ಎಫ್ ಡಿ ಎ, ಎಸ್ ಡಿ ಎ ಪರೀಕ್ಷೆ ಪಾಸ್ ಆಗಲು ಸುಲಭ ವಿಧಾನ

ಕೆಪಿಎಸ್ಸಿ ನಡೆಸುವ ಎಫ್ ಡಿ ಎ ಮತ್ತು ಎಸ್ ಡಿ ಎ ಪರೀಕ್ಷೆಗಳಿಗೆ ತಯಾರಾಗುತ್ತಿರುವ ಅಭ್ಯರ್ಥಿಗಳು ಯಾವುದನ್ನು ಓದಬೇಕು ಎಂದು ಸಾಕಷ್ಟು ತಲೆಕೆಡಿಸಿಕೊಂಡಿರುತ್ತಾರೆ. ಅಲ್ಲದೇ ಮಾರುಕಟ್ಟೆಯಲ್ಲಿ ಸಿಗುವ ಭಾರೀ ಗಾತ್ರದ ಪುಸ್ತಕಗಳನ್ನು ಸಹ ಖರೀದಿಸಿರುತ್ತಾರೆ. ಆದರೆ ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ. ಹೇಗೆ ಓದಬೇಕು ಎನ್ನುವುದನ್ನು ಮರೆತುಬಿಡುತ್ತಾರೆ.

ಸುಮ್ಮನೇ ಕೈಗೆ ಸಿಕ್ಕ ಪುಸ್ತಕಗಳನ್ನೆಲ್ಲ ಸಂಗ್ರಹಿಸಿ ಓದುತ್ತ ಕುಳಿತರೆ ಏನು ಪ್ರಯೋಜನವಾಗುವುದಿಲ್ಲ. ಯಾವುದನ್ನು ಓದಬೇಕು ಎಂದು ತಿಳಿದುಕೊಂಡರೆ ಪರೀಕ್ಷೆಯನ್ನು ಬರೆಯುವುದು ಸುಲಭ.

ಕೆಪಿಎಸ್ಸಿ: FDA, SDA ಹುದ್ದೆಗಳ ನೇಮಕಾತಿ

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಕೆಲವು ಸುಲಭ ಮಾರ್ಗೋಪಾಯಗಳು

ಮೊದಲನೆಯದಾಗಿ ಪರೀಕ್ಷೆಗೆ ಯಾವ ಯಾವ ಪಠ್ಯಗಳನ್ನು (ಸಿಲಬಸ್) ಸೂಚಿಸಿಲಾಗಿದೆ ಎನ್ನುವುದನ್ನು ತಿಳಿದುಕೊಳ್ಳಿ. ನಂತರ ಆ ಪಠ್ಯದ ಪ್ರಕಾರ ಹಿಂದಿನ ಪರೀಕ್ಷೆಗಳಲ್ಲಿ ಯಾವ ಯಾವ ರೀತಿ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವುದನ್ನು ಗಮನಿಸಿ.

ಕೆಪಿಎಸ್ಸಿ ಪರೀಕ್ಷೆ

ಪಠ್ಯದಲ್ಲಿ ಸೂಚಿಸಿರುವ ಎಲ್ಲವನ್ನು ಒಮ್ಮೆಲೆ ಓದಲು ಪ್ರಯತ್ನ ಪಡಬೇಡಿ. ಒಂದರ ನಂತರ ಒಂದು ಪಠ್ಯದ ಕಡೆಗೆ ಗಮನ ನೀಡಿ.

ಎಫ್ ಡಿ ಎ ಪರೀಕ್ಷೆ ಪ್ರಶ್ನೆ ಪತ್ರಿಕೆ ಹೇಗಿರುತ್ತೆ ಗೊತ್ತಾ?

ನಿಮಗೆ ಪಠ್ಯದಲ್ಲಿ ಯಾವುದು ಸುಲಭ ಎನಿಸುವುದೋ ಮೊದಲ ಆ ಭಾಗದಿಂದಲೇ ಶುರುಮಾಡಿ (ಉದಾ: ನೀವು ಇತಿಹಾಸದಲ್ಲಿ ಆಸಕ್ತ ಹೊಂದಿದ್ದರೆ ಅದರಿಂದಲೇ ಪ್ರಾರಂಭಿಸಿ) ಆದರೆ ಯಾವುದೇ ಕಾರಣಕ್ಕೂ ಆ ಭಾಗ ಪೂರ್ಣಗೊಳಿಸುವ ಮುಂಚೆಯೇ ಅಂದರೆ ಅರ್ಧಕ್ಕೆ ನಿಲ್ಲಿಸಿ ಬೇರೆ ವಿಷಯವನ್ನು ಅಭ್ಯಾಸ ಮಾಡಬೇಡಿ. ಹೀಗೆ ಒಂದೊಂದೆ ವಿಷಯಗಳನ್ನು ಪೂರ್ಣವಾಗಿ ಓದುತ್ತ ಸಿಲಬಸ್ ಪೂರ್ಣ ಓದಿ.

ಕೆಪಿಎಸ್ಸಿ: ಎಸ್ ಡಿ ಎ ಪರೀಕ್ಸೆ ಪ್ರಶ್ನೆ ಪ್ರತ್ರಿಕೆ ಮತ್ತು ಪಠ್ಯಕ್ರಮ

ಓದುವಾಗ ಬರೆದಿಟ್ಟುಕೊಳ್ಳಿ

ಮಾರುಕಟ್ಟೆಗಳಲ್ಲಿ ಸಿಗುವ ಪುಸ್ತಕಗಳು ಎಷ್ಟೇ ವಿವರವಾಗಿ ಮಾಹಿತಿ ನೀಡಿದ್ದರು ಕೂಡ ನಿಮ್ಮದೇ ಆದ ಪ್ರತ್ಯೇಕ ನೋಟ್ಸ್ ಬರೆಯುವುದನ್ನು ಅಭ್ಯಾಸ ಮಾಡಿ. ನೀವು ಓದುವಾಗ ಯಾವುದು ಪ್ರಮುಖವಾದದು ಎನ್ನುವುದನ್ನು ಗುರುತು ಮಾಡಿ ಅದನ್ನು ಬರೆದಿಡಿ. ಪ್ರತಿ ವಿಷಯಕ್ಕು ಪ್ರತ್ಯೇಕ ನೋಟ್ಸ್ ಬರೆಯುವುದು ಉತ್ತಮ. ಏಕೆಂದರೆ ಮುಂದೆ ನಿಮ್ಮ ಈ ನಿಮ್ಮ ನೋಟ್ಸ್ ಬೇರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಕಾರಿಯಾಗಬಹುದು. ಅಲ್ಲದೇ ಪರೀಕ್ಷೆ ಸಮಯದಲ್ಲಿ ನಿಮಗೆ ಓದಲು ಇದು ಸುಲಭವಾಗುತ್ತದೆ.

ದಿನಪತ್ರಿಕೆ ಓದುವುದು

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಾಗಿ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ಹೆಚ್ಚಾಗಿ ಕೇಳಲಾಗುತ್ತದೆ. ಹಾಗಾಗಿ ಪ್ರತಿ ದಿನ ಕನಿಷ್ಠ ಎರಡು ದಿನಪತ್ರಿಕೆ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಸಾಧ್ಯವಾದರೆ ಅಂದಿನ ದಿನಪತ್ರಿಕೆಯ ಪ್ರಮುಖ ಘಟನೆಗಳನ್ನು ಬರೆದಿಡಿ. (ಉದಾ: ಉಪಗ್ರಹಗಳ ಉಡಾವಣೆ, ಸರ್ಕಾರದ ನೂತನ ಯೋಜನೆಗಳು)

ಓದಿದನ್ನು ಚರ್ಚಿಸಿ

ನೀವು ಓದಿದ ವಿಷಯ ನಿಮ್ಮಲ್ಲಿ ಉಳಿಯಬೇಕೆಂದರೆ ನೀವು ಅದನ್ನು ಮತ್ತೊಬ್ಬರೊಡನೆ ಚರ್ಚಿಸಬೇಕು. ನಿಮ್ಮ ಸಮಾನ ಮನಃಸ್ಥಿತಿಯವರೊಡನೆ ಅಥವಾ ನಿಮಗಿಂತ ಹೆಚ್ಚು ತಿಳಿದವರ ಜೊತೆಗೆ ನೀವು ಅದನ್ನು ಚರ್ಚಿಸಿದಾಗ ಮತ್ತಷ್ಟು ವಿಚಾರ ತಿಳಿಯುವುದಲ್ಲದೇ ನೀವು ಓದಿದ್ದು ದೀರ್ಘವಾಗಿ ನಿಮ್ಮಲ್ಲಿ ಉಳಿಯುತ್ತದೆ.

ಹೈಸ್ಕೂಲ್ ಪಠ್ಯಗಳ ಸಹಾಯ ಪಡೆಯಿರಿ

ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬೇಸಿಕ್ ಅಂಶಗಳಿಗೆ ಹೆಚ್ಚು ಆದ್ಯಾತೆ ನೀಡಲಾಗುತ್ತದೆ. ಆದ್ದರಿಂದ ನೀವು ಪ್ರೌಢಶಾಲಾ ಪಠ್ಯಗಳ ವಿಜ್ಞಾನ, ಇತಿಹಾಸದ ಪುಸ್ತಕಗಳ ಸಹಾಯ ಪಡೆಯಬಹುದು.

ನಿಮ್ಮ ಅಭ್ಯಾಸಕ್ಕೆ ಒಂದು ವೇಳಾಪಟ್ಟಿಯನ್ನು ನೀವೆ ರಚಿಸಿಕೊಳ್ಳಿ. ಯಾವ ಸಮಯ ಓದಲು ಸೂಕ್ತ ಎನ್ನುವುದನ್ನು ನಿರ್ಧರಿಸಿ ಅದಕ್ಕಾಗಿ ಸಮಯವನ್ನು ಮೀಸಲಿಡಿ. ಹೀಗೆ ಮಾಡುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಜಯಿಸಬಹುದು.

For Quick Alerts
ALLOW NOTIFICATIONS  
For Daily Alerts

    English summary
    KPSC FDA SDA preparation tips- One of the most effective ways to prepare for exams is to practice taking past versions. This helps you get used to the format of the questions, and - if you time yourself - can also be good practice for making sure you spend the right amount of time on each section

    ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
    Kannada Careerindia

    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more