Courses After PUC And SSLC: ಜಾಬ್ ಓರಿಯೆಂಟೆಡ್ ಪ್ಯಾರಾಮೆಡಿಕಲ್ ಕೋರ್ಸ್‌ ಮಾಡಿದ್ರೆ ತುಂಬಾನೆ ಲಾಭ ಇದೆ ಗೊತ್ತಾ ?

ಎಸ್‌ಎಸ್‌ಎಲ್‌ಸಿ / ಪಿಯುಸಿ ನಂತರ ಯಾವುದೇ ಕೋರ್ಸ್‌ ಆಗಲಿ ಬೇಗ ಕಲಿಕೆ ಮುಗಿಯಬೇಕು ಹಾಗೆ ಬಹು ಬೇಗ ಉದ್ಯೋಗವನ್ನು ಪಡೆಯಬೇಕು ಎಂದು ಆಲಿಸುತ್ತಿರುವವರು ಪ್ಯಾರಾಮೆಡಿಕಲ್ ಕೋರ್ಸ್‌ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬಾರದು.

ಹೌದು 10+2 ವಿದ್ಯಾರ್ಹತೆಯಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಈ ಪ್ಯಾರಾಮೆಡಿಕಲ್ ಕೋರ್ಸ್‌ ಮಾಡಲು ಅರ್ಹರು. ಹಾಗೆಯೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಹೊಂದಿರುವವರೂ ಕೂಡ ಕೆಲವು ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ಮಾಡಬಹುದು.

ಜಾಬ್ ಓರಿಯೆಂಟೆಡ್ ಪ್ಯಾರಾಮೆಡಿಕಲ್ ಕೋರ್ಸ್‌ಗಳ ಸಂಪೂರ್ಣ ಮಾಹಿತಿ

ಸಾಮಾನ್ಯವಾಗಿ ಪಿಯುಸಿಯಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್‌,ನರ್ಸಿಂಗ್, ಬಿ.ವಿ.ಎಸ್‌ಸಿ, ಫಾರ್ಮೆಸಿ ಮತ್ತು ಬಿಹೆಚ್‌ಎಂಎಸ್‌ ಕೋರ್ಸ್‌ಗಳನ್ನು ಪ್ರಮುಖ ಕೋರ್ಸ್‌ಗಳೆಂದು ಭಾವಿಸಿಬಿಡುತ್ತಾರೆ. ಆದರೆ ಅದನ್ನು ಹೊರತುಪಡಿಸಿಯೂ ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ಅಧ್ಯಯನ ಮಾಡಬಹುದು.

ಹೆಲ್ತ್ ಇಂಡಿಸ್ಟ್ರಿಯಲ್ಲಿ ವೈದ್ಯರಿಗೆ, ನರ್ಸ್‌ಗಳಿಗೆ ಹಾಗೂ ಹೆಲ್ತ್ ವರ್ಕರ್ಸ್‌ ಮತ್ತು ಟೆಕ್ನೀಶಿಯನ್‌ಗಳಿಗೆ ಭಾರೀ ಬೇಡಿಕೆ ಇದೆ. ದೇಶ ವಿದೇಶಗಳಲ್ಲಿಯೂ ಕೂಡ ಉದ್ಯೋಗವನ್ನು ಪಡೆಯುವ ಅವಕಾಶ ಇದೆ. ಹಾಗಾಗಿ ಆರೋಗ್ಯ ಕ್ಷೇತ್ರದಲ್ಲಿ ಹೆಲ್ತ್ ವರ್ಕರ್ ಮತ್ತು ಟೆಕ್ನೀಶಿಯನ್ ಗಳ ಪಾತ್ರವು ಪ್ರಮುಖವಾಗಿದೆ ಹಾಗಾಗಿ ಪ್ಯಾರಾಮೆಡಿಕಲ್ ಕೋರ್ಸ್‌ ಎನ್ನುವುದು ಜಾಬ್ ಓರಿಯೆಂಟೆಡ್ ಕೋರ್ಸ್‌ ಎಂದೇ ಹೇಳಬಹುದು. ಈ ಕೋರ್ಸ್‌ ಮಾಡಿದ ಬಳಿಕ ಬಹು ಬೇಗ ಉದ್ಯೋಗವೂ ಲಭಿಸುತ್ತೆ ಹಾಗೆ ಉತ್ತಮ ವೇತನವನ್ನು ಪಡೆಯಬಹುದು.

ಹಾಗಾದ್ರೆ ಭಾರತದಲ್ಲಿ ಯಾವೆಲ್ಲಾ ಪ್ಯಾರಾಮೆಡಿಕಲ್ ಕೋರ್ಸ್‌ಗಳಿವೆ ಮತ್ತು ಆ ಕೋರ್ಸ್‌ಗಳನ್ನು ಎಷ್ಟು ಅವಧಿಯ ವರೆಗೆ ಅಧ್ಯಯನ ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ತಿಳಿಸಲಿದ್ದೇವೆ.

ಭಾರತದಲ್ಲಿ ಲಭ್ಯವಿರುವ ಪ್ಯಾರಾಮೆಡಿಕಲ್ ಕೋರ್ಸ್‌ಗಳು:

ಭಾರತದಲ್ಲಿ 3 ಪ್ರಮುಖ ಪ್ಯಾರಾಮೆಡಿಕಲ್ ಕೋರ್ಸ್‌ಗಲು ಲಭ್ಯವಿದೆ ಅವುಗಳು ಯಾವುವೆಂದರೆ

1 ಪದವಿ ಕೋರ್ಸ್‌ಗಳು
2 ಡಿಪ್ಲೋಮ ಕೋರ್ಸ್‌ಗಳು
3 ಸರ್ಟಿಫಿಕೇಟ್ ಕೋರ್ಸ್‌ಗಳು

1 ಟಾಪ್ ಪ್ಯಾರಾಮೆಡಿಕಲ್ ಪದವಿ ಕೋರ್ಸ್‌ಗಳು:

* ಬ್ಯಾಚುಲರ್ ಆಫ್ ಫಿಸಿಯೋಥೆರಪಿ
* ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ\
* ಬಿ.ಎಸ್ಸಿ ಇನ್ ಓಟಿಟಿ (ಆಪರೇಷನ್ ಥಿಯೇಟರ್ ಟೆಕ್ನಾಲಜಿ)
* ಬಿ.ಎಸ್ಸಿ ಇನ್ ಡಯಾಲಿಸಿಸ್ ಟೆಕ್ನಾಲಜಿ
* ಬಿ.ಎಸ್ಸಿ ಇನ್ ಎಂಎಲ್‌ಟಿ ( ಮೆಡಿಕಲ್ ಲ್ಯಾಬ್ ಟೆಕ್ನಾಲಜಿ)
* ಬಿ.ಎಸ್ಸಿ ಇನ್ X-ray ಟೆಕ್ನಾಲಜಿ
* ಬಿ.ಎಸ್ಸಿ ಇನ್‌ ರೇಡಿಯೋಗ್ರಫಿ
* ಬಿ.ಎಸ್ಸಿ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ
* ಬಿ.ಎಸ್ಸಿ ಇನ್ ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ
* ಬಿಎಎಸ್‌ಎಲ್‌ಪಿ
* ಬಿ.ಎಸ್ಸಿ ಇನ್ ಆಫ್ತಾಲ್ಮಿಕ್ ಟೆಕ್ನಾಲಜಿ
* ಬಿ.ಎಸ್ಸಿ ಇನ್ ಆಡಿಯಾಲಜಿ ಮತ್ತು ಸ್ಪೀಚ್ ಥೆರಪಿ
* ಬಿ.ಎಸ್ಸಿ ಇನ್ ಆಪ್ಟೋಮೆಟ್ರಿ
* ಬಿ.ಎಸ್ಸಿ ಇನ್ ಅನಸ್ಥೇಶಿಯಾ ಟೆಕ್ನಾಲಜಿ

ಮೇಲೆ ತಿಳಿಸಲಾಗಿರುವ ಪದವಿ ಕೋರ್ಸ್‌ಗಳನ್ನು 10+2 ಮಾದರಿಯಲ್ಲಿ ಪಿಯುಸಿಯಲ್ಲಿ ಜೀವಶಾಸ್ತ್ರವನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳು ಅಧ್ಯಯನ ಮಾಡಬಹುದಾಗಿದೆ. ಪದವಿ ಕೋರ್ಸ್‌ಗಳು 3 ವರ್ಷ ಅವಧಿಯಲ್ಲಿ ಅಧ್ಯಯನ ಮಾಡಬಹುದಾಗಿರುತ್ತದೆ. ಕೆಲವು ಕೋರ್ಸ್‌ಗಳು 4 ವರ್ಷ (ಥೆರಪಿ + ಪ್ರಾಕ್ಟಿಕಲ್ ಟ್ರೈನಿಂಗ್) ಅವಧಿ ಅಧ್ಯಯನದ ಕೋರ್ಸ್‌ಗಳಾಗಿರುತ್ತದೆ.

<strong>ಗಣಿತ ವಿಷಯದಲ್ಲಿ ಆಸಕ್ತಿ ಇಲ್ಲಾ ಅಂದ್ರೆ ಈ ಸುಲಭ ಕೋರ್ಸ್‌ಗಳನ್ನು ಮಾಡಿ</strong>ಗಣಿತ ವಿಷಯದಲ್ಲಿ ಆಸಕ್ತಿ ಇಲ್ಲಾ ಅಂದ್ರೆ ಈ ಸುಲಭ ಕೋರ್ಸ್‌ಗಳನ್ನು ಮಾಡಿ

2. ಟಾಪ್ ಡಿಪ್ಲೋಮ ಪ್ಯಾರಾಮೆಡಿಕಲ್ ಕೋರ್ಸ್‌ಗಳು:

* ಡಿಪ್ಲೋಮ ಇನ್ ಫಿಸಿಯೋಥೆರಪಿ
* ಡಿಪ್ಲೋಮ ಇನ್ ಆಕ್ಯುಪೇಷನಲ್ ಥೆರಪಿ
* ಡಿಓಟಿಟಿ ( ಡಿಪ್ಲೋಮ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ)
* ಡಿಪ್ಲೋಮ ಇನ್ ಡಯಾಲಿಸಿಸ್ ಟೆಕ್ನಾಲಜಿ
* ಡಿಎಂಎಲ್‌ಟಿ ( ಡಿಪ್ಲೋಮ ಇನ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ)
* ಡಿಪ್ಲೋಮ ಇನ್ X-ray ಟೆಕ್ನಾಲಜಿ
* ಡಿಪ್ಲೋಮ ಇನ್ ರೇಡಿಯೋಗ್ರಫಿ
* ಡಿಪ್ಲೋಮ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ
* ಡಿಪ್ಲೋಮ ಇನ್ ಮೆಡಿಕಲ್ ರೆಕಾರ್ಡ್ ಟೆಕ್ನಾಲಜಿ
* ಡಿಪ್ಲೋಮ ಇನ್ ನರ್ಸಿಂಗ್ ಕೇರ್ ಅಸಿಸ್ಟೆಂಟ್
* ಎಎನ್‌ಎಂ
* ಜಿಎನ್‌ಎಂ
* ಡಿಪ್ಲೋಮ ಇನ್ ಆಫ್ತಾಲ್ಮಿಕ್ ಟೆಕ್ನಾಲಜಿ
* ಡಿಹೆಚ್‌ಎಲ್‌ಎಸ್‌ (ಡಿಪ್ಲೋಮ ಇನ್ ಹಿಯರಿಂಗ್ ಲಾಂಗ್ವೇಜ್ ಮತ್ತು ಸ್ಪೀಚ್)
* ಡಿಪ್ಲೋಮ ಇನ್ ಅನಸ್ಥೇಶಿಯಾ ಟೆಕ್ನಾಲಜಿ
* ಡಿಪ್ಲೋಮ ಇನ್ ಡೆಂಟಲ್ ಹೈಜೀನಿಸ್ಟ್
* ಡಿಪ್ಲೋ ಮ ಇನ್ ರೂರಲ್ ಹೆಲ್ತ್ ಕೇರ್
* ಡಿಪ್ಲೋಮ ಇನ್ ಕಮ್ಯುನಿಟಿ ಹೆಲ್ತ್ ಕೇರ್

ಡಿಪ್ಲೋಮ ಕೋರ್ಸ್‌ಗಳನ್ನು 12 ಅಥವಾ 10 ನೇ ತರಗತಿ ವಿದ್ಯಾರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮಾಡಬಹುದಾಗಿದೆ. 1 ರಿಂದ 3 ವರ್ಷ ಅವಧಿಯ ಡಿಪ್ಲೋಮ ಲಭ್ಯವಿದ್ದು ವಿದ್ಯಾರ್ಥಿಗಳು ಈ ಬಗೆಗೆ ಹೆಚ್ಚಿನ ಮಾಹಿತಿಯನ್ನು ಅಂತರ್ಜಾಲದಲ್ಲಿ ಪಡೆಯಬಹುದು.

3. ಟಾಪ್ ಸರ್ಟಿಫಿಕೇಟ್ ಪ್ಯಾರಾಮೆಡಿಕಲ್ ಕೋರ್ಸ್‌ಗಳು:

* ಸರ್ಟಿಫಿಕೇಟ್ ಇನ್ X-ray ಟೆಕ್ನೀಶಿಯನ್
* ಸರ್ಟಿಫಿಕೇಟ್ ಇನ್ ಲ್ಯಾಬ್ ಅಸಿಸ್ಟೆಂಟ್ / ಟೆಕ್ನೀಶಿಯನ್
* ಸರ್ಟಿಫಿಕೇಟ್ ಇನ್ ಡೆಂಟಲ್ ಅಸಿಸ್ಟೆಂಟ್
* ಸರ್ಟಿಫಿಕೇಟ್ ಇನ್ ಆಪರೇಷನ್ ಥಿಯೇಟರ್ ಅಸಿಸ್ಟೆಂಟ್
* ಸರ್ಟಿಫಿಕೇಟ್ ಇನ್ ನರ್ಸಿಂಗ್ ಕೇರ್ ಅಸಿಸ್ಟೆಂಟ್
* ಸರ್ಟಿಫಿಕೇಟ್ ಇನ್ ಇಸಿಜಿ ಮತ್ತು ಸಿಟಿ ಸ್ಕ್ಯಾನ್ ಟೆಕ್ನೀಶಿಯನ್
* ಸರ್ಟಿಫಿಕೇಟ್ ಇನ್ ಡಯಾಲಿಸಿಸ್ ಟೆಕ್ನೀಶಿಯನ್
* ಸರ್ಟಿಫಿಕೇಟ್ ಇನ್ ಹೋಮ್ ಬೇಸ್ಡ್ ಹೆಲ್ತ್ ಕೇರ್
* ಸರ್ಟಿಫಿಕೇಟ್ ಇನ್ ರೂರಲ್ ಹೆಲ್ತ್ ಕೇರ್
* ಸರ್ಟಿಫಿಕೇಟ್ ಇನ್ ಹೆಚ್‌ಐವಿ ಮತ್ತು ಫ್ಯಾಮಿಲಿ ಎಜುಕೇಶನ್
* ಸರ್ಟಿಫಿಕೇಟ್ ಇನ್ ನ್ಯೂಟ್ರೀಶನ್ ಮತ್ತು ಚೈಲ್ಡ್‌ ಕೇರ್

<strong>ನೀವು ಮನೆಯಿಂದಲೇ ಕಲಿಯಬಹುದಾದ ಉಚಿತ ಆನ್ಲೈನ್ ಕೋರ್ಸ್ ಗಳು</strong>ನೀವು ಮನೆಯಿಂದಲೇ ಕಲಿಯಬಹುದಾದ ಉಚಿತ ಆನ್ಲೈನ್ ಕೋರ್ಸ್ ಗಳು

ಕನಿಷ್ಟ 10 ನೇತರಗತಿ ವಿದ್ಯಾರ್ಹತೆಯುಳ್ಳ ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹುದು. ವಿದ್ಯಾರ್ಥಿಗಳು 6 ತಿಂಗಳ ಸರ್ಟಿಫಿಕೇಟ್ ಕೋರ್ಸ್‌ ಇಂದ ಹಿಡಿದು 2 ವರ್ಷ ಅವಧಿಯ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡಬಹುದು.

ಮೇಲೆ ತಿಳಿಸಿದ ಎಲ್ಲಾ ಕೋರ್ಸ್‌ಗಳನ್ನು ಹೊರತುಪಡಿಸಿ ನೀವು ಪಿಜಿ ಡಿಪ್ಲೋಮ, ಪಿಜಿ ಸರ್ಟಿಫಿಕೇಟ್ ಮತ್ತು ಪಿಜಿ ಪದವಿ ಕೋರ್ಸ್‌ಗಳನ್ನು ಭಾರತದಲ್ಲಿ ಅಧ್ಯಯನ ಮಾಡಬಹುದು.ನಿಮಗೆ ವೈದ್ಯಕೀಯ ಕ್ಷೇತ್ರಕ್ಕೆ ಹೋಗಬೇಕು ಮತ್ತು ಬೇಗ ಉದ್ಯೋಗವನ್ನು ಪಡೆಯಬೇಕು ಎಂಬ ಆಸೆ ಇದ್ದಲ್ಲಿ ಇಲ್ಲಿ ನೀಡಲಾಗಿರುವ ಕೋರ್ಸ್ಸ್‌ಗಳಲ್ಲಿ ನಿಮಗೆ ಯಾವುದು ಸೂಕ್ತವೋ ಅದನ್ನೇ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಬಹುದು ಜೊತೆಗೆ ಉತ್ತಮ ಆದಾಯವನ್ನು ಕೂಡ ಗಿಟ್ಟಿಸಿಕೊಳ್ಳಬಹುದು.

For Quick Alerts
ALLOW NOTIFICATIONS  
For Daily Alerts

English summary
Do you want to pursue a good paramedical course after completing 10th or 12th? Here is the courses list. Read on.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X