Lockdown: ಬೋರ್ ಹೋಗಲಾಡಿಸಲು... ಯೂಸ್‌ಫುಲ್ ಆಗಿರುವಂತಹದು ಏನೆಲ್ಲಾ ಮಾಡಬಹುದು?

ಬನ್ನಿ ಬೋರ್ ಆದಾಗ ಪ್ರಯೋಜನಕಾರಿಯಾಗಿರುವಂತದ್ದು ಏನೆಲ್ಲಾ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ.

By Kavya

ನಮ್ಮ ಲೈಫನ್ನ ಟೆಕ್ನಾಲಾಜಿ ಮತ್ತಷ್ಟು ಸುಲಭವಾಗಿ ಮಾಡಿದೆ. ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾದಂತೆ ಕೊನೆಗೆ ನಮಗೆ ಅದುವೇ ಬೋರ್ ಆಗಲು ಪ್ರಾರಂಭಿಸಿದೆ. ಅಷ್ಟೇ ಅಲ್ಲ ಈಗಂತೂ ಮಕ್ಕಳು ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಇದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ದಿನವನ್ನು ಕಳೆಯುವುದೇ ಅವರಿಗೆ ಒಂದು ರೀತಿಯ ಸವಾಲಾಗಿದೆ.

ಬೋರ್ ಹೋಗಲಾಡಿಸಲು ಏನೆಲ್ಲಾ ಮಾಡಬಹುದು?

ಈ ಸಮಯವನ್ನು ಚೆನ್ನಾಗಿ ಪ್ರಯೋಜನಕಾರಿಯಾಗಿ ಕಳೆಯ ಬೇಕೆಂದಿದ್ದರೆ ಹೊಸತೇನಾದ್ರೂ ಕಲಿಯಲು ಮುಂದಾಗಿ. ನಿರಂತರವಾಗಿ ಏನನ್ನಾದರೂ ಕಲಿಯುತ್ತಾ ಇದ್ರೆ ನಮಗೆ ಯಾವತ್ತೂ ಬೋರ್ ಎಂಬುವುದು ಆಗುವುದಿಲ್ಲ. ಬನ್ನಿ ಬೋರ್ ಆದಾಗ ಪ್ರಯೋಜನಕಾರಿಯಾಗಿರುವಂತದ್ದು ಏನೆಲ್ಲಾ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ ಮುಂದಕ್ಕೆ ಓದಿ

ಪುಸ್ತಕ ಓದುವುದು:

ಮೊದಲ ಅಂಶ ಏನೆಂದ್ರೆ ನೀವು ಓದಬೇಕು. ಹೆಚ್ಚು ಹೆಚ್ಚು ಓದಬೇಕು. ಯಾವಾಗಲೂ ಓದುವಂತಹ ಪುಸ್ತಕವನ್ನೇ ಓದಬೇಡಿ ಬದಲಿಗೆ ಎಕ್ಸೈಟಿಂಗ್ ಆಗಿರುವುದನ್ನ ನೀವು ಓದಿಕೊಳ್ಳಿ. ಎಪಿಜೆ ಅಬ್ದುಲ್ ಕಲಾಂ, ಜವಹರ್ ಲಾಲ್ ನೆಹರೂ ಸೇರಿದಂತೆ ಯಾರಾದ್ರೂ ಫೇಮಸ್ ಪರ್ಸನಾಲಿಟಿ ಅವರ ಬಗ್ಗೆಗಿನ ಬಯೋಗ್ರಾಫಿ ಓದಿ.

ಹೊಸತೇನಾದ್ರೂ ಕಲಿಯಿರಿ:

ಕ್ರಾಫ್ಟ್, ಸ್ಟಿಚಿಂಗ್, ಎಂಬ್ರಾಯ್ಡಿಂಗ್ ಸೇರಿದಂತೆ ಏನಾದ್ರೂ ಹೊಸತನ್ನ ಕಲಿಯಿರಿ. ಅದಕ್ಕಾಗಿಯೇ ಗೂಗಲ್ ಸಹಾಯ ಪಡೆಯಿರಿ. ಇದೀಗ ಪ್ರತಿಯೊಂದು ಟ್ರೈನಿಂಗ್ ನಿಮಗೆ ಗೂಗಲ್ ನೀಡಬಲ್ಲದು. ಮನೆಯಲ್ಲೇ ಕುಳಿತು ಎಲ್ಲವನ್ನ ಕೂಡಾ ಫ್ರೀ ಆಗಿ ಕಲಿಯಿರಿ.

ವಾಲಂಟರಿಂಗ್ ಹಾಗೂ ಸೋಶಲ್ ವರ್ಕ್:

ಫ್ರೀ ಇದ್ದೀರಾ ಎಂದಾದ್ರೆ ಅನಾಥಶ್ರಮ ಗಳಿಗೆ ಹೋಗಿ ಅಲ್ಲಿನ ಜನರ ಸೇವೆ ಹಾಗೂ ಯಾವುದಾದ್ರೂ ಸಮಾರಂಭಕ್ಕೆ ತೆರಳಿ ವಾಲಂಟರಿಂಗ್ ಮಾಡಿ. ಇದರಿಂದ ನಿಮ್ಮ ಬೋರ್ ದೂರವಾಗುವುದು ಅಷ್ಟೇ ಅಲ್ಲ ಲೈಫ್ ಏನೆಂದು ನಿಮಗೆ ತಿಳಿಯುವುದು.

ನಿಮ್ಮೊಳಗಿನ ಕಲೆಗಾರನನ್ನ ಹೊರತನ್ನಿ:

ಪೈಂಟಿಂಗ್ ಪ್ರಾರಂಭಿಸಿ. ನಿಮ್ಮೊಳಗೆ ಅವಿತಿರುವ ಕಲೆಗಾರನನ್ನ ಹೊರಗಡೆ ತನ್ನಿ. ನೀವು ಆರ್ಟಿಸ್ಟ್ ಅಲ್ಲಂದ್ರೂ ಕೂಡಾ ಒಂದು ಖಾಲಿ ಹಾಳೆ ತೆಗೆದು ಬಣ್ಣಗಳಲ್ಲಿ ಗೀಚುತ್ತಾ ಹೋಗಿ. ಕೊನೆಗೆ ನಿಮಗೆ ಅದರಲ್ಲಿ ಆಸಕ್ತಿ ಬರುವುದು ಮಾತ್ರವಲ್ಲದೆ ನಿಮ್ಮ ಟೈಂ ಕೂಡಾ ಚೆನ್ನಾಗಿ ಪಾಸ್ ಆಗುವುದು.

ಮ್ಯೂಸಿಕ್, ಡ್ಯಾನ್ಸ್ ಹಾಗೂ ಸಿಂಗಿಂಗ್ ಕ್ಲಾಸ್‌ಗಳಿಗೆ ಸೇರಿ:

ಏನಾದ್ರೂ ಹೊಸತ್ತನ್ನ ಕಲಿಯಬೇಕೆಂದು ನೀವು ಅಂದುಕೊಂಡಿದ್ದರೆ ನೋ ವರಿ ಮ್ಯೂಸಿಕ್, ಡ್ಯಾನ್ಸ್ ಹಾಗೂ ಸಿಂಗಿಂಗ್ ಕ್ಲಾಸ್ ಗಳಲ್ಲಿ ಯಾವುದಾದರೂ ಒಂದಕ್ಕೆ ಜಾಯಿನ್ ಆಗಿ. ಇಂತಹ ಕ್ಲಾಸ್ ಗಳು ನಿಮ್ಮ ಬೋರನ್ನ ಕ್ಷಣ ಮಾತ್ರದಲ್ಲಿ ಮಾಯಮಾಡುತ್ತವೆ.

ಟ್ರಾವೆಲ್ ಮಾಡಿ:

ನಿಮಗೆ ಟ್ರಾವೆಲ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಾ.. ಹಾಗಿದ್ರೆ ನಿಮ್ಮ ಬಜೆಟ್, ವೆದರ್ ಎಲ್ಲಾ ಲೆಕ್ಕಾ ಹಾಕಿಕೊಂಡು ಒಂದು ಪ್ಲ್ಯಾನ್ ಮಾಡಿಕೊಳ್ಳಿ. ಹಾಗೂ ಆ ಪ್ಲೇಸ್ ಗೆ ಟೂರ್ ಮಾಡಿ ಎಂಜಾಯ್ ಮಾಡಿ. ಅಷ್ಟೇ ಅಲ್ಲ ಅದರ ಬಗ್ಗೆ ಬರೆದಿಟ್ಟುಕೊಳ್ಳಿ ಕೂಡಾ.

For Quick Alerts
ALLOW NOTIFICATIONS  
For Daily Alerts

English summary
Technology has made our life very easier. during lockdown Sometime we feel bored even after occupied by electronic gadgets. when we will getting bore actually an opportunity for you to improve your life sometime.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X