ಸಿಬಿಎಸ್ಇ ಬ್ಯುಸಿನೆಸ್ ಸ್ಟಡೀಸ್... ಕೊನೆ ಗಳಿಗೆ ತಯಾರಿಗೆ ಈ ಟಿಪ್ಸ್!

Posted By:

ಸಿಬಿಎಸ್ಇ ಪರೀಕ್ಷೆ ಕೊನೆಗೊಳ್ಳಲು ಇನ್ನೇನೋ ಕೆಲವೇ ದಿನಗಳು ಬಾಕಿ ಇವೆ. ಇದೀಗ ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದೆ. ಎಪ್ರಿಲ್ 9, 2018 ರಂದು ನಡೆಯಲಿರುವ ಈ ಪರೀಕ್ಷೆಗೆ ಕೊನೆಗಳಿಗೆಯಲ್ಲಿ ಸಿದ್ಧತೆ ಹೇಗಿರಬೇಕು ಎಂದು ಕೆರಿಯರ್ ಇಂಡಿಯಾ ನಿಮಗೆ ಸಲಹೆ ನೀಡುತ್ತಿದೆ.

ಇನ್ನು ವಿದ್ಯಾರ್ಥಿಗಳಿಗೆ ಬ್ಯುಸಿನೆಸ್ ಸ್ಟಡೀಸ್ ಸಬ್‌ಜೆಕ್ಟ್ ಅಷ್ಟೊಂದು ಕಷ್ಟದ ಸಬ್‌ಜೆಕ್ಟ್ ಅಲ್ಲ. ಈ ಸಬ್‌ಜೆಕ್ಟ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ತುಂಬಾ ಪ್ರಮುಖವಾದ ಸಬ್‌ಜೆಕ್ಟ್. ಇನ್ನು ಸಿಬಿಎಸ್ಇ ಪರೀಕ್ಷೆಯಲ್ಲೂಈ ಸಬ್‌ಜೆಕ್ಟ್ ಬೇಸಿಕ್ ಬಗ್ಗೆ ಕೇಳಲಾಗುತ್ತದೆ. ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಲು ಇಲ್ಲಿ ಕೆಲವು ಟಿಪ್ಸ್ ನೀಡಲಾಗಿದೆ.

ಸಿಬಿಎಸ್ಇ ಬ್ಯುಸಿನೆಸ್ ಸ್ಟಡೀಸ್... ಕೊನೆ ಗಳಿಗೆ ತಯಾರಿಗೆ ಈ ಟಿಪ್ಸ್!

ಫ್ಲೋ ಚಾರ್ಟ್ ಇಂಫೋರ್ಮೇಶನ್ ನೆನಪಿಟ್ಟುಕೊಳ್ಳಿ:

ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವ ವೇಳೆ, ನಿಮಗೆ ಅರ್ಥವಾಗುವ ವಿಷಯದ ಮೇಲೆ ಫ್ಲೋ ಚಾರ್ಟ್ ಕೂಡಾ ತಯಾರು ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನೀವು ಓದುವ ವಿಷಯ ನಿಮಗೆ ಡೀಟೆಲ್ ಆಗಿ ಅರ್ಥವಾಗುತ್ತದೆ. ರಿವಿಜನ್ ವೇಳೆ ಇಂತಹ ಫ್ಲೋ ಚಾರ್ಟ್ ಹಾಗೂ ಮೈಂಡ್ ಮ್ಯಾಪ್ ಗಳು ತುಂಬಾ ಪ್ರಮುಖ

ಯೋಚನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಿ:

ಬ್ಯುಸಿನೆಸ್ ಸ್ಟಡೀಸ್ ಪರೀಕ್ಷೆ ಪ್ರಶ್ನಾ ಪತ್ರಿಕೆಗೆ ಉತ್ತರಿಸುವ ವೇಳೆ ವಿದ್ಯಾರ್ಥಿಗಳು ತಮ್ಮ ಯೋಚನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಸಬ್‌ಜೆಕ್ಟ್ ಗೆ ಸಂಬಂಧಪಟ್ಟ ವಿಷಯದ ಬಗ್ಗೆ ಹೆಚ್ಚಾಗಿ ಯೋಚಿಸಿ. ಇದು ನಿಮಗೆ ಸಬ್‌ಜೆಕ್ಟ್ ಬಗ್ಗೆ ಅರ್ಥ ಮಾಡಿಕೊಳ್ಳಲು ಸಹಾಯಮಾಡುತ್ತದೆ

ಕೇಸ್‌ ಸ್ಟಡೀಸ್ ಕಡೆಗಣಿಸಬೇಡಿ:

ಕೇಸ್ ಸ್ಟಡೀಸ್ ಎಂಬುವುದು ಗೇಮ್ ಚೇಂಜರ್ ಇದ್ದಂಗೆ. ಬ್ಯುಸಿನೆಸ್ ಸ್ಟಡೀಸ್ ಪ್ರಶ್ನಾ ಪತ್ರಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಈ ಸಬ್‌ಜೆಕ್ಟ್. ಪರ್ಫೇಕ್ಟ್ ಸ್ಕೋರ್ ಗಳಿಸಬೇಕು ಅನ್ನೋ ನಿಮ್ಮ ಕನಸು ನನಸುಗೊಳಿಸುವಲ್ಲಿ ಇದು ತಡೆಗೋಡೆಯಾಗಿದೆ. ಹಾಗಾಗಿ ಕೇಸ್ ಸ್ಟಡೀಸ್ ಅಲ್ಲಿ ಒಳ್ಳೆ ಅಂಕ ಪಡೆಯಬೇಕು.ಕಾಂಸೆಪ್ಟ್ ಚೆನ್ನಾಗಿ ಅರ್ಥ ಮಾಡಿಕೊಂಡು ಹೇಗೆ ಅಪ್ಲೈ ಮಾಡುವುದು ಎಂದು ತಿಳಿದುಕೊಳ್ಳಿ

ಸಿಬಿಎಸ್ಇ ಬ್ಯುಸಿನೆಸ್ ಸ್ಟಡೀಸ್... ಕೊನೆ ಗಳಿಗೆ ತಯಾರಿಗೆ ಈ ಟಿಪ್ಸ್!

ಉದಾಹರಣೆಗಳನ್ನ ನೀಡಿ:

ಇತ್ತೀಚಿಗಿನ ದಿನಗಳಲ್ಲಿ ವಿವಿಧ ಕೇಸ್‌ ಗಳ ಆಧಾರದ ಮೇಲೆ ಪ್ರಶ್ನೆಗಳನ್ನ ಕೇಳಲಾಗುತ್ತದೆ. ಇಂತಹ ಪ್ರಶ್ನೆಗೆ ಉತ್ತರಿಸುವಾಗ ಉದಾಹರಣೆ ಜತೆಗೆ ಉತ್ತರಿಸುವುದು ಬೆಸ್ಟ್ ವಿಧಾನ. ಕಲ್ಪೆನಯ ಜ್ಞಾನವನ್ನು ಪ್ರಾಯೋಗಿಕವಾಗಿ ಹೊರತನ್ನಿ. ಇದರಿಂದಲೂ ನೀವು ಅತೀ ಹೆಚ್ಚು ಅಂಕ ಗಳಿಸಬಹುದು.

ಡಯಾಗ್ರಾಂ ನೀಡಿ:

ಪ್ರತೀ ಪರೀಕ್ಷೆಯಲ್ಲಿ ಸಮಯವನ್ನ ಹೊಂದಾಣಿಕೆ ಮಾಡಿಕೊಂಡು ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳಿಗೆ ತುಂಬಾ ಕಷ್ಟ. ಅದಕ್ಕೆ ಬೆಸ್ಟ್ ಐಡಿಯಾ ಅಂದ್ರೆ ಡಯಾಗ್ರಾಂ ಮೂಲಕ ಉತ್ತರ ಬರೆಯಿರಿ. ಎಲ್ಲೆಲ್ಲೋ ಸಾಧ್ಯವರುತ್ತೋ ಅಲ್ಲೆಲ್ಲಾ ಡಯಾಗ್ರಾಂ ಹಾಗೂ ಫ್ಲೋ ಚಾರ್ಟ್ ಬಳಸಿ

ಸ್ಮಾರ್ಟ್ ರಿವಿಜನ್ ಟೆಕ್ನಿಕ್ ಬಳಸಿ:

ಪರೀಕ್ಷೆಗೆ ಇನ್ನೇನೋ ಕೆಲವೇ ದಿನಗಳು ಬಾಕಿ ಇವೆ. ಹಾಗಾಗಿ ಪರೀಕ್ಷೆಗೆ ವಿದ್ಯಾರ್ಥಿಗಳು ಸ್ಮಾರ್ಟ್ ರಿವಿಜನ್ ಟೆಕ್ನಿಕ್ ಬಳಸಬೇಕು. ಫ್ಲೋ ಚಾರ್ಟ್ ಹಾಗೂ ಫ್ಲಾಶ್ ಕಾರ್ಡ್ ಬಳಸಿ ನಿಮ್ಮದೇ ನೋಟ್ಸ್ ತಯಾರು ಮಾಡಿಕೊಳ್ಳಿ. ಟಾಪಿಕ್ ಪ್ರಾಮುಖ್ಯದ ಆಧಾರದ ಮೇಲೆ ರಿವಿಜನ್ ಪ್ರಾರಂಭಿಸಿ

ಸಿಬಿಎಸ್ಇ ಬ್ಯುಸಿನೆಸ್ ಸ್ಟಡೀಸ್... ಕೊನೆ ಗಳಿಗೆ ತಯಾರಿಗೆ ಈ ಟಿಪ್ಸ್!

ಪ್ರಮುಖ ಟಾಪಿಕ್ ಗಳು:

ಪಾರ್ಟ್ ಎ: ಪ್ರಿನ್ಸಿಪಲ್ಸ್ ಆಂಡ್ ಫಂಕ್ಷನ್ಸ್ ಆಫ್ ಮ್ಯಾನೇಜ್ ಮೆಂಟ್: ಪ್ರಿನ್ಸಿಪಲ್ಸ್ ಆಫ್ ಮ್ಯಾನೇಜ್ ಮೆಂಟ್,ಆರ್ಗನೈಸಿಂಗ್, ಪ್ಲ್ಯಾನಿಂಗ್, ಸ್ಟಫಿಂಗ್, ಡೈರೆಕ್ಟಿಂಗ್ ಹಾಗೂ ಕಂಟ್ರೋಲಿಂಗ್

ಪಾರ್ಟ್ ಬಿ: ಬ್ಯುಸಿನೆಸ್ ಫೈನಾನ್ಸ್, ಮಾರ್ಕೆಟಿಂಗ್, ಫೈನಾಂಶಿಯಲ್ ಮ್ಯಾನೇಜ್ ಮೆಂಟ್ ಮತ್ತು ಮಾರ್ಕೆಟಿಂಗ್ ಮ್ಯಾನೇಜ್ ಮೆಂಟ್

ರೆಫರ್ ಮಾಡಬೇಕಾದ ಪುಸ್ತಕಗಳು:

NCERT
Business Studies by C.B Gupta
Jagdish Sharma's Business Studies For Class XII
Richard Parsons' A2 Level Business Studies Revision Guide

English summary
The CBSE class 12 board exams will be concluded within a few days. Compared to mathematics, physics and chemistry, aspirants will find a less number of articles for offbeat subjects such as business studies. The time has arrived now for the business studies exam, which is being conducted on the next monday

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia