Lal Bahadur Shastri Death Anniversary : ಜನನಾಯಕ ಶಾಸ್ತ್ರೀಜಿ ಅವರ ಕುರಿತ ಮಹತ್ವದ ಸಂಗತಿಗಳು

ಸ್ವತಂತ್ರ ಭಾರತದ ಎರಡನೇ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ. ಇವರು ಭಾರತದ ಸ್ವಾತಂತ್ರ್ಯಕ್ಕೆ ಅವಿರತವಾಗಿ ಹೋರಾಡಿದವರು. ದೇಶದ ಏಕತೆಯ ಕಲ್ಪನೆಗೆ ಒತ್ತು ನೀಡಿದ ಭಾರತದ ಏಕೈಕ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಇಂದು ಅವರ 56ನೇ ಪುಣ್ಯತಿಥಿ.

ಲಾಲ್ ಬಹದ್ದೂರ್ ಶಾಸ್ತೀಜಿ ಅವರ 56ನೇ ಪುಣ್ಯಸ್ಮರಣೆ

ಲಾಲ್​ ಬಹದ್ದೂರ್ ಶಾಸ್ತ್ರಿ ಅವರು 1904ರ ಅಕ್ಟೋಬರ್​ 2ರಂದು ಜನಿಸಿದರು ಮತ್ತು 1966ರ ಜನವರಿ 11ರಂದು ಉಜ್ಬೆಕಿಸ್ತಾನ್​​ದ ತಾಷ್ಕೆಂಟ್​​ನಲ್ಲಿ ನಿಧನರಾದರು. ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು ಮತ್ತು "ಜೈ ಜವಾನ್ ಜೈ ಕಿಸಾನ್" ಎಂಬ ಪ್ರಸಿದ್ಧ ಘೋಷಣೆಯನ್ನು ನಾಡಿಗೆ ಪರಿಚಯಿಸಿದರು.

ಶಾಸ್ತ್ರೀಜಿ ಅವರು ಸರಳತೆ ಮತ್ತು ಪ್ರಾಮಾಣಿಕತೆಗೆ ಹೆಸರಾದವರು. ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿ ಗೌರವಿಸಲಾಯಿತು. ಅವರ ಪುಣ್ಯತಿಥಿಯಂದು ಅವರ ಕುರಿತಾದ ಮಹತ್ವದ ಸಂಗತಿಗಳನ್ನು ಇಲ್ಲಿ ನೀಡುತ್ತಿದ್ದೇವೆ ಓದಿ ತಿಳಿಯಿರಿ.

* ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಲಾಲ್ ಬಹದ್ದೂರ್ ವರ್ಮ ಎಂದು ಜನಿಸಿದರು. ವಾರಣಾಸಿಯ ಕಾಶಿ ವಿದ್ಯಾಪೀಠದಿಂದ ಪದವಿ ಪಡೆದಾಗ ಅವರಿಗೆ 'ಶಾಸ್ತ್ರಿ' ಎಂಬ ಬಿರುದು ನೀಡಲಾಯಿತು.

* ಗಾಂಧಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಶಾಸ್ತ್ರಿ ಜೈಲಿಗೆ ಹೋದರು. ಆದರೆ ಅವರು ಇನ್ನೂ 17 ವರ್ಷದ ಅಪ್ರಾಪ್ತ ವಯಸ್ಕನಾಗಿದ್ದರಿಂದ ಅವರನ್ನು ಕೈಬಿಡಲಾಯಿತು.

* ಸ್ವಾತಂತ್ರ್ಯದ ನಂತರ ಅವರು ಸಾರಿಗೆ ಸಚಿವರಾಗಿ ನೇಮಕಗೊಂಡಾಗ ಸಾರ್ವಜನಿಕ ಸಾರಿಗೆಯಲ್ಲಿ ಮಹಿಳಾ ಚಾಲಕರು ಮತ್ತು ಕಂಡಕ್ಟರ್‌ಗಳ ಅವಕಾಶಗಳನ್ನು ಪರಿಚಯಿಸಿದರು.

* ಅವರು ತಮ್ಮ ಮದುವೆಯಲ್ಲಿ ಖಾದಿ ಬಟ್ಟೆ ಮತ್ತು ನೂಲುವ ಚಕ್ರವನ್ನು ವರದಕ್ಷಿಣೆಯಾಗಿ ಸ್ವೀಕರಿಸಿದರು.

* ಶಾಸ್ತ್ರಿ ಅವರು ಸಚಿವರಾಗಿದ್ದ ಅವಧಿಯಲ್ಲಿ ಲಾಠಿ ಚಾರ್ಜ್‌ಗೆ ಬದಲಾಗಿ ಜನರನ್ನು ಚದುರಿಸಲು ಜೆಟ್ ನೀರನ್ನು ಸಿಂಪಡಿಸುವ ನಿಯಮವನ್ನು ಪರಿಚಯಿಸಿದರು.

* ಶಾಸ್ತ್ರಿ ಅವರು ಗೃಹ ಸಚಿವರಾಗಿ ಭ್ರಷ್ಟಾಚಾರ ತಡೆಗೆ ಮೊದಲ ಸಮಿತಿಯನ್ನು ಪರಿಚಯಿಸಿದರು.

* ನೆಹರೂ ಅವರ ಮರಣದ ನಂತರ ಮೊದಲು ಇಂದಿರಾಗಾಂಧಿ ಅವರನ್ನು ಪ್ರಧಾನಿ ಹುದ್ದೆಗೆ ವಹಿಸಲು ಕೇಳಲಾಯಿತು. ಇಂದಿರಾಗಾಂಧಿ ನಿರಾಕರಿಸಿದರು ತದನಂತರ ಶಾಸ್ತ್ರಿ ಅಧಿಕಾರ ವಹಿಸಿಕೊಂಡರು.

* ಶಾಸ್ತ್ರಿ ಅವರು ಶ್ವೇತ ಕ್ರಾಂತಿಯನ್ನು ಉತ್ತೇಜಿಸಿದರು. ಇದು ಹಾಲು ಉತ್ಪಾದನೆಯನ್ನು ಹೆಚ್ಚಿಸುವ ರಾಷ್ಟ್ರವ್ಯಾಪಿ ಅಭಿಯಾನವಾಗಿದೆ.

* ಅವರು ಗುಜರಾತ್‌ನ ಆನಂದ್‌ನಲ್ಲಿರುವ ಅಮುಲ್ ಹಾಲಿನ ಸಹಕಾರವನ್ನು ಬೆಂಬಲಿಸಿದರು ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯನ್ನು ರಚಿಸಿದರು.

* ಶಾಸ್ತ್ರಿ ಅವರು ಬೇಡಿಕೆಯನ್ನು ಹೆಚ್ಚಿಸಲು ಮತ್ತು ಭಾರತದ ಆಹಾರ ಉತ್ಪಾದನೆಯನ್ನು ಉತ್ತೇಜಿಸಲು ರಾಷ್ಟ್ರೀಯ ವಿದ್ಯಮಾನವಾದ ಹಸಿರು ಕ್ರಾಂತಿಯ ಕಲ್ಪನೆಯನ್ನು ಸಂಯೋಜಿಸಿದರು.

* ಅವರು 1920ರ ದಶಕದಲ್ಲಿ ಸ್ವಾತಂತ್ರ್ಯ ಚಳವಳಿಗೆ ಸೇರಿದರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಸೇವೆ ಸಲ್ಲಿಸಿದರು.

* 1965ರ ಭಾರತ-ಪಾಕಿಸ್ತಾನ ಯುದ್ಧದ ಕಠಿಣ ಸಮಯದಲ್ಲಿ ಅವರು ಗಾಂಧಿ ಮತ್ತು ನೆಹರು ಅವರಿಂದ ಪ್ರೇರಿತರಾಗಿ ದೇಶವನ್ನು ಮುನ್ನಡೆಸಿದರು.

* ಶಾಸ್ತ್ರಿ ಅವರು 1965 ರ ಯುದ್ಧವನ್ನು ಕೊನೆಗೊಳಿಸಲು ಜನವರಿ 10,1966 ರಂದು ಪಾಕಿಸ್ತಾನದ ಅಧ್ಯಕ್ಷ ಮುಹಮ್ಮದ್ ಅಯೂಬ್ ಖಾನ್ ಅವರೊಂದಿಗೆ ತಾಷ್ಕೆಂಟ್ ಘೋಷಣೆಗೆ ಸಹಿ ಹಾಕಿದರು.

* ಶಾಸ್ತ್ರಿ ಅವರು ಹೃದಯಾಘಾತದಿಂದ ನಿಧನರಾದರು. ಆದಾಗ್ಯೂ ಅವರ ವೈದ್ಯರಾದ ಡಾ ಆರ್.ಎನ್ ಚುಗ್ ಪ್ರಕಾರ, ಶಾಸ್ತ್ರಿ ಅವರಿಗೆ ಈ ಹಿಂದೆ ಯಾವುದೇ ಹೃದಯ ದೌರ್ಬಲ್ಯ ಚಿಹ್ನೆ ಇರಲಿಲ್ಲ. ಹಾಗಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸಾವಿನ ಬಗ್ಗೆ ಇನ್ನೂ ನಿಗೂಢತೆ ಇದೆ.

For Quick Alerts
ALLOW NOTIFICATIONS  
For Daily Alerts

English summary
Lal bahadru shastri death anniversary today. Here is the facts about india's second prime minister.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X