Essay And Speech On Labour Day : ಕಾರ್ಮಿಕರ ದಿನಕ್ಕೆ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿ ಸಲಹೆ

ಕಾರ್ಮಿಕರ ದಿನದ ಕುರಿತು ಭಾಷಣ ಮತ್ತು ಪ್ರಬಂಧಕ್ಕೆ ಸಲಹೆ

ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಮೇ ದಿನವನ್ನಾಗಿ ಪ್ರತಿ ವರ್ಷ ದೇಶದೆಲ್ಲೆಡೆ ಮೇ 1ರಂದು ಆಚರಿಸಲಾಗುತ್ತದೆ. ಕಾರ್ಮಿಕರ ಶ್ರಮವನ್ನು ಗುರುತಿಸುವ ಮತ್ತು ಅವರನ್ನು ಗೌರವಿಸುವ ಹಿನ್ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.

ಕಾರ್ಮಿಕರು 16 ಗಂಟೆಗಳ ಕೆಲಸದ ಸಮಯವನ್ನು 8 ಗಂಟೆಗಳಿಗೆ ಇಳಿಸಬೇಕೆಂದು ಮುಷ್ಕರ ನಡೆಸಿದ ಹಿನ್ನೆಲೆಯಲ್ಲಿ ಈ ದಿನವನ್ನು 'ಅಂತರರಾಷ್ಟ್ರೀಯ ಶ್ರಮಿಕ ದಿವಸ' ಅಥವಾ 'ಕಾಮಗರ್ ದಿನ್' ಎಂದು ಕರೆಯಲಾಗುತ್ತದೆ.

ಕಾರ್ಮಿಕರ ದಿನ ಕುರಿತು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಭಾಷಣ ಮಾಡಲು ಇಲ್ಲಿದೆ ಮಾಹಿತಿ:

ಕಾರ್ಮಿಕರ ದಿನದ ಕುರಿತು ಭಾಷಣ ಮತ್ತು ಪ್ರಬಂಧಕ್ಕೆ ಸಲಹೆ

1. ಕಾರ್ಮಿಕ ವರ್ಗದ ಕಠಿಮ ಪರಿಶ್ರಮ ಮತ್ತು ಅವರ ಸಾಧನೆಯನ್ನು ಗೌರವಿಸಲು ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ. ದೇಶದೆಲ್ಲೆಡೆ ಈ ಆಚರಣೆ ಜಾರಿಯಲ್ಲಿದೆ.

ಕೈಗಾರಿಕೋದ್ಯಮಿಗಳು ಕಾರ್ಮಿಕ ವರ್ಗವನ್ನು ಶೋಷಿಸಲು ಪ್ರಾರಂಭವಾದಾಗ ಮತ್ತು ಕಡಿಮೆ ಸಂಬಳ ನೀಡಿ ದಿನಕ್ಕೆ ೧೦ ರಿಂದ ೧೫ ತಾಸುಗಳ ಕಾಲ ಕೆಲಸ ಮಾಡಿಸಿಕೊಳ್ಳುವುದನ್ನು ವಿರೋಧಿಸಿ ಕಾರ್ಮಿಕರು ಮುಷ್ಕರದಲ್ಲಿ ಭಾಗಿಯಾದರು. ಇದರಿಂದ ಅನೇಕ ಕಾರ್ಮಿಕರು ಪ್ರಾಣ ಕಳೆದುಕೊಂಡರು.

ಅದಾಗ್ಯೂ ಅವರ ಶೋಷಣ ವಿರುದ್ಧ ಪ್ರತಿಭಟಿಸಲು ನಿರ್ಧರಿಸಿದರು ಮತ್ತು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಲು ಒಗ್ಗೂಡಿದರು. ಕಾರ್ಮಿಕ ಸಂಘಟನೆಗಳನ್ನು ರಚಿಸಿಕೊಂಡು ಅನ್ಯಾಯದ ವಿರುದ್ಧ ಮುಷ್ಕರ ನಡೆಸಿದರು. ಅಂತಿಮವಾಗಿ ಸರ್ಕಾರವು ಕಾರ್ಮಿಕರ ಕೆಲಸದ ಅವಧಿಯನ್ನು ೮ ಗಂಟೆಗಳವರೆಗೆ ನಿದಗಿ ಮಾಡಲಾಯಿತಿ. ಹಾಗಾಗಿ ಈ ದಿನದ ಕುರುಹಾಗಿ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.

ಕಾರ್ಮಿಕರ ದಿನದ ಕುರಿತು ಭಾಷಣ ಮತ್ತು ಪ್ರಬಂಧಕ್ಕೆ ಸಲಹೆ

2. ಕಾರ್ಮಿಕ ವರ್ಗದ ಪರಿಶ್ರಮ ಮತ್ತು ನಿಷ್ಠೆಯ ಬದುಕನ್ನು ಗುರುತಿಸಲು ದೇಶದೆಲ್ಲೆಡೆ ಕಾರ್ಮಿಕರ ದಿನವನ್ನು ವಿವಿಧ ದಿನಾಂಕಗಳಲ್ಲಿ ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಕಾರ್ಮಿಕರ ದಿನವನ್ನು ಮೇ 1 ರಂದು ವಿವಿಧ ದೇಶಗಳಲ್ಲಿ ಆಚರಿಸಲಾಗುತ್ತದೆ.

ಈ ಮೊದಲು ಕಾರ್ಮಿಕ ವರ್ಗದ ಪರಿಸ್ಥಿತಿ ತುಂಬಾನೆ ಕೆಟ್ಟದಾಗಿತ್ತು. ದಿನಕ್ಕೆ ಸುಮಾರು 15 ಗಂಟೆಗಳ ಕಾಲ ಕೆಲಸ ನಿರ್ವಹಿಸಬೇಕಿತ್ತು. ಕೇವಲ ಕಡಿಮೆ ಸಂಬಳಕ್ಕಾಗಿ ಅವರು ದುಡಿಯಬೇಕಿದ್ದ ಪರಿಸ್ಥಿತಿಯದು. ಇದರ ವಿರುದ್ದ ಅನೇಕ ಕಾರ್ಮಿಕ ಮುಷ್ಕರ ಹೂಡಿದರು. ಇದರ ಪರಿಣಾಮವಾಗಿ ಅನೇಕರು ಗಾಯಗೊಂಡರು ಮತ್ತು ಕೆಲವರು ಪ್ರಾಣ ಕಳೆದುಕೊಂಡರು.

ತದನಂತರ ಅನೇಕ ಕಾರ್ಮಿಕ ಸಂಘಟನೆಗಳು ಈ ನೀತಿಯ ವಿರುದ್ದ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಅದರ ಪರಿಣಾಮವಾಗಿ ಕಾರ್ಮಿಕರ ಕರ್ತವ್ಯದ ಅವಧಿಯು 8 ಗಂಟೆಗಳ ಅವಧಿಗೆ ಇಳಿಯಿತು. ಈ ಚಳುವಳಿಯಿಂದಾಗಿ ಕಾರ್ಮಿಕರ ಶ್ರಮವನ್ನು ಗೌರವಿಸಲೆಂದು ಕಾರ್ಮಿಕರ ದಿನದ ಆಚರಣೆ ಪ್ರಾರಂಭವಾಯಿತು.

ವಿವಿಧ ದೇಶಗಳಲ್ಲಿ ವಿವಿಧ ಇತಿಹಾಸಗಳನ್ನು ಹೊಂದಿರುವ ಈ ದಿನದ ಆರಣೆಯ ಹಿಂದಿರುವ ಉದ್ದೇಶ ಮಾತ್ರ ಒಂದೇ. ಕಾರ್ಮಿಕ ವರ್ಗದವರ ಮೇಲೆ ನಡೆಯುತ್ತಿದ್ದ ಅನ್ಯಾಯ ಮತ್ತು ಶೋಷಣೆಯ ವಿರುದ್ದ ದನಿ ಎತ್ತಿ ಅವರಿಗೆ ನ್ಯಾಯ ಒದಗಿಸುವುದಾಗಿತ್ತು. ಹಾಗಾಗಿ ಅವರ ಕೊಡುಗೆಯನ್ನು ಶ್ಲಾಘಿಸಲು ಈ ವಿಶೇಷ ದಿನವನ್ನು ಮೀಸಲಿಡಲಾಗಿದೆ.

For Quick Alerts
ALLOW NOTIFICATIONS  
For Daily Alerts

English summary
International labour day is observed as may day across the world on may 1. Here is the essay and speech idea for students.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X