ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆ-1ರ ಮೊದಲ ವಿಭಾಗ

Posted By:

ಕೆಪಿಎಸ್ಸಿ ಮುಖ್ಯ ಪರೀಕ್ಷೆಯ ಸಾಮಾನ್ಯ ಅಧ್ಯಯನದ ಮೊದಲ ಪತ್ರಿಕೆಯಲ್ಲಿ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಪರಂಪರೆ ಬಗ್ಗೆ ಕೇಳಲಾಗುತ್ತದೆ.

ಈ ಮೊದಲ ಪತ್ರಿಕೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿದ್ದು, ಮೊದಲ ಭಾಗದಲ್ಲಿ ಆರು ವಿಭಾಗಗಳಿವೆ. ಮೊದಲ ವಿಭಾಗದಲ್ಲಿ ಭಾರತದ ಪಾರಂಪರಿಕ ಸಾಂಸ್ಕೃತಿಕ ಸಂಪತ್ತು (ಆಯ್ದ ಕ್ಷೇತ್ರಗಳು ಹಾಗೂ ವಿಷಯಗಳು) ಬಗ್ಗೆ ಕೇಳಲಾಗುತ್ತದೆ.

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆಗಳ ವಿವರ

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಸಾಮಾನ್ಯ ಅಧ್ಯಯನ

ಸಿಂಧು ನಾಗರೀಕತೆ

ಸಿಂಧು ನಾಗರೀಕತೆ ಮತ್ತು ವೇದಕಾಲಿನ ನಾಗರೀಕತೆಯ ನಡುವಿನ ವ್ಯತ್ಯಾಸ, ವರ್ಣ, ವಿಕಸನ, ಜಾತಿ ಪದ್ಧತಿ, ಧಾರ್ಮಿಕ ಸ್ಥಿತಿಗತಿ, ಧಾರ್ಮಿಕ ಚಳವಳಿಗಳ ಉಗಮ

ಸಾಹಿತ್ಯ

ಸಂಸ್ಕೃತ ಸಾಹಿತ್ಯ (ಪ್ರಾಚೀನ) ವೇದ ಸಾಹಿತ್ಯ, ಮಹಾಕಾವ್ಯಗಳು, ಪುರಾಣಗಳು ಭಾರತೀಯರ ಜೀವನ ಹಾಗೂ ಸಂಸ್ಕೃತಿಯ ಮೇಲೆ ಇವುಗಳ ಪ್ರಭಾವ, ನಾಟಕ, ಪ್ರಜಾರಾಜ್ಯ ಪದ್ಧತಿಯ ಗದ್ಯ ಕೃತಿಗಳು, ನೀತಿ, ಜನಪ್ರಿಯ ಕತೆಗಳು ಮತ್ತು ಪಂಚತಂತ್ರ, ಸಾಹಿತ್ಯಕ್ಕೆ ಮೊಘಲರ ಕೊಡುಗೆಗಳು.

ವಿಜ್ಞಾನ ಮತ್ತು ತಂತ್ರಜ್ಞಾನ

ಗಣಿತ, ಖಗೋಳಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಶರೀರ ವಿಜ್ಞಾನ ಹಾಗೂ ವೈದ್ಯಶಾಸ್ತ್ರ, ಹಡಗು ನಿರ್ಮಾಣ, ಗಣಿ ಹಾಗೂ ಭೂಗರ್ಭ ಶಾಸ್ತ್ರ, ಇಂಜಿನಿಯರಿಂಗ್ ಹಾಗೂ ವಾಸ್ತುಶಿಲ್ಪ.

ಕಲಾ ಪ್ರಕಾರಗಳು(ಕರ್ನಾಟಕವನ್ನು ಹೊರತುಪಡಿಸಿ)

ಮೌರ್ಯ ಹಾಗೂ ಗುಪ್ತರ ಕಾಲ ಖಜರಾಹೋ ದೇವಸ್ಥಾನಗಳು, ಮೌಂಟ್ ಅಬುವಿನಲ್ಲಿನ ಜೈನ ದೇವಾಲಯಗಳು, ಒಡಿಶಿಯನ್ ದೇವಾಲಯಗಳು, ಪಲ್ಲವ, ಚೋಳ ಹಾಗೂ ಪಾಂಡ್ಯರ ಕೊಡುಗೆಗಳು, ಮೊಘಲರ ವಾಸ್ತುಶಿಲ್ಪ, ಕ್ಯಾಥಡ್ರೆಲ್ ವಾಸ್ತುಶಿಲ್ಪ, ಬಾಮ್ ಜೀಸಸ್-ಹಳೆಯ ಗೋವಾ, ಸೆಂಟ್ ಪಾಲ್ಸ್- ಕೋಲ್ಕತ್ತಾ ಹಾಗೂ ಸೆಂಟ್ ಥಾಮಸ್-ಚೆನ್ನೈ

ಚಿತ್ರಕಲೆ

ಅಜಂತದ ತೈಲ ಚಿತ್ರಗಳು, ಮೊಘಲರ ಹಾಗೂ ರಜಪೂತರ ಚಿತ್ರಕಲಾ ಶಾಲೆಗಳು

ನೃತ್ಯ ಹಾಗೂ ಸಂಗೀತ

ಸಾಂಪ್ರದಾಯಿಕ ನೃತ್ಯ ಹಾಗೂ ಸಂಗೀತ, ಸಂಗೀತಕ್ಕೆ ಮೊಘಲರ ಕೊಡುಗೆಗಳು, ಭಾರತದ ಜನಪದ ಕಲೆಗಳು.

ಹೊರ ಜಗತ್ತಿಗೆ ಭಾರತದ ಸಾಂಸ್ಕೃತಿಕ ಕೊಡುಗೆ: ಮಧ್ಯ ಏಶಿಯಾ, ಚೈನಾ, ಜಪಾನ್, ದಕ್ಷಿಣ ಪೂರ್ವ(ಆಗ್ನೆಯ) ಏಶಿಯ ಹಾಗೂ ಶ್ರೀಲಂಕಾ

ಕೆಪಿಎಸ್ಸಿ ಮುಖ್ಯ ಪರೀಕ್ಷೆ: ಪ್ರಬಂಧ ಮತ್ತು ಅರ್ಹತಾ ಪತ್ರಿಕೆಗಳ ವಿವರ

ಭಾರತೀಯ ಧರ್ಮಗಳು

ಹಿಂದೂ ಧರ್ಮ

ಸಾಮಾನ್ಯ ಲಕ್ಷಣಗಳು ಹಾಗೂ ಸಾಮಾನ್ಯ ನಂಬಿಕೆಗಳು, ಪುರುಷಾರ್ಥಗಳು ಆಚರಣೆ ಹಾಗೂ ನೀತಿ ತತ್ವ ಹಬ್ಬಗಳು ಹಾಗೂ ಪವಿತ್ರ ದಿನಗಳು, ತೀರ್ಥಯಾತ್ರೆ ಹಾಗೂ ಜಾತ್ರೆಗಳು, ಹಿಂದೂ ಪಂಥಗಳು; ಹಿಂದೂಧರ್ಮ, ವಿವಿಧ ಪಂಥಗಳ ಒಕ್ಕೂಟ, ಶೈವ, ವೈಷ್ಣವ ಹಾಗೂ ಶಾಕ್ತ, ಉಪನಿಷತ್ತಿನ ತತ್ವ ಹಾಗೂ ಭಗವದ್ಗೀತೆ, ಪತಂಜಲಿ ಯೋಗ ಸೂತ್ರಗಳು.

ಬೌದ್ಧ ಧರ್ಮ

ತತ್ವಗಳು-ನಾಲ್ಕು ಶ್ರೇಷ್ಠ ಸತ್ಯಗಳು, ಅಷ್ಟಾಂಗ ಮಾರ್ಗ, ನಿರ್ವಾಣ, ನೀತಿ ತತ್ವ, ಪಂಥಗಳು; ಹೀನಯಾನ ಮತ್ತು ಮಹಾಯಾನ

ಜೈನ ಧರ್ಮ

ತತ್ವಗಳು-ರತ್ನತ್ರಯ, ನೀತಿಸಂಹಿತೆ, ಸಮಾನತೆ, ಅಹಿಂಸೆ, ಪಂಥಗಳು; ದಿಗಂಬರ ಹಾಗೂ ಶ್ವೇತಾಂಬರ

ಕ್ರೈಸ್ತಧರ್ಮ

ಏಸುವಿನ ಬೋಧನೆ, ಕ್ರೈಸ್ತ ಧರ್ಮದ ಸಿದ್ಧಾಂತಗಳು ಹಾಗೂ ಧರ್ಮಾಧ್ಯಯನ, ಕ್ರೈಸ್ತಧರ್ಮದ ಪಂಗಡಗಳು. ರೋಮನ್ ಕ್ಯಾಥೋಲಿಕ್ ಚರ್ಚ್, ಪೂರ್ವದ ಸಾಂಪ್ರದಾಯಿಕ ಚರ್ಚುಗಳು, ಹಾಗೂ ಪ್ರಾಟೆಸ್ಟೆಂಟ್ ಚರ್ಚ್ ಗಳು, ಭಾರತದಲ್ಲಿ ಕ್ರೈಸ್ತ ಮಿಶಿನರಿಗಳ ಚಟುವಟಿಕೆಗಳು.

ಇಸ್ಲಾಂ

ತತ್ವಗಳು ಹಾಗೂ ಆಚರಣೆಗಳು, ದೇವರು, ಧರ್ಮ ತತ್ವ ನಿರೂಪಣೆ, ಇಸ್ಲಾಂನ ಪಂಚಸ್ತಂಭಾಕೃತಿಗಳು, ಪವಿತ್ರ ಸ್ಥಳಗಳು ಹಾಗೂ ದಿನಗಳು, ಕುಟುಂಬ ವ್ಯವಸ್ಥೆ ಹಾಗೂ ಷರಿಯಾ ಕರ್ನಾಟಕ ಸೂಫಿಗಳು, ಪಂಥಗಳು; ಷಿಯಾ ಹಾಗೂ ಸುನ್ನಿ.

ಸಿಖ್ಖ ಧರ್ಮ: ತತ್ವಗಳು ಹಾಗೂ ಆಚರಣೆಗಳು ಮತ್ತು ಇದರ ಉಗಮ.

English summary
KPSC mains general paper 1 has six divisions in it. This paper consists of historical and cultural heritage of India and Karnataka as well.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia