Important Days In January 2022 : ಜನವರಿಯಲ್ಲಿ ಬರುವ ಪ್ರಮುಖ ದಿನ ಮತ್ತು ದಿನಾಂಕಗಳ ಪಟ್ಟಿ

ವರ್ಷದ ಆರಂಭದ ತಿಂಗಳು ಜನವರಿ. ಈ ತಿಂಗಳಿನಲ್ಲಿ ಒಟ್ಟು 31 ದಿನಗಳಿವೆ. ಜನವರಿಯಲ್ಲಿ ವಿವಿಧ ಹಬ್ಬಗಳು, ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು ಮತ್ತು ದಿನಾಂಕಗಳಿವೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಹೆಚ್ಚಿನ ಪರೀಕ್ಷೆಗಳಲ್ಲಿ ಕೇಳಲಾಗುವ ಪ್ರಮುಖ ದಿನಗಳು ಯಾವುವು ಮತ್ತು ದಿನಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿಗಳನ್ನು ಈ ಬರಹದಲ್ಲಿ ನೀಡಲಾಗಿದೆ.

 
ಜನವರಿ ತಿಂಗಳಿನಲ್ಲಿ ಬರುವ ಈ ಪ್ರಮುಖ ದಿನಗಳು ಮತ್ತು ದಿನಾಂಕಗಳು ನಿಮಗೆ ತಿಳಿದಿರಲಿ

ಸಾಮಾನ್ಯವಾಗಿ ಸಿಬ್ಬಂದಿನ ನೇಮಕಾತಿ ಆಯೋಗ, ಕೆಪಿಎಸ್ಸಿ, ಬ್ಯಾಂಕಿಂಗ್ ಅಥವಾ ಯಾವುದೇ ಸರ್ಕಾರಿ ಪರೀಕ್ಷೆಯಾಗಿರಲಿ ಸಾಮಾನ್ಯ ಜ್ಞಾನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವಿವಿಧ ವಿಷಯಗಳಿಗೆ ವ್ಯಾಪಕ ಶ್ರೇಣಿ ಮತ್ತು ಮಾಹಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ವರ್ಷದ ಪ್ರಮುಖ ದಿನಗಳು ಮತ್ತು ದಿನಾಂಕಗಳನ್ನು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗುತ್ತದೆ ಎಂದು ನೀವು ತಿಳಿದಿರುತ್ತೀರಿ. ಹಾಗಾಗಿ ನಾವಿಲ್ಲಿ 2022ರ ಜನವರಿಯಲ್ಲಿ ಬರುವ ಪ್ರಮುಖ ದಿನಗಳ ಮತ್ತು ದಿನಾಂಕಗಳ ಪಟ್ಟಿಯನ್ನು ನೀಡುತ್ತಿದ್ದೇವೆ ಓದಿ ತಿಳಿಯಿರಿ.

ಜನವರಿ 2022ರ ಪ್ರಮುಖ ದಿನ ಮತ್ತು ದಿನಾಂಕಗಳ ಪಟ್ಟಿ :

ಜನವರಿ 1 - ಹೊಸ ವರ್ಷದ ಆಚರಣೆ, ಜಾಗತಿಕ ಕುಟುಂಬ ದಿನ
ಜನವರಿ 4 - ವಿಶ್ವ ಬ್ರೈಲ್ ದಿನ
ಜನವರಿ 6 - ವಿಶ್ವ ಸಮರ ಅನಾಥರ ದಿನ, ರಾಷ್ಟ್ರೀಯ ತಂತ್ರಜ್ಞಾನ ದಿನ
ಜನವರಿ 9 - NRI (ಅನಿವಾಸಿ ಭಾರತೀಯ) ದಿನ/ಪ್ರವಾಸಿ ಭಾರತೀಯ ದಿವಸ್
ಜನವರಿ 10 - ವಿಶ್ವ ಹಿಂದಿ ದಿನ
ಜನವರಿ 11 - ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿ
ಜನವರಿ 12 - ರಾಷ್ಟ್ರೀಯ ಯುವ ದಿನ, ರಾಷ್ಟ್ರೀಯ ದೃಷ್ಟಿ ಮಂಡಳಿ ದಿನ
ಜನವರಿ 13 - ಲೋಹ್ರಿ ದಿನ
ಜನವರಿ 15 - ಮಕರ ಸಂಕ್ರಾಂತಿ, ಸೇನಾ ದಿನ, ವಿಕಿಪೀಡಿಯಾ ದಿನ
ಜನವರಿ 23 - ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 24 - ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
ಜನವರಿ 25 - ರಾಷ್ಟ್ರೀಯ ಮತದಾರರ ದಿನ, ರಾಷ್ಟ್ರೀಯ ಪ್ರವಾಸೋದ್ಯಮ ದಿನ
ಜನವರಿ 26 - ಗಣರಾಜ್ಯೋತ್ಸವ, ಅಂತರಾಷ್ಟ್ರೀಯ ಕಸ್ಟಮ್ಸ್ ದಿನ
ಜನವರಿ 27 - ಕುಟುಂಬ ಸಾಕ್ಷರತಾ ದಿನ, ಅಂತರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ದಿನ (ಅಂತರರಾಷ್ಟ್ರೀಯ ಸ್ಮರಣಾರ್ಥ ದಿನ)
ಜನವರಿ 28 - ಲಾಲಾ ಲಜಪತ್ ರಾಯ್ ಅವರ ಜನ್ಮದಿನ
ಜನವರಿ 30 - ಮಹಾತ್ಮ ಗಾಂಧಿಯವರ ಹುತಾತ್ಮ ದಿನ (ಹುತಾತ್ಮರ ದಿನ), ವಿಶ್ವ ಕುಷ್ಠರೋಗ ನಿರ್ಮೂಲನಾ ದಿನ

For Quick Alerts
ALLOW NOTIFICATIONS  
For Daily Alerts

English summary
Here we are providing list of important national and international days and dates in january 2022.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X