ರಾಷ್ಟ್ರೀಯ ವೈದ್ಯರ ದಿನ 2020: ಆರೋಗ್ಯ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿವೆ ನಿಮಗೆ ಗೊತ್ತಾ?

ಇಂದಿನ ದಿನಗಳಲ್ಲಿ ಉದ್ಯೋಗ ಪಡೆಯಬೇಕು ಎನ್ನುವುದು ಹಲವರ ಅಗತ್ಯವೂ ಹೌದು ಮತ್ತು ಅನಿವಾರ್ಯವೂ ಹೌದು. ಅನೇಕ ಕ್ಷೇತ್ರಗಳಲ್ಲಿ ಅದೆಷ್ಟೋ ಅಕ್ಷರಸ್ತರು ನಿರುದ್ಯೋಗಿಗಳಾಗಿದ್ದು ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದಾರೆ ಆದರೆ ಆರೋಗ್ಯ ಕ್ಷೇತ್ರದಲ್ಲಿ ವಿಫುಲ ಉದ್ಯೋಗಾವಕಾಶಗಳಿರುವುದು ಎಷ್ಟೋ ಮಂದಿಗೆ ತಿಳಿದಿರುವುದಿಲ್ಲ. ಅದಲ್ಲದೇ ಆರೋಗ್ಯ ಕ್ಷೇತ್ರದಲ್ಲಿ ವೈದ್ಯಕೀಯ ವೃತ್ತಿಯೊಂದೇ ಮಹತ್ವದ್ದು ಎಂದು ತಿಳಿದಿದ್ದರೆ ಅದು ತಪ್ಪು ಏಕೆಂದರೆ ಇಲ್ಲಿ ಉದ್ಯೋಗಾವಕಾಶಗಳು ಸಾಕಷ್ಟಿವೆ. ಏನೆಲ್ಲಾ ಉದ್ಯೋಗಾವಕಾಶಗಳಿವೆ ಅದಕ್ಕೆ ಏನೆಲ್ಲಾ ಅರ್ಹತೆಗಳಿರಬೇಕು ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ.

 
ಆರೋಗ್ಯ ಕ್ಷೇತ್ರದಲ್ಲಿರುವ ಉದ್ಯೋಗಾವಕಾಶಗಳ ಬಗೆಗೆ ನಿಮಗೆ ತಿಳಿದಿದೆಯಾ?


ಫಿಸಿಶಿಯನ್:

ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರು ಪ್ರಮುಖರು. ಆರೋಗ್ಯ ಕ್ಷೇತ್ರದಲ್ಲಿ ಅವರು ಮೇರು ಪಾತ್ರವನ್ನು ವಹಿಸುತ್ತಾರೆ. ಅಭ್ಯರ್ಥಿಗಳು ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರದಲ್ಲಿ ಅಧ್ಯಯನ ಮಾಡಿದ ನಂತರ ನಾಲ್ಕೂವರೆ ವರ್ಷದ ಎಂಬಿಬಿಎಸ್ ಪದವಿಯನ್ನು ಪಡೆದು ನಂತರ ನೀಟ್ ಪರೀಕ್ಷೆಯಲ್ಲಿ ಪಾಸ್ ಆಗುವ ಮೂಲಕ ಡಾಕ್ಟರ್ ಆಗಬಹುದು. ಅಭ್ಯರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡಿದ್ದಲ್ಲಿ ಅವರ ಬೇಡಿಕೆ ಹೆಚ್ಚಾಗುವುದು. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗವನ್ನು ಮಾಡುವ ಮೂಲಕ ಉತ್ತಮ ವೇತನವನ್ನು ಪಡೆಯಬಹುದು.

ದಂತ ವೈದ್ಯರು:

ಮನುಷ್ಯನ ಆರೋಗ್ಯ ಸಮಸ್ಯೆಗಳಲ್ಲಿ ದಂತ ಸಮಸ್ಯೆಯೂ ಒಂದು. ಹಲ್ಲಿನ ಆರೋಗ್ಯದ ಬಗೆಗೆ ಅಧ್ಯಯನ ನಡೆಸಿದ ಅಭ್ಯಥರ್ಥಿಗಳು ದಂತ ವೈದ್ಯರಾಗಬಹುದು. ಮನುಷ್ಯ ದಿನೇ ದಿನೇ ವಿವಿಧ ಆಹಾರ ನೀರು ಸೇವಿಸುವ ಮೂಲಕ ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ ಅಂತಹ ಸಮಸ್ಯೆಗಳಿಗೆ ದಂತ ವೈದ್ಯರು ಶುಶ್ರೂಷೆಯನ್ನು ನೀಡುತ್ತಾರೆ.

ದಂತ ವೈದ್ಯರಾಗಲು ಅಭ್ಯರ್ಥಿಗಳು ನೀಟ್ ಪರೀಕ್ಷೆಯನ್ನು ಪಾಸ್ ಮಾಡುವ ಮೂಲಕ ಬಿಡಿಎಸ್ ಕೋರ್ಸ್‌ ಅನ್ನು ಮಾಡಬಹುದು. ಬಿಡಿಎಸ್ ಕೊರ್ಸ್‌ ಅಧ್ಯಯನ ಮಾಡಿದ ಬಳಿಕ ಅಭ್ಯರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡಬಹುದು.

<strong>ಡಾಕ್ಟರ್ ಆಗೋದು ಹೇಗೆ? ಇಲ್ಲಿದೆ ಮಾಹಿತಿ</strong>ಡಾಕ್ಟರ್ ಆಗೋದು ಹೇಗೆ? ಇಲ್ಲಿದೆ ಮಾಹಿತಿ

ನರ್ಸ್:

ಈಗಿನ ದಿನಗಳಲ್ಲಿ ನರ್ಸ್ ಹುದ್ದೆಗಳಿಗೆ ಅತೀ ಹೆಚ್ಚು ಬೇಡಿಕೆ ಇದೆ. ರೋಗಿಗೆ ಚಿಕಿತ್ಸೆ ನೀಡುವುದು, ರೋಗಿಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಲ್ಲಿ ನರ್ಸ್‌ಗಳ ಪಾತ್ರ ಹೆಚ್ಚಾಗಿರುತ್ತದೆ. ನರ್ಸ್ ಆಗಬಯಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿರಬೇಕು. ನಂತರ ಬಿ.ಎಸ್ಸಿ (ನರ್ಸಿಂಗ್),ಎಎನ್‌ಎಂ ಮತ್ತು ಜಿಎನ್‌ಎಂ ಕೊರ್ಸ್‌ಗಳ ಅಧ್ಯಯನ ಮಾಡಿ ರಾಜ್ಯ ನರ್ಸಿಂಗ್‌ ಕೌನ್ಸಿಲ್‌ನಲ್ಲಿ ಹೆಸರನ್ನು ನೊಂದಾಯಿಸಿಕೊಂಡು ಖಾಸಗಿ ಆಸ್ಪತ್ರೆಗಳಲ್ಲಿ ಉದ್ಯೋಗವನ್ನು ಪ್ರಾರಂಭಿಸಬಹುದು.

 

ಡೈಯೆಟೀಶಿಯನ್:

ರೋಗಿಯ ಆಹಾರ ಕ್ರಮ ಹೇಗಿರಬೇಕು ಮತ್ತು ಮನುಷ್ಯನ ದಿನನಿತ್ಯದ ಆಹಾರ ಕ್ರಮ ಹೇಗಿರಬೇಕು ಎನ್ನುವ ಸಲಹೆಯನ್ನು ಡೈಯೆಟೀಶಿಯನ್‌ ನೀಡುತ್ತಾನೆ. ಅನೇಕ ಕಾಲೇಜುಗಳು ನ್ಯೂಟ್ರೀಶಿಯನ್ ಮತ್ತು ಡೈಟೆಟಿಕ್ಸ್‌ ವಿಷಯಗಳ ಬಗೆಗೆ ಪದವಿ ಮತ್ತು ಸ್ನಾತಕೋರ್ಸ್‌ಗಳನ್ನು ಹೊಂದಿರುತ್ತವೆ. ಅಂತಹ ಕಾಲೇಜುಗಳಲ್ಲಿ ಅಧ್ಯಯನ ನಡೆಸಿದ ಅಭ್ಯರ್ಥಿಗಳು ಡೈಯೆಟೀಶಿಯನ್‌ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ ನಂತರ ಪರವಾನಗಿಯನ್ನು ಪಡೆದು ಅಭ್ಯಾಸವನ್ನು ನಡೆಸಬಹುದು. ಡೈಯೆಟೀಶಿಯನ್‌ಗಳಿಗೆ ಭಾರೀ ಬೇಡಿಕೆ ಇರುವುದರಿಂದ ಅಭ್ಯರ್ಥಿಗಳು ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬಹುದು ಅಥವಾ ಸ್ವಂತ ಕ್ಲಿನಿಕ್ ಅನ್ನು ತೆರೆಯಬಹುದು.

ಕೌನ್ಸೆಲ್ಲರ್ಸ್:

ಆಸ್ಪತ್ರೆಗಳಿಗೆ ದೈಹಿಕ ಆರೋಗ್ಯ ಸಮಸ್ಯೆಗಳುಳ್ಳ ಮಾತ್ರವಲ್ಲದೇ ಮಾನಸಿಕವಾಗಿ ಸಮಸ್ಯೆಗಳುಳ್ಳ ರೋಗಿಗಳು ಬರುತ್ತಾರೆ. ಯಾವುದೋ ಸಮಸ್ಯೆಗಳಿಂದ ಮಾನಸಿಕವಾಗಿ ತೊಂದರೆಗಳುಳ್ಳ ಅಭ್ಯರ್ಥಿಗಳು ಮೊದಲು ಕೌನ್ಸೆಲ್ಲರ್ ನ ಸಹಾಯ ತೆಗೆದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಾರೆ. ಕೌನ್ಸೆಲ್ಲರ್‌ಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆಯಿದ್ದು, ಎಂ.ಫಿಲ್ (ಸೈಕಾಲಜಿ) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಭಾರತದ ಪುನರ್ವಸತಿ ಕೌನ್ಸಿಲ್‌ನಿಂದ ಪರವಾನಗಿಯನ್ನು ಪಡೆದುಕೊಂಡು ನಂತರ ಕೌನ್ಸೆಲ್ಲರ್ ಆಗಬಹುದು.

<strong>ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಅಂತ ಆಸೆ ಇದೆಯಾ? ಹಾಗಿದ್ರೆ ಇದನ್ನು ಓದಿ</strong>ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಅಂತ ಆಸೆ ಇದೆಯಾ? ಹಾಗಿದ್ರೆ ಇದನ್ನು ಓದಿ

ಫಿಸಿಯೋಥೆರಪಿಸ್ಟ್:

ಅಪಘಾತಕ್ಕೆ ಒಳಗಾದ ರೋಗಿಯು ಫಿಸಿಯೋಥೆರಪಿಯನ್ನು ಪಡೆಯಬೇಕಿರುತ್ತದೆ. ಅಂತಹ ಸಂದರ್ಭಗಳಲ್ಲಿ ಫಿಸಿಯೋಥೆರಪಿಸ್ಟ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಆಸ್ಪತ್ರೆಗಳಲ್ಲಿ ಆರ್ಥೋಪೆಡಿಕ್‌ಗಳು ಫಿಸಿಯೋಥೆರಪಿ ತಂಡವನ್ನು ಹೊಂದಿರುತ್ತಾರೆ.

ಫಿಸಿಯೋಥೆರಪಿಸ್ಟ್ ಆಗ ಬಯಸುವ ಅಭ್ಯರ್ಥಿಗಳು ಪಿಯುಸಿಯಲ್ಲಿ ರಸಾಯನಶಾಸ್ತ್ರ,ಭೌತಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಅಧ್ಯಯನ ಮಾಡಿರಬೇಕು.ನಂತರ ಡಿಪ್ಲೋಮ ಅಥವಾ ಪದವಿ ವಿದ್ಯಾರ್ಹತೆಯನ್ನು ಫಿಸಿಯೋಥೆರಪಿಯಲ್ಲಿ ಹೊಂದಬಹುದು.
ಮತ್ತು ಉನ್ನತ ವ್ಯಾಸಂಗವನ್ನು ಕೂಡ ಮಾಡಬಹುದು. ಈ ವೃತ್ತಿಯಲ್ಲಿ ಉತ್ತಮ ವೇತನವನ್ನು ಪಡೆಯಬಹುದು.

ಮೆಡಿಕಲ್ ಲ್ಯಾಬ್ ಟೆಕ್ನೀಶಿಯನ್:

ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಲ್ಯಾಬ್‌ಗಳಿರುತ್ತವೆ. ಅಲ್ಲಿ ರೋಗಿಯ ಸ್ಯಾಂಪಲ್‌ಗಳನ್ನು ಪರೀಕ್ಷಿಸಲು ಲ್ಯಾಬ್‌ ಟೆಕ್ನೀಶಿಯನ್‌ಗಳ ಅಗತ್ಯವಿರುತ್ತದೆ. ಹಾಗಾಗಿ ಲ್ಯಾಬ್‌ ಟೆಕ್ನೀಶಿಯನ್‌ಗಳಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿ ಇದೆ. ಲ್ಯಾಬ್‌ ಟೆಕ್ನೀಶಿಯನ್ ಆಗಲು ಮೆಡಿಕಲ್ ಲ್ಯಾಬ್ ಟೆಕ್ನೀಶಿಯನ್‌ನಲ್ಲಿ ಡಿಪ್ಲೋಮ ಅಥವಾ ಅದಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಪದವಿಯನ್ನು ಮಾಡಿ ನಂತರ ಡಯಾಗ್ನೋಸ್ಟಿಕ್‌ ಸೆಂಟರ್‌ ಅಥವಾ ಆಸ್ಪತ್ರೆಗಳಲ್ಲಿ ಉದ್ಯೋಗವನ್ನು ಪಡೆಯಬಹುದು.

ಫಾರ್ಮಾಸಿಸ್ಟ್:

ರೋಗಿಗೆ ಬೇಕಾಗಿರುವ ಔಷಧಿಗಳನ್ನು ಒದಗಿಸುವಲ್ಲಿ ಫಾರ್ಮಾಸಿಸ್ಟ್‌ಗಳ ಪಾತ್ರವಿರುತ್ತದೆ. ಬಿ.ಫಾರ್ಮ್‌ ಅಧ್ಯಯನ ಮಾಡಿದ ಅಭ್ಯರ್ಥಿಗಳು ಈ ಕ್ಷೇತ್ರಕ್ಕೆ ಎಂಟ್ರಿ ಕೊಡಬಹುದು. ಅನೇಕ ಖಾಸಗಿ ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಲಭ್ಯವಿದ್ದು, ಕೋರ್ಸ್‌ ಮುಗಿದ ಬಳಿಕ ಅಭ್ಯರ್ಥಿಗಳು ಔಷಧಿಗಳನ್ನು ತಯಾರಿಸುವ ಸಂಸ್ಥೆಗಳಲ್ಲಿ ಅಥವಾ ಆಸ್ಪತ್ರೆಗಳಲ್ಲಿ ಉದ್ಯೋಗವನ್ನು ಪ್ರಾರಂಭಿಸಬಹುದು ಅಥವಾ ಈ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಬಹುದು.

<strong>ನಿಮ್ಮ ಡ್ರೀಮ್ ಜಾಬ್ ಸಿಕ್ಕಿಲ್ಲಾ ಅಂತಾ ಬೇಜಾರಾಗಿದ್ರೆ ಹೀಗೆ ಮಾಡಿ</strong>ನಿಮ್ಮ ಡ್ರೀಮ್ ಜಾಬ್ ಸಿಕ್ಕಿಲ್ಲಾ ಅಂತಾ ಬೇಜಾರಾಗಿದ್ರೆ ಹೀಗೆ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Here are the list of of career and job opportunities in healthcare industry. Check it
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X