ನೀವು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದೀರಾ? ಹಾಗಿದ್ದರೆ ಈ ಕೋರ್ಸ್‌ಗಳನ್ನು ಮಾಡಿ

ಇತ್ತೀಚೆಗಷ್ಟೇ ದ್ವಿತೀಯ ಪಿಯುಸಿ ಪೂರಕ ಪರೀಕ್ಷಾ ಫಲಿತಾಂಶ ಹೊರಬಿದ್ದಿದೆ. ಈ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳು ಇದೇ ಅಂತ್ಯ ಎಂದು ಭಾವಿಸುತ್ತಾರೆ. ಇನ್ನು ವಿದ್ಯಾಭ್ಯಾಸವನ್ನು ಮುಂದುವರಿಸಲು ನನಗೆ ಅರ್ಹತೆ ಇಲ್ಲ. ಹಾಗೆ ನನಗೆ ಓದು ತಲೆಗೆ ಹತ್ತುವುದಿಲ್ಲ. ನನ್ನ ಭವಿಷ್ಯ ನಿಂತ ನೀರಂತೆ ಎಂದು ನಕರಾತ್ಮಕವಾಗಿ ಚಿಂತಿಸತೊಡಗುತ್ತಾರೆ.ಆದರೆ ಆ ರೀತಿಯಾಗಿ ಯಾವುದೇ ಬೇಸರ ತಂದುಕೊಳ್ಳುವ ಅಗತ್ಯವಿಲ್ಲ. ಹಲವು ಪ್ರಯತ್ನಗಳ ನಡುವೆ ಒಂದು ಸೋಲು ಇದ್ದಾಗ ಮಾತ್ರ ಸಿಗುವ ಯಶಸ್ಸಿಗೆ ಬೆಲೆ ಎನ್ನುವುದು ತಿಳಿದೇ ಇದೆ.

ದ್ವಿತೀಯ ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸ್‌ಗಳನ್ನು  ಮಾಡಿ

ಹಾಗಾಗಿ ವಿದ್ಯಾರ್ಥಿಗಳು ಪುನಃ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಬಹುದು ಅಥವಾ ಕೆಲವು ಕೋರ್ಸ್‌ಗಳನ್ನು ಮಾಡಬಹುದು. ಇಂದಿನ ಲೇಖನದಲ್ಲಿ 12 ನೇ ತರಗತಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ನಾವು ಕೆಲವು ಉತ್ತಮ ಕೋರ್ಸ್‌ಗಳ ಮಾಹಿತಿಯನ್ನು ನೀಡಲಿದ್ದೇವೆ. ಈ ಕೋರ್ಸ್‌ಗಳನ್ನು ಮಾಡಿ ನೀವು ಉತ್ತಮ ವೃತ್ತಿಜೀವನವನ್ನು ಹೊಂದಬಹುದು. ಆ ಕೋರ್ಸ್‌ಗಳು ಯಾವುವು ಅಂತೀರಾ? ಮುಂದೆ ಓದಿ.

ಪಿಯುಸಿ ಅಥವಾ ಪದವಿಯ ನಂತರ ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌ ಮಾಡಿದರೆ ನಿಮಗೆ ಕೆಲಸ ಗ್ಯಾರಂಟಿಪಿಯುಸಿ ಅಥವಾ ಪದವಿಯ ನಂತರ ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌ ಮಾಡಿದರೆ ನಿಮಗೆ ಕೆಲಸ ಗ್ಯಾರಂಟಿ

ಉತ್ತಮ ಡಿಪ್ಲೋಮಾ ಕೋರ್ಸ್‌ಗಳು:

ನೀವು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅನುತ್ತೀರ್ಣಗೊಂಡಿದ್ದರೆ ನಿಮ್ಮ 10 ತರಗತಿ ಅಂಕಗಳು ಮತ್ತು ಪ್ರಮಾಣ ಪತ್ರವನ್ನು ಬಳಸಿ ಡಿಪ್ಲೊಮಾ ಕೋರ್ಸ್‌ಗಳಿಗೆ ಸೇರಿಕೊಳ್ಳಬಹುದು.

ಯಾವೆಲ್ಲಾ ಡಿಪ್ಲೋಮ ಕೋರ್ಸ್‌ಗಳಿವೆ:

ಯಾಂತ್ರಿಕ ಎಂಜಿನಿಯರಿಂಗ್
ಎಲೆಕ್ಟ್ರಿಕಲ್ ಎಂಜಿನಿಯರಿಂಗ್
ಸಿವಿಲ್ ಎಂಜಿನಿಯರಿಂಗ್
ಕಂಪ್ಯೂಟರ್ ಎಂಜಿನಿಯರಿಂಗ್

ನೀವು ಮಾಡಬಹುದಾದ ಹಲವು ಡಿಪ್ಲೊಮಾ ಕೋರ್ಸ್‌ಗಳಲ್ಲಿ ಇವು ಕೆಲವು. 10 ನೇ ತರಗತಿಯ ನಂತರ ನಿಮ್ಮ ಅಂಕಗಳ ಆಧಾರದ ಮೇಲೆ ಈ ಕೋರ್ಸ್‌ಗಳನ್ನು ಮಾಡಬಹುದು.

ಸಮೂಹ ಸಂವಹನ ಅಧ್ಯಯನದಿಂದ ಎಷ್ಟೆಲ್ಲಾ ಉದ್ಯೋಗಾವಕಾಶವಿದೆ ಅನ್ನೋದು ನಿಮಗೆ ಗೊತ್ತಾ?ಸಮೂಹ ಸಂವಹನ ಅಧ್ಯಯನದಿಂದ ಎಷ್ಟೆಲ್ಲಾ ಉದ್ಯೋಗಾವಕಾಶವಿದೆ ಅನ್ನೋದು ನಿಮಗೆ ಗೊತ್ತಾ?

ಕೆಲವು ಹೊಸ ಡಿಪ್ಲೋಮಾ ಕೋರ್ಸ್‌ಗಳು:

ದ್ವಿತೀಯ ಪಿಯುಸಿ ಅನುತ್ತೀರ್ಣರಾದ ಅಭ್ಯರ್ಥಿಗಳಿಗಾಗಿ ತುಲನಾತ್ಮಕವಾಗಿ ಹೊಸದಾದ ಮತ್ತು ಉತ್ತಮ ಉದ್ಯೋಗ ಮತ್ತು ವೃತ್ತಿ ಅವಕಾಶಗಳನ್ನು ಹೊಂದಿರುವ ಕೆಲವು ಕೋರ್ಸ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಅವುಗಳೆಂದರೆ:

ಸಾಗರ ಕ್ಷೇತ್ರದಲ್ಲಿ ಡಿಪ್ಲೋಮಾ

ಈ ಕ್ಷೇತ್ರದಲ್ಲಿ ವಿಭಿನ್ನ ಡಿಪ್ಲೋಮಾ ಕೋರ್ಸ್‌ಗಳಿವೆ. ಮೆರೈನ್ ಎಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (10 ನೇ ತರಗತಿ ಅಂಕಗಳ ಆಧಾರದ ಮೇಲೆ), ಸಾಗರ ತಂತ್ರಜ್ಞಾನದಲ್ಲಿ ಡಿಪ್ಲೊಮಾ, ವೆಲ್ಡರ್, ವೈರ್ ಮ್ಯಾನ್, ನಾವಿಕ ಇತ್ಯಾದಿ ಡಿಪ್ಲೊಮಾ ಕೋರ್ಸ್‌ಗಳು.

ಈ ಕೋರ್ಸ್‌ಗಳನ್ನು 10 ನೇ ತರಗತಿಯಲ್ಲಿ ಪಾಸ್ ಆದ ವಿದ್ಯಾರ್ಥಿಗಳು ಮಾಡಬಹುದು ಮತ್ತು 12ನೇ ತರಗತಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಕೂಡ 10ನೇ ತರಗತಿಯ ಅಂಕಗಳ ಆಧಾರದ ಮೇಲೆ ಅಧ್ಯಯನ ಮಾಡಬಹುದು.

ಈ ಕೋರ್ಸ್‌ಗಳನ್ನು ಮಾಡಿದರೆ ನಿಮಗೆ ಉದ್ಯೋಗಾವಕಾಶಗಳು ಕೂಡ ಹೇರಳವಾಗಿವೆ ಮತ್ತು ಉತ್ತಮ ಸಂಬಳ ಕೂಡ ಪಡೆಯಬಹುದು.ಆದರೆ ನೀವು ಈ ಕೋರ್ಸ್‌ಗೆ ಸೇರುವ ಮೊದಲು ಆ ಸಂಸ್ಥೆಯು ಸರ್ಕಾರದಿಂದ ಅನುಮೋದನೆ ಪಡೆದಿದೆಯೇ ಎಂದು ಪರಿಶೀಲಿಸಿ. ಅಧ್ಯಾಪಕರ ಗುಣಮಟ್ಟ, ಮೂಲಸೌಕರ್ಯ ಮತ್ತು ಒದಗಿಸಲಾದ ಸೌಲಭ್ಯಗಳು, ಅವರು ಮಾನ್ಯತೆ ಪಡೆದ ಪಠ್ಯಕ್ರಮ ಮತ್ತು ಪಠ್ಯಕ್ರಮವನ್ನು ಅನುಸರಿಸುತ್ತಾರೆಯೇ ಎಂಬ ಅಂಶಗಳನ್ನು ಸಹ ಪರಿಶೀಲಿಸಿ. ಈ ವಿಷಯಗಳನ್ನು ಪರಿಶೀಲಿಸಿದ ನಂತರ ಮಾತ್ರ ಕೋರ್ಸ್‌ಗೆ ಸೇರಿಕೊಳ್ಳಿ.

ವಿವಿಧ ಕಂಪ್ಯೂಟರ್ ಕೋರ್ಸ್‌ಗಳಲ್ಲಿ ಡಿಪ್ಲೋಮಾ:

ನಿಮಗೆ ಕಂಪ್ಯೂಟರ್ ಕಲಿಕೆಯ ಬಗೆಗೆ ಆಸಕ್ತಿ ಇದ್ದಲ್ಲಿ ಪ್ರೋಗ್ರಾಮಿಂಗ್, ಗ್ರಾಫಿಕ್ಸ್ ವಿನ್ಯಾಸ, ವೆಬ್ ವಿನ್ಯಾಸ, ಅಪ್ಲಿಕೇಶನ್ ಅಭಿವೃದ್ಧಿ, ನೈತಿಕ ಹ್ಯಾಕಿಂಗ್, ಡಿಜಿಟಲ್ ಮಾರ್ಕೆಟಿಂಗ್ ಇತ್ಯಾದಿಗಳನ್ನು ವಿಷಯಗಳನ್ನು ಆಯ್ಕೆ ಮಾಡಿಕೊಂಡು ಡಿಪ್ಲೋಮಾ ಕಂಪ್ಯೂಟರ್‌ ಕೋರ್ಸ್‌ಗಳನ್ನು ಮಾಡಬಹುದು.

ಅನೇಕ ಸಂಸ್ಥೆಗಳು ಈ ವಿಷಯಗಳಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ನೀಡುತ್ತಿವೆ. ಸಾಮಾನ್ಯವಾಗಿ ಈ ಕೋರ್ಸ್‌ಗಳು 6 ತಿಂಗಳಿನಿಂದ 1 ವರ್ಷ ಅವಧಿಯದ್ದಾಗಿರುತ್ತವೆ. ಕೋರ್ಸ್ ಮುಗಿದ ನಂತರ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೇ ಉತ್ತಮ ಸಂಸ್ಥೆಗಳು ಉತ್ತಮ ಕಂಪನಿಗಳಲ್ಲಿ ಉದ್ಯೋಗವನ್ನು ಸಹ ಒದಗಿಸುತ್ತವೆ.

ಈ ಕೋರ್ಸ್‌ಗಳನ್ನು ಮಾಡುವುದರಿಂದ ಆಗುವ ಪ್ರಯೋಜನವೆಂದರೆ ನೀವು ಸ್ವಂತ ವ್ಯವಹಾರವನ್ನು ಕೂಡ ಪ್ರಾರಂಭಿಸಬಹುದು.

ಆದರೆ ಮೇಲೆ ತಿಳಿಸಿದ ಕೋರ್ಸ್‌ಗಳನ್ನು ಮಾಡಲು ನೀವು ಯಾವುದೇ ಸಂಸ್ಥೆಗೆ ಸೇರುವ ಮೊದಲು 'ಮಾನ್ಯತೆ ಪಡೆದ' ಸಂಸ್ಥೆಯನ್ನು ಆಯ್ಕೆ ಮಾಡುವುದು ಅವಶ್ಯಕ. ಇತ್ತೀಚಿನ ದಿನಗಳಲ್ಲಿ ಭಾರತದಾದ್ಯಂತ ಅನೇಕ 'ನಕಲಿ' ಮತ್ತು ಕೆಳಮಟ್ಟದ ಗುಣಮಟ್ಟವುಳ್ಳ ಸಂಸ್ಥೆಗಳು ಕೂಡ ತರಬೇತಿಯನ್ನು ನೀಡುತ್ತಿವೆ ಹಾಗಾಗಿ ಈ ಬಗೆಗೆ ಎಚ್ಚರ ವಹಿಸಿ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಅಂತ ಆಸೆ ಇದೆಯಾ? ಹಾಗಿದ್ರೆ ಇದನ್ನು ಓದಿಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಬೇಕು ಅಂತ ಆಸೆ ಇದೆಯಾ? ಹಾಗಿದ್ರೆ ಇದನ್ನು ಓದಿ

ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಕೋರ್ಸ್‌ಗಳು :

ದ್ವಿತೀಯ ಪಿಯುಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಈ ಕೋರ್ಸ್‌ಗಳನ್ನು ಮಾಡುವುದನ್ನು ನಾವು ಸಾಮಾನ್ಯವಾಗಿ ನೋಡುತ್ತಲೇ ಇದ್ದೇವೆ.ಈ ಕೋರ್ಸ್‌ಗಳನ್ನು 1 ರಿಂದ 2 ವರ್ಷಗಳ ಅವಧಿಯಲ್ಲಿ ಅಧ್ಯಯನ ಮಾಡಬಹುದು. ಕೋರ್ಸ್‌ ಮುಗಿದ ಬಳಿಕ ವಿದ್ಯಾರ್ಥಿಗಳು ಪ್ರಮಾಣಪತ್ರವನ್ನು ಪಡೆದುಕೊಳ್ಳಬಹುದು.ನಂತರ ಕೆಲವು ಸಂಸ್ಥೆಗಳು ಉದ್ಯೋಗ ಪಡೆಯುವ ಅವಕಾಶವನ್ನು ಒದಗಿಸುತ್ತವೆ.

ಕೈಗಾರಿಕಾ ವಿಷಯಗಳಲ್ಲಿ ಡಿಪ್ಲೊಮಾ ಕೋರ್ಸ್‌ಗಳು:

ಭಾರತದಲ್ಲಿ ಕೈಗಾರಿಕಾ ಕ್ಷೇತ್ರವು ಅತ್ಯಂತ ವೇಗದಲ್ಲಿ ಬೆಳವಣಿಗೆಯನ್ನು ಕಾಣುತ್ತಿದೆ. ಕೈಗಾರಿಕೋದ್ಯಮ ವಿಸ್ತಾರವಾಗಿ ಬೆಳೆಯುತ್ತಾ ಹೋದಂತೆ ನುರಿತ ಕಾರ್ಮಿಕರ ಬೇಡಿಯೂ ಹೆಚ್ಚುತ್ತಿದೆ. ಇಂದಿನ ದಿನಗಳಲ್ಲಿ ಎಲೆಕ್ಟ್ರೀಷಿಯನ್‌ಗಳು, ವೆಲ್ಡರ್‌ಗಳು, ಫಿಟ್ಟರ್‌ಗಳು, ಅಗ್ನಿಶಾಮಕ ಮತ್ತು ಸುರಕ್ಷತಾ ಸಿಬ್ಬಂದಿ ಮುಂತಾದ ನುರಿತ ಕೆಲಸಗಾರರಿಗೆ ಭಾರೀ ಬೇಡಿಕೆಯಿದೆ.

ಕೈಗಾರಿಕೋದ್ಯಮಕ್ಕೆ ಪ್ರವೇಶಿಸಲು ಅಭ್ಯರ್ಥಿಗಳು ಡಿಪ್ಲೊಮಾ ಕೋರ್ಸ್ ಮತ್ತು ಐಟಿಐ ಕೋರ್ಸ್‌ಗಳನ್ನು ಮಾಡಬಹುದು. ಈ ಕೋರ್ಸ್‌ಗಳನ್ನು ನೀಡಲು ಕೆಲವು ಉತ್ತಮ ಸಂಸ್ಥೆಗಳಿವೆ ಅವರೇ ನಿಮ್ಮನ್ನು ಆಯ್ಕೆ ಮಾಡಿಕೊಂಡು ತರಬೇತಿ ನೀಡಿ ಉದ್ಯೋಗವನ್ನು ಕೂಡ ಒದಗಿಸುತ್ತಾರೆ.

ಅಗ್ನಿಶಾಮಕ ಮತ್ತು ಸುರಕ್ಷತೆ, ಎಲೆಕ್ಟ್ರಿಷಿಯನ್ ಕೋರ್ಸ್, ವೆಲ್ಡಿಂಗ್ ಮುಂತಾದ ಕೋರ್ಸ್‌ಗಳನ್ನು ನೀಡುವ ಅನೇಕ ಸಂಸ್ಥೆಗಳು ಇವೆ. ವೃತ್ತಿಜೀವನದ ಅವಕಾಶ ಸೀಮಿತವಾಗಿದೆ ಮತ್ತು ವೇತನ ಕಡಿಮೆ ಇರುತ್ತದೆ ಎಂದು ಆಲಸ್ಯ ಮಾಡಬೇಡಿ. ನುರಿತ ಕೆಲಸಗಾರರು ಉತ್ತಮ ವೇತವನ್ನು ಪಡೆಯಬಹುದು.

ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಹೇಗಿರಬೇಕು? ಇಲ್ಲಿದೆ ಟಿಪ್ಸ್

For Quick Alerts
ALLOW NOTIFICATIONS  
For Daily Alerts

English summary
Here are the list of courses for second puc failed students. Check it out
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X