Work From Home Pros and Cons: ಮನೆಯಿಂದಲೇ ಕಚೇರಿ ಕೆಲಸ; ಇದರಲ್ಲಿರುವ ಅನುಕೂಲ ಮತ್ತು ಅನಾನುಕೂಲಗಳೇನು ?

ಕೆಲಸ ಕೆಲಸ ಕೆಲಸ ಪ್ರತಿನಿತ್ಯವೂ ಮನೆ ಕೆಲಸ ಆಫೀಸ್ ಕೆಲಸ ಹೀಗೆ ಒಂದಲ್ಲಾ ಒಂದು ಕೆಲಸ ಮಾಡ್ತಾನೆ ಇರ್ತೀವಿ. ಮನೆಯೊಳಗಿನ ಕೆಲಸಕ್ಕೂ ಸಮಯ ಕೊಡಬೇಕು ಜೊತೆಗೆ ಆಚೆಕಡೆಯ ಕೆಲಸಗಳೂ ಸಾಗಬೇಕು. ಆದರೆ ಕಳೆದ ಒಂದು ವರ್ಷದಿಂದ ಪರಿಸ್ಥಿತಿ ಬದಲಾಗಿದೆ. ದೇಶಕ್ಕೆ ಕೊರೋನಾ ಎಂಬ ಮಹಾಮಾರಿ ಲಗ್ಗೆ ಇಟ್ಟಾಗಿನಿಂದಲೂ ಬಹುತೇಕ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ಆರೋಗ್ಯದ ಹಿತದೃಷ್ಟಿಯಿಂದ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ಒದಗಿಸಿದೆ. ಇದರಿಂದ ತರಾತುರಿಯ ಜೀವನಕ್ಕೆ ಬ್ರೇಕ್ ಬಿದ್ದಿದೆ.

ವರ್ಕ್ ಫ್ರಂ ಹೋಂ ಬೆಸ್ಟ್ ಅಥವಾ ವರ್ಸ್ಟ್ ? ಇಲ್ಲಿದೆ ಲೀಸ್ಟ್

ಕೊರೋನಾ ಕಾರಣದಿಂದಾಗಿ ರಾಷ್ಟೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳು ತನ್ನ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ಅವಕಾಶ ನೀಡಿದೆ. ಈ ಅವಕಾಶದಿಂದ ಉದ್ಯೋಗಿಗೆ ಎಲ್ಲವೂ ಅನುಕೂಲವಾಗಿದೆಯೇ ಅಥವಾ ಇದರಿಂದ ಅನಾನುಕೂಲಗಳು ಇವೆಯೇ ಎಂದು ಒಮ್ಮೆ ಆಲೋಚಿಸಬೇಕು. ಕಾರಣ ಪ್ರತಿಯೊಂದು ಕೆಲಸದಲ್ಲೂ ಒಂದು ಅನುಕೂಲ ಮತ್ತು ಒಂದು ಅನಾನುಕೂಲ ಎನ್ನುವುದು ಇದ್ದೇ ಇರುತ್ತದೆ. ಹಾಗಾದ್ರೆ ವರ್ಕ್ ಫ್ರಂ ಹೋಂ ಬೆಸ್ಟ್ ? ಅಥವಾ ವರ್ಸ್ಟ್ ? ಹಾಗಾದ್ರೆ ಯಾವೆಲ್ಲಾ ಕಾರಣಗಳಿಗೆ ಅನುಕೂಲ ಮತ್ತು ಯಾವೆಲ್ಲಾ ಕಾರಣಗಳಿಗೆ ಅನಾನುಕೂಲ ತಿಳಿಯೋಣ ಬನ್ನಿ.

1. ಹೊಂದಿಕೊಳ್ಳುವ ವೇಳಾಪಟ್ಟಿ:

1. ಹೊಂದಿಕೊಳ್ಳುವ ವೇಳಾಪಟ್ಟಿ:

ನಾವೆಲ್ಲಾ ಬೆಳಗಾದರೆ ಎದ್ದು ದಿನನಿತ್ಯದ ಕೆಲಸ ಮಾಡಿ, ಕುಟುಂಬದ ನಿರ್ವಹಣೆಯೊಂದಿಗೆ ದಿನವನ್ನು ಆರಂಭಿಸಿ, ನಂತರ ಕಚೇರಿ ಕೆಲಸ ಮತ್ತೆ ಸಂಜೆ ಮನೆಗೆ ಬಂದ ಮೇಲೆ ಮನೆ ಕೆಲಸ. ಹೀಗೆ ಒಂದು ಯಂತ್ರದಂತೆ ನಿಗದಿತ ವೇಳಾಪಟ್ಟಿಯಲ್ಲೇ ಕೆಲಸ ಮಾಡಬೇಕಿರುವ ಸನ್ನಿವೇಶವಿರುತ್ತದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ, ಕೊರೋನಾ ಬಂದಮೇಲೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಒದಗಿರುವುದರಿಂದ ನಮ್ಮ ಅನುಕೂಲಕ್ಕೆ ತಕ್ಕಂತೆ ಮನೆಯೊಳಗಿನ ಕೆಲಸದ ಜೊತೆಗೆ ಕಚೇರಿಯ ಕೆಲಸಗಳನ್ನೂ ನಿಭಾಯಿಸಬಹುದು.

2. ಹೊಂದಿಕೊಳ್ಳುವ ವಾತಾವರಣ:

2. ಹೊಂದಿಕೊಳ್ಳುವ ವಾತಾವರಣ:

ನಮ್ಮ ಬದುಕಿನ ಜಂಜಾಟದಲ್ಲಿ ಮನೆಯಿಂದ ಕಚೇರಿ, ಕಚೇರಿಯಿಂದ ಮನೆ ಕಡೆಗೆ ಓಡಾಟ ಇದೆಲ್ಲಾ ಬೇಸರ ಎನಿಸಿಬಿಡುತ್ತದೆ. ಒಮ್ಮೊಮ್ಮೆ ಆಫೀಸಿಗೆ ಹೋಗಲು ಮನಸ್ಸೇ ಆಗುವುದಿಲ್ಲ. ಆದರೆ ಈಗ ಮನೆಯ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ. ಇದರಿಂದ ಮನಸ್ಸಿಗೆ ಮುದ ಮತ್ತು ನಿಶ್ಚಿಂತೆಯ ಬದುಕು. ಮನೆಯ ವಾತಾವರಣದಲ್ಲಿ ಕೆಲಸ ಮಾಡುವಾಗ ಕೆಲಸ ಭಾರ ಎನ್ನಿಸುವುದಿಲ್ಲ. ನಮ್ಮ ಕೆಲಸ ಜೊತೆಗೆ ಹೊಂದಿಕೊಳ್ಳುವ ವಾತಾವರಣವಿದ್ದಾಗ ಕೆಲಸವು ಸುಲಭ ಮತ್ತು ತೃಪ್ತಿಯಿಂದಿರುತ್ತದೆ.

3. ಹಣ ಉಳಿತಾಯ:

3. ಹಣ ಉಳಿತಾಯ:

ಎಲ್ಲಾ ರೀತಿಯಲ್ಲೂ ಬಹುದೊಡ್ಡ ಅನುಕೂಲವೆಂದರೆ ಹಣ ಉಳಿತಾಯ. ಮನೆಯಿಂದ ಕೆಲಸ ನಿರ್ವಹಿಸುವಾಗ ಅದ್ಹೇಗೆ ಹಣ ಉಳಿತಾಯ ಎಂದು ಯೋಚಿಸಬಹುದು. ಆದರೆ ನಾವು ಅನೇಕ ಖರ್ಚುಗಳಿಗೆ ಕಡಿವಾಣ ಹಾಕಿದರೆ ಹಣ ಉಳಿತಾಯ ಮಾಡಬಹುದು. ಆಫೀಸಿಗೆ ಹೋಗುವಾಗೆಲ್ಲಾ ಪ್ರಯಾಣಕ್ಕೆ, ಊಟಕ್ಕೆ, ಟೀ ಕಾಫಿಗೆ ಮತ್ತು ಸೆಲೆಬ್ರೇಶನ್ಸ್ ಗೆ ಅಂತೆಲ್ಲಾ ಹಣ ವ್ಯಯ ಮಾಡುತ್ತಿದ್ದೆವು. ಆದರೆ ನಾವು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಹಣವನ್ನು ಆದಷ್ಟು ಉಳಿತಾಯವನ್ನು ಮಾಡಬಹುದು.

4. ಮನೆಯವರೊಂದಿಗೆ ಸಮಯ ಕಳೆಯುವ ಅವಕಾಶ:

4. ಮನೆಯವರೊಂದಿಗೆ ಸಮಯ ಕಳೆಯುವ ಅವಕಾಶ:

ಅದೆಷ್ಟೋ ಮಂದಿಗೆ ಮನೆ ಕೆಲಸ ಮತ್ತು ಆಫೀಸ್ ಕೆಲಸ ಮಾಡುವಾಗಿನ ದಿನಗಳಲ್ಲಿ ಮನೆಯವರೊಂದಿಗೆ ಮಕ್ಕಳೊಂದಿಗೆ ಕಾಲ ಕಳೆಯುವ ಅವಕಾಶ ಸಿಗುವುದೇ ಇಲ್ಲ. ಆದರೆ ಈಗ ಮನೆಯಿಂದಲೇ ಕೆಲಸ ನಿರ್ವಹಿಸುತ್ತಿರುವ ಪ್ರತಿಯೊಬ್ಬರಿಗೂ ತನ್ನ ಕುಟುಂಬದೊಂದಿಗೆ ಸೇರಿ ಕಾಲ ಕಳೆಯುವ ಮತ್ತು ಮನೆ ಊಟ ಮಾಡುವ ಅವಕಾಶ ಸಿಕ್ಕಿದೆ. ಇದಕ್ಕಿಂತ ಮತ್ತೊಂದು ದೊಡ್ಡ ಖುಷಿ ಬೇರೊಂದಿಲ್ಲ. ಕಚೇರಿ ಕೆಲಸದ ಜೊತೆಗೆ ಮನೆಯವರೊಂದಿಗೆ ಮಾತು, ಹರಟೆ, ಸಹಭೋಜನಕೂಟ ಸಮಯ ಅಂತೆಲ್ಲಾ ವಿಭಿನ್ನವಾಗಿ ಸಂತಸದಿಂದ ಕಾಲ ಕಳೆಯುವ ಅವಕಾಶ ಸಿಕ್ಕಿದೆ.

5. ಅವಸರದ ಬದುಕಿಗೆ ಬ್ರೇಕ್:

5. ಅವಸರದ ಬದುಕಿಗೆ ಬ್ರೇಕ್:

ಈಗಾಗಲೇ ತಿಳಿಸಿದ ಹಾಗೆ ದಿನಚರಿಯು ಗಡಿಯಾರದೊಂದಿಗೆ ಅಂಟಿಕೊಂಡಿತ್ತು. ಹೊರಗಿನ ಗಿಜಿ ಗಿಜಿ ಪ್ರಪಂಚ, ಟ್ರಾಫಿಕ್ ಕಿರಿ ಕಿರಿ, ಜನಜಂಗುಳಿಯ ನಡುವಿನ ಬದುಕು ಹಾಗೆಯೇ ಕಲುಷಿತ ವಾತಾವರಣದ ನಡುವೆ ನಮ್ಮ ಮನಸ್ಸು ಮತ್ತು ಆರೋಗ್ಯ ತೀರಾನೇ ಕುಸಿದು ಹೋಗುತ್ತಿತ್ತು. ಆದರೆ ಈಗ ಇದಕ್ಕೆಲ್ಲಾ ಕೊಂಚ ಬ್ರೇಕ್ ಬಿದ್ದಿದೆ. ಮನೆಯಲ್ಲೇ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯದಿಂದ ಕೆಲಸ ನಿರ್ವಹಿಸುವ ಅವಕಾಶವಿದೆ.

6. ಯಾವುದೇ ಕಾರ್ಯಭಂಗವಿಲ್ಲ:

6. ಯಾವುದೇ ಕಾರ್ಯಭಂಗವಿಲ್ಲ:

ಉದ್ಯೋಗಿಗಳಿಗೆ ಮನೆಯ ಕಡೆಗೂ ಗಮನ ಮತ್ತು ಕಚೇರಿ ಕಡೆಗೂ ಗಮನ ಅತ್ಯಗತ್ಯ. ಹಾಗಾಗಿ ಕೆಲವೊಮ್ಮೆ ಕೆಲವು ವಿಚಾರಗಳಲ್ಲಿ ಮನಸ್ಸು ಬೇರೆಡೆ ಸೆಳೆದಿರುತ್ತದೆ. ಇದರಿಂದ ಕಾರ್ಯಭಂಗವಾಗುವ ಸಂಭವಗಳು ಅನೇಕವಿದೆ. ಆದರೆ ಮನೆಯಿಂದ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಹಾಗಾಗುವುದಿಲ್ಲ. ಮನೆಯಿಂದಲೇ ಎಲ್ಲಾ ಅಗತ್ಯ ಕೆಲಸಗಳನ್ನು ನಿಭಾಯಿಸುವಾಗ ಈ ರೀತಿಯ ತೊಂದರೆಗಳು ಎದುರಾಗುವುದಿಲ್ಲ.

1. ವಿಲ್ ಪವರ್ ಕಡಿಮೆ:

1. ವಿಲ್ ಪವರ್ ಕಡಿಮೆ:

ಉದ್ಯೋಗಿಗಳು ಬೆಳಗೆದ್ದು ತನ್ನ ವೈಯಕ್ತಿಕ ಕೆಲಸಗಳೊಂದಿಗೆ ಸಿದ್ಧರಾಗಿ ಕಚೇರಿ ಕೆಲಸಕ್ಕೂ ಮಾನಸಿಕವಾಗಿ ಲವಲವಿಕೆಯಿಂದ ಹೆಜ್ಜೆ ಇಡುತ್ತಿರುತ್ತಾರೆ. ಕಚೇರಿಗೆ ಪ್ರಯಾಣಿಸುವಾಗ, ಕಚೇರಿಯಲ್ಲಿ ಸಹ ಉದ್ಯೋಗಿಗಳೊಂದಿಗೆ ಸಮಯ ಕಳೆಯುತ್ತಾ ಸಂವಹನ ಮಾಡುತ್ತಾ ಉಲ್ಲಾಸಯುಕ್ತರಾಗಿರುತ್ತಾರೆ. ಆದರೆ ಮನೆಯಿಂದಲೇ ಕೆಲಸ ನಿರ್ವಹಿಸುವಾಗ ಇದೆಲ್ಲವೂ ಮಿಸ್ ಆಗುತ್ತಿದೆ. ಒಮ್ಮಿದೊಮ್ಮೆಲೆ ಮನೆಯ ಕೆಲಸಗಳು ಜವಾಬ್ದಾರಿಗಳನ್ನು ನಿಭಾಯಿಸುವಾಗ ಅವನಲ್ಲಿರಬೇಕಾದ ಉತ್ಸಾಹ ಮತ್ತು ಲವಲವಿಕೆ ಎಲ್ಲವೂ ಮಾಯಾವಾಗುತ್ತಾ ಹೋಗುತ್ತದೆ. ಉದ್ಯೋಗಿಯ ವಿಲ್ ಪವರ್ ಕಡಿಮೆ ಆಗುತ್ತದೆ ಇದರಿಂದ ಅವರ ಕೆಲಸದ ಮೇಲೆ ದುಷ್ಪರಿಣಾಮ ಬೀರುತ್ತದೆ.

2. ಆಫೀಸ್‌ ಕಾಲ್ ಗಳ ಕಿರಿಕಿರಿ:

2. ಆಫೀಸ್‌ ಕಾಲ್ ಗಳ ಕಿರಿಕಿರಿ:

ಉದ್ಯೋಗಿಗಳು ಕಚೇರಿಯಲ್ಲಿ ಕೆಲಸ ಮಾಡುವುದಕ್ಕೂ ಮನೆಯಿಂದಲೇ ಕೆಲಸ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಕಚೇರಿಯಲ್ಲಿರುವಾಗ ಅಲ್ಲಿಯೇ ಗಮನಕೊಟ್ಟು ಮೇಲಾಧಿಕಾರಿಗಳನ್ನು ನೇರವಾಗಿ ಭೇಟಿ ಮಾಡಿ ಸಂವಹಿಸುವ ಮೂಲಕ ಕೆಲಸಗಳನ್ನು ಸಮಯಕ್ಕನುಸಾರ ನಿಭಾಯಿಸಬಹುದು. ಆದರೆ ಮನಯಿಂದ ಕೆಲಸ ಮಾಡುವಾಗ ಆಫೀಸ್ ಕಾಲ್ ಗಳ ಕಿರಿ ಕಿರಿ ಜಾಸ್ತಿ. ಉದ್ಯೋಗಿಯು ಮನೆಯವರೊಂದಿಗೂ ಸಂವಹನ ಮಾಡಬೇಕು, ಇತ್ತ ಕಚೇರಿಯ ಕಾಲ್‌ ಗಳಿಗೂ ಉತ್ತರಿಸುತ್ತಿರಬೇಕು. ಇದರಿಂದ ಉದ್ಯೋಗಿಯು ದಿನದಿಂದ ದಿನಕ್ಕೆ ಬೇಸತ್ತು ಹೋಗುತ್ತಾನೆ. ಇದರಿಂದ ಅವನ ಪ್ರೊಡಕ್ಟಿವಿಯಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ.

3. ಆಹಾರ ಸೇವನೆಯಲ್ಲಿ ವ್ಯತ್ಯಯ:

3. ಆಹಾರ ಸೇವನೆಯಲ್ಲಿ ವ್ಯತ್ಯಯ:

ಕಚೇರಿಯ ಕೆಲಸ ಅಂದ್ರೆ ನಿಗದಿತ ವೇಳಾಪಟ್ಟಿಯಲ್ಲಿ ಸಾಗುವುದು ಎಂದರ್ಥ. ಆದರೆ ಮನೆಯಿಂದ ಕೆಲಸ ನಿರ್ವಹಿಸುವಾಗ ಆ ವೇಳಾಪಟ್ಟಿಯನ್ನು ಅನುಸರಿಸಲು ಸಾಧ್ಯವಿಲ್ಲ. ಹೀಗಾಗಿ ಮನೆ ಕೆಲಸ, ಕಚೇರಿ ಕೆಲಸ ಅಂತೆಲ್ಲಾ ಬ್ಯುಸಿಯಾಗಿ ತಮ್ಮ ಆರೋಗ್ಯದ ಕಡೆಗೆ ಗಮನ ಕೊಡುವಲ್ಲಿ ಆಲಸ್ಯರಾಗುತ್ತಾರೆ. ನಿಗದಿತ ಸಮಯದಲ್ಲಿ ಕೆಲಸ ನಿರ್ವಹಿಸದೆ, ಆಹಾರ ಸೇವಿಸದೆ ಮತ್ತು ತಮ್ಮ ಬಗ್ಗೆ ತಾವೇ ಎಚ್ಚರ ವಹಿಸದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಉದ್ಯೋಗಿಯು ಕುಂದುತ್ತಾ ಹೋಗುತ್ತಾನೆ.

4. ನಿದ್ರಾಹೀನರಾಗುತ್ತಾರೆ:

4. ನಿದ್ರಾಹೀನರಾಗುತ್ತಾರೆ:

ನಿಗದಿತ ವೇಳಾಪಟ್ಟಿಯಲ್ಲಿ ಕೆಲಸ ಮಾಡುವಾಗ ಆರೋಗ್ಯ ಸಂಬಂಧಿ ಸಮಸ್ಯೆಗಳು ಅತೀ ವಿರಳ. ಆದರೆ ಮನೆಯಿಂದ ಕೆಲಸ ನಿರ್ವಹಿಸುವಾಗ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಕಾರಣ ಒಂದೇ ಕಡೆ ಕುಳಿತು ಕೆಲಸ ಮಾಡುವುದು, ಸರಿಯಾದ ಆಹಾರ ಸೇವನೆ ಇಲ್ಲದಿರುವುದು ಮತ್ತು ಕೆಲಸ ಒತ್ತಡ ಹೀಗಾಗಿ ನಿದ್ರೆಗೆಟ್ಟು ಕೆಲಸ ಮಾಡುತ್ತಾರೆ. ಹೀಗಾಗಿ ಅವರು ನಿದ್ರಾಹೀನರಾಗುತ್ತಾರೆ. ಈ ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾದಂತೆ ಅವರ ಕೆಲಸದ ಕಡೆಗಿನ ಗಮನವೂ ನಶಿಸುತ್ತಾ ಹೋಗುತ್ತದೆ.

5. ನಿಧಾನಗತಿಯ ಕೆಲಸ:

5. ನಿಧಾನಗತಿಯ ಕೆಲಸ:

ಉದ್ಯೋಗಿಯು ಬಿಡುವಿಲ್ಲದೆಯೇ, ಸರಿಯಾದ ಆಹಾರವಿಲ್ಲದೆ ಮತ್ತು ಸರಿಯಾದ ನಿದ್ರೆಯಿಲ್ಲದೆ ನಿರಂತರವಾಗಿ ಮನೆಯ ಮತ್ತು ಕಚೇರಿಯ ಕೆಲಸಗಳನ್ನು ನಿಭಾಯಿಸಿದ್ದಲ್ಲಿ ಅವನ ಕೆಲಸದಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಬರು ಬರುತ್ತಾ ಉದ್ಯೋಗಿಯ ಕೆಲಸಗಳು ನಿಧಾನಗತಿಯಲ್ಲಿ ಸಾಗುತ್ತವೆ. ಇದರಿಂದ ಅವನ ಉದ್ಯೋಗದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿರುತ್ತದೆ.

6. ಇಂಟರ್ನೆಟ್ ಸೌಲಭ್ಯದಲ್ಲಿ ವ್ಯತ್ಯಯ:

6. ಇಂಟರ್ನೆಟ್ ಸೌಲಭ್ಯದಲ್ಲಿ ವ್ಯತ್ಯಯ:

ವರ್ಕ್ ಫ್ರಂ ಹೋಂ ಅಂದರೆ ಪ್ರಮುಖವಾಗಿ ಇಂಟರ್‌ನೆಟ್ ಸೌಲಭ್ಯವಿರಲೇಬೇಕು. ಕೆಲವೊಮ್ಮೆ ಉದ್ಯೋಗಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವುದೇ ಈ ಇಂಟರ್‌ನೆಟ್ ಸೌಲಭ್ಯ. ವಾತಾವರಣದಲ್ಲಿನ ವೈಪರೀತ್ಯದಿಂದಾಗಿಯೂ ಒಮ್ಮೆಮ್ಮೆ ಇಂಟರ್‌ನೆಟ್ ಕೈ ಕೊಡುತ್ತದೆ. ಹೀಗಾಗಿ ನಿಗದಿತ ಸಮಯದಲ್ಲಿ ನಿಗದಿತ ಕೆಲಸಗಳನ್ನು ಪೂರ್ಣಗೊಳಿಸಲು ಆಗುವುದೇ ಇಲ್ಲ. ಇದೆಲ್ಲವುದನ್ನು ಮೇಲಧಿಕಾರಿಗಳಿಗೆ ಪದೇ ಪದೇ ಹೇಳಲು ಆಗುವುದಿಲ್ಲ. ಹಾಗಾಗಿಯೇ ಒಮ್ಮೊಮ್ಮೆ ಮೇಲಧಿಕಾರಿಗಳಿಂದ ಬೈಯ್ಯಿಸಿಕೊಳ್ಳಬೇಕಾಗುತ್ತದೆ. ಇದರಿಂದ ನಾವೂ ಮಾನಸಿಕರಾಗಿ ಕುಗ್ಗಿ ಹೋಗುತ್ತೇವೆ.

For Quick Alerts
ALLOW NOTIFICATIONS  
For Daily Alerts

English summary
After arise of corona lot of companies provided work form home to its employees, So here we are giving list of advantages and disadvantages of work from home.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X