Lunar Eclipse 2021: ಈ ವರ್ಷದ ಮೊದಲ ಚಂದ್ರಗ್ರಹಣ ದಿನಾಂಕ, ಸಮಯ ಮತ್ತು ಎಲ್ಲೆಲ್ಲಿ ನೋಡಬಹುದು ? ಇಲ್ಲಿದೆ ಮಾಹಿತಿ

ಈ ವರ್ಷದ ಮೊದಲ ಚಂದ್ರಹಣ ಎಂದು ? ಎಲ್ಲಿ ಮತ್ತು ಯಾವ ಸಮಯದಲ್ಲಿ ಕಾಣಬಹುದು

ಈ ವರ್ಷ ಅಂದರೆ 2021 ರಲ್ಲಿ ಇನ್ನೂ ಸೂರ್ಯ ಮತ್ತು ಚಂದ್ರ ಗ್ರಹಣ ಸಂಭವಿಸಿಲ್ಲ. ಈ ವರ್ಷ ಒಟ್ಟು 4 ಗ್ರಹಣಗಳು ಇವೆ. ಮೊದಲ ಗ್ರಹಣವು ಚಂದ್ರ ಗ್ರಹಣ ಅಥವಾ ರಕ್ತ ಚಂದ್ರವಾಗಿರುತ್ತದೆ. ಇದು ಪೂರ್ಣ ಚಂದ್ರ ಗ್ರಹಣವಾಗಲಿದೆ. ಗ್ರಹಣಗಳಿಗೆ ಧಾರ್ಮಿಕ ಮತ್ತು ಜ್ಯೋತಿಷ್ಯ ಪ್ರಾಮುಖ್ಯತೆ ಮತ್ತು ವೈಜ್ಞಾನಿಕ ಮಹತ್ವವಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಗ್ರಹಣವನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಗ್ರಹಣ ಸಮಯದಲ್ಲಿ ಎಲ್ಲಾ ರೀತಿಯ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಈ ವರ್ಷ ಚಂದ್ರ ಮತ್ತು ಸೂರ್ಯಗ್ರಹಣ ಯಾವಾಗ ನಡೆಯುತ್ತದೆ ಎಂದು ಇಂದು ನಾವು ನಿಮಗೆ ತಿಳಿಸುತ್ತೇವೆ.

 
ಈ ವರ್ಷದ ಮೊದಲ ಚಂದ್ರಹಣ ಎಂದು ? ಎಲ್ಲಿ ಮತ್ತು ಯಾವ ಸಮಯದಲ್ಲಿ ಕಾಣಬಹುದು

ಮೇ 26 ರಂದು ವರ್ಷದ ಮೊದಲ ಚಂದ್ರ ಗ್ರಹಣ:

ಭಾರತದಲ್ಲಿ 2021ರ ಮೊದಲ ಚಂದ್ರಗ್ರಹಣ ಮೇ 26 ರಂದು ಗೋಚರಿಸಲಿದೆ. ಈ ಒಟ್ಟು ಚಂದ್ರ ಗ್ರಹಣವನ್ನು ನೆರಳು ಚಂದ್ರ ಗ್ರಹಣವಾಗಿ ನೋಡಲಾಗುತ್ತದೆ. ಇದು ಭಾರತದಾದ್ಯಂತ ಕಾಣಿಸುವುದಿಲ್ಲ. ಅದೇ ದಿನ ಸೂಪರ್ ಮೂನ್, ಬ್ಲಡ್ ಮೂನ್ ಎರಡೂ ವಿದ್ಯಾಮಾನವೂ ಗೋಚರವಾಗಲಿದೆ. ಇದರ ನಂತರ 2021ರ ನವೆಂಬರ್ 19 ರಂದು ವರ್ಷದ ಎರಡನೇ ಚಂದ್ರಗ್ರಹಣ ನಡೆಯಲಿದೆ. ಈ ಚಂದ್ರ ಗ್ರಹಣ ಭಾರತದಲ್ಲಿಯೂ ಗೋಚರಿಸುತ್ತದೆ.

ಈ ವರ್ಷದ ಮೊದಲ ಚಂದ್ರಹಣ ಎಂದು ? ಎಲ್ಲಿ ಮತ್ತು ಯಾವ ಸಮಯದಲ್ಲಿ ಕಾಣಬಹುದು

ಜೂನ್ 10ರಂದು ವರ್ಷದ ಮೊದಲ ಸೂರ್ಯಗ್ರಹಣ:

ಚಂದ್ರ ಗ್ರಹಣವಾದ ಕೆಲವೇ ದಿನಗಳಲ್ಲಿ ಮೊದಲ ಸೂರ್ಯಗ್ರಹಣ ಸಂಭವಿಸುತ್ತದೆ. ಇದು ಜೂನ್ 10 ರಂದು ಗೋಚರಿಸಲಿದೆ. ಇದು ಭಾಗಶಃ ಸೂರ್ಯಗ್ರಹಣವಾಗಿರುತ್ತದೆ. ಈ ಗ್ರಹಣ ಭಾರತದಲ್ಲಿ ಸಂಪೂರ್ಣವಾಗಿ ಗೋಚರಿಸುವುದಿಲ್ಲ. ಇದು ಮಧ್ಯಾಹ್ನ 01:42 ಕ್ಕೆ ಪ್ರಾರಂಭವಾಗಲಿದ್ದು ದೇಶದಲ್ಲಿ ಸಂಜೆ 06:41 ಕ್ಕೆ ಕೊನೆಗೊಳ್ಳಲಿದೆ. ಏಷ್ಯಾದ ಹೆಚ್ಚಿನ ಭಾಗಗಳಲ್ಲಿ ಯುರೋಪ್, ಉತ್ತರ ಆಫ್ರಿಕಾ, ಪಶ್ಚಿಮ ಆಫ್ರಿಕಾ, ಉತ್ತರ ಅಮೆರಿಕದ ಹೆಚ್ಚಿನ ಭಾಗ, ಆರ್ಕ್ಟಿಕ್ ಮತ್ತು ಅಟ್ಲಾಂಟಿಕ್‌ನಲ್ಲಿ ಗ್ರಹಣ ಗೋಚರಿಸುತ್ತದೆ.

ಈ ವರ್ಷದ ಮೊದಲ ಚಂದ್ರಹಣ ಎಂದು ? ಎಲ್ಲಿ ಮತ್ತು ಯಾವ ಸಮಯದಲ್ಲಿ ಕಾಣಬಹುದು

ಇದರ ನಂತರ ಡಿಸೆಂಬರ್ 4 ರಂದು ಒಟ್ಟು ಸೂರ್ಯಗ್ರಹಣ ಸಂಭವಿಸುತ್ತದೆ. ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಗ್ರಹಣವು ದಕ್ಷಿಣ ಆಫ್ರಿಕಾ, ದಕ್ಷಿಣ ಆಸ್ಟ್ರೇಲಿಯಾ, ದಕ್ಷಿಣ ಅಮೆರಿಕಾ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾದಲ್ಲಿ ಗೋಚರಿಸುತ್ತದೆ.

For Quick Alerts
ALLOW NOTIFICATIONS  
For Daily Alerts

English summary
This year there will be a total of 4 eclipses. The first eclipse will be a lunar eclipse or the blood moon. Know the date, time and where to watch the eclipses.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X