ಅಪಾಯಕಾರಿ ಕೆಲಸಗಳು... ಎಚ್ಚರ ತಪ್ಪಿದ್ರೆ ಸಾವು ಖಚಿತ!

ಪ್ರತಿಯೊಬ್ಬರಿಗೂ ಕೆಲಸ ಎಂಬುವುದು ತುಂಬಾ ಇಂಪೋರ್ಟೆಂಟ್.ಇನ್ನು ಕೆಲವೊಮ್ಮೆ ಆಫೀಸ್ ಹೇಗಿರುತ್ತೆ ಅಂದ್ರೆ ಪ್ರತಿ ದಿನ ಆಫೀಸ್ ನಲ್ಲಿ ಬಾಸ್ ಕೈಯಿಂದ ಬೈಗುಳ ತಿನ್ನುತ್ತಾ, ಆಫೀಸ್ ಪಾಲಿಟಿಕ್ಸ್ ನಿಂದ ಬರೀ ಕೆಟ್ಟದ್ದೇ ಅನುಭವಿಸಿಕೊಂಡು, ಕೆಲಸ ಸಾಕಪ್

By Kavya

ಪ್ರತಿಯೊಬ್ಬರಿಗೂ ಕೆಲಸ ಎಂಬುವುದು ತುಂಬಾ ಇಂಪೋರ್ಟೆಂಟ್. ಕೆಲಸ ಇಲ್ಲ ಎಂದಾದ್ರೆ ಹಣ ಎಲ್ಲಿಂದ ಬರುತ್ತೆ, ಹಣ ಇಲ್ಲ ಎಂದಾದ್ರೆ ಜೀವನ ನಿರ್ವಹಣೆ ಹೇಗೆ?

ಅಪಾಯಕಾರಿ ಕೆಲಸಗಳು... ಎಚ್ಚರ ತಪ್ಪಿದ್ರೆ ಸಾವು ಖಚಿತ!

ಇನ್ನು ಕೆಲವೊಮ್ಮೆ ಆಫೀಸ್ ಹೇಗಿರುತ್ತೆ ಅಂದ್ರೆ ಪ್ರತಿ ದಿನ ಆಫೀಸ್ ನಲ್ಲಿ ಬಾಸ್ ಕೈಯಿಂದ ಬೈಗುಳ ತಿನ್ನುತ್ತಾ, ಆಫೀಸ್ ಪಾಲಿಟಿಕ್ಸ್ ನಿಂದ ಬರೀ ಕೆಟ್ಟದ್ದೇ ಅನುಭವಿಸಿಕೊಂಡು, ಕೆಲಸ ಸಾಕಪ್ಪ ಸಾಕು ಅನ್ನೋ ಸ್ಥಿತಿಗೆ ನೀವು ಬಂದಿರಬಹುದು. ಆದ್ರೆ ನಿಮಗೆ ಗೊತ್ತಾ ಜಗತ್ತಿನಲ್ಲಿ ಕೆಲವೊಂದು ಕೆಲಸ ಗಳಿವೆ ಅಂದ್ರೆ ಅವುಗಳಿಂದ ಜೀವಕ್ಕೆ ಯಾವಾಗ ಬೇಕಾದ್ರೂ ಆಪತ್ತು ಸಂಭವಿಸಬಹುದು ಎಂದು. ಬನ್ನಿ ಅಂತಹ ಉದ್ಯೋಗ ಯಾವುದು ಎಂಬ ಮಾಹಿತಿ ನಿಮಗೆ ಕೆರಿಯರ್ ಇಂಡಿಯಾ ನೀಡುತ್ತಿದೆ.

ಎಲೆಕ್ಟ್ರಿಶನ್:

ಖತರ್ನಾಕ್ ಹಾಗೂ ಪ್ರಾಣಕ್ಕೆ ಅಪಾಯವನ್ನುಂಟು ಮಾಡುವ ಕೆಲಸದಲ್ಲಿ ಇದು ಒಂದಾಗಿದೆ. ವಿದ್ಯುತ್ ತಂತಿಗಳ ಜತೆ ಕೆಲಸ ಮಾಡುವುದು ತುಂಬಾ ಅಪಾಯಕಾರಿ. ಎತ್ತರ, ಬೆಂಕಿ, ಕಾರ್ಬನ್ ಮಾನಾಕ್ಸೈಡ್, ಎಲೆಕ್ಟ್ರಿಕ್ ಆಘಾತ ಹಾಗೂ ಸ್ಪೋಟದಿಂದಾಗಿ ಎಲೆಕ್ಟ್ರಿಶನ್ ಸಾಯುವ ಸಂಭವವಿರುತ್ತದೆ

ಟ್ರಾನ್ಸ್ ಪೋರ್ಟ್ ಡ್ರೈವರ್:

ದೇಶದಲ್ಲಿ ಅಷ್ಟೇ ಯಾಕೆ ಪ್ರಪಂಚದಲ್ಲಿ ರಸ್ತೆ ಅಪಘಾತದಿಂದ ಸಾಯುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗು ಡ್ರೈವರ್ ಗಳ ಕೆಲಸವೂ ತುಂಬಾ ಅಪಾಯಕಾರಿಯಾಗಿದೆ.

ಮೀನು ಹಿಡಿಯುದು:

ವಿಶ್ವದ ಅಪಾಯಕಾರಿ ಹುದ್ದೆಗಳಲ್ಲಿ ಇದೂ ಕೂಡಾ ಒಂದಾಗಿದೆ. ಸಮುದ್ರದ ಮಧ್ಯಭಾಗದಲ್ಲಿ ಒಂದು ದೋಣಿಯಲ್ಲಿ ನಿಂತು ತುಂಬಾ ಹೊತ್ತು ಮೀನಿಗೆ ಬಲೆ ಬೀಸಿ ನಿಲ್ಲ ಬೇಕಾಗುತ್ತದೆ. ಈ ಕೆಲಸ ಧೈರ್ಯದ ಕೆಲಸವಾಗಿದೆ.

ಫೈಯರ್ ಫೈಟರ್:

ಈ ಕೆಲಸ ಬಹಳ ಕಷ್ಟದ ಕೆಲಸವಾಗಿದೆ. ತೀವ್ರವಾದ ಬೆಂಕೆ ಜ್ವಾಲೆಯ ಮಧ್ಯೆ, ಹಾಗೂ ಸ್ಪೋಟಕ ಸಂದರ್ಭದಲ್ಲಿ ಇವರು ಕೆಲಸ ನಿರ್ವಹಿಸಬೇಕಾಗುತ್ತದೆ. ಕೆಲಸ ಇಲ್ಲದ ಸಮಯದಲ್ಲಿ ಇವರು ನಿಶ್ಚಿಂತರಾಗಿರುತ್ತಾರೆ. ಹಾಗೂ ಕೆಲಸದ ವೇಳೆ ಸಾವಿನ ಜತೆಯೇ ಹೋರಾಡುತ್ತಾರೆ.

ಮೈನಿಂಗ್:

ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಧೈರ್ಯ ಇರಲೇ ಬೇಕು. ಇವರು ಪ್ರತಿದಿನವೂ ಸಿಲಿಕಾ ಮಧ್ಯೆ ಕೆಲಸ ಮಾಡಬೇಕಾಗುತ್ತದೆ. ಹಾಗಾಗಿ ಇವರಿಗೆ ಶ್ವಾಸಕೋಶ ಸೇರಿದಂತೆ ಅನೇಕ ಅಪಾಯಕಾರಿ ದೈಹಿಕ ಅಸ್ವಸ್ಥತೆಗಳಿಗೆ ಗುರಿಯಾಗುತ್ತಾರೆ. ಈ ಕಾರಣದಿಂದಾಗಿ ಜಗತ್ತಿನ ಅಪಾಯಕಾರಿ ಹುದ್ದೆಗಳಲ್ಲಿ ಇದು ಕೂಡಾ ಒಂದಾಗಿದೆ.

ಬಾಡಿಗಾರ್ಡ್:

ಮಂತ್ರಿಗಳು ಇಲ್ಲಾ ಫೇಮಸ್ ಪರ್ಸನಾಲಿಟಿ ಸುತ್ತಮುತ್ತ ಬಾಡಿಗಾರ್ಡ್ ಇರುವುದನ್ನ ನೀವು ನೋಡಿರುತ್ತೀರಿ. ಆದ್ರೆ ಇವರ ಹುದ್ದೆಯಲ್ಲೂ ಯಾವಾಗ ಸಾವು ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಾಗುದಿಲ್ಲ. ಬಾಸ್ ರಕ್ಷಣೆ ಮಾಡುವ ದೃಷ್ಟಿಯಲ್ಲಿ ಇವರು ಸಾವಿನ ಬಾಗಿಲು ತಟ್ಟುವ ಸಂಭವವಿರುತ್ತದೆ

ಪೇಂಟರ್:

ದೊಡ್ಡ ದೊಡ್ಡ ಕಟ್ಟಡಗಳಿಗೆ ಬಣ್ಣ ಬಳೆಯುದೆಂದ್ರೆ ಅದು ಸುಲಭದ ಕೆಲಸವಲ್ಲ. ಈ ಸಂದರ್ಭದಲ್ಲಿ ನೌಕರರು ಹಲವಾರು ಗಾಯಗಳಿಗೆ ತುತ್ತಾಗುತ್ತಾರೆ ಅಷ್ಟೇ ಅಲ್ಲ ಕೆಲವರು ಸಾಯುತ್ತಾರೆ ಕೂಡಾ.

For Quick Alerts
ALLOW NOTIFICATIONS  
For Daily Alerts

English summary
Do You Know which are the most Dangerous jobs in the world. Some people put their lives on the line on a dialy basis to achieve job satisfaction. here is the list about Most dangerous jobs.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X