Most High Risk Government Jobs In India : ಜಾಸ್ತಿ ಅಪಾಯ ಇರುವ ಸರ್ಕಾರಿ ಉದ್ಯೋಗಗಳು ಯಾವುವು ಗೊತ್ತಾ ?

ಸರ್ಕಾರಿ ಉದ್ಯೋಗದಲ್ಲಿರುವ ಹುಡುಗ ಸಿಕ್ಕಿದಾನೆ ಅಂದ್ರೆ ಹುಡುಗಿ ಮನೆಯವರು ಫುಲ್ ಖುಷ್. ಈಗೆಲ್ಲಾ ಉದ್ಯೋಗ ಅಂದ್ರೆ ಸರ್ಕಾರಿ ಉದ್ಯೋಗ, ಕೈ ತುಂಬಾ ಸಂಬಳ, ಬೇಕಾದಷ್ಟು ರಜೆ ಸಿಗುತ್ತೆ ಅಂತೆಲ್ಲಾ ಹೆಚ್ಚು ಹೆಚ್ಚು ಕೊಂಡಾಡುವ ಮಾತುಗಳು. ಆದರೆ ಸರ್ಕಾರಿ ಉದ್ಯೋಗ ಅಂದ್ರೆ ಅಷ್ಟೊಂದು ಸುಲಭನಾ ? ಸುಮ್ ಸುಮ್ನೆ ಸಂಬಳ ರಜೆ ಎಲ್ಲಾ ಸಿಗುತ್ತಾ ? ಖಂಡಿತವಾಗಿಯೂ ಅದು ಸಾಧ್ಯವಿಲ್ಲ ಎನ್ನುವುದು ಅಷ್ಟೇ ಸ್ಪಷ್ಟ. ಆದರೆ ಉದ್ಯೋಗ ಭದ್ರತೆ ಇಲ್ಲಿ ತುಂಬಾನೆ ಮಹತ್ವದ ಸಂಗತಿಯಾಗುರುತ್ತೆ.

 
ರಿಸ್ಕ್ ಇರುವ ಜಾಬ್ ಅಂದ್ರೆ ಕಿಕ್ ಜಾಸ್ತಿ ಅನ್ನೋರಿಗೆ ಈ ಸರ್ಕಾರಿ ಉದ್ಯೋಗಗಳು ಸೂಕ್ತ

ನಾವೆಲ್ಲಾ ದಿನನಿತ್ಯ ಹಲವಾರು ಸಂಗತಿಗಳನ್ನು ಓದ್ತಾನೆ, ನೋಡ್ತಾನೆ ಮತ್ತು ಕೇಳ್ತಾನೆ ಇರ್ತೀವಿ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ನಿಧಾನ, ಅಲ್ಲಿ ಹಾಗೆ ಇಲ್ಲಿ ಹೀಗೆ ಅಂತೆಲ್ಲಾ ನೂರೊಂದು ದೂರುಗಳನ್ನು ಹೇಳ್ತಾನೆ ಇರ್ತೀವಿ. ಆದರೆ ನೀವು ತಿಳಿಬೇಕಾದ ಸಂಗತಿಗಳು ಗೊತ್ತಾ ? ಸರ್ಕಾರಿ ಉದ್ಯೋಗ ಅಂದ್ರೆ ಸುಲಭದ ಮಾತಲ್ಲ ಇಲ್ಲಿ ಕೆಲವೊಂದು ಉದ್ಯೋಗಗಳು ತುಂಬಾನೆ ಅಪಾರಿಯಾಗಿರುತ್ತವೆ. ಆದರೂ ಕೂಡ ಅಂತಹ ರಿಸ್ಕ್ ಗಳನ್ನು ತಮ್ಮ ಮೈಮೇಲೆ ತೆಗೆದುಕೊಂಡು ಉದ್ಯೋಗಿಗಳು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಾರೆ. ಹಾಗಾದ್ರೆ ಭಾರತದಲ್ಲಿ ಅಂತಹ ರಿಸ್ಕ್ ಇರುವ ಸರ್ಕಾರಿ ಉದ್ಯೋಗಗಳು ಯಾವುವು ಅಂತ ತಿಳಿಯುವ ಕುತೂಹಲ ನಿಮಗೂ ಬಂತಾ ? ಖಂಡಿತವಾಗಿಯೂ ತಿಳಿಸಿಕೊಡ್ತೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಭಾರತದಲ್ಲಿರುವ ಅಪಾಯಕಾರಿ ಸರ್ಕಾರಿ ಉದ್ಯೋಗಳಿವು :

1. ರಾ ಏಜೆಂಟ್ :

1. ರಾ ಏಜೆಂಟ್ :

ರಹಸ್ಯ ದಲ್ಲಾಳಿ ಅಥವಾ ರಹಸ್ಯವಾದ ಪೋಲೀಸ್ ಎಂದು ಕೂಡ ಕರೆಯಲಾಗುತ್ತದೆ. ಇವರ ಜೀವನವು ಹೇಗೆ ಅಪಾಯಗಳಿಂದ ಕೂಡಿದೆ ಎಂಬ ಕಲ್ಪನೆ ಕೂಡ ನಿಮಗಿರುವುದಿಲ್ಲ. ಈ ಉದ್ಯೋಗ ಅತ್ಯಂತ ಕಠಿಣವಾಗಿದೆ ಮತ್ತು ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ವ್ಯಕ್ತಿಯು ತನ್ನ ಪ್ರಾಣವನ್ನು ಪಣಕ್ಕಿಡುವ ಅಗತ್ಯವಿರುತ್ತದೆ. ಹಾಗಾಗಿ ತುಂಬಾನೆ ರಿಸ್ಕಿ ಜಾಬ್ ಅಂತಾನೆ ಹೇಳಬಹುದು.

2. ಡಿಆರ್‌ಡಿಒ ಸಂಶೋಧಕ :

2. ಡಿಆರ್‌ಡಿಒ ಸಂಶೋಧಕ :

ಎಲ್ಲಾ ಎಂಜಿನಿಯರ್‌ಗಳು ಐಐಎಂಗೆ ಹೋಗುವುದಿಲ್ಲ ಅಥವಾ ಸಾಫ್ಟ್‌ವೇರ್ ಕೆಲಸ ಬೇಕು ಅಂತಾನೆ ಕೂರುವುದಿಲ್ಲ. ಅವರಲ್ಲಿ ಕೆಲವರು ಕೆಲವು ಹುಚ್ಚು ಸಂಶೋಧನೆ ಮಾಡಲು ಮತ್ತು ದೇಶದ ಮಿಲಿಟರಿ ತಂತ್ರಜ್ಞಾನಕ್ಕೆ ಕೊಡುಗೆ ನೀಡುವ ಉತ್ಸಾಹವನ್ನು ಹೊಂದಿರುತ್ತಾರೆ. ಇದರಿಂದ ಅವರ ಪ್ರೊಫೈಲ್ ಇನ್ನಷ್ಟು ಕ್ರಿಯಾತ್ಮಕವಾಗಿರುತ್ತದೆ.

ಈ ಉದ್ಯೋಗ ಭೌತಿಕವಾಗಿ ಅಪಾಯವಾದುದ್ದಲ್ಲ ಆದರೆ ನಿಮ್ಮ ಸಂಶೋಧನೆಯು ತಂತ್ರಜ್ಞಾನದ ಭವಿಷ್ಯಕ್ಕೆ ಕೊಡುಗೆ ನೀಡುತ್ತದೆ ಆದ್ದರಿಂದಲೇ ಸ್ವಾಭಾವಿಕವಾಗಿ ಈ ಹುದ್ದೆಗೆ ನೇಮಕಾತಿ ಪ್ರಕ್ರಿಯೆಯು ಕಠಿಣವಾಗಿರುತ್ತದೆ.

3. ಇಸ್ರೋ ವಿಜ್ಞಾನಿ :
 

3. ಇಸ್ರೋ ವಿಜ್ಞಾನಿ :

ವಾವ್ ಕೇಳೋಕೆ ಎಷ್ಟು ಚೆಂದ ಅಲ್ವಾ ?...ಅದೆಷ್ಟೋ ವಿದ್ಯಾರ್ಥಿಗಳ ಕನಸು ಕೂಡ. ಇದು ಕೂಡ ಮತ್ತೊಂದು ಹೆಚ್ಚಿನ ಸಂಭಾವ್ಯ ಮತ್ತು ಅಪಾಯಕಾರಿ ಸರ್ಕಾರಿ ಕೆಲಸವಾಗಿದೆ.

ಬಾಹ್ಯಾಕಾಶ ತಂತ್ರಜ್ಞಾನ ಜಗತ್ತಿನಲ್ಲಿ ಭಾರತಕ್ಕೆ ಯಶಸ್ಸು ಸಿಗಲು ಕಾರಣವಾದದ್ದೇ ಈ ಇಸ್ರೋ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ. ಇಲ್ಲಿ ವಿಜ್ಞಾನಿಯಾಗುವುದು ಎಂದರೆ ಸುಲಭದ ಮಾತಲ್ಲ, ಒಂದು ವೇಳೆ ನೀವು ಅಂತಹ ಟ್ಯಾಲೆಂಟ್ ಹೊಂದಿರುವಿರಾದರೆ ನೀವು ನಿಜಕ್ಕೂ ಸಾಕಷ್ಟು ಜ್ಞಾನವನ್ನು ಹೊಂದಿದ್ದೀರಿ ಎಂದೇ ಅರ್ಥ. ಈ ಉದ್ಯೋಗವನ್ನು ನೀವು ಪಡೆದುಕೊಂಡರೆ ದೇಶದ ಉಜ್ವಲ ಭಿಷ್ಯಕ್ಕೆ ನೀವು ಸೇವೆ ಸಲ್ಲಿಸಿದ್ದೀರಿ ಎಂದೇ ಅರ್ಥ.

4. ಸಶಸ್ತ್ರ ಪಡೆ :

4. ಸಶಸ್ತ್ರ ಪಡೆ :

ಭಾರತೀಯ ಸೇನೆಯು ಮಾತ್ರವಲ್ಲ ನಮ್ಮ ನೌಕಾಪಡೆ, ವಾಯುಪಡೆ ಮತ್ತು ನಮ್ಮ ಕೆಚ್ಚೆದೆಯ ಕರಾವಳಿ ಕಾವಲುಗಾರರನ್ನು ಒಳಗೊಂಡಿರುವ ಈ ಶ್ಲಾಘನೀಯ ಉದ್ಯೋಗದ ಹಿಂದಿರುವ ಧೈರ್ಯಶಾಲಿ ಮತ್ತು ಅಪಾಯಕಾರಿ ಸ್ವರೂಪವನ್ನು ಯಾರೂ ಕೂಡ ವಿವರಿಸಲು ಸಾಧ್ಯವಿಲ್ಲ. ನಮ್ಮ ದೇಶದ ರಕ್ಷಣೆಗಾಗಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿರುವ ಅದ್ಭುತ ಕೆಚ್ಚೆದೆಯ ರಕ್ಷಣಾ ಸಿಬ್ಬಂದಿಗಳಿವರು. ನಾವು ಇಂದು ಶಾಂತಿಯಿಂದ ನಿದ್ರಿಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಈ ಸಶಸ್ತ್ರಪಡೆಗಳೇ ಕಾರಣ.

5. ಫಾರೆಸ್ಟ್ ರೇಂಜರ್ :

5. ಫಾರೆಸ್ಟ್ ರೇಂಜರ್ :

ಹೆಸರೇ ಸೂಚಿಸುವಂತೆ ಧೈರ್ಯಶಾಲಿಗಳು ಮಾತ್ರ ಈ ಉದ್ಯೋಗವನ್ನು ಮಾಡಲು ಸೂಕ್ತರು. ಫಾರೆಸ್ಟ್ ರೇಂಜರ್/ಅರಣ್ಯ ರೇಂಜರ್ ಆಗಿ ಕಾರ್ಯ ನಿರ್ವಹಿಸುವುದು ಅಂದರೆ ನಾವು ಹುಟ್ಟಿ ಬೆಳೆದ ನೆಲ, ವಾತಾವರಣ, ಸಸ್ಯ, ಪ್ರಾಣಿ, ವನ್ಯಜೀವಿಗಳನ್ನು ಮತ್ತು ನಿಮಗೆ ಗೊತ್ತುಪಡಿಸಿದ ಪ್ರದೇಶದ ಬುಡಕಟ್ಟು ಜೀವಿಗಳನ್ನು ರಕ್ಷಿಸುವ ಮತ್ತು ಕಾಪಾಡುವ ಕರ್ತವ್ಯ ನಿಮ್ಮದಾಗಿರುತ್ತದೆ. ನೀವೇ ಜೀವಿಸಿದ ಭೂಮಿಯಲ್ಲಿ ನಿಮ್ಮದೊಂದು ಕೊಡುಗೆ ಅಪಾರವಾದದ್ದು.

6. ಗುಪ್ತಚರ ಬ್ಯೂರೋ ಅಧಿಕಾರಿ :

6. ಗುಪ್ತಚರ ಬ್ಯೂರೋ ಅಧಿಕಾರಿ :

ರಾಷ್ಟ್ರೀಯ ಭದ್ರತಾ ಕ್ಷೇತ್ರಕ್ಕೆ ಸಂಬಂಧಿಸಿದ ಮತ್ತೊಂದು ಪ್ರಮುಖ ಅಪಾಯಕಾರಿ ಸರ್ಕಾರಿ ಕೆಲಸವಿದು. ಐಬಿ ಅಧಿಕಾರಿಯ ಕರ್ತವ್ಯವು ಜಾಗರೂಕರಾಗಿರುವುದು, 24/7 ನಮ್ಮ ದೇಶವನ್ನು ಹೊರಗಿನ ಭಯೋತ್ಪಾದಕ ಚಟುವಟಿಕೆಗಳಿಂದ ಮತ್ತು ಬೆದರಿಕೆಗಳಿಂದ ಸುರಕ್ಷಿತವಾಗಿಡುವುದು ಮತ್ತು ಭವಿಷ್ಯದಲ್ಲಿ ಎದುರಾಬಹುದಾದ ದಾಳಿಯನ್ನು ಎದುರಿಸಲು ಯೋಜನೆಗಳನ್ನು ರೂಪಿಸುವುದು.

7. ಪುರಾತತ್ವಶಾಸ್ತ್ರಜ್ಞ :

7. ಪುರಾತತ್ವಶಾಸ್ತ್ರಜ್ಞ :

ಭಾರತದಲ್ಲಿ ಪುರಾತತ್ವಶಾಸ್ತ್ರಜ್ಞನಾಗಿ ಕೆಲಸ ಮಾಡಲು ಎಎಸ್ಐ ನೇಮಕಾತಿ ಪ್ರಕ್ರಿಯೆಗೆ ಅರ್ಹತೆ ಪಡೆಯಲು ಅಭ್ಯರ್ಥಿಯು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಮಾನವ ಇತಿಹಾಸದ ಬಗ್ಗೆ ಆಸಕ್ತಿ ಹೊಂದಿರುವ ಮತ್ತು ಈ ಕ್ಷೇತ್ರಕ್ಕೆ ಕೊಡುಗೆ ನೀಡಲು ಬಯಸುವ ಜನರಿಗೆ ಇದು ಬಹಳ ತೃಪ್ತಿಕರವಾದ ಸರ್ಕಾರಿ ಕೆಲಸವಾಗಿದೆ. ಈ ಉದ್ಯೋಗಕ್ಕೆ ಸೇರಿದವರು ಎದುರಿಸುವ ಮುಖ್ಯ ಅಪಾಯವೆಂದರೆ ಅವರು ಸ್ಪರ್ಶಿಸುವ ಅಥವಾ ಸಂಶೋಧಿಸುವ ಯಾವುದೇ ಇತಿಹಾಸದ ಮೂಲವನ್ನು ಉಳಿಸುವುದು.

For Quick Alerts
ALLOW NOTIFICATIONS  
For Daily Alerts

English summary
Here is the list of most high risk government jobs in india. Take a look.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X