ಕೃಷಿ ಕ್ಷೇತ್ರಕ್ಕೆ ಎಂಟ್ರಿಯಾದ್ರೆ ಯಾವೆಲ್ಲಾ ಹುದ್ದೆಗಳನ್ನು ನೀವು ಅಲಂಕರಿಸಬಹುದು ಗೊತ್ತೇ ?

ಈಗೆಲ್ಲಾ ಇಂಜಿನಿಯರ್ ಮತ್ತು ಡಾಕ್ಟರ್ ಆಗೋ ಮಾತು ದೂರ. ಯಾಕಂದ್ರೆ ನಮ್ಮ ಮಕ್ಕಳು ಕಾಣದ ದೂರದೂರಿಗೆ ಹೋಗಿ ಕಷ್ಟ ಪಡುವ ಬದಲು ಕೃಷಿಯಲ್ಲೇ ಏನಾದರೂ ಉದ್ಯೋಗ ಮಾಡಲಿ ಅನ್ನುವ ಪೋಷಕರೇ ಹೆಚ್ಚು. ಮಕ್ಕಳಿಗೆ ಅಯ್ಯೋ ಕೃಷಿಯೇ ಅದನ್ನ ನಾನ್ಯಾಕೆ ಮಾಡಬೇಕು ಅದರಲ್ಲೇನಿದೆ ಭವಿಷ್ಯ? ಅಂತ ಮೂಗು ಮುರಿಯುವವರಿಗೆ ಇಲ್ಲಿದೆ ಕಿವಿಮಾತು. ಕೃಷಿ ಅಂದರೆ ಕೇವಲವಲ್ಲ ಅದನ್ನ ಅಕ್ಷರಸ್ತರು ಮತ್ತು ಅನಕ್ಷರಸ್ತರು ಉದ್ಯೋಗವಾಗಿಸಿಕೊಳ್ಳಬೇಕು ಅಂತಲೂ ಇಲ್ಲ. ಕೃಷಿ ನಮ್ಮ ಬದುಕಿಗೆ ಕೈ ಹಿಡಿಯುತ್ತೆ ಅನ್ನೋದಾದ್ರೆ ಯಾಕೆ ನಾವು ಕೃಷಿಯಲ್ಲಿ ಉದ್ಯೋಗ ಮಾಡಬಾರದು? ಅಷ್ಟೇ ಅಲ್ಲ ಕೃಷಿ ಕ್ಷೇತ್ರದಲ್ಲಿ ನೀವು ಎಂಟ್ರಿಯಾದ್ರೆ ಯಾವೆಲ್ಲಾ ಹುದ್ದೆಗಳನ್ನು ನೀವು ಅಲಂಕರಿಸಬಹುದು ಗೊತ್ತಾ ?

ಹೌದು ಕೃಷಿ ಕ್ಷೇತ್ರದಲ್ಲಿ ನೀವು ಉದ್ಯೋಗ ಪಡೆಯೋಕೆ ಹಲವಾರು ದಾರಿಗಳೂ ಇವೆ ಮತ್ತು ಹಲವಾರು ಕೋರ್ಸ್‌ಗಳು ಇವೆ. ಇನ್ನೂ ಈ ಕ್ಷೇತ್ರದಲ್ಲಿ ಉದ್ಯೋಗಗಿಟ್ಟಿಸಿಕೊಂಡರೆ ಉತ್ತಮ ಸಂಬಳವೂ ಗಿಟ್ಟುತ್ತದೆ. ಹಾಗಾದ್ರೆ ಯಾಕೆ ತಡ ಕೃಷಿ ಕ್ಷೇತ್ರದಲ್ಲಿ ಯಾವೆಲ್ಲಾ ಹುದ್ದೆಯನ್ನು ನೀವು ಅಲಂಕರಿಸಬಹುದು ಎನ್ನುವ ಮಾಹಿತಿಯನ್ನು ನೀಡಲಿದ್ದೇವೆ ತಪ್ಪದೇ ಓದಿ.

ಕೃಷಿ ಕ್ಷೇತ್ರದಲ್ಲಿವೆ ಹಲವು ಪ್ರಮುಖ ಹುದ್ದೆಗಳು !

1. ಅಗ್ರಿಕಲ್ಚರಲ್ ಇಂಜಿನಿಯರ್:

ಆಧುನಿಕ ಯುಗದಲ್ಲಿ ತಂತ್ರಜ್ಞಾನ ಆವಿಷ್ಕಾರಗಳು ಹೆಚ್ಚುತ್ತಾ ಹೋದಂತೆ ಕೃಷಿ ಕ್ಷೇತ್ರದಲ್ಲಿನ ಉಪಕರಣಗಳಲ್ಲಿನ ಬಳಕೆ ಕೂಡ ಪ್ರಗತಿ ಹೊಂದುತ್ತಿದೆ ಅದಕ್ಕೆ ಕಾರಣ ಅಗ್ರಿಕಲ್ಚರ್ ಇಂಜಿನಿಯರಿಂಗ್. ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆ, ಉಪಕರಣಗಳ ಆವಿಕ್ಷಾರಗಳು ಮತ್ತು ಕೃಷಿಯಲ್ಲಿ ಎದುರಾಗುವ ಸಮಸ್ಯೆಗೆ ಪರಿಹಾರಗಳು ಮತ್ತು ಕೆಲಸಕ್ಕೆ ಯಾವೆಲ್ಲಾ ಯಂತ್ರೋಪರಣಗಳ ಅಗತ್ಯತೆ ಇದೆ ಎನ್ನುವುದನ್ನು ಕಂಡುಕೊಳ್ಳುವುದೇ ಅಗ್ರಿಕಲ್ಚರ್‌ ಇಂಜಿನಿಯರ್‌ಗಳು. ಹಾಗಾಗಿ ಅವರ ಪಾತ್ರ ಹೆಚ್ಚಿರುತ್ತದೆ ಮತ್ತು ಅವರ ಪ್ಲ್ಯಾನ್‌ಗಳೂ ಕೂಡ ಕೃಷಿ ಬೆಳವಣಿಗೆ ಮತ್ತು ಉತ್ತಮ ಪ್ರಾಡಕ್ಟಿವಿಟಿಯ ಬಗೆಗೆ ಧ್ಯೇಯವನ್ನು ಹೊಂದಿರುತ್ತದೆ.

2. ಅಗ್ರಿಕಲ್ಚರಲ್ ಮ್ಯಾನೇಜರ್ಸ್:

ಸಾಮಾನ್ಯವಾಗಿ ಮ್ಯಾನೇಜರ್‌ನ ಕೆಲಸ ಕೆಲಸವನ್ನು ನಿರ್ವಹಿಸುವುದು. ಇನ್ನೂ ಕೃಷಿ ಕ್ಷೇತ್ರದಲ್ಲಿಯೂ ಕೂಡ ಆತ ಫಾರ್ಮ್‌ಗಳನ್ನು ಸೂಪರ್‌ವೈಸ್‌ ಮಾಡುವುದು, ಕಚ್ಚಾ ವಸ್ತುಗಳ ಬಗೆಗೆ ಗಮನ ಕೊಡುವುದು ಮತ್ತು ಹಣಕಾಸು ನಿಯಂತ್ರಣ ಮಾಡುವುದು ಮತ್ತು ಕೆಲಸಗಾರರ ನಿರ್ವಹಣೆ ಹೀಗೆ ಒಟ್ಟಾರೆ ಸಂಸ್ಥೆಯ ಜವಾಬ್ದಾರಿಯುತನಾಗಿದ್ದು ಆತ ಇನ್ನೂ ಹಲವಾರು ನಿರ್ವಹಣೆಯ ಕೆಲಸಗಳನ್ನು ಅಗ್ರಿಕಲ್ಚರಲ್ ಮ್ಯಾನೇಜರ್ ಆಗಿ ಮಾಡುತ್ತಾನೆ. ಇದರಿಂದ ಕೃಷಿ ಕ್ಷೇತ್ರದಲ್ಲಿನ ಪ್ರಾಡಕ್ಟ್ ಉತ್ಪನ್ನ ಮಟ್ಟ ಮತ್ತು ರೈತರಿಗೆ ಸಲ್ಲಬೇಕಾದ ಆದಾಯ ಉತ್ತಮದಾಯಕವಾಗಿರುತ್ತದೆ.

3. ಆರ್‌ & ಡಿ ಪ್ರೊಫೆಷನಲ್ಸ್:

ಆಧುನಿಕ ಬದುಕಿನಲ್ಲಿ ಸೈಂಟಿಸ್ಟ್‌ಗಳ ಪಾತ್ರ ತುಂಬಾನೆ ಪ್ರಮುಖವಾಗಿದೆ. ಕಾರಣ ಹೊಸ ಹೊಸ ಆವಿಶ್ಕಾರದೊಂದಿಗೆ ನಾವು ನೀವೆಲ್ಲಾ ಬದುಕನ್ನು ನಡೆಸುತ್ತಿದ್ದೇವೆ. ಅದರಲ್ಲೂ ಕೃಷಿ ಕ್ಷೇತ್ರ ಅಂತ ಬಂದಾಗ ಈ ವಿಜ್ಞಾನಿಗಳ ಪಾತ್ರ ಹೆಚ್ಚಿದೆ. ವಿಜ್ಞಾನಿಗಳ ಸಂಶೋಧನೆಯಿಂದ ಕೃಷಿ ಕ್ಷೇತ್ರ ಅತ್ಯದ್ಭುತವಾದ ಬೆಳವಣಿಗೆಯನ್ನು ಇಂದು ಕಂಡಿದೆ. ಕೃಷಿಗೆ ಬೇಕಿರುವ ಅತ್ಯಾಧುನಿಕ ತಂತ್ರಜ್ಞಾನಗಳು, ಫರ್ಟಿಲೈಸರ್ಸ್‌ ಮತ್ತು ಉಪಕರಣಗಳ ಆವಿಶ್ಕಾರಗಳು ನಮ್ಮ ವಿಜ್ಞಾನಿಗಳಿಂದಲೇ ಕಂಡದ್ದು.

ಕೃಷಿ ಕ್ಷೇತ್ರದಲ್ಲಿನ ಬೆಳವಣಿಗೆಗೆ ವಿಜ್ಞಾನಿಗಳ ಕೊಡುಗೆ ಅಪಾರ ಅದುರಿಂದಾಗಿಯೇ ಮಣ್ಣು , ವಿಜ್ಞಾನ, ಪಶುಸಂಗೋಪನೆ ಬಯೋಕೆಮಿಸ್ಟ್ರಿ,ಸಸ್ಯಶಾಸ್ತ್ರ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇನ್ನೂ ಹಲವಾರು ವಿಷಯಗಳಲ್ಲಿ ಹೊಸ ಹೊಸ ಅನ್ವೇಷಣೆಗಳು ಕೈಗೊಂಡಿವೆ. ಹಾಗಾಗಿ ಆರ್‌ ಅಂಡ್‌ ಡಿ ಪ್ರೊಫೆಷನಲ್ ಆಗಿ ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆಯನ್ನು ನೀವು ನೀಡಬಹುದು.

4. ಪ್ಲಾಂಟೇಷನ್ ಮ್ಯಾನೇಜರ್ :

ಪ್ಲಾಂಟೇಷನ್ ಮ್ಯಾನೇಜರ್ ಆತ ಆಡಳಿತಾತ್ಮಕ ಜವಾಬ್ದಾರಿಗಳಾದ ಪ್ಲಾಂಟೇಷನ್ ಬಗ್ಗೆ ಹೆಚ್ಚು ಕಾಳಜಿಯುತ ಕೆಲಸವನ್ನು ಮಾಡುತ್ತಾನೆ. ಕೃಷಿ ಕ್ಷೇತ್ರದಲ್ಲಿನ ಈ ಹುದ್ದೆಗೆ ಸೇರಿದ ವ್ಯಕ್ತಿಯು ಮಾನವ ಸಂಪನ್ಮೂಲ ನಿರ್ವಹಣೆ, ಮೆಟೀರಿಯಲ್ ನಿರ್ವಹಣೆ , ಹಣಕಾಸು ನಿರ್ವಹಣೆ ಮತ್ತು ಯೋಜನೆಗಳನ್ನು ರೂಪಿಸುವ ಕೆಲಸವನ್ನು ಮಾಡುತ್ತಾನೆ. ಒಟ್ಟಾರೆ ಸಂಸ್ಥೆಯ ನಿರ್ವಹಣೆಯಲ್ಲಿ ಹೆಚ್ಚಿನದಾಗಿ ತಾನೂ ಭಾಗಿಯಾಗುತ್ತಾನೆ.

5. ವೈಲ್ಡ್‌ಲೈಫ್ ಕನ್ಸರ್ವೇಷನಿಸ್ಟ್:

ಸಂಪತ್ತು ಇದೆ ಎಂದ ಮಾತ್ರಕ್ಕೆ ತನ್ನಷ್ಟಕ್ಕೆ ತಾನೇ ತನ್ನನ್ನು ಕಾಯ್ದುಕೊಳ್ಳುವುದಿಲ್ಲ ಬದಲಾಗಿ ವನ್ಯಜೀವಿ ಸಂರಕ್ಷಣಾಧಿಕಾರಿ ಆ ಕೆಲಸವನ್ನು ನಿರ್ವಹಿಸುವ ಜವಾಬ್ದಾರಿಯನ್ನುತೆಗೆದುಕೊಳ್ಳುತ್ತಾನೆ. ಜೀವಿಗಳನ್ನು ಸಂರಕ್ಷಿಸುವುದು, ಅದರ ವೈವಿಧ್ಯತೆ ಮತ್ತು ಅದರ ಸಂಪನ್ಮೂಲಗಳನ್ನು ಕಾಪಾಡಿಕೊಂಡು ಹೋಗುವ ಕೆಲಸವನ್ನು ನಿರ್ವಹಿಸಲು ನುರಿತ ವನ್ಯಜೀವಿ ಸಂರಕ್ಷಣಾಧಿಕಾರಿಗಳು ಅಗತ್ಯವಾಗಿರುತ್ತಾರೆ. ಆತ ವನ್ಯಜೀವಿ ಪರಿಶೀಲನೆ, ಪರಿಸರ ವಿಜ್ಞಾನ, ವಿವಿಧ ರೀತಿಯ ಪ್ರಾಣಿಗಳು ಮತ್ತು ಸಸ್ಯಗಳು ಮತ್ತು ವಿಜ್ಞಾನ ಇತ್ಯಾದಿ ಅವುಗಳಲ್ಲಿ ಪರಿಣಿತರಾಗಿರುತ್ತಾರೆ . ಸಂರಕ್ಷಣಾಧಿಕಾರಿಗಳು ವನ್ಯಜೀವಿ ಸಂರಕ್ಷಣೆಯಲ್ಲಿ ಕಾರ್ಮಿಕರನ್ನು ಒಳಗೊಂಡಿರುವ ತಂಡವನ್ನು ಮುನ್ನಡೆಸುವುದು ಆತನ ಕೆಲಸವಾಗಿರುತ್ತದೆ.

6. ಮೀನುಗಾರಿಕೆ / ಫಿಶ್ ಹ್ಯಾಚರ್ ಮ್ಯಾನೇಜರ್

ಮೀನುಗಾರಿಕೆ / ಫಿಶ್ ಹ್ಯಾಚರ್ ಮ್ಯಾನೇಜರ್ ಹುದ್ದೆಗಳಿಗೆ ಸೇರಿದ ಅಭ್ಯರ್ಥಿಗಳು ಮೀನನ್ನು ಸಂತಾನೋತ್ಪತ್ತಿ ಮಾಡುವುದು, ಮೊಟ್ಟೆ ಕೇಂದ್ರವನ್ನು ನಿರ್ವಹಿಸುವುದು, ಮೀನುಗಳನ್ನು ಕೊಯ್ಲು ಮಾಡುವುದು ಆತನ ಜವಾಬ್ದಾರಿಯಾಗಿರುತ್ತದೆ. ಈ ವೃತ್ತಿಯಲ್ಲಿ ಬೆಳೆಯಲು ವಿಭಿನ್ನ ರೀತಿಯ ಮೀನು,ತಳಿ ತಂತ್ರಗಳು , ಮೊಟ್ಟೆ ಕೇಂದ್ರ ನಿರ್ವಹಣೆ, ಮೀನು ಉತ್ಪನ್ನಗಳು ಸಾಮಾನ್ಯ ರೋಗಗಳು ಮತ್ತು ತಡೆಗಟ್ಟು ವ ಕ್ರಮಗಳು ಇತ್ಯಾದಿ ಗಳನ್ನು ಗೊತ್ತಿರಬೇಕು ಹಾಗಿದ್ದಲ್ಲಿ ಉತ್ತಮ ರೀತಿಯ ನಿರ್ವಹಣೆಯ ಕೆಲಸದಲ್ಲಿ ತೊಡಗಿಕೊಳ್ಳಬಹುದು.

7. ವೆಟರಿನರಿಯನ್

ಸಾಮಾನ್ಯವಾಗಿ ವೆಟರಿನರಿ ಸೈನ್ಸ್ ನಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀಡುವ ವೈದ್ಯಕೀಯ ಚಿಕಿತ್ಸೆಯ ಬಗೆಗೆ ಅಧ್ಯಯನ ನಡೆಸಲಾಗುವುದು. ಇಲ್ಲಿ ವಿದ್ಯಾರ್ಥಿಗಳು ಪ್ರಾಣಿ ಅಥವಾ ಪಕ್ಷಿಗಳನ್ನು ಯಾವ ರೀತಿ ಪೋಷಿಸಬೇಕು, ಯಾವುದಾದರೂ ಆರೋಗ್ಯ ಸಮಸ್ಯೆ ಉಂಟಾದಾಗ ಹೇಗೆ ಚಿಕಿತ್ಸೆಯನ್ನು ನೀಡಬೇಕು? ತುಂಬಾ ಅಪಾಯಕಾರಿ ಅನಾರೋಗ್ಯ ಉಂಟಾದಾಗ ಶಸ್ತ್ರಚಿಕಿತ್ಸೆಗಳನ್ನು ಹೇಗೆ ನೀಡಬೇಕು ಎನ್ನುವ ಕುರಿತು ಅಧ್ಯಯನ ಮಾಡಲಾಗುತ್ತದೆ. ವೆಟರಿನರಿ ಸೈನ್ಸ್ ಓದಿದ ಅಭ್ಯರ್ಥಿಯು ವೆಟರಿನರಿಯನ್ ಆಗಿ ಪ್ರಾಣಿ ಮತ್ತು ಪಕ್ಷಿಗಳನ್ನು ಪೋಷಿಸುವ ಮತ್ತು ಚಿಕಿತ್ಸೆ ನೀಡುವ ಹಾಗೂ ಪರಿಸರ ಸಮತೋಲನವನ್ನು ತೂಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ.

8. ಬಯೋಲಜಿಸ್ಟ್

ಬಯೋಲಜಿ ಎನ್ನುವುದು ಜೀವಿಯ ಅಧ್ಯಯನವನ್ನು ನಡೆಸುವ ಒಂದು ವಿಜ್ಞಾನದ ಶಾಖೆಯಾಗಿದೆ. ಜೀವಶಾಸ್ತ್ರಜ್ಞರು ಜೀವಶಾಸ್ತ್ರ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದ ವಿಜ್ಞಾನಿಗಳು. ಇದೊಂದು ವಿಶಾಲವಾದ ಕ್ಷೇತ್ರವಾಗಿದ್ದು ಇಲ್ಲಿ ವಿಭಿನ್ನ ಪ್ರದೇಶಗಳ ವಿಶೇಷತೆಗಳನ್ನು ಒಳಗೊಂಡಿದೆ ಅವುಗಳೆಂದರೆ ಕೃಷಿ ಮತ್ತು ಸುತ್ತಮುತ್ತಲಿನ ಪ್ರಾಣಿಗಳ ಜೀವಶಾಸ್ತ್ರ, ಸಸ್ಯ ಜೀವಶಾಸ್ತ್ರ, ಮೀನುಗಾರಿಕೆ ಜೀವಶಾಸ್ತ್ರ ಇತ್ಯಾದಿ ವಿಷಯಗಳನ್ನು ಒಳಗೊಂಡಿರುತ್ತದೆ. ಜೀವಶಾಸ್ತ್ರಜ್ಞರು ಇವುಗಳ ಅಧ್ಯಯನದಲ್ಲಿ ಕೈಗೊಂಡು ಪರಿಸರದ ಕಾಳಜಿಯುಳ್ಳ ವಿಜ್ಞಾನಿಯಾಗುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
Find out all about the exciting career opportunities that Agriculture in India.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X