NEET Exam 2020 Preparation Tips: ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡುವುದು ಹೇಗೆ?

By Kavya

ಇದೀಗ ನೀಟ್ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇವೆ. ರಾಷ್ಟ್ರೀಯ ಮಟ್ಟದ ಪರೀಕ್ಷೆಯನ್ನ ಎನ್‌ಟಿಎ ಆಯೋಜಿಸುತ್ತಿದೆ. ಇಡೀ ದೇಶದಲ್ಲಿ ಈ ಪರೀಕ್ಷೆ ನಡೆಯಲಿದ್ದು, ಇದೊಂದು ಕಷ್ಟಕರವಾದ ಪ್ರವೇಶಾತಿ ಪರೀಕ್ಷೆಯಾಗಿದೆ.

 

ಮೊದಲ ಪ್ರಯತ್ನದಲ್ಲೇ ನೀಟ್ ಪಾಸ್ ಮಾಡುವುದು ಹೇಗೆ?

ಇನ್ನೂ ಈ ಪರೀಕ್ಷೆಯಲ್ಲಿ ಸ್ಪರ್ಧೆಗಳು ಕೂಡಾ ಹೆಚ್ಚೇ ಇದೆ. ಸುಮಾರು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹಾಜರಾಗುವ ನಿರೀಕ್ಷೆ ಇದೆ. ಅದಕ್ಕಾಗಿ ಇದೀಗ ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೇ ನಿರಂತರವಾಗಿ ಓದುತ್ತಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ಸುಲಭವಾಗಲೆಂದು ಕೆರಿಯರ್ ಇಂಡಿಯಾ ಕೊನೆಯ ಗಳಿಗೆಯಲ್ಲಿ ಹೇಗೆ ಸ್ಟಡಿ ಮಾಡುವುದೆಂದು ಸಲಹೆ ನೀಡುತ್ತಿದೆ.

ನೀಟ್ ಪರೀಕ್ಷೆ ದಿನ ನೆನಪಿಟ್ಟುಕೊಳ್ಳಬೇಕಾದ ಅಂಶ:

ಹೌದು ವಿದ್ಯಾರ್ಥಿಗಳೆಲ್ಲಾ ಹಗಲು ರಾತ್ರಿ ಓದಿ ಇದೀಗ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುತ್ತೀರಿ. ಆದ್ರೆ ನಿಮ್ಮ ಕೆಲವೊಂದು ಸಣ್ಣ ತಪ್ಪುಗಳಿಂದ ನೀವು ಮೂಡ್ ಆಫ್ ಆಗಿ, ಹೆಚ್ಚು ಅಂಕ ಸ್ಕೋರ್ ಮಾಡುವಲ್ಲಿ ವಿಫಲರಾಗಬಹುದು. ಹಾಗಾಗಿ ಪರೀಕ್ಷೆಗೆ ಹೋಗುವ ಮುನ್ನ ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ನೆನಪಿನಲ್ಲಿ ಕೊಂಡೊಯ್ಯಿರಿ, ಹಾಗೂ ಯಾವ ಸಾಮಾಗ್ರಿ ಕೊಂಡೊಯ್ಯಬಾರದೋ ಆ ಸಾಮಾಗ್ರಿಯನ್ನ ತಪ್ಪದೇ ಬ್ಯಾಗ್‌ನಿಂದ ಹೊರಗೆ ಇಡಿ. ಅಷ್ಟೇ ಅಲ್ಲ ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಕೂಡಾ ಇರುತ್ತದೆ ಅದರ ಬಗ್ಗೆ ತಿಳಿದುಕೊಂಡು ಸರಿಯಾದ ಉಡುಗೆ ಧರಿಸಿ ಹೋಗಿ.

ನೀಟ್ ಗೆ ಕೊನೆಯ ಕ್ಷಣದ ತಯಾರಿ ಹೇಗೆ:

ಇಂತಹ ಪರೀಕ್ಷೆಗಳಿಗೆ ಕೊನೆಯ ಕ್ಷಣದ ರಿವಿಜನ್ ಕೂಡಾ ತುಂಬಾ ಅಗತ್ಯ. ಪರೀಕ್ಷೆಗೆ ಒಂದು ದಿನ ಇರುವುದರಿಂದ ಬೇಸಿಕ್ ಕಾಂಸೆಪ್ಟ್ ಬಗ್ಗೆ ಹೆಚ್ಚು ಗಮನ ಕೊಡಿ. ಸಬ್‌ಜೆಕ್ಟ್ ಪ್ರಕಾರ ರಿವಿಜನ್ ಮಾಡಿ. ಈ ಮೊದಲು ನೀವು ಮಾಡಿಕೊಂಡಿರುವಂತಹ ಸ್ಮಾರ್ಟ್ ನೋಟನ್ನ ಒಮ್ಮೆ ಚೆಕ್ ಮಾಡಿಕೊಳ್ಳಿ.

 

ಹಳೆಯ ಪ್ರಶ್ನಾಪತ್ರಿಕೆ ರಿವಿಜನ್:

ಪರೀಕ್ಷೆಗೆ ಒಂದು ವಾರ ಇರುವಾಗ ನೀವು ನೀವು ಪ್ರಮುಖ ಚಾಪ್ಟರ್ ಓದಲು ಪ್ರಾರಂಭಿಸಿರುತ್ತೀರಿ ತಾನೇ. ಅದರ ಜತೆಗೆ ಹಳೆಯ ಪ್ರಶ್ನಾಪತ್ರಿಕೆಗಳನ್ನ ಕೂಡಾ ರಿವಿಜನ್ ಮಾಡಿಕೊಳ್ಳಿ. ಮಾಕ್ ಟೆಸ್ಟ್ ಮಾಡಿಕೊಳ್ಳುವುದು ಕೂಡಾ ಬೆಸ್ಟ್.

ಎಲ್ಲಾ ಗೊಂದಲಗಳಿಂದ ದೂರವಿರಿ:

ಹೌದು ಇನ್ನೋ ಕೆಲವೇ ಗಂಟೆಗಳಲ್ಲಿ ನೀವು ನೀಟ್ ಪರೀಕ್ಷೆಗೆ ಹಾಜರಾಗಲಿದ್ದೀರಿ. ಆದ್ರೆ ಒಂದು ವಿಷಯ ನೆನಪಿಟ್ಟುಕೊಳ್ಳಿ ಅದೇನೆಂದರೆ, ಪರೀಕ್ಷೆಗೆ ಬಾಕಿ ಇರುವ ಈ ಕೊನೆಯ ಕ್ಷಣದಲ್ಲಿ ನೀವು ಯಾವುದೇ ಗೊಂದಲಕ್ಕೆ ತಲೆ ಕೊಡಬೇಡಿ. ಮೊಬೈಲ್, ಟಿವಿ , ಲ್ಯಾಪ್‌ಟಾಪ್ ಮುಂತಾದೆಡೆ ಗಮನಹರಿಸಿದೇ ಸೀರಿಯಸ್ ಆಗಿ ಓದಿನತ್ತ ಗಮನ ಕೊಡಿ.

ಫಿಸಿಕ್ಸ್ ನ ಪ್ರಮುಖ ಟಾಪಿಕ್ ಗಳು:

 • ಎಲೆಕ್ಟ್ರಾನಿಕ್ಸ್
 • ರೇ ಆಪ್ಟಿಕ್ಸ್
 • ಫೋಟೋಎಲೆಕ್ಟ್ರಿಕ್ ಎಫೆಕ್ಟ್ ಮತ್ತು ಎಲೆಕ್ಟ್ರೋಮ್ಯಾಗ್ನೆಟಿಕ್ ವೇವ್ಸ್
 • ಸೆಮಿಕಂಡಕ್ಟರ್ಗಳು ಮತ್ತು ಸಂವಹನ ವ್ಯವಸ್ಥೆ
 • ಪ್ರಸ್ತುತ ವಿದ್ಯುತ್
 • ತಿರುಗುವಿಕೆ ಮೋಷನ್
 • ವೇವ್ಸ್ ಅಂಡ್ ಸೌಂಡ್
 • ಥರ್ಮೊಡೈನಾಮಿಕ್ಸ್ ನಿಯಮಗಳು
 • ಪ್ರಸ್ತುತ ಕಾಂತೀಯ ಪರಿಣಾಮಗಳು
 • ಎಲೆಕ್ಟ್ರೋಮ್ಯಾಗ್ನೆಟಿಕ್ ಇಂಡಕ್ಷನ್ ಮತ್ತು ಆಲ್ಟರ್ನೇಟಿಂಗ್ ಕರೆಂಟ್

ರಾಸಾಯನಿಕ ಶಾಸ್ತ್ರದಲ್ಲಿ ಪ್ರಮುಖ ಟಾಪಿಕ್

ಜನರಲ್ ಆರ್ಗ್ಯಾನಿಕ್ ಕೆಮಿಸ್ಟ್ರಿ

 • ರಾಸಾಯನಿಕ ಬಂಧ ಮತ್ತು ಮಾಲಿಕ್ಯೂಲರ್ ರಚನೆ
 • ಅಲ್ಕನೀಸ್, ಆಲ್ಕೆನ್ಸ್ ಮತ್ತು ಅಲ್ಕೈನ್ಸ್ (ಹೈಡ್ರೋಕಾರ್ಬನ್ಗಳು)
 • ಪು ಬ್ಲಾಕ್ ಎಲಿಮೆಂಟ್ಸ್
 • ಕಾರ್ಬೋನಿಲ್ ಕಾಂಪೌಂಡ್ಸ್ (ಅಲ್ಡೆಹೈಡ್ಸ್ ಮತ್ತು ಕೆಟೋನ್ಗಳು)
 • ಪರಮಾಣು ರಚನೆ
 • ಪರಿಹಾರಗಳು ಮತ್ತು ಕಲೈಗೇಟಿವ್ ಪ್ರಾಪರ್ಟೀಸ್
 • ಎಲಿಮೆಂಟ್ಸ್ ವರ್ಗೀಕರಣ ಮತ್ತು ಪ್ರಾಪರ್ಟೀಸ್ ಆವರ್ತಕ
 • ರಾಸಾಯನಿಕ ಥರ್ಮೊಡೈನಾಮಿಕ್ಸ್
 • ಅಯಾನಿಕ್ ಸಮತೋಲನ
 • ಹಾಲ್ಕಾಲ್ಕೆನ್ಸ್
 • ಡಿ ಮತ್ತು ಎಫ್ ಬ್ಲಾಕ್ ಎಲಿಮೆಂಟ್ಸ್

ಜೀವಶಾಸ್ತ್ರ ವಿಷಯದ ಪ್ರಮುಖ ಟಾಪಿಕ್ ಗಳು:

 • ಸೆಲ್ - ದಿ ಯುನಿಟ್ ಆಫ್ ಲೈಫ್
 • ಇನ್ಹೆರಿಟೆನ್ಸ್ ಮತ್ತು ವೇರಿಯೇಷನ್ ತತ್ವಗಳು
 • ಹೂಬಿಡುವ ಸಸ್ಯಗಳ ಮಾರ್ಫಾಲಜಿ
 • ಜೈವಿಕ ವರ್ಗೀಕರಣ
 • ಪರಿಸರ ವ್ಯವಸ್ಥೆ
 • ಹೂಬಿಡುವ ಸಸ್ಯಗಳಲ್ಲಿ ಲೈಂಗಿಕ ಸಂತಾನೋತ್ಪತ್ತಿ
 • ಮಾನವ ಆರೋಗ್ಯ ಮತ್ತು ರೋಗ
 • ಸಸ್ಯ ಸಾಮ್ರಾಜ್ಯ
 • ಪರಿಸರ ಸಮಸ್ಯೆಗಳು
 • ಮಾನವ ಸಂತಾನೋತ್ಪತ್ತಿ
 • ಜೀರ್ಣಕ್ರಿಯೆ ಮತ್ತು ಹೀರಿಕೊಳ್ಳುವಿಕೆ
 • ರಾಸಾಯನಿಕ ಸಮನ್ವಯ ಮತ್ತು ಇಂಟಿಗ್ರೇಷನ್

ಮೊದಲ ಪ್ರಯತ್ನದಲ್ಲೇ ನೀಟ್ ಪರೀಕ್ಷೆ ಪಾಸ್ ಮಾಡಲು 4 ಟಿಪ್ಸ್:

 • ಪ್ರಮುಖ ಟಾಪಿಕ್ ಬಗ್ಗೆ ಏನಾದ್ರೂ ಅನುಮಾನ ಬಂದ್ರೆ ಕೂಡಲೇ ಕ್ಲಿಯರ್ ಮಾಡಿಕೊಳ್ಳಿ
 • ಇತರ ಪುಸ್ತಕಗಳನ್ನ ಕೂಡಾ ರೆಫರ್ ಮಾಡಿ ಆದ್ರೆ ಎನ್‌ಸಿಇಆರ್ ಟಿ ಪುಸ್ತಕ ರೆಫರ್ ಮಾಡಲು ಮರೆಯದಿರಿ
 • ಟಾಪಿಕ್ ವೈಸ್ ಸ್ಟಡಿ ಮಾಡಿ
 • ಕೆಮೆಸ್ಟ್ರಿ ಹಾಗೂ ಫಿಸಿಕ್ಸ್ ವಿಷಯದ ಜೆಇಇ ಲೆವೆಲ್ ನ ಪ್ರಾಬ್ಲಮ್ಸ್ ಬಗೆಹರಿಸಲು ಪ್ರಯತ್ನ ಮಾಡಿ
For Quick Alerts
ALLOW NOTIFICATIONS  
For Daily Alerts

English summary
The board exams are about to conclude in a few days and the immediate focus of students will shift to the entrance examinations. The National Eligibility cum Entrance Test (NEET), one of the toughest medical entrance examinations in the country.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X