓದಿ :

ಬೋರ್ಡ್ ಪರೀಕ್ಷೆಗಳನ್ನು ಮೊದಲ ಭಾರಿ ವಿದ್ಯಾರ್ಥಿಗಳು ಬರೆಯುತ್ತಿರುವ ಹಿನ್ನೆಲೆ ಈ ವಿಷಯವನ್ನು ಚೆನ್ನಾಗಿ ನೆನಪಿಡಿ. ಪರೀಕ್ಷೆಯಲ್ಲಿ ಮೊದಲು ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣ ಓದಿಕೊಳ್ಳಿ. ಪ್ರಶ್ನೆಗಳಿಗೆ ಹೊಂದಿಕೆಯಾಗುವ ಉತ್ತರವು ಪ್ರಶ್ನೆ ಪತ್ರಿಕೆಯಲ್ಲಿ ಇತರ ಪ್ರಶ್ನೆಗಳು ಅಥವಾ ಪ್ಯಾರಾಫ್ರೇಸ್‌ಗಳಲ್ಲಿ ಅಡಗಿರುತ್ತದೆ. ಅದನ್ನು ಸಂಪೂರ್ಣವಾಗಿ ಓದುವುದರಿಂದ ನೀವು ಪ್ರತಿ ಪ್ರಶ್ನೆಗೆ ಎಷ್ಟು ಸಮಯದಲ್ಲಿ ಉತ್ತರಿಸಬೇಕು ಎಂಬ ಕಲ್ಪನೆಯನ್ನು ನೀಡುತ್ತದೆ.

7) ಹೆಚ್ಚುವರಿ ಹಾಳೆಗಳು :

7) ಹೆಚ್ಚುವರಿ ಹಾಳೆಗಳು :

ಪರೀಕ್ಷೆಯಲ್ಲಿ ಯಾರಾದರೂ ಹೆಚ್ಚುವರಿ ಹಾಳೆಗಳನ್ನು ಕೇಳುತ್ತಿದ್ದರೆ ಮತ್ತು ನೀವು ಮುಖ್ಯ ಉತ್ತರ ಪುಸ್ತಕವನ್ನು ಸಹ ಪೂರ್ಣಗೊಳಿಸದೆ ಇರುವಾಗ ಗಾಬರಿಯಾಗಬೇಡಿ. ಕೆಲವರು ಪದಗಳು, ಸಾಲುಗಳ ನಡುವೆ ಜಾಗವನ್ನು ನೀಡುತ್ತಾರೆ ಮತ್ತು ಕೆಲವರು ಉತ್ತರಗಳನ್ನು ನಂತರ ಬರೆಯಲು ಜಾಗವನ್ನು ಬಿಡುತ್ತಾರೆ ಎಂದು ಅರ್ಥಮಾಡಿಕೊಳ್ಳಿ. ಆದ್ದರಿಂದ ಗಾಬರಿಯಾಗದೇ ನಿರಾಳವಾಗಿ ಪರೀಕ್ಷೆ ಬರೆಯಿರಿ. ಅಗತ್ಯಬಿದ್ದಾಗ ಹೆಚ್ಚುವರಿ ಹಾಳೆಗಳನ್ನು ಕೇಳಿ ಪಡೆಯಿರಿ.

For Quick Alerts
ALLOW NOTIFICATIONS  
For Daily Alerts

English summary
Karnataka sslc exam starts from march 28. Here is students should follow important things on day of exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X