World Pharmacist Day 2021 : ಪ್ರವೇಶ ಪರೀಕ್ಷೆ ಮತ್ತು ಟಾಪ್ ಕಾಲೇಜುಗಳ ಲೀಸ್ಟ್ ಇಲ್ಲಿದೆ

ಪಿಯುಸಿ ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳು ಸಾಮಾನ್ಯವಾಗಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಹೆಜ್ಜೆ ಇಡಲು ಬಯಸುತ್ತಾರೆ. ಆದರೆ ಈಗಿನ ದಿನಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಪಿಯುಸಿ ವಿಜ್ಞಾನ ಕಲಿಕೆಯ ನಂತರ ಫಾರ್ಮಸಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಇಚ್ಚಿಸುತ್ತಿದ್ದಾರೆ. ಇಲ್ಲಿಯೂ ಉದ್ಯೋಗಾವಕಾಶಗಳು ಹೆಚ್ಚಿವೆ. ಹಾಗಾಗಿ ನೀವೂ ಕೂಡ ಫಾರ್ಮಾಸಿ ಕೋರ್ಸ್ ಮಾಡಲು ಇಚ್ಚಿಸಿದಲ್ಲಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಡಿಪ್ಲೋಮಾ ಕೋರ್ಸ್ ಗಳನ್ನು ಅಧ್ಯಯನ ಮಾಡಬಹುದು.

ಫಾರ್ಮಾಸಿ ಕೋರ್ಸ್ ಪ್ರವೇಶಾತಿಗೆ ಪ್ರಮುಖ ಪ್ರವೇಶ ಪರೀಕ್ಷೆಗಳಿವು

ಫಾರ್ಮಾಸಿ ಕೋರ್ಸ್ ಅನ್ನು ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು ಯಾವೆಲ್ಲಾ ಪ್ರವೇಶ ಪರೀಕ್ಷೆಗೆ ಹಾಜರಾಗಬೇಕಿರುತ್ತದೆ ಮತ್ತು ಫಾರ್ಮಾಸಿ ಕೋರ್ಸ್ ಗಳನ್ನು ಅಧ್ಯಯನ ಮಾಡಲು ಲಭ್ಯವಿರುವ ಉತ್ತಮ ಕಾಲೇಜುಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ನೀಡುತ್ತಿದ್ದೇವೆ ಓದಿ ತಿಳಿಯಿರಿ.

ಪದವಿ ಫಾರ್ಮಸಿ ಆಪ್ಟಿಟ್ಯೂಡ್ ಪರೀಕ್ಷೆ (GPAT):

ಪದವಿ ಫಾರ್ಮಸಿ ಆಪ್ಟಿಟ್ಯೂಡ್ ಪರೀಕ್ಷೆ (GPAT):

ಜಿಪಿಎಟಿ ಎನ್ನುವುದು ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದ್ದು, ಈ ಪರೀಕ್ಷೆಯನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ಎಂಪಿ ಫಾರ್ಮಾ ಮತ್ತು ತತ್ಸಮಾನ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ನಡೆಸುತ್ತದೆ.ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಇದಾಗಿದ್ದು, ಪ್ರತಿ ವರ್ಷ ಜಿಪಿಎಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

ರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RUHS) ಫಾರ್ಮಸಿ ಪ್ರವೇಶ ಪರೀಕ್ಷೆ:

ರಾಜಸ್ಥಾನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RUHS) ಫಾರ್ಮಸಿ ಪ್ರವೇಶ ಪರೀಕ್ಷೆ:

ರಾಜಸ್ಥಾನದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RUHS) ಫಾರ್ಮಸಿ ಪ್ರವೇಶ ಪರೀಕ್ಷೆಯನ್ನು BPharm ಮತ್ತು DPharm ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

ಬಿಫಾರ್ಮಾ ಕೋರ್ಸ್ ಗಳಿಗೆ ಅಭ್ಯರ್ಥಿಗಳು PCB (ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ) ವಿಷಯಗಳೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಡಿಫಾರ್ಮಾ ಕೋರ್ಸ್ ಗಳಿಗೆ ಅಭ್ಯರ್ಥಿಗಳು ಬಿಫಾರ್ಮಾ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು.

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಮತ್ತು ಸಂಶೋಧನಾ ಜಂಟಿ ಪ್ರವೇಶ ಪರೀಕ್ಷೆ ಅಥವಾ (NIPER JEE) :
 

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಮತ್ತು ಸಂಶೋಧನಾ ಜಂಟಿ ಪ್ರವೇಶ ಪರೀಕ್ಷೆ ಅಥವಾ (NIPER JEE) :

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಎಜುಕೇಶನ್ ಮತ್ತು ರಿಸರ್ಚ್ ಜಂಟಿ ಪ್ರವೇಶ ಪರೀಕ್ಷೆ (NIPER JEE) ಅನ್ನು ಫಾರ್ಮಸಿ (MPharm) ಸ್ನಾತಕೋತ್ತರ ವಿಜ್ಞಾನ (MS Pharm), ಮಾಸ್ಟರ್ಸ್ ಆಫ್ ಟೆಕ್ನಾಲಜಿ ಫಾರ್ಮಸಿ (MTech Pharm) ಮತ್ತು ಫಾರ್ಮಸಿಯಲ್ಲಿ ಪಿಹೆಚ್‌ಡಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ನಡೆಸಲಾಗುತ್ತದೆ.

NIPER JEE ಮೂಲಕ ಅಹಮದಾಬಾದ್, ಗುವಾಹಟಿ, ಹಾಜಿಪುರ, ಹೈದರಾಬಾದ್, ಕೋಲ್ಕತಾ, ರಾಯಬರೇಲಿ ಮತ್ತು ಎಸ್‌ಎಎಸ್ ನಗರದಲ್ಲಿರುವ NIPER ಸಂಸ್ಥೆಗಳಿಗೆ ಪ್ರವೇಶವನ್ನು ನೀಡಲಾಗುತ್ತದೆ.

ಎನ್‌ಎಂಐಎಂಎಸ್ ಎನ್‌ಪಿಎಟಿ :

ಎನ್‌ಎಂಐಎಂಎಸ್ ಎನ್‌ಪಿಎಟಿ :

ನರ್ಸೀ ಮೊಂಜಿ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ (NMIMS) ಬಿಫಾರ್ಮಾ + ಎಂಬಿಎ (ಫಾರ್ಮಸಿ ಟೆಕ್) ಗೆ ಪ್ರವೇಶಕ್ಕಾಗಿ NPAT ಅನ್ನು ನಡೆಸುತ್ತದೆ. ಎನ್‌ಎಂಐಎಂಎಸ್ ಎನ್‌ಪಿಎಟಿ (NMIMS NPAT)) ಫಲಿತಾಂಶದ ಆಧಾರದ ಮೇಲೆ ಮುಂಬೈ, ಶಿರಪುರ ಮತ್ತು ಹೈದರಾಬಾದ್‌ನ NPAT ಸಂಸ್ಥೆಗಳಿಗೆ ಪ್ರವೇಶ ನೀಡಲಾಗುತ್ತದೆ.

ಛತ್ತೀಸ್‌ಗಡ್ ಪ್ರಿ-ಫಾರ್ಮಸಿ ಪರೀಕ್ಷೆ (CG PPHT):

ಛತ್ತೀಸ್‌ಗಡ್ ಪ್ರಿ-ಫಾರ್ಮಸಿ ಪರೀಕ್ಷೆ (CG PPHT):

ಬ್ಯಾಚುಲರ್ ಆಫ್ ಫಾರ್ಮಸಿ (BPharma) ಮತ್ತು ಡಾಕ್ಟರ್ ಆಫ್ ಫಾರ್ಮಸಿ (DPharma) ಕೋರ್ಸ್‌ಗಳ ಪ್ರವೇಶಕ್ಕಾಗಿ CG PPHT ಅನ್ನು ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ವಿದ್ಯಾರ್ಥಿಗಳು ಛತ್ತೀಸ್ಗಡ್ ಫಾರ್ಮಸಿ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಬಹುದು.

TS EAMCET ಫಾರ್ಮಸಿ :

TS EAMCET ಫಾರ್ಮಸಿ :

ಟಿಎಸ್ ಇಎಎಂಸಿಇಟಿ ಅನ್ನು ಎಂಜಿನಿಯರಿಂಗ್ ಮತ್ತು ಕೃಷಿ ಕೋರ್ಸ್‌ಗಳ ಜೊತೆಗೆ ಫಾರ್ಮಸಿ ಪ್ರವೇಶಕ್ಕಾಗಿ ನಡೆಸಲಾಗುತ್ತದೆ. ರಾಜ್ಯ ಮಟ್ಟದ ಪರೀಕ್ಷೆ ಇದಾಗಿದ್ದು, ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

AP EAMCET ಫಾರ್ಮಸಿ :

AP EAMCET ಫಾರ್ಮಸಿ :

ಎಪಿ ಇಎಎಂಸಿಇಟಿ ಅಂದರೆ ಆಂಧ್ರಪ್ರದೇಶ ಎಂಜಿನಿಯರಿಂಗ್ ಕೃಷಿ ಮತ್ತು ಫಾರ್ಮಸಿ ಸಾಮಾನ್ಯ ಪ್ರವೇಶ ಪರೀಕ್ಷೆ (AP EAPCET) ಎಂದು ಕರೆಯಲಾಗುತ್ತದೆ. ಇದು ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.

ಪರೀಕ್ಷೆಯನ್ನು ಬಿ ಫಾರ್ಮ್ ಮತ್ತು ಡಾಕ್ಟರ್ ಆಫ್ ಫಾರ್ಮಸಿ (ಫಾರ್ಮ್ ಡಿ) ಕೋರ್ಸ್‌ಗಳ ಪ್ರವೇಶಕ್ಕಾಗಿ ಬಳಸಲಾಗುತ್ತದೆ.

ಇವುಗಳ ಹೊರತಾಗಿ ವಿವಿಧ ರಾಜ್ಯಗಳು ಪದವಿಪೂರ್ವ ಹಂತದಲ್ಲಿ ಫಾರ್ಮಸಿ ಪ್ರವೇಶಕ್ಕಾಗಿ ಸಿಇಟಿ ನಡೆಸುತ್ತವೆ.

2021 ರ ಭಾರತದ ಟಾಪ್ ಫಾರ್ಮಸಿ ಕಾಲೇಜುಗಳ ಪಟ್ಟಿ:

2021 ರ ಭಾರತದ ಟಾಪ್ ಫಾರ್ಮಸಿ ಕಾಲೇಜುಗಳ ಪಟ್ಟಿ:

NIRF 2021ರ ಶ್ರೇಯಾಂಕಗಳ ಪ್ರಕಾರ ಇವುಗಳು ಭಾರತದ ಟಾಪ್ ಫಾರ್ಮಸಿ ಕಾಲೇಜುಗಳಾಗಿವೆ:

1. ಜಾಮಿಯಾ ಹಮ್ದಾರ್ಡ್, ನವದೆಹಲಿ

2. ಪಂಜಾಬ್ ವಿಶ್ವವಿದ್ಯಾಲಯ, ಚಂಡೀಗ

3. ಬಿರ್ಲಾ ತಂತ್ರಜ್ಞಾನ ಮತ್ತು ವಿಜ್ಞಾನ ಸಂಸ್ಥೆ (ಬಿಟ್ಸ್), ಪಿಲಾನಿ

4. ರಾಷ್ಟ್ರೀಯ ಔಷಧ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (NIPER), ಮೊಹಾಲಿ

5. ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ, ಮುಂಬೈ

6. NIPER ಹೈದರಾಬಾದ್

7. ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಊಟಿ

8. ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್, ಮಣಿಪಾಲ

9. ಜೆಎಸ್ಎಸ್ ಕಾಲೇಜ್ ಆಫ್ ಫಾರ್ಮಸಿ, ಮೈಸೂರು

10. ನಿಪರ್ ಅಹಮದಾಬಾದ್

For Quick Alerts
ALLOW NOTIFICATIONS  
For Daily Alerts

English summary
Here we are providing list of popular pharmacy entrance exams and top pharmacy colleges in india.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X