Lal Lajpat Rai Birth Anniversary : 'ಪಂಜಾಬ್ ಕೇಸರಿ' ಎಂದೇ ಕರೆಯಲ್ಪಡುವ ಲಾಲಾ ಲಜಪತ ರಾಯ್ ಅವರ ಆಸಕ್ತಿದಾಯಕ ಸಂಗತಿಗಳು

'ಪಂಜಾಬ್ ಕೇಸರಿ' ಎಂದೇ ಕರೆಯಲ್ಪಡುವ ಸ್ಪೂರ್ತಿದಾಯಕ ನಾಯಕ ಲಾಲಾ ಲಜಪತ ರಾಯ್. ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ರಾಯ್ ಕೂಡ ಒಬ್ಬರು. ರಾಯ್ ಅವರು ತಮ್ಮ ಬಲವಾದ ನಿರ್ಣಯ, ಸ್ಪಷ್ಟ ದೃಷ್ಟಿ ಮತ್ತು ಧೈರ್ಯದ ಮೂಲಕ ಬ್ರಿಟಿಷರ ವಿರುದ್ಧ ಹೋರಾಟವನ್ನು ನಡೆಸಿದರು. ಅವರ ಉಗ್ರ ಸ್ವಭಾವದಿಂದಾಗಿ ಅವರು 'ಪಂಜಾಬ್‌ನ ಸಿಂಹ' ಎಂದು ಜನಪ್ರಿಯರಾದರು.

 
'ಪಂಜಾಬ್ ಕೇಸರಿ' ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಸಕ್ತಿದಾಯಕ ಸಂಗತಿಗಳು

ರಾಯ್ ಅವರು ಪಂಜಾಬ್‌ನ ಲುಧಿಯಾನ ಬಳಿಯ ಧುಡಿಕೆಯಲ್ಲಿ ಜನವರಿ 28,1865ರಂದು ಜನಿಸಿದರು. ಲಾಹೋರ್‌ನಲ್ಲಿ ಓದುವುದರಿಂದ ಹಿಡಿದು ಭಾರತದಲ್ಲಿ ರಾಷ್ಟ್ರೀಯತೆಯ ಆಧಾರ ಸ್ತಂಭವಾಗುವವರೆಗೆ ಹಲವಾರು ಮಜಲುಗಳನ್ನು ದಾಟಿದರು. ಅವರು ಲೇಖಕರು ಮತ್ತು ರಾಜಕಾರಣಿಯಾಗಿದ್ದರು. ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಲಕ್ಷ್ಮಿ ನ್ಯಾಷನಲ್ ಬ್ಯಾಂಕ್‌ನ ಅನೇಕ ರಾಷ್ಟ್ರೀಯತಾವಾದಿ ಚಟುವಟಿಕೆಗಳೊಂದಿಗೆ ಅವರು ಕೈಜೋಡಿಸಿದ್ದರು. ಇಂದು ಅವರ ಜನ್ಮವಾರ್ಷಿಕೋತ್ಸವ ದಿನವಾಗಿದ್ದು ದೇಶವು ಅವರನ್ನು ನೆನಪಿಸಿಕೊಳ್ಳುತ್ತದೆ. ಬನ್ನಿ ಈ ದಿನ ಅವರ ಕುರಿತ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಇಲ್ಲಿ ನೀಡುತ್ತಿದ್ದೇವೆ ಓದಿ ತಿಳಿಯಿರಿ.

ಪಂಜಾಬ್ ಕೇಸರಿ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ :

* ಜನವರಿ 28,1865ರಲ್ಲಿ ಪಂಜಾಬ್‌ನ ಲುಧಿಯಾನ ಬಳಿಯ ಧುಡಿಕೆಯಲ್ಲಿ ಜನಿಸಿದ ಲಾಲಾ ಲಜಪತ ರಾಯ್ ಅವರು ಲಾಹೋರ್‌ನ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಅಧ್ಯಯನ ಮಾಡಿದರು ಮತ್ತು ನಗರದಲ್ಲಿ ಕಾನೂನು ಅಭ್ಯಾಸವನ್ನು ಸಹ ಹೊಂದಿದ್ದರು.

* ರಾಯ್ ಅವರು ಆರ್ಯ ಸಮಾಜದ ಸ್ಥಾಪಕರಾದ ದಯಾನಂದ ಸರಸ್ವತಿಯವರ ಅನುಯಾಯಿಯಾದರು ಮತ್ತು ಸಮಾಜದ ನಾಯಕರಲ್ಲಿ ಒಬ್ಬರಾದರು.

* 1881ರಲ್ಲಿ ಅವರು 16ನೇ ವಯಸ್ಸಿನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದರು ಮತ್ತು 1885ರಲ್ಲಿ ಲಾಹೋರ್‌ನಲ್ಲಿ ದಯಾನಂದ ಆಂಗ್ಲೋ-ವೇದಿಕ್ ಶಾಲೆಯನ್ನು ಸ್ಥಾಪಿಸಿದರು.

* 1893ರಲ್ಲಿ ರಾಯ್ ಅವರು ಕಾಂಗ್ರೆಸ್‌ನ ಲಾಹೋರ್ ಅಧಿವೇಶನದಲ್ಲಿ ಬಾಲಗಂಗಾಧರ ತಿಲಕ್ ಅವರನ್ನು ಭೇಟಿಯಾದರು ಮತ್ತು ಬಿಪಿನ್ ಚಂದ್ರ ಪಾಲ್ ಅವರೊಂದಿಗೆ ಇಬ್ಬರು ಸ್ವದೇಶಿ ಸರಕುಗಳ ಬಳಕೆಯನ್ನು ತೀವ್ರವಾಗಿ ಪ್ರತಿಪಾದಿಸಿದ ಮೂವರು ಲಾಲ್-ಬಾಲ್-ಪಾಲ್ ಎಂದು ಪ್ರಸಿದ್ಧರಾದರು.

 

* 1907ರಲ್ಲಿ ಪಂಜಾಬ್‌ನಲ್ಲಿ ನಡೆದ ಪ್ರದರ್ಶನದಲ್ಲಿ ಭಾಗವಹಿಸಿದ್ದಕ್ಕಾಗಿ ಅವರನ್ನು ಮ್ಯಾಂಡಲೆಗೆ (ಇಂದಿನ ಮ್ಯಾನ್ಮಾರ್) ಗಡಿಪಾರು ಮಾಡಲಾಯಿತು. ಆದರೆ ಅವರ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅದೇ ವರ್ಷ ಮರಳಲು ಅವಕಾಶ ನೀಡಲಾಗಿತ್ತು.

* 1920ರಲ್ಲಿ ಕೋಲ್ಕತ್ತಾದಲ್ಲಿ ಮಹಾತ್ಮಾ ಗಾಂಧಿಯವರ ಅಸಹಕಾರ ಚಳುವಳಿಯನ್ನು ಆರಂಭಿಸಿದ ವಿಶೇಷ ಅಧಿವೇಶನದಲ್ಲಿ ರಾಯ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾದರು.

* ರಾಯ್ ಅವರು ಆರ್ಯ ಗೆಜೆಟ್ ಅನ್ನು ಸಂಪಾದಕರಾಗಿ ಸ್ಥಾಪಿಸುವುದರ ಜೊತೆಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ಇದಲ್ಲದೇ ಮಜ್ಜಿನಿ, ಗರಿಬಾಲ್ಡಿ, ಶಿವಾಜಿ ಮತ್ತು ಶ್ರೀಕೃಷ್ಣ ಅವರ ಜೀವನ ಚರಿತ್ರೆಗಳನ್ನು ಕೂಡ ಬರೆದಿದ್ದಾರೆ.

* ಲಾಲಾ ಲಜಪತ ರಾಯ್ ಅವರು ಜಾತಿ ವ್ಯವಸ್ಥೆ, ವರದಕ್ಷಿಣೆ ವ್ಯವಸ್ಥೆ, ಅಸ್ಪೃಶ್ಯತೆ ಮತ್ತು ಇತರ ಅಮಾನವೀಯ ಆಚರಣೆಗಳ ವಿರುದ್ಧ ಇದ್ದರು. ಇವುಗಳನ್ನು ಕೊನೆಗಾಣಿಸಲು ಅವರು 'ಸರ್ವಂಟ್ಸ್ ಆಫ್ ದಿ ಪೀಪಲ್ ಸೊಸೈಟಿ'ಯನ್ನು ಸ್ಥಾಪಿಸಿದರು.

* ರಾಯ್ ಅವರು ಲಾಹೋರ್‌ನಲ್ಲಿ ರಾಷ್ಟ್ರೀಯ ಕಾಲೇಜನ್ನು ಸ್ಥಾಪಿಸಿದರು, ಅಲ್ಲಿ ಭಗತ್ ಸಿಂಗ್ ಸೇರಿದಂತೆ ವಿವಿಧ ಸ್ವಾತಂತ್ರ್ಯ ಹೋರಾಟಗಾರರು ಅಧ್ಯಯನ ಮಾಡಿದರು.

* 'ಸೈಮನ್ ಕಮಿಷನ್' ವಿರುದ್ಧ ಪ್ರತಿಭಟಿಸುತ್ತಿರುವಾಗ ಬ್ರಿಟಿಷರು ರಾಯ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದರು, ಆಗ ಅವರು ತೀವ್ರವಾಗಿ ಗಾಯಗೊಂಡರು ತದನಂತರವೂ ರಾಯ್ ಅವರು "ಇಂದು ನನ್ನ ಮೇಲೆ ಹೊಡೆದ ಹೊಡೆತಗಳು ಭಾರತದಲ್ಲಿ ಬ್ರಿಟಿಷರ ಶವಪೆಟ್ಟಿಗೆಗೆ ಕೊನೆಯ ಮೊಳೆಗಳಾಗಿರುತ್ತವೆ ಎಂದು ನಾನು ಘೋಷಿಸುತ್ತೇನೆ." ಎಂದು ಹೇಳಿ ನವೆಂಬರ್ 17,1928 ರಂದು ಕೊನೆಯುಸಿರೆಳೆದರು.

* ರಾಯ್ ಅವರ ಪುಣ್ಯತಿಥಿಯಂದು ಒಡಿಶಾದ ಜನರು ಹುತಾತ್ಮರ ದಿನವನ್ನು ಆಚರಿಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Lal lajpat rai birth anniversary on january 28. Here is the interesting facts about lion of punjab in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X