Karnataka SSP Scholarship 2021 : ಅರ್ಹತೆ ಮಾನದಂಡಗಳು, ಅರ್ಜಿ ಸಲ್ಲಿಕೆ ಮತ್ತು ಆಯ್ಕೆ ಪ್ರಕ್ರಿಯೆ ವಿವರ ಇಲ್ಲಿದೆ

ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಮಿಷನ್ ಅನ್ನು ಆರಂಭಿಸಿದೆ. ಈ ಮಿಷನ್ ನಿಂದ ಹಲವಾರು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಸಹಾಯವಾಗಲಿದೆ.

ಈ ವಿದ್ಯಾರ್ಥಿವೇತನದ ಪ್ರಮುಖ ಉದ್ದೇಶವೆಂದರೆ ಬಡ ಮತ್ತು ಅಧ್ಯಯನವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡುವುದು. ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಎಸ್‌ಎಸ್‌ಪಿ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಪಡೆಯುವುದು ಹೇಗೆ ಮತ್ತು ಯಾರೆಲ್ಲಾ ಈ ವಿದ್ಯಾರ್ಥಿವೇತನ ಪಡೆಯಬಹುದು ಎಂಬ ಸಂಪೂರ್ಣ ವಿವರ

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2021 :

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು, ಅರ್ಹತಾ ಮಾನದಂಡಗಳು, ಅಗತ್ಯವಿರುವ ದಾಖಲೆಗಳು ಮತ್ತು ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಏನೆಲ್ಲಾ ಹಂತಗಳಿವೆ ? ತದನಂತರ ಅರ್ಜಿ ಸಲ್ಲಿಕೆಯ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡಲಿದ್ದೇವೆ.

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನ 2021-2022:

ಪ್ರಸಕ್ತ ಸಾಲಿನಲ್ಲಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು 15 ಜುಲೈ 2021 ಕೊನೆಯ ದಿನವಾಗಿತ್ತು. ಈ ವಿದ್ಯಾರ್ಥಿವೇತನ ಪಡೆಯಲು ಆನ್‌ಲೈನ್ ಮೂಲಕ ಮಾತ್ರವೇ ಅರ್ಜಿ ಸಲ್ಲಿಸಬೇಕಿರುತ್ತದಲ್ಲದೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ ನೀವು ಮುಂದಿನ ವರ್ಷದಲ್ಲಿ ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಈ ಮಾಹಿತಿಗಳನ್ನು ಈಗಲೇ ತಿಳಿದುಕೊಳ್ಳಬಹುದು.

ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಮಂಜೂರಾತಿ ಮಾಡುವ ಇಲಾಖೆಗಳು :

ಈ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆ, ಬುಡಕಟ್ಟು ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳು ಅಧ್ಯಯನದಲ್ಲಿ ಸಾಕಷ್ಟು ಬುದ್ಧಿವಂತರಾಗಿರುವ ಆದರೆ ಆರ್ಥಿಕವಾಗಿ ಶಕ್ತರಲ್ಲದ ಕಾರಣದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಲಿವೆ. ಈ ಯೋಜನೆ ನಿರ್ದಿಷ್ಟವಾಗಿ ಪ.ಜಾ/ಪ.ಪಂ/ಓಬಿಸಿ ಮತ್ತು ಇಬಿ ನಂತಹ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾಗಿದೆ.

ವಿದ್ಯಾರ್ಥಿವೇತನ ನೀಡುವ ಇಲಾಖೆಗಳು ಮತ್ತು ವಿದ್ಯಾರ್ಥಿವೇತನಗಳು:

ಕರ್ನಾಟಕ ಸರ್ಕಾರವು ವಿವಿಧ ಇಲಾಖೆಗಳಿಂದ ಹಲವಾರು ವಿದ್ಯಾರ್ಥಿವೇತನವನ್ನು ನೀಡುತ್ತದೆ. ವಿದ್ಯಾರ್ಥಿವೇತನವನ್ನು ನೀಡುವ ಇಲಾಖೆಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

ಬುಡಕಟ್ಟು ಕಲ್ಯಾಣ ಇಲಾಖೆ : ಎಸ್‌ಟಿ ಅಭ್ಯರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ : ಮೆರಿಟ್ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ : ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ/ನರ್ಸಿಂಗ್ ವಿದ್ಯಾರ್ಥಿಗಳು ಮತ್ತು ಶುಲ್ಕ ರಿಯಾಯಿತಿ.
ಸಮಾಜ ಕಲ್ಯಾಣ ಇಲಾಖೆ : ಅಶುದ್ಧ ಕೆಲಸ ನಿರ್ವಹಿಸುವ ಪೋಷಕರನ್ನು ಹೊಂದಿರುವ ಎಸ್‌ಸಿ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ.

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನದ ಮಾಹಿತಿ :

ಪೋರ್ಟಲ್ : ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್
ಎಲ್ಲಿಲಭ್ಯವಿದೆ : ಕರ್ನಾಟಕ ಸರ್ಕಾರದ ಅಡಿಯಲ್ಲಿ
ಪಟ್ಟಿ : ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಪಟ್ಟಿ 2021
ವಿದ್ಯಾರ್ಥಿವೇತನ : ಪೂರ್ವ ಮೆಟ್ರಿಕ್/ಪೋಸ್ಟ್ ಮೆಟ್ರಿಕ್
ಫಲಾನುಭವಿಗಳು : ವಿದ್ಯಾರ್ಥಿಗಳು
ಸ್ಥಿತಿ : ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಆನ್‌ಲೈನ್ ವಿದ್ಯಾರ್ಥಿಗಳ ಪಟ್ಟಿ 2021
ಆನ್‌ಲೈನ್ ಪರಿಶೀಲನೆ : ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಮೊತ್ತ ಸ್ಥಿತಿ ಸ್ಟೇಟಸ್ 2021

ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಹತಾ ಮಾನದಂಡಗಳು 2021:

ವಿದ್ಯಾರ್ಥಿವೇತನ ಪಡೆಯುವ ಪ್ರಮುಖ ಹಂತವೆಂದರೆ ಮುಖ್ಯವಾಗಿ ನೀವು ಈ ವಿದ್ಯಾರ್ಥಿವೇತನ ಪ್ರಕ್ರಿಯೆಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೋ ತಿಳಿದುಕೊಳ್ಳುವುದು. ಈ ವಿದ್ಯಾರ್ಥಿವೇತನವನ್ನು ಪಡೆಯಲು ಅಭ್ಯರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗದವರಾಗಿರಬೇಕು ಮತ್ತು ಎಸ್‌ಸಿ, ಎಸ್‌ಟಿ, ಒಬಿಸಿ ಅಲ್ಪಸಂಖ್ಯಾತರಾಗಿರಬೇಕು ಎಂಬುದು ಪ್ರಮುಖ ಮಾನದಂಡವಾಗಿದೆ. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಇರುವ ಮಾನದಂಡಗಳನ್ನು ಮುಂದೆ ನೀಡಲಾಗಿದೆ.

ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಹತಾ ಮಾನದಂಡಗಳಿವು:-

* ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲುಅರ್ಜಿದಾರರು ಹಿಂದುಳಿದ ಸಮುದಾಯದವರಾಗಿರಬೇಕು.
* ಅವನು ಅಥವಾ ಅವಳು 11 ನೇ ತರಗತಿ ಅಥವಾ ಇನ್ನಾವುದೇ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು.
* ಬಾಲಕಿಯರಿಗೆ 30% ಮೀಸಲಾತಿ ಇದೆ.
* ಅವನ ಅಥವಾ ಅವಳ ಅರ್ಹತಾ ಪರೀಕ್ಷೆಯಲ್ಲಿ, ಅಭ್ಯರ್ಥಿಯು ಕನಿಷ್ಠ 50% ಅಂಕಗಳನ್ನು ಗಳಿಸಬೇಕು.
* ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಹೆಚ್ಚಿರಬಾರದು.
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಹತಾ ಮಾನದಂಡಗಳಿವು:-

* ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
* ಅಭ್ಯರ್ಥಿಯು 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಯಾವುದೇ ತರಗತಿಗೆ ಸೇರಿದವರಾಗಿರಬೇಕು.
* ಎಸ್‌ಎಸ್‌ಪಿ ಮತ್ತು ಎನ್‌ಎಸ್‌ಪಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಈ ವಿದ್ಯಾರ್ಥಿವೇತನ ಲಭ್ಯವಿರುತ್ತದೆ.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 1 ಲಕ್ಷಕ್ಕಿಂತ ಹೆಚ್ಚಿರಬಾರದು.
* ಈ ವಿದ್ಯಾರ್ಥಿವೇತನವನ್ನು ಅಶುದ್ಧ ವೃತ್ತಿಯಲ್ಲಿರುವ ಪೋಷಕರನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ನೀಡಲಾಗುವುದು.

ಎಸ್‌ಎಸ್‌ಪಿ ವಿದ್ಯಾರ್ಥಿವೇತನದ ಪ್ರತಿಫಲ ಮತ್ತು ಅನುಕೂಲಗಳು ಏನು ?:

ಈ ವಿದ್ಯಾರ್ಥಿವೇತನವು ಹಲವಾರು ಅನುಕೂಲಗಳು ಮತ್ತು ಪ್ರತಿಫಲಗಳನ್ನು ಒಳಗೊಂಡಿವೆ ಅವುಗಳು ಹೀಗಿವೆ.

* ಎಂ.ಫಿಲ್ ಮಾಡುತ್ತಿರುವ ವಿದ್ಯಾರ್ಥಿಗಳು 8000/-ರೂ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ.
* ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳು 10,000/-ರೂ ಆರ್ಥಿಕ ಸಹಾಯವನ್ನು ಪಡೆಯುತ್ತಾರೆ.

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ?:

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಇರಲಿದ್ದು, ಹೇಗೆ ನೊಂದಣಿ ಮಾಡಿಕೊಳ್ಳಬೇಕು ಎಂಬ ಮಾಹಿತಿ ಕೆಳಗಿದೆ.

ಸ್ಟೆಪ್ 1: ಅಭ್ಯರ್ಥಿಗಳು ಮೊದಲು ಅಧಿಕೃತ ವೆಬ್‌ಸೈಟ್ ssp.karnataka.gov.in ಗೆ ಭೇಟಿ ನೀಡಿ.

ಸ್ಟೆಪ್ 2: ಹೋಂ ಪೇಜ್ ನಲ್ಲಿ ಲಭ್ಯವಿರುವ ಖಾತೆಯನ್ನು ರಚಿಸುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಇಮೇಲ್ ವಿಳಾಸವನ್ನು ನಮೂದಿಸಬೇಕಾದ ಮೆಟ್ರಿಕ್ ಪೂರ್ವ ಆಯ್ಕೆಯನ್ನು ಆರಿಸಿ, ನಂತರ ಡೇಟಾ ಪಡೆಯುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಸ್ಟೆಪ್ 3: ಅರ್ಜಿದಾರರ ವಿವರಗಳು ಪರದೆಯ ಮೇಲೆ ಮೂಡಲಿವೆ.
ಸ್ಟೆಪ್ 4: ಪರದೆ ಮೇಲೆ ಮೂಡಿರುವ ವಿವರಗಳು ತಪ್ಪಾಗಿದ್ದರೆ, ಶಾಲೆಗೆ ಭೇಟಿ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಬೇಕಿದೆ.
ಸ್ಟೆಪ್ 5: ಮುಂದಿನ ಹಂತವೆಂದರೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಭರ್ತಿ ಮಾಡಿ ಮತ್ತು ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ನಂತರ ನೀವು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಪಡೆಯುತ್ತೀರಿ.
ಸ್ಟೆಪ್ 6: ನಂತರ ಅರ್ಜಿದಾರರು ಬಳಕೆದಾರ ID ಮತ್ತು ಪಾಸ್‌ವರ್ಡ್ ಅನ್ನು ಪಡೆಯುತ್ತೀರಿ. ಅದನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.

ಕರ್ನಾಟಕ ಎಸ್‌ಎಸ್‌ಪಿ ವೆಬ್‌ಸೈಟ್‌ಗೆ ಲಾಗಿನ್ ಮಾಡುವುದು ಹೇಗೆ?:

* ಅರ್ಜಿದಾರರು ನೀವು ಪಡೆದುಕೊಂಡಿರುವ ಬಳಕೆದಾರ ID ಮತ್ತು ಪಾಸ್‌ವರ್ಡ್‌ನೊಂದಿಗೆ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಬಹುದು.

* ನಂತರ ವಿದ್ಯಾರ್ಥಿ ಖಾತೆಯ ಮುಖಪುಟಕ್ಕೆ ಪ್ರವೇಶ ಪಡೆಯುತ್ತೀರಿ.

* ಆ ಮುಖಪುಟದಲ್ಲಿ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ವಿವರಗಳಾದ ಆಧಾರ್ ಸಂಖ್ಯೆ, ಆದಾಯ ಮತ್ತು ಜಾತಿ ಪ್ರಮಾಣಪತ್ರ ಮತ್ತು NSP ID ಯನ್ನು ಭರ್ತಿ ಮಾಡಬೇಕಾಗುತ್ತದೆ. ಎಲ್ಲಾ ಅಗತ್ಯ ವಿವರಗಳನ್ನು ಪರಿಶೀಲಿಸಿದ ನಂತರ ಸಬ್‌ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ.
* ನಂತರ ಸ್ವೀಕೃತಿ ಪುಟವು ಪರದೆಯ ಮೇಲೆ ಬರಲಿದೆ. ಅರ್ಜಿದಾರರ ಪೋಷಕರ ದೂರವಾಣಿ ಸಂಖ್ಯೆಯು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗದಿದ್ದರೆ, ಅವರು ಆಧಾರ್ ಕಾರ್ಡ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು ಮತ್ತು ನಂತರ ಅದನ್ನು ಸ್ವೀಕೃತಿ ಚೀಟಿಯೊಂದಿಗೆ ಶಾಲೆಗೆ ಸಲ್ಲಿಸಬೇಕು.

ಎಸ್‌ಎಸ್‌ಪಿ ವಿದ್ಯಾರ್ಥಿವೇತನಕ್ಕೆ ಸಲ್ಲಿಸಬೇಕಾದ ದಾಖಲೆಗಳು :

ಅರ್ಜಿದಾರರು ಎಸ್‌ಎಸ್‌ಪಿ ವಿದ್ಯಾರ್ಥಿವೇತನ ನಮೂನೆಯೊಂದಿಗೆ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಇಲ್ಲಿದೆ.

ಎಸ್‌ಎಸ್‌ಪಿ ಪ್ರೀ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು :-

* ಅಭ್ಯರ್ಥಿಯ SATS ID ಸಂಖ್ಯೆ
* ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್ ಸಂಖ್ಯೆ
* ಮೊಬೈಲ್ ನಂಬರ್
* ಅಭ್ಯರ್ಥಿಯ ಜಾತಿ ಪ್ರಮಾಣಪತ್ರ
* ಕುಟುಂಬದ ಆದಾಯ ಪ್ರಮಾಣಪತ್ರ
* ಬ್ಯಾಂಕ್ ಖಾತೆ ವಿವರಗಳು
* ಬ್ಯಾಂಕ್ ಖಾತೆಯ ವಿವರಗಳನ್ನು ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾಗಿರುವ ದಾಖಲೆ
* NSP ಯ ವಿದ್ಯಾರ್ಥಿವೇತನ ID

ಎಸ್‌ಎಸ್‌ಪಿ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿವೇತನಕ್ಕೆ ಅಗತ್ಯವಿರುವ ದಾಖಲೆಗಳು :

* ಹಾಸ್ಟೆಲ್ ವಾಸ್ತವ್ಯ ಪ್ರಮಾಣಪತ್ರ
* ಅಂಕಪಟ್ಟಿ
* ಶುಲ್ಕ ರಶೀದಿ
* ಪೋಷಕರ ಆದಾಯ ಪ್ರಮಾಣಪತ್ರ
* ರಕ್ಷಣಾ ಸಿಬ್ಬಂದಿ ಪ್ರಮಾಣಪತ್ರ

ಕರ್ನಾಟಕ ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಆಯ್ಕೆಗೆ ಮಾನದಂಡಗಳು :

* ಕುಟುಂಬದ ಆರ್ಥಿಕ ಸ್ಥಿತಿ ಮತ್ತು ಆದಾಯ ಪ್ರಮುಖವಾದ ಮಾನದಂಡ
* ಒಂದು ವೇಳೆ ಇಬ್ಬರು ಅರ್ಜಿದಾರರು ಒಂದೇ ಆರ್ಥಿಕ ಸ್ಥಿತಿ ಮತ್ತು ಆದಾಯ ಹೊಂದಿದ್ದರೆ, ಆ ಸಂದರ್ಭದಲ್ಲಿ ಹೆಚ್ಚಿನ ವಯೋಮಿತಿಯ ಅರ್ಜಿದಾರರನ್ನು ಪರಿಗಣಿಸಲಾಗುತ್ತದೆ.
* ಈ ವಿದ್ಯಾರ್ಥಿವೇತನವನ್ನು ತಮ್ಮ ಸಂಪೂರ್ಣ ಅಧ್ಯಯನದ ಹಣಕಾಸನ್ನು ಭರಿಸಲು ಅರ್ಹ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
* ನಿಮ್ಮ ಆಧಾರ್ ಕಾರ್ಡ್-ಲಿಂಕ್ಡ್ ಬ್ಯಾಂಕ್ ಖಾತೆಯಲ್ಲಿ ನಿಮ್ಮ ವಿದ್ಯಾರ್ಥಿವೇತನದ ಮೊತ್ತವನ್ನು ನೀಡಲಾಗುವುದು.

ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳ ಪಟ್ಟಿ 2021 ವೀಕ್ಷಿಸುವುದ ಹೇಗೆ ?:

ಎಸ್‌ಎಸ್‌ಪಿ ಅಧಿಕೃತ ವೆಬ್‌ಸೈಟ್ ನಲ್ಲಿ ವಿದ್ಯಾರ್ಥಿವೇತನ ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳ ಸಂಪೂರ್ಣ ಪಟ್ಟಿಯನ್ನು ನೀಡಲಾಗಿರುತ್ತದೆ. ಈ ಪಟ್ಟಿಯನ್ನು ವೀಕ್ಷಿಸುವುದು ಹೇಗೆ ಎಂದು ಇಲ್ಲಿ ತಿಳಿಯಿರಿ.

ಸ್ಟೆಪ್ 1: ಎಸ್‌ಎಸ್‌ಪಿ ಕರ್ನಾಟಕ ವಿದ್ಯಾರ್ಥಿವೇತನದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಸ್ಟೆಪ್‌ 2: ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಹತೆ ಪಡೆದ ವಿದ್ಯಾರ್ಥಿಗಳ ಆಯ್ಕೆ ಪಟ್ಟಿಯ ಮೇಲೆ ಕ್ಲಿಕ್ ಮಾಡಿ. ಈ ಮಾಹಿತಿಯು ಮುಖಪುಟದಲ್ಲಿ ಮಾತ್ರ ಲಭ್ಯವಿರುತ್ತದೆ.
ಸ್ಟೆಪ್ 3: ನಂತರ ಹಣಕಾಸು ವರ್ಷ, ಇಲಾಖೆ ಮತ್ತು ಜಿಲ್ಲಾ ವಿವರಗಳನ್ನು ಆಯ್ಕೆ ಮಾಡಿ ಮತ್ತು ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ.
ಸ್ಟೆಪ್ 4: ನಂತರ ಸಂರ್ಪೂರ್ಣ ವಿವರ ನಿಮ್ಮ ಪರದೆಯ ಮೇಲೆ ಮೂಡಲಿದೆ.

For Quick Alerts
ALLOW NOTIFICATIONS  
For Daily Alerts

English summary
Karnataka SSP Scholarship 2021 : Government started this mission to provide scholarship for students who are facing financial aids. Here is the eligibility criteria, selection process and application process details.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X