ಸಮೂಹ ಸಂವಹನ ಅಧ್ಯಯನದಿಂದ ಎಷ್ಟೆಲ್ಲಾ ಉದ್ಯೋಗಾವಕಾಶವಿದೆ ಅನ್ನೋದು ನಿಮಗೆ ಗೊತ್ತಾ?

ಸಮೂಹ ಸಂವಹನ ಮಾಧ್ಯಮ ಎನ್ನುವುದು ಜನರಿಗೆ ಹತ್ತಿರವಾದ ಕ್ಷೇತ್ರ. ಏಕೆಂದರೆ ದಿನನಿತ್ಯದ ಬದುಕಿನಲ್ಲಿ ಮಾಧ್ಯಮಗಳ ಪಾತ್ರ ಹೆಚ್ಚಿದೆ. ಆಧುನಿಕ ಜಗತ್ತಿನ ಆಗುಹೋಗುಗಳನ್ನು ಪರಿಚಯಿಸುವ ಸಮೂಹ ಸಂವಹನ ಮಾಧ್ಯಮಗಳು ನಿಜಕ್ಕೂ ಹಗಲೂ ರಾತ್ರಿ ಎನ್ನದೆ ಶ್ರಮಿಸುತ್ತಿವೆ. ಇಲ್ಲಿ ವಿಫುಲ ಉದ್ಯೋಗಾವಕಾಶಗಳು ಕೂಡ ಇವೆ.

ಜನರಿಗೆ ಮಾಹಿತಿ ಮತ್ತು ಮನೋರಂಜನೆಯನ್ನು ನೀಡಲು ಸೂಕ್ತವಾಗಿರುವ ಈ ಕ್ಷೇತ್ರದಲ್ಲಿ ಹೆಜ್ಜೆ ಇಡಲು ಇಚ್ಚಿಸುವ ಅಭ್ಯರ್ಥಿಗಳು ಯಾವೆಲ್ಲಾ ಉದ್ಯೋಗಗಳನ್ನು ಮಾಡಿ ಎಷ್ಟು ವೇತನವನ್ನು ಪಡೆಯಬಹುದು ಮತ್ತು ಅದಕ್ಕೆ ಏನೆಲ್ಲಾ ವಿದ್ಯಾರ್ಹತೆಗಳಿರಬೇಕು ಎಂದು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ. ಲೇಖನವನ್ನು ಸಂಪೂರ್ಣವಾಗಿ ಓದಿ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ಎನ್ನುವ ಬಗೆಗೆ ನೀವೂ ಒಮ್ಮೆ ಆಲೋಚಿಸಿ. ನಿಮಗೂ ಪ್ಯಾಷನ್ ಇದ್ದಲ್ಲಿ ನಿಮ್ಮ ಆಸಕ್ತಿಗನುಗುಣವಾದ ಉದ್ಯೋಗವನ್ನು ಪ್ರಾರಂಭಿಸಿ.

ಸಮೂಹ ಸಂವಹನ ಕೋರ್ಸ್‌ಗಳ ಅಧ್ಯಯನ ಮಾಡಿದ್ರೆ ವಿಫುಲ ಉದ್ಯೋಗಾವಕಾಶಗಳಿವೆ

ಸಮೂಹ ಸಂವಹನ ಕ್ಷೇತ್ರಕ್ಕೆ ಯಾಕೆ ಹೋಗಬೇಕು?

ಮಾಧ್ಯಮ ಕ್ಷೇತ್ರದಲ್ಲಿ ಪ್ಯಾಷನ್ ಇರುವ ಅಭ್ಯರ್ಥಿಗಳು ತಾನು ಇನ್ನೊಬ್ಬರಿಗಿಂತ ಭಿನ್ನ ಎಂದು ತೋರಲು ಮತ್ತು ತನ್ನಲ್ಲಿರುವ ಕೌಶಲ್ಯವನ್ನು ವ್ಯಕ್ತಪಡಿಸಲು ಈ ಪ್ಲಾಟ್ ಫಾರ್ಮ್ ಸೂಕ್ತ ಎಂದೇ ಹೇಳಬಹುದು. ಈ ಕ್ಷೇತ್ರದಲ್ಲಿ ಕೇವಲ ಸಂಪಾನೆ ಮಾತ್ರವಲ್ಲದೇ ಹಲವಾರು ವಿಚಾರಗಳನ್ನು ಕಲಿಯುವ ಅವಕಾಶಗಳಿರುತ್ತವೆ ಉದಾಹರಣೆಗೆ ವೀಡಿಯೋ ಎಡಿಟಿಂಗ್,ಬರವಣಿಗೆ ಹೀಗೆ ಹಲವಾರು ವಿಷಯಗಳನ್ನು ತಿಳಿಯಬಹುದು.

ನಿಮಗೆ ವ್ಯವಸ್ಥೆಯಲ್ಲಿ ಬದಲಾವಣೆ ಕಾಣಬೇಕು, ತಾನು ಏನಾದರೂ ಸಾಧಿಸಬೇಕು ಎಂಬ ತುಡಿತ ಇದ್ದಲ್ಲಿ ಹಾಗು ತಾನು ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಸೇವೆ ಸಲ್ಲಿಸಬೇಕು ಎಂದು ಆಸೆ ಇದ್ದಲ್ಲಿ ಈ ಕ್ಷೇತ್ರಕ್ಕೆ ಎಂಟ್ರಿ ಕೊಡುವುದು ಬೆಸ್ಟ್..

ಸಮೂಹ ಸಂವಹನ ಅಧ್ಯಯನಕ್ಕೆ ಪ್ರವೇಶಾತಿ ಪಡೆಯುವುದು ಹೇಗೆ?

ಈ ಕ್ಷೇತ್ರದಲ್ಲಿ ಪ್ರವೇಶ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ವಿದ್ಯಾರ್ಹತೆಯನ್ನು ಪಡೆಯುವುದು ಒಳಿತು

1 ಸಮೂಹ ಸಂವಹನ ಮಾಧ್ಯಮದಲ್ಲಿ ಪದವಿ
2 ಸಮೂಹ ಸಂವಹನ ಮಾಧ್ಯಮದಲ್ಲಿ ಸ್ನಾತಕೋತ್ತರ ಪದವಿ
3 ಡಿಪ್ಲೋಮ ಅಥವಾ ಸರ್ಟಿಫಿಕೇಟ್ ಕೋರ್ಸ್‌ಗಳು

ಸಮೂಹ ಸಂವಹನ ಮಾಧ್ಯಮಗಳಲ್ಲಿ ಇರುವ ಉದ್ಯೋಗಾವಕಾಶಗಳು:

ಪತ್ರಿಕೋದ್ಯಮ:

ಪತ್ರಿಕೋದ್ಯಮ:

ಪತ್ರಿಕೋದ್ಯಮ ಒಂದು ವಿಸ್ತಾರವಾದ ಕ್ಷೇತ್ರ. ಇಲ್ಲಿ ಮಾಹಿತಿಯನ್ನು ವೀಕ್ಷಕರಿಗೆ ಮತ್ತು ಓದುಗರಿಗೆ ತಲುಪಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತವೆ. ಬರಹದ ರೂಪದಲ್ಲಿ, ನ್ಯೂಸ್‌ ಚಾನೆಲ್‌ಗಳಲ್ಲಿ ಆಂಕರ್‌ಗಳ ಮೂಲಕ ಮತ್ತು ರೇಡಿಯೋಗಳಲ್ಲಿ ಧ್ವನಿಯ ಮೂಲಕ ವೀಕ್ಷಕರಿಗೆ , ಓದುಗರಿಗೆ ಮತ್ತು ಕೇಳುಗರಿಗೆ ಮಾಹಿತಿಯನ್ನು ತಲುಪಿಸುವ ಕೆಲಸವನ್ನು ಮಾಡಲಾಗುತ್ತದೆ.

ಈ ಕ್ಷೇತ್ರದಲ್ಲಿ ಒಲವು ಇರುವ ಅಭ್ಯರ್ಥಿಗಳು ನ್ಯೂಸ್ ಎಡಿಟರ್, ರಿಪೋರ್ಟರ್,ನ್ಯೂಸ್ ಆಂಕರ್ ಮತ್ತು ಇತ್ಯಾದಿಯಾಗಿ ಉದ್ಯೋಗವನ್ನು ಮಾಡಬಹುದು. ಇಲ್ಲಿ ಉದ್ಯೋಗವನ್ನು ಪಡೆದರೆ ತಿಂಗಳಿಗೆ 30 ರಿಂದ 40 ಸಾವಿರ ವರೆಗೂ ವೇತನವನ್ನು ಪಡೆಯಬಹುದು.

ಜಾಹೀರಾತು:

ಜಾಹೀರಾತು:

ಜಾಹಿರಾತು ಎಂದರೆ ಒಂದು ಉತ್ಪನ್ನದ ಬಗೆಗೆ ಪ್ರಮೋಟ್ ಮಾಡುವುದು ಎಂದಷ್ಟೇ ಅಲ್ಲ. ಇಂದಿನ ದಿನಗಳಲ್ಲಿ ಟಿ.ವಿ, ಪತ್ರಿಕೆ, ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್‌ಗಳಲ್ಲಿ ಕೂಡ ಅನೇಕ ಸಂಸ್ಥೆಗಳು ಜಾಹಿರಾತುಗಳನ್ನು ನೀಡುತ್ತವೆ. ಈ ಜಾಹೀರಾತುಗಳು ನೀಡುವಲ್ಲಿಯೂ ಕೂಡ ಕ್ರಿಯಾಶೀಲ ಅಭ್ಯರ್ಥಿಗಳಿಗೆ ಹೆಚ್ಚು ಬೇಡಿಕೆ ಇದೆ. ವೆಬ್‌ ಡಿಸೈನಿಂಗ್‌ ಬಗೆಗೆ ಜ್ಞಾನವಿರುವ ಮತ್ತು ವೆಬ್‌ ಡಿಸೈನಿಂಗ್‌ನಲ್ಲಿ ಕ್ರಿಯೇಟಿವಿ ಇರುವ ಅಭ್ಯರ್ಥಿಗಳು ಜಾಹಿರಾತು ಕ್ಷೇತ್ರಕ್ಕೆ ಪ್ರವೇಶ ಪಡೆಯಬಹುದು. ಜಾಹಿರಾತು ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆದರೆ ವರ್ಷಕ್ಕೆ 10 ಲಕ್ಷ ರೂ ವೇತನವನ್ನು ಪಡೆಯಬಹುದು.

ರೇಡಿಯೋ ಜಾಕಿ:
 

ರೇಡಿಯೋ ಜಾಕಿ:

ರೇಡಿಯೋಗಳಲ್ಲಿ ಮತ್ತು ಎಫ್‌ಎಂ ಗಳಲ್ಲಿ ರೇಡಿಯೋ ಜಾಕಿಗಳನ್ನು ನಾವು ನೋಡಬಹುದು. ಕಾರ್ಯಕ್ರಮಗಳಲ್ಲಿ ಜನರ ಕರೆಗಳಿಗೆ ಉತ್ತರಿಸುವ ಉತ್ತಮ ಕಂಠದಿಂದ ರೇಡಿಯೋ ಜಾಕಿ ಬಹು ಬೇಗ ಪ್ರಸಿದ್ಧಿಯನ್ನು ಹೊಂದುತ್ತಾರೆ. ರೇಡಿಯೋ ಜಾಕಿ ಆಗಲು ಇಷ್ಟವಿರುವ ಅಭ್ಯರ್ಥಿಗಳು ಉತ್ತಮ ಧ್ವನಿಯನ್ನು ಹೊಂದಿರಬೇಕು ಹಾಗೂ ಸಮೂಹ ಸಂವಹನ ಅಧ್ಯಯನದಲ್ಲಿ ಪದವಿಯನ್ನು ಹೊಂದಿರಬೇಕು.

ರೇಡಿಯೋ ಜಾಕಿ ಆರಂಭಿಕ ಹಂತದಲ್ಲಿ ತಿಂಗಳಿಗೆ 30 ಸಾವಿರ ರೂಗಳ ವೇತನವನ್ನು ಪಡೆಯಬಹುದು. ಕೆಲಸದಲ್ಲಿ ಅನುಭವನ್ನು ಪಡೆಯುತ್ತಾ ಹೋದಂತೆ ವೇತನವೂ ಹೆಚ್ಚಳವಾಗುವುದು.

 

ಸಂಪಾದಕ:

ಸಂಪಾದಕ:

ಪತ್ರಿಕೆಯಲ್ಲಿ ಪ್ರಕಟವಾದ ಯಾವುದೇ ಮಾಹಿತಿಯಲ್ಲಿ ಏನಾದರು ದೋಷವಿದ್ದರೆ ಅದಕ್ಕೆ ಸಂಪಾದಕೇ ಹೊಣೆ. ಒಂದು ಪತ್ರಿಕೆ ಯಲ್ಲಿ ಪ್ರಕಟವಾಗಿರುವ ಪ್ರತಿ ವಿಷಯಗಳನ್ನು ಒಮ್ಮೆ ಗಮನಿಸುವುದು ಸಂಪಾದಕ ಮಹತ್ವ ಕೆಲಸವಾಗಿರುತ್ತದೆ.

ಪತ್ರಿಕೆಗಳಲ್ಲಿ ಕೆಲಸ ನಿರ್ವಹಿಸಿ ಅನುಭವನ್ನು ಹೊಂದಿರುವ ಅಭ್ಯರ್ಥಿಗಳು ಸಂಪಾದಕಾರಾಗಿ ಕಾರ್ಯ ನಿರ್ವಹಿಸಲು ಅರ್ಹರಾಗಿರುತ್ತಾರೆ. ಸಂಪಾದಕರಾಗಿ ಆರಂಭಿಕ ಹಂತದಲ್ಲಿ ವರ್ಷಕ್ಕೆ 3 ಲಕ್ಷಕ್ಕೂ ಅಧಿಕ ಆದಾಯವನ್ನು ಪಡೆಯಬಹುದು.

 

 

ಛಾಯಾಗ್ರಾಹಕ:

ಛಾಯಾಗ್ರಾಹಕ:

ಛಾಯಾಗ್ರಾಹಕ ಎಂದರೆ ಯಾವುದೋ ದೃಶ್ಯವನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸುವುದು ಎಂದಷ್ಟೇ ಅಲ್ಲ.ಅನೇಕ ರೀತಿಯಲ್ಲಿ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಕೌಶಲ್ಯವನ್ನು ಹೊಂದಿರಬೇಕು. ಉತ್ತಮ ಛಾಯಾಗ್ರಾಹಕರಾಗಿದ್ದಲ್ಲಿ ಕ್ರೀಡೆ,ಫ್ಯಾಷನ್,ವೈಲ್ಡ್ ಲೈಫ್ ಮತ್ತು ಸುದ್ದಿ ವಾಹಿನಿಗಳಲ್ಲಿ ಕೂಡ ಛಾಯಾಗ್ರಾಹಕರಾಗಿ ಕೆಲಸ ಮಾಡಬಹುದು.

ಅನೇಕ ಸಂಸ್ಥೆಗಳಲ್ಲಿ ಫೋಟೋಗ್ರಫಿಯನ್ನು ಹೇಳಿಕೊಡಲಾಗುವುದು. ಅಭ್ಯರ್ಥಿಗಳು ತರಬೇತಿಯನ್ನು ಪಡೆದು ನಮತರ ಉದ್ಯೋಗವನ್ನು ಪ್ರಾರಂಭಿಸಿದಲ್ಲಿ ಆರಂಭಿಕ ಹಂತದಲ್ಲಿ 9 ರಿಂದ 13 ಸಾವಿರದ ವರೆಗೂ ವೇತನವನ್ನು ಪಡೆಯಬಹುದು. ಕೆಲಸದಲ್ಲಿ ಅನುಭವವನ್ನು ಹೊಂದಿದ ನಂತರ ತಿಂಗಳಿಗೆ ಗರಿಷ್ಟ 50 ರಿಂದ 60 ಸಾವಿರ ರೂ ವೇತನವನ್ನು ಪಡೆಯಬಹುದು.

ವೀಡಿಯೋ ಎಡಿಟರ್:

ವೀಡಿಯೋ ಎಡಿಟರ್:

ಒಂದು ಸಿನೆಮಾ ಚಿತ್ರೀಕರಣಗೊಂಡ ನಂತರ ಪರದೆ ಮೇಲೆ ಮೂಡುವ ಪ್ರತಿ ದೃಷ್ಯಗಳಿಗೂ ಎಡಿಟರ್‌ನ ಪಾತ್ರ ಪ್ರಮುಖವಾಗಿರುತ್ತದೆ. ಚಿತ್ರೀಕರಣಗೊಂಡ ಪ್ರತಿ ದೃಶ್ಯಗಳನ್ನು ಎಡಿಟ್ ಮಾಡಿ ಎಫೆಕ್ಟ್ ನೀಡಿ ಸಂಗೀತದೊಂದಿಗೆ ಮಿಶ್ರಣ ಮಾಡಿ ಪರದೆ ಮೇಲೆ ನಿಗದಿತ ಸಮಯದೊಳಗೆ ಮೂಡುವಂತೆ ಮಾಡುವ ಕೈಚಳಕ ವೀಡಿಯೋ ಎಡಿಟರ್‌ಗಳದ್ದಾಗಿರುತ್ತದೆ. ಇನ್ನೂ ನ್ಯೂಸ್ ಚಾನೆಲ್‌ಗಳಲ್ಲಿಯೂ ವೀಡಿಯೋ ಎಡಿಟರ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ ಆದರೆ ಇಲ್ಲಿ ಕ್ರಿಯಾಶೀಲತೆಗಿಂತ ಅಗತ್ಯ ಮಾಹಿತಿಯನ್ನು ವೀಕ್ಷಕರಿಗೆ ತಲುಪಿಸುವುದು ಮುಖ್ಯವಾಗಿರುತ್ತದೆ.

ವೀಡಿಯೋ ಎಡಿಟರ್‌ ಆಗಲು ಕಂಪ್ಯೂಟರ್ ಜ್ಞಾನ ಮತ್ತು ವೀಡಿಯೋ ಎಡಿಟಿಂಗ್ ಬಗೆಗೆ ಒಂದಿಷ್ಟು ಕಲಿಕೆಯೂ ಅಗತ್ಯವಾಗಿರುತ್ತದೆ. ವೀಡಿಯೋ ಎಡಿಟರ್ ಆಗಿ ಉದ್ಯೋಗ ಪಡೆದರೆ ಪ್ರಾರಂಭಿಕ ಹಂತದಲ್ಲಿ ತಿಂಗಳಿಗೆ 10 ಸಾವಿರದಿಂದ ನಂತರ ದಿನಗಳಲ್ಲಿ ತಿಂಗಳಿಗೆ ಗರಿಷ್ಟ 50 ಸಾವಿರ ರೂಗಳನ್ನು ತಲುಪಬಹುದು.

 

ವೀಡಿಯೋ ಜಾಕಿ:

ವೀಡಿಯೋ ಜಾಕಿ:

ರೇಡಿಯೋ ಜಾಕಿಯ ವೀಡಿಯೋ ಜಾಕಿಗಳಿಗೂ ಕೂಡ ಉತ್ತಮ ಉದ್ಯೋಗಾವಕಾಶಗಳಿವೆ. ರೇಡಿಯೋ ಜಾಕಿಗೂ ವೀಡಿಯೋ ಜಾಕಿಗೂ ಇರುವ ವ್ಯತ್ಯಾಸವೆಂದರೆ ಅಲ್ಲಿ ಕೇವಲ ಧ್ವನಿ ಆಧಾರಿತ. ಆದರೆ ಇಲ್ಲಿ ಧ್ವನಿಯ ಜೊತೆಗೆ ವ್ಯಕ್ತಿ (ಆಂಕರ್) ಕೂಡ ಪರದೆಯ ಮೇಲೆ ಕಾಣಿಸುತ್ತಾನೆ. ಆಂಕರ್‌ನ ಮಾತು ಆತನ ಭಾವನೆಗಳು ಸ್ಕ್ರೀನ್ ಮೇಲೆ ಲಭ್ಯವಾಗುವುದು ಅವರನ್ನು ವೀಡಿಯೋ ಜಾಕಿ ಎಂದು ಕರೆಯುತ್ತೇವೆ. ನಿಮಗೂ ಉತ್ತಮ ಮಾತುಗಾರಿಕೆ ಇದ್ದಲ್ಲಿ ವೀಡಿಯೋ ಜಾಕಿ ಆಗಿ ಆರಂಭಿಕ ಹಂತದಲ್ಲಿ ತಿಂಗಳಿಗೆ 15 ರಿಂದ 20 ಸಾವಿರ ರೂ ವೇತನವನ್ನು ಪಡೆಯಬಹುದು.

ಸೌಂಡ್ ಇಂಜಿನಿಯರ್:

ಸೌಂಡ್ ಇಂಜಿನಿಯರ್:

ಸಮೂಹ ಸಂವಹನ ಮಾಧ್ಯಗಳಾದ ಟಿ.ವಿ ಮತ್ತು ರೇಡಿಯೋಗಳಲ್ಲಿ ಸೌಂಡ್ ಇಂಜಿನಿಯರ್‌ಗಳ ಪಾತ್ರ ಹೆಚ್ಚಾಗಿರುತ್ತದೆ. ಆಧುನಿಕ ತಂತ್ರಜ್ಞಾನಗಳ ಜ್ಞಾನದೊಂದಿಗೆ ತಮ್ಮದೇ ಆದ ಕ್ರಿಯಾಶೀಲತೆಯನ್ನು ಬಳಸುವ ಆಸಕ್ತ ಅಭ್ಯರ್ಥಿಗಳು ಈ ಉದ್ಯೋಗವನ್ನು ಮಾಡಬಹುದು. ಟ್ರೆಂಡ್‌ಗಳನ್ನು ಅರಿತು ಅದರೆಡೆಗೆ ಉತ್ತಮ ಕಾರ್ಯ ನಿಯೋಜಿಸುವಲ್ಲಿ ಸೌಂಡ್ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದಾಗಿರುತ್ತದೆ. ಸೌಂಡ್ ಇಂಜಿನಿಯರ್ ಆಗ ಬಯಸುವವರು ಡಿಪ್ಲೋಮ ಅಥವಾ ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡಿಕೊಂಡು ಈ ಕ್ಷೇತ್ರಕ್ಕೆ ಪ್ರವೇಶಿಸಿ ತಿಂಗಳಿಗೆ 20 ಸಾವಿರಕ್ಕೂ ಅಧಿಕ ವೇತನವನ್ನು ಪಡೆಯಬಹುದು.

 

ಪಬ್ಲಿಕ್ ರಿಲೇಷನ್ಸ್ ಆಫೀಸರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ):

ಪಬ್ಲಿಕ್ ರಿಲೇಷನ್ಸ್ ಆಫೀಸರ್ (ಸಾರ್ವಜನಿಕ ಸಂಪರ್ಕ ಅಧಿಕಾರಿ):

ಒಂದು ಸಂಸ್ಥೆಯು ಉದ್ಯೋಗಿಗಳೊಡನೆ ಮತ್ತು ಸಾರ್ವಜನಿಕರೊಡೆನ ಉತ್ತಮ ಸಂಪರ್ಕವನ್ನು ಹೊಂದಲು ಸಂಪರ್ಕಾಧಿಕಾರಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತದೆ ಅವರನ್ನು ಪಿಆರ್‌ಓ ಎಂದು ಕರೆಯಲಾಗುವುದು. ಸಂಸ್ಥೆಯ ಆಗು ಹೋಗುಗಳಿಗೆ ಸಂಬಂಧಪಟ್ಟಂತೆ ಪ್ರೆಸ್ ಮೀಟ್ ನಡೆಸುವುದು ಅದರ ಸಂಪೂರ್ಣ ಜವಾಬ್ದಾರಿಯನ್ನು ಪಿಆರ್‌ಓ ನಿಭಾಯಿಸಬೇಕಿರುತ್ತದೆ. ಸಂಸ್ಥೆಗೆ ಸಂಬಂಧಪಟ್ಟ ವಿಚಾರಗಳಲ್ಲಿ ಸಾರ್ವಜನಿಕೊಂದಿಗೆ ಸಂಪರ್ಕಿಸುವ ಕರ್ತವ್ಯ ಪಿಆರ್‌ಓಗಳದ್ದಾಗಿರುತ್ತದೆ. ಪಿಆರ್‌ಓ ಹುದ್ದೆಗೆ ಸೇರಿದರೆ ವರ್ಷಕ್ಕೆ ೨.೫ ಲಕ್ಷದ ವರೆಗೂ ಆದಾಯ ಪಡೆಯಬಹುದು.

 

 

ಸ್ಕ್ರೀನ್ ಪ್ಲೇ ಬರಹಗಾರ:

ಸ್ಕ್ರೀನ್ ಪ್ಲೇ ಬರಹಗಾರ:

ಒಂದು ಸಿನೆಮಾ ನಿಂತಿರುವುದು ಒಂದು ಕಥೆಯ ಮೇಲೆ ಆ ಕಥೆಗಳು ನಿರ್ಮಿತವಾಗುವುದು ಬರಹಗಾರರಿಂದ ಅವರನ್ನು ನಾವು ಸ್ಕ್ರೀನ್ ಪ್ಲೇ ರೈಟರ್ ಎಂದೇ ಕರೆಯಲಾಗುವುದು. ಸಿನೆಮಾ ಅಂದರೆ ಒಂದೊಳ್ಳೆ ಕಥೆ, ಉತ್ತಮ ಸಂಭಾಷಣೆ, ಕಿವಿಗೆ ಇಂಪಾದ ಸಂಗೀತ ಹಾಗೆ ಮನೋರಂಜನೆ ಜೊತೆಗೆ ಉತ್ತಮ ಸಂದೇಶ ನೀಡುವಂತದ್ದು. ಈ ಎಲ್ಲಾ ಅಂಶಗಳನ್ನು ಒಳಗೊಂಡಿರುವಂತದ್ದೇ ಸಿನೆಮಾ ಆಗಿ ರೂಪುಗೊಳ್ಳುವುದು. ಹಾಗಾಗಿ ಸ್ಕ್ರೀನ್ ಪ್ಲೇ ರೈಟರ್‌ಗಳಿಗೆ ಭಾರೀ ಉದ್ಯೋಗಾವಕಾಶಗಳಿರುತ್ತವೆ.

ಕ್ರಿಯಾಶೀಲ ಬರಹಗಾರರು ಟಿ.ವಿ ಮಾಧ್ಯಮಗಳಲ್ಲಿ ಅಥವಾ ಸಿನಿಮಾಗಳಿಗೆ ಸ್ಕ್ರೀನ್ ಪ್ಲೇ ಬರಹಗಾರರಾಗಿ ಕೆಲಸ ಮಾಡಬಹುದು. ಸ್ಕ್ರೀನ್ ಪ್ಲೇ ಬರಹಗಾರರಿಗೆ ಉತ್ತಮ ವೇತನವಿದ್ದು ವರ್ಷಕ್ಕೆ ಕನಿಷ್ಟ 5 ಲಕ್ಷದ ವರೆಗೂ ಆದಾಯವನ್ನು ಪಡೆಯಬಹುದು.

 

ಬ್ಲಾಗರ್:

ಬ್ಲಾಗರ್:

ಬರವಣಿಗೆಯ ಕೌಶಲ್ಯ ನಿಮ್ಮಲ್ಲಿದ್ದಲ್ಲಿ ನೀವು ಬ್ಲಾಗರ್ ಕೂಡ ಆಗಬಹುದು. ಟ್ರೆಂಡಿಂಗ್‌ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಬರವಣಿಗೆಯನ್ನು ಹಾಕಬಹುದು. ಇಲ್ಲಿ ಎಸ್‌ಇಓ ಬಗೆಗೆ ಸ್ವಲ್ಪ ಜ್ಞಾನವಿದ್ದರೆ ಸಾಕು ಯಶಸ್ಸು ಮತ್ತು ಸಂತಸವನ್ನು ಕಾಣಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving list of career opportunities in mass communication and required qualifications, salary
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X