ಸವಿ ಸವಿ ನೆನಪು... ಶಾಲೆಯಲ್ಲಿ ಅನುಭವಿಸಿದ್ದ ಶಿಕ್ಷೆಗಳಿವು!

By Kavya

ನಮ್ಮ ಜೀವನದಲ್ಲಿ ಶಾಲಾ ದಿನಗಳು ಬೆಸ್ಟ್ ದಿನಗಳು. ಶಾಲೆಯಲ್ಲಿ ಎಲ್ಲಾ ರೀತಿಯ ಫನ್ ಜತೆಗೆ ಸ್ನೇಹಿತರು ಕೂಡಾ ಸಿಗುತ್ತಾರೆ. ಇವಿಷ್ಟೇ ಅಲ್ಲದೇ ಪನಿಶ್ ಮೆಂಟ್ ಪದದ ಪರಿಚಯ ಕೂಡಾ ಶಾಲೆಯಲ್ಲೇ ಆಗುತ್ತದೆ. ಇನ್ನು ಈ ಪನಿಶ್ ಮೆಂಟ್ ಅಂದ್ರೆ ಶಿಕ್ಷೆ. ಶಾಲೆಯಲ್ಲಿ ಅದೆಷ್ಟೋ ಟಾಪರ್ ಇರಲಿ, ಇಲ್ಲ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳೇ ಇರಲಿ ಈ ಶಿಕ್ಷೆಯಿಂದ ಯಾರೂ ಕೂಡಾ ತಪ್ಪಿಸಿಕೊಂಡಿರಲ್ಲ.

ಸವಿ ಸವಿ ನೆನಪು... ಶಾಲೆಯಲ್ಲಿ ಅನುಭವಿಸಿದ್ದ ಶಿಕ್ಷೆಗಳಿವು!

 

ಶಾಲೆಯಲ್ಲಿ ಇಷ್ಟವಿಲ್ಲದಿದ್ದರೂ ರೂಢಿಸಿಕೊಂಡ ಹವ್ಯಾಸ... ಭವಿಷ್ಯತ್ ನಲ್ಲಿ ನೆರವಾಗುತ್ತಾ?

ನಾವು ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬಾರದು ಅನ್ನೋ ಕಾರಣಕ್ಕೆ ನಮಗೆ ಶಾಲೆಗಳಲ್ಲಿ ಶಿಕ್ಷೆ ನೀಡಲಾಗುತಿತ್ತು. ಆದ್ರೆ ಈಗೆಲ್ಲಾ ಮಕ್ಕಳಿಗೆ ಶಿಕ್ಷೆ ಕೊಡಬಾರದು ಎಂದು ಸರ್ಕಾರವೇ ಅನೇಕ ರೂಲ್ಸ್ ಗಳನ್ನ ತಂದಿದೆ. ಆದ್ರೆ ಏನೇ ಹೇಳಿ ಅಂದು ನಾವು ಅನುಭವಿಸದ ಶಿಕ್ಷೆಯನ್ನ ಇಂದು ಯೋಚಿಸುವಾಗ ನಾವು ಶಾಲಾ ಜೀವನವನ್ನ ಮಿಸ್ ಮಾಡಿಕೊಳ್ಳುತ್ತೇವೆ.

ಶಾಲೆಗಳಲ್ಲಿ ಅಂದು ನೀಡಿರುವ ಶಿಕ್ಷೆಗಳ ಲಿಸ್ಟ್ ಇಲ್ಲಿದೆ:

ಕೋಳಿ:

ಹೌದು ಹೆಚ್ಚಿನ ವಿದ್ಯಾರ್ಥಿಗಳು ಈ ಶಿಕ್ಷೆಯನ್ನ ಅನುಭವಿಸಿರುತ್ತೀರಿ. ಅಂದು ಈ ಪನಿಶ್ ಮೆಂಟ್ ಹೆಚ್ಚಾಗಿ ನೀಡುತ್ತಿದ್ದರು. ಏನಾದ್ರೂ ತಪ್ಪು ಮಾಡಿದಾಗ ತುಂಬಾ ಹೊತ್ತಿನವರೆಗೆ ಕೋಳಿಯಂತೆ ಕೂರಿಸುತ್ತಿದ್ದರು.

ವಿದೇಶಿ ವಿದ್ಯಾರ್ಥಿಗಳಿಗೆ ಫ್ರೀ ಎಜ್ಯುಕೇಶನ್ ನೀಡುವ ಟಾಪ್ 5 ರಾಷ್ಟ್ರಗಳು!

ಕಿವಿಗಳನ್ನ ಹಿಡಿಯುವುದು:

ಇದು ಒಂದು ವಿಚಿತ್ರ ಹಿಂಸೆಯಾಗಿತ್ತು. ಆದ್ರೆ ಟೀಚರ್ ವಿದ್ಯಾರ್ಥಿಗಳಿಗೆ ಪರಸ್ಪರ ಕಿವಿಯನ್ನ ಹಿಡಿಯುವಂತೆ ಶಿಕ್ಷೆ ನೀಡಿದಾಗ ಈ ಶಿಕ್ಷೆ ನಿಜಕ್ಕೂ ಫನ್ ಎಂದು ಅನಿಸುತಿತ್ತು.

ಸ್ಕೇಲ್ ನಿಂದ ಕೈ ಹಿಂಭಾಗಕ್ಕೆ ಪೆಟ್ಟು:

ಹೌದು ಹೋಮ್ ವರ್ಕ್ ಮಾಡದೇ ಬಂದ್ರೆ, ಪೆನ್ ಅಥವಾ ಪೆನ್ಸಿಲ್ ಮರೆತು ಬಂದ್ರೆ, ಪುಸ್ತಕ ತರದೇ ಕ್ಲಾಸ್ ಗೆ ಹಾಜರಾದ್ರೆ ಈ ಶಿಕ್ಷೆ ಖಾಯಂ. ಇಂದಿಗೂ ಈ ಶಿಕ್ಷೆ ಎನಿಸುವಾಗ ಮೈ ನಡುಕಬರವುದಂತೂ ನಿಜ.

ಲಾಸ್ಟ್ ಬೆಂಚರ್ಸ್... ನೀವು ಕೂಡಾ ವಿದ್ಯಾರ್ಥಿಯಾಗಿದ್ದಾಗ ಹೀಗೆಲ್ಲಾ ಮಾಡಿದ್ದೀರಾ?

 

ಕೈ ಮೇಲೆ ಮಾಡಿ ನಿಲ್ಲುವುದು:

ಇದು ತುಂಬಾ ನೋವಿನ ಪನಿಶ್ ಮೆಂಟ್ ಎಂಬುವುದರಲ್ಲಿ ಯಾವುದೇ ಡೌಟ್ ಇಲ್ಲ. ಟೀಚರ್ ನಿಮಗೆ ಕೈ ಮೇಲೆ ಮಾಡಿ ನಿಲ್ಲುವಂತೆ ನೀಡಿದ ಶಿಕ್ಷೆ ನಿಮಗೆ ಈಗಲೂ ನೆನಪಿರಬಹುದು. ಕೇಳಲು ಈ ಶಿಕ್ಷೆ ತುಂಬಾ ಹಗುರ ಅನಿಸಬಹುದು ಆದ್ರೆ ಕೈ ಎತ್ತಿದ ಕೆಲವೇ ಕ್ಷಣಗಳಲ್ಲಿ ಕೈ ನೋಯಲು ಪ್ರಾರಂಭಿಸುತ್ತದೆ.

ಹೆತ್ತವರನ್ನ ಕರೆಯಿಸುವುದು:

ಹೌದು ಮೇಲೆ ಹೇಳಿರುವ ಎಲ್ಲಾ ಶಿಕ್ಷೆ ನೀಡಿದ ಬಳಿಕವೂ ವಿದ್ಯಾರ್ಥಿಯೂ ಸುಧಾರಿಸದೇ ಇದ್ದರೆ ಕೊನೆಯದಾಗಿ ಹೆತ್ತವರು ಇಲ್ಲ ಪೋಷಕರನ್ನ ಶಾಲೆಗೆ ಕರೆಯಿಸಲಾಗುತ್ತದೆ. ಬಳಿಕ ಹೆತ್ತವರಲ್ಲಿ ಮಕ್ಕಳ ಬಗ್ಗೆ ದೂರಲಾಗುತ್ತದೆ.

ನೀವು ಯಾವ ಟೈಪ್ ಉದ್ಯೋಗಸ್ಥ...ಇಲ್ಲಿರುವ ಯಾವ ಕೆಟಗರಿಯಲ್ಲಿ ನೀವಿದ್ದೀರಾ ಚೆಕ್ ಮಾಡಿಕೊಳ್ಳಿ?

For Quick Alerts
ALLOW NOTIFICATIONS  
For Daily Alerts

English summary
Teachers used to give us punishment to bring us to our senses and make us realize that every mistake has repercussions.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X