List Of Documents Required For Govt Job : ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಮುಖ್ಯ...

ನೀವು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಾದರೆ ನೀವು ಪ್ರಮುಖ ಕೆಲವು ಪ್ರಮುಖ ದಾಖಲೆಗಳನ್ನು ಹೊಂದಿರಲೇಬೇಕು. ಹೌದು ಯಾವುದೇ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸುವ ಮೊದಲು ಮುಖ್ಯವಾಗಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಒಂದು ಸರ್ಕಾರಿ ಕಚೇರಿಯಲ್ಲಿ ಉದ್ಯೋಗಕ್ಕೆ ನೇಮಕಾತಿ ಮಾಡುವ ಪ್ರಕ್ರಿಯೆಯಲ್ಲಿ ಸರ್ಕಾರಿ ಸಂಸ್ಥೆಗೆ ಸೇರುವ ಮೊದಲು ಕೆಲವು ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಅಗತ್ಯ ದಾಖಲೆಗಳನ್ನು ಮೂಲ ಮತ್ತು ಫೋಟೋಕಾಪಿಯಲ್ಲಿ ಸಲ್ಲಿಸಬೇಕಿರುತ್ತದೆ. ಮೂಲ ದಾಖಲೆಗಳ ಪರಿಶೀಲನೆಯ ನಂತರ ಅವುಗಳನ್ನು ಹಿಂದಿರುಗಿಸಲಾಗುತ್ತದೆ. ಹಾಗಾದರೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಯಾವೆಲ್ಲಾ ದಾಖಲೆಗಳನ್ನು ಹೊಂದಿರಬೇಕು ಎಂಬುದರ ಪಟ್ಟಿ ಇಲ್ಲಿದೆ.

ಸರ್ಕಾರಿ ಉದ್ಯೋಗಕ್ಕೆ ಸಲ್ಲಿಸುತ್ತಿದ್ದೀರಾ ? ಹಾಗಾದ್ರೆ ಈ ದಾಖಲೆಗಳು ಕಡ್ಡಾಯ

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಲ್ಲಿಸಬೇಕಾದ ಅಗತ್ಯ ದಾಖಲೆಗಳ ಪಟ್ಟಿ :

ID ಪುರಾವೆ:

ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮುಖ್ಯವಾಗಿ ತಮ್ಮ ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್ ಇತ್ಯಾದಿ ಐಡಿ ಪುರಾವೆಗಳನ್ನು ಹೊಂದಿರಬೇಕು.

ವಸತಿ ಪುರಾವೆ:

ನೀವು ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸುತ್ತಿದ್ದರೆ ನೀವು ಈ ದೇಶದ ಪ್ರಜೆ ಎಂದು ತೋರಿಸುವ ಮಾನ್ಯವಾದ ದಾಖಲೆಯನ್ನು ಸಲ್ಲಿಸಬೇಕು. ಇದಕ್ಕಾಗಿ ನಿಮ್ಮ ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಪಡಿತರ ಚೀಟಿ, ಬೋನಾಫೈಟ್ ಪ್ರಮಾಣಪತ್ರ, ವಿದ್ಯುತ್ ಬಿಲ್ ಇವೆಲ್ಲವೂ ವಸತಿ ಪುರಾವೆಗಳಾಗಿದ್ದು, ಇವುಗಳನ್ನು ಅಭ್ಯರ್ಥಿಗಳು ಹೊಂದಿರಬೇಕು.

ವರ್ಗ/ ಜಾತಿ ಪ್ರಮಾಣಪತ್ರಗಳು:

ಒಬಿಸಿ/ಪರಿಶಿಷ್ಟ ಜಾತಿ/ಪರಿ‍ಶಿಷ್ಟ ಪಂಗಡದ ಅಭ್ಯರ್ಥಿಗಳು ಸೂಕ್ತ ಪ್ರಾಧಿಕಾರದಿಂದ (ಕೇಂದ್ರ ಸರ್ಕಾರದ ಸ್ವರೂಪದ ಪ್ರಕಾರ) ನೀಡಿರುವ ಜಾತಿ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಶಿಕ್ಷಣ ಪ್ರಮಾಣಪತ್ರ:

ಪ್ರತಿಯೊಂದು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಶೈಕ್ಷಣಿಕ ಪ್ರಮಾಣಪತ್ರಗಳು ಮುಖ್ಯವಾಗಿರುತ್ತವೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಹುದ್ದೆಗಳ ಮೇಲೆ ಶೈಕ್ಷಣಿಕ ಪ್ರಮಾಣಪತ್ರವು ಅವಲಂಬಿಸಿರುತ್ತದೆ. ಉದ್ಯೋಗಕ್ಕೆ ಕನಿಷ್ಠ ಅವಶ್ಯಕತೆ 10 ನೇ ತರಗತಿ (ಮೆಟ್ರಿಕ್ / ಎಸ್‌ಎಸ್‌ಸಿ) ಆಗಿದ್ದರೆ ನೀವು 10 ನೇ ತರಗತಿ ಪ್ರಮಾಣಪತ್ರವನ್ನು ನೀಡಬೇಕು. ಹುದ್ದೆಗೆ ಪೋಸ್ಟ್ 12 ನೇ ತರಗತಿ (HSC) ಆಗಿದ್ದರೆ ಅಭ್ಯರ್ಥಿ 12 ನೇ ಉತ್ತೀರ್ಣ ಪ್ರಮಾಣಪತ್ರವನ್ನು ಒದಗಿಸಬೇಕು. ಆದ್ದರಿಂದ ಅಭ್ಯರ್ಥಿಗಳು ಪ್ರೌಢಶಾಲೆಯ ನಂತರ ಪ್ರತಿ ವರ್ಷದ ಅಂಕ ಪಟ್ಟಿಯನ್ನು ಹೊಂದಿರಬೇಕು.

ವಯಸ್ಸಿನ ಪುರಾವೆ:

ವಯಸ್ಸಿನ ಪುರಾವೆ ಡಾಕ್ಯುಮೆಂಟ್ ಅಥವಾ ಜನ್ಮ ಪ್ರಮಾಣಪತ್ರವು ಮತ್ತೊಂದು ಪ್ರಮುಖವಾದ ಅಗತ್ಯ ದಾಖಲೆ. ನಿರ್ದಿಷ್ಟ ವಯಸ್ಸಿನವರಿಗೆ ಉದ್ಯೋಗಗಳಿದ್ದಲ್ಲಿ ವಯಸ್ಸಿನ ಪುರಾವೆ ಅಗತ್ಯವಾಗಿರುತ್ತದೆ. ನಿಮ್ಮ ಜನ್ಮ ಪ್ರಮಾಣಪತ್ರವನ್ನು ನೀವು ಹೊಂದಿಲ್ಲದಿದ್ದರೆ ನಿಮ್ಮ 10 ನೇ ತರಗತಿಯ ಶಾಲೆ ಬಿಡುವ ಪ್ರಮಾಣಪತ್ರ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಈ ಎಲ್ಲಾ ದಾಖಲೆಗಳನ್ನು ಸಹ ನೀವು ಸಲ್ಲಿಸಬಹುದು.

ಅಂಗವೈಕಲ್ಯ ಪ್ರಮಾಣಪತ್ರ:

ಅಭ್ಯರ್ಥಿಗಳು ವಿಕಲಚೇತನರಾಗಿದ್ದರೆ ಜಿಲ್ಲಾ ವೈದ್ಯಕೀಯ ಮಂಡಳಿಯಿಂದ ನೀಡಲಾದ ನಿಗದಿತ ನಮೂನೆಯಲ್ಲಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಮಾಜಿ ಸೈನಿಕರು:

ಒಂದು ವೇಳೆ ಅಭ್ಯರ್ಥಿಯು ಮಾಜಿ ಸೈನಿಕರಾಗಿದ್ದಲ್ಲಿ ಪಿಂಚಣಿ ಪಾವತಿ ಆದೇಶ ಮತ್ತು ಕೊನೆಯ ಶ್ರೇಣಿಯ ಪುರಾವೆಯೊಂದಿಗೆ ಬಿಡುಗಡೆ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಕ್ರೀಡಾ ಕೋಟಾ:

ಅಭ್ಯರ್ಥಿಯು ಕ್ರೀಡಾ ವಿಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತಿದ್ದರೆ ಅಭ್ಯರ್ಥಿಯು ಕ್ರೀಡಾ ಕೋಟಾ ಪ್ರಮಾಣಪತ್ರವನ್ನು ಸಲ್ಲಿಸಬೇಕು.

ಫೋಟೋಗಳು:

ಪ್ರತಿ ಉದ್ಯೋಗ ಅರ್ಜಿ ಸಲ್ಲಿಸುವಾಗ ಮತ್ತು ತದನಂತರದ ಪ್ರಕ್ರಿಯೆಗಳಲ್ಲಿ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋಗಳು ಅಗತ್ಯ. ಆದ್ದರಿಂದ ಅಭ್ಯರ್ಥಿಗಳು ಯಾವಾಗಲೂ ತಮ್ಮ ಬಳಿ ಹೆಚ್ಚುವರಿ ಫೋಟೋಗಳನ್ನು ಇಟ್ಟುಕೊಳ್ಳಬೇಕು.

ಇತರೆ ದಾಖಲೆಗಳು:

ಕೆಲವು ವಿಶೇಷ ಸಂದರ್ಭಗಳಲ್ಲಿ ನಿವಾಸ ಪ್ರಮಾಣಪತ್ರ ಮತ್ತು ವೈದ್ಯಕೀಯ ಪರೀಕ್ಷೆಯ ಪ್ರಮಾಣಪತ್ರಗಳ ಸ್ಕ್ಯಾನ್ ಮಾಡಿದ ಸಹಿ ದಾಖಲೆಗಳ ಅಗತ್ಯವಿರುತ್ತದೆ.

ನೀವು ಯಾವಾಗಲೇ ಆದರೂ ಉದ್ಯೋಗ ಸಂದರ್ಶನಕ್ಕೆ ಹೋಗುವಾಗ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹೋಗುವುದರ ಜೊತೆಗೆ ಪ್ರತಿ ದಾಖಲೆಗಳ ನಕಲು ಪ್ರತಿಗಳನ್ನು ನೀವು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ.

For Quick Alerts
ALLOW NOTIFICATIONS  
For Daily Alerts

English summary
When you are applying for government job, you need submit documents. Which are they ? Here is the list in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X