ಮಾನಸಿಕ ನೆಮ್ಮದಿ ನೀಡದ 5 ಉದ್ಯೋಗಗಳು... ಇವುಗಳಿಂದ ಡಿಪ್ರೇಶನ್ ಹಾಗೂ ಸ್ಟ್ರೆಸ್ ಗ್ಯಾರಂಟಿ

Posted By:

ಎಲ್ಲಿ ಅತೀ ಹೆಚ್ಚು ವೇತನ ಸಿಗುತ್ತೋ ಅಲ್ಲಿ ಡಿಪ್ರೇಶನ್ ಸೃಷ್ಟಿಮಾಡುವಷ್ಟು ಕೆಲಸ ಇದ್ದೇ ಇರುತ್ತದೆ. ಇತ್ತೀಚಿಗಿನ ಸ್ಟಡಿ ಪ್ರಕಾರ ಡಿಪ್ರೇಶನ್ ಸೃಷ್ಟಿ ಮಾಡುವ ಕೆಲವೊಂದು ಜಾಬ್ ಗಳ ಪಟ್ಟಿ ಮಾಡಲಾಗಿದೆ. ಈ ಹುದ್ದೆಗಳು ಹೈ ಲೆವಲ್ ನ ಸ್ಟ್ರೆಸ್ ಹಾಗೂ ಡಿಪ್ರೇಶನ್ ಗೆ ಕಾರಣವಾಗಿದೆ. ಅಂತಹ ಹುದ್ದೆಗಳು ಯಾವುವು ಎಂಬ ಲಿಸ್ಟ್ ಇಲ್ಲಿದೆ.

ಕೇರ್ ಟೇಕರ್:

ಯಾರು ಕೇರ್ ಟೇಕರ್ ಪ್ರೊಫೆಶನ್ ನಲ್ಲಿ ಇರುತ್ತಾರೋ ಅವರು ಹೆಚ್ಚಿನ ಸ್ಟ್ರೆಸ್ ಹಾಗೂ ಡಿಪ್ರೇಶನ್ ಅನುಭವಿಸಿರುತ್ತಾರೆ. ಇನ್ನೂ ಹಿರಿಯ ನಾಯಗರಿಕರ ಕೇರ್ ಟೇಕರ್ ಆಗಿ ಯಾರು ಇರುತ್ತಾರೋ ಅವರು ಹೆಚ್ಚಿನ ಡಿಪ್ರೇಶನ್ ಗೆ ಒಳಗಾಗುತ್ತಾರೆ. ಇಲ್ಲಿ ನೀವು ಮಾನಸಿಕ ಖಿನ್ನತೆಗೆ ಒಳಗಾಗುವುದು ಮಾತ್ರವಲ್ಲದೇ ಉತ್ತಮ ಸ್ಯಾಲರಿ ಪಡೆಯುವಲ್ಲಿ ಕೂಡಾ ವಿಫಲರಾಗುತ್ತೀರಿ.

ಶಿಕ್ಷಕಿ:

ಸಮಾಜದಲ್ಲಿ ಶಿಕ್ಷಕಿ ಎಂದ್ರೆ ಗೌರವಾನಿತ್ವ ಹುದ್ದೆ. ಹಾಗೂ ಜ್ಞಾನವರ್ಧನೆಗೆ ಶಿಕ್ಷಕಕರ ರೋಲ್ ಪ್ರಮುಖವಾದುದು. ಹಾಗಾಗಿ ಅವರ ಹುದ್ದೆ ಹೆಚ್ಚು ಪ್ರಾಮುಖ್ಯತೆ ಪಡೆದಿದೆ. ಆದ್ರೆ ಶಿಕ್ಷಕ ಹುದ್ದೆಯ ಇನ್ನೊಂದು ಮುಖ ಕೂಡಾ ನೀವು ನೋಡಬಹುದು. ಶೇಕಡಾ ೩೦ ರಷ್ಟು ಶಿಕ್ಷಕರು ಹೈ ಲೆವೆಲ್ ಡಿಪ್ರೇಶನ್ ನಿಂದ ನರಳುತ್ತಿರುತ್ತಾರೆ. ತಮ್ಮ ಹುದ್ದೆಯಿಂದ ಅವರು ಹ್ಯಾಪಿ ಯಾಗಿರುತ್ತಾರೆ ಆದ್ರೆ ಅದೇ ಹುದ್ದೆಯಿಂದ ಕ್ರಮೇಣ ಅವರು ಸ್ಟ್ರೆಸ್ ಗೆ ಒಳಗಾಗುತ್ತಾರೆಯಂತೆ.

ಇಂಜಿನೀಯರಿಂಗ್:

ಇಂಜಿನಿಯರ್ ಹುದ್ದೆ ಹೇಳುವಷ್ಟು ಸುಲಭದ ಕೆಲಸವಲ್ಲ. ಇಂಜಿನಿಯರ್ಸ್ ಹೇಳುವಂತೆ ಇದು ಒಂದು ಕಂಪ್ಲೀಟ್ ಡೆಪ್ರೆಶನ್ ಕೆಲಸ ಹಾಗೂ ಇದರಿಂದ ಒಬ್ಬ ವ್ಯಕ್ತಿಯ ಕಂಪ್ಲೀಟ್ ಮೆಂಟಲ್ ಹೆಲ್ತ್ ಹಾಳಾಗುತ್ತದೆ. ಹೊಸ ಹೊಸ ಪ್ರಾಜೆಕ್ಟ್ ಗಳು, ಡೆಡ್ ಲೈನ್, ಕೆಲಸಗಾರರ ಸಮಸ್ಯೆ, ಟಾರ್ಗೆಟ್ ರೀಚ್ ಮಾಡಲು ಸಾಧ್ಯವಾಗದೇ ಇರುವುದು ಮುಂತಾದ ಸಮಸ್ಯೆಯಿಂದ ಇಂಜಿನೀಯರ್ಸ್ ಕೂಡಾ ಡಿಪ್ರೇಶನ್ ಗೆ ಒಳಗಾಗುತ್ತಾರೆ. ಹಾಗಾಗಿ ಈ ಫೀಲ್ಡ್‌ನಲ್ಲಿ ಹೆಚ್ಚು ಮಂದಿ ಆತ್ಮಹತ್ಯೆ ಎಂತಹ ಕ್ರೂರ ಕೃತ್ಯಕ್ಕೆ ಕೈ ಹಾಕುತ್ತಾರೆ.

ಸೋಶಲ್ ವರ್ಕರ್:

ಸಮಾಜದಲ್ಲಿ ಅತೀ ಹೆಚ್ಚು ಪ್ರಾಮುಖ್ಯತೆ ಇರುವುದು ಸೋಶಲ್ ವರ್ಕರ್ಸ್ ಗೆ. ನಮಗೆ ಅವರ ಅಗತ್ಯವಿದ್ದಾಗ ಅವರು ಯಾವಾಗಲೂ ನಮ್ಮ ಸಹಾಯಕ್ಕೆ ಸಿದ್ಧರಿರುತ್ತಾರೆ. ಸೋಶಲ್ ವರ್ಕರ್ ಅಂದ್ರೆ ಕೇರಿಂಗ್, ಲವಿಂಗ್ ಹಾಗೂ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ರುಪುಗೊಳ್ಳುವಲ್ಲಿ ಅವರು ಸಹಾಯ ಮಾಡುತ್ತಾರೆ. ಇತರರಿಗೆ ಸಹಾಯ ಮಾಡುವ ಉದ್ದೇಶದಿಂದ ಹಲವಾರು ಮಂದಿ ಈ ಫೀಲ್ಡ್ ಗೆ ಎಂಟ್ರಿ ಆಗುತ್ತಾರೆ. ಆದ್ರೆ ಕೊನೆಯಲ್ಲಿ ಇವರು ತುಂಬಾ ಡಿಪ್ರೇಶನ್ ಹಾಗೂ ಸ್ಟ್ರೆಸ್ ಗೆ ಒಳಗಾಗುತ್ತಾರೆ. ಜಗತ್ತಿನಲ್ಲಿರುವ ಸಮಾಜಸೇವಕರಲ್ಲಿ ಸುಮಾರು ಶೇಕಡಾ 15 ರಷ್ಟು ಮಂದಿ ಸ್ಟ್ರೆಸ್ ಸಮಸ್ಯೆಯಿಂದ ಬಳಲುತ್ತಾರೆ.

ರಿಯಲ್ ಎಸ್ಟೇಟ್:

ರಿಯಲ್ ಎಸ್ಟೇಟ್ ಉದ್ಯಮ ಮಾಡುವವರು ಪ್ರತಿದಿನ ಸ್ಟ್ರೆಸ್ ಸಮಸ್ಯೆಗೆ ಒಳಗಾಗುತ್ತಾರೆ. ಕ್ಲೈಂಟ್ ಒಳ್ಳೆಯವರಾದ್ರೂ ಇಲ್ಲ ಕೆಟ್ಟವರಾದ್ರೂ ಅದು ವಿಷಯವಲ್ಲ. ಪ್ರತಿ ದಿನ ಮೀಟಿಂಗ್, ಹೊಸ ಹೊಸ ಕ್ಲೈಂಟ್ಸ್ ಆಗಮನ, ಈ ಮಧ್ಯೆ ಬ್ರೋಕರ್ಸ್ ಗಳ ಹಾವಳಿ ಇದೆಲ್ಲಾ ಒಟ್ಟಾಗಿ ಸ್ಟ್ರೆಸ್ ಗೆ ಕಾರಣವಾಗುತ್ತದೆ. ಇಲ್ಲಿ ಹಣಕಾಸು ಸಮಸ್ಯೆ ಕೂಡಾ ಉದ್ಭವವಾಗಿ ಡಿಪ್ರೇಶನ್ ಗೆ ಕಾರಣವಾಗಬಹುದು.


ಇವಿಷ್ಟೇ ಅಲ್ಲದೇ ಇನ್ನೂ ಕೆಲವೊಂದು ಡಿಪ್ರೆಶನ್ ಸೃಷ್ಟಿಸುವ ಹುದ್ದೆಗಳ ಪಟ್ಟಿ ಇಲ್ಲಿ ನೀಡಲಾಗಿದೆ:

ಮ್ಯಾನುಫ್ಯಾಕ್ಚರಿಂಗ್
ಲೀಗಲ್ ಸರ್ವೀಸ್
ಹೆಲ್ತ್ ಕೇರ್ ಪ್ರೊಫೇಶನಲ್ಸ್
ಫುಡ್ ಸರ್ವೀಸ್
ಅಕೌಂಟಿಂಗ್ ಹಾಗೂ ಫೈನಾಂಶಿಯಲ್ ಸರ್ವೀಸ್

English summary
According to recent studies, more than five professions in the world are creating a high level of stress and depression. here is the list of high level of stress jobs.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia