MBBS Admission In India : ಭಾರತದಲ್ಲಿ ಎಂಬಿಬಿಎಸ್ ಕೋರ್ಸ್ : ಇಲ್ಲಿದೆ ಸಂಪೂರ್ಣ ಮಾಹಿತಿ

ಬಾಲ್ಯದಲ್ಲಿ ಸ್ಟೆತೊಸ್ಕೋಪ್ ಹಿಡಿದು ಬಿಳಿ ಅಂಗಿ ತೊಟ್ಟವರನ್ನು ಕಂಡೊಡನೆಯೇ ನಾನು ಡಾಕ್ಟರ್ ಆಗುತ್ತೇನೆ, ಸೂಟು ಬೂಟು ಹಾಕಿ ಸದಾ ಕಂಪ್ಯೂಟರ್ ಮುಂದೆಯೇ ಕೂತ ಅಣ್ಣ, ಅಕ್ಕ ಅಥವಾ ಚಿಕ್ಕಪ್ಪನನ್ನು ಕಂಡು ನಾನೂ ಕೂಡ ಅವರ ಹಾಗೆ ಸಾಫ್ಟ್ ವೇರ್ ಇಂಜಿನಿಯರ್ ಆಗುತ್ತೇನೆ ಮತ್ತು ಯೂನಿಫಾರ್ಮ್ ಹಾಕಿ ಗನ್ ಹಿಡಿಯುವ ಪೊಲೀಸರನ್ನು ಕಂಡು ನಾನು ಸೈನಿಕ ಆಗ್ತೇನೆ, ಪೊಲೀಸ್ ಆಗ್ತೇನೆ ಅಂತೆಲ್ಲಾ ಹೇಳಿದ್ದು ನಿಮಿಗೆಲ್ಲಾ ನೆನಪಿದ್ಯಾ ? ಪ್ರತಿಯೊಂದು ಮಗುವೂ ಬಾಲ್ಯದಲ್ಲಿ ನಾನು ಅದಾಗುತ್ತೇನೆ ಇದಾಗುತ್ತೇನೆ ಎಂಬ ಮಾತುಗಳನ್ನು ಆಡಿರುವುದನ್ನು ಕೇಳಿಯೇ ಇರುತ್ತೇವೆ. ಆದರೆ ಕಾಲ ಕಾಲಕ್ಕೆ ಮಕ್ಕಳ ಬೆಳವಣಿಗೆಯ ಹಂತದಲ್ಲಿ ಆಸೆ, ಆಸಕ್ತಿ ಮತ್ತು ಅಭಿರುಚಿಗಳು ಬದಲಾಗುತ್ತಾ ಹೋಗುತ್ತಿರುತ್ತವೆ. ಹಾಗೆಯೇ ಅವರ ಗುರಿಗಳೂ ಕೂಡ ಅವರಿಷ್ಟದ ವಿಷಯದತ್ತ ಸೆಳೆದಿರುತ್ತವೆ. ಹೀಗಿರುವಾಗ ಬಾಲ್ಯದಲ್ಲಿ ಹೇಳಿದಂತೆಯೇ ವೈದ್ಯರಾಗುವ ಹಂಬಲವುಳ್ಳವರು ತೀರಾ ವಿರಳ.

ಭಾರತದಲ್ಲಿ ಎಂಬಿಬಿಎಸ್ ಅಧ್ಯಯನ ಮಾಡಬೇಕಾ ? ಈ ಮಾಹಿತಿ ತಪ್ಪದೇ ಓದಿ

ಬಾಲ್ಯದಲ್ಲಿ ತಾನೆಂದೂ ವೈದ್ಯನಾಗಬೇಕೆಂಬ ಆಲೋಚನೆಯನ್ನೇ ಹೊತ್ತವಳಲ್ಲ ಎನ್ನುವವರೂ ಇದ್ದಾರೆ. ಆದರೆ ಅದೇನೆ ಇರಲಿ ಇಂದಿನ ಕಾಲಘಟ್ಟದಲ್ಲಿ ಎಲ್ಲಾ ಕ್ಷೇತ್ರಗಳೂ ಕೂಡ ತನ್ನದೇ ಆದ ರೀತಿಯಲ್ಲಿ ಅಗಾಧವಾಗಿ ಬೆಳೆದುಕೊಂಡಿವೆ. ಅದರಲ್ಲಿ ಈ ವೈದ್ಯಕೀಯ ಕ್ಷೇತ್ರವೂ ಕೂಡ, ಆರೋಗ್ಯದ ಮಹತ್ವ ಮತ್ತು ವೈದ್ಯಕೀಯ ಶಿಕ್ಷಣದ ಅರಿವು ಕೋವಿಡ್ ಸಾಂಕ್ರಾಮಿಕ ರೋಗ ಆವರಿಸಿದ ಬಳಿಕ ಅನೇಕರಿಗೆ ಎಚ್ಚರಿಸಿದೆ ಎಂದರೆ ಸುಳ್ಳಲ್ಲ. ಈಗಿನ ಉಕ್ರೇನ್ ಯುದ್ಧ ಸಮಯದಲ್ಲಿ ಅನೇಕರು ವಿದೇಶಕ್ಕೆ ವೈದ್ಯಕೀಯ ಶಿಕ್ಷಣ ಪಡೆಯಲು ತೆರಳಿದ್ದರು ಎಂಬ ಮಾಹಿತಿಯಿಂದಲೂ ನಮಗೆ ವೈದ್ಯಕೀಯ ಶಿಕ್ಷಣ ಮಹತ್ವ ಮತ್ತು ಏಕೆ ವಿದ್ಯಾರ್ಥಿಗಳು ವಿದೇಶಗಳಲ್ಲಿ ಶಿಕ್ಷಣ ಪಡೆಯೋಕೆ ಹೊಗ್ತಾರೆ ಎನ್ನುವ ಪ್ರಶ್ನೆಗಳು ಎದುರಾಗುತ್ತಿವೆ. ನಾವಿಂದು ಮೊದಲು ಭಾರತದಲ್ಲಿನ ವೈದ್ಯಕೀಯ ಶಿಕ್ಷಣ, ಈ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಅರ್ಹತೆಗಳು, ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಪಾವತಿಸಬೇಕಾದ ಶುಲ್ಕ, ಕೋರ್ಸ್ ಗೆ ಪ್ರವೇಶ ಪಡೆಯಲು ತೆಗೆದುಕೊಳ್ಳಬೇಕಿರುವ ಪ್ರವೇಶ ಪರೀಕ್ಷೆಗಳು, ಕೋರ್ಸ್ ಗಳನ್ನು ಮಾಡಲು ಲಭ್ಯವಿರುವ ಕಾಲೇಜುಗಳು ಮತ್ತು ಇತರೆ ಮಾಹಿತಿಯನ್ನು ಈ ಬರಹದಲ್ಲಿ ಸಂಪೂರ್ಣವಾಗಿ ನೀಡಲಿದ್ದೇವೆ ಓದಿ ತಿಳಿಯಿರಿ.

ಭಾರತದಲ್ಲಿ ಎಂಬಿಬಿಎಸ್ :

ಭಾರತದಲ್ಲಿ ಎಂಬಿಬಿಎಸ್ :

ಭಾರತದಲ್ಲಿ ಬ್ಯಾಚುಲರ್ ಆಫ್ ಮೆಡಿಸಿನ್, ಬ್ಯಾಚುಲರ್ ಆಫ್ ಸರ್ಜರಿ (MBBS) ಕೋರ್ಸ್ ಗಳು ಹೆಚ್ಚು ಆದ್ಯತೆಯ ಮತ್ತು ಪ್ರತಿಷ್ಠಿತ ಕೋರ್ಸ್‌ಗಳಲ್ಲಿ ಒಂದಾಗಿದೆ. ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದಂತಹ ಅಭ್ಯರ್ಥಿಗಳು ವೈದ್ಯರಾಗುತ್ತಾರೆ. ವೈದ್ಯರಾಗುವ ಪ್ರತಿಯೊಂದು ಹಂತದಲ್ಲೂ ವಿದ್ಯಾರ್ಥಿಗಳು ಪರೀಕ್ಷೆಗೆ ಒಳಗಾಗುವುದರಿಂದ ಎಂಬಿಬಿಎಸ್ ವ್ಯಾಸಂಗ ಮಾಡುವುದು ಸವಾಲಿನ ಕೆಲಸವಾಗಿದೆ. ವೈದ್ಯರಾಗಲು ಕನಸು ಕಾಣುವ ಅಭ್ಯರ್ಥಿಗಳು ಭಾರತದಲ್ಲಿ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಮೊದಲು ತಿಳಿದಿರಬೇಕು.

ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದ ಕನಸು ಕಾಣುತ್ತಾರೆ. ಆದರೆ ಭಾರತದಲ್ಲಿ ಎಂಬಿಬಿಎಸ್ ಪ್ರವೇಶವನ್ನು ಪಡೆಯುವವರು ಮಾತ್ರ ಕೆಲವೇ ಕೆಲವು ಮಂದಿಗಳು. ಭಾರತದಲ್ಲಿ ಎಂಬಿಬಿಎಸ್ ಸೀಟು ಪಡೆಯುವುದು ಅತ್ಯಂತ ಸ್ಪರ್ಧಾತ್ಮಕ ವಿಷಯವಾಗಿರುವುದು ನಿಮಗೆ ತಿಳಿದಿರುವ ವಿಷಯ. 15 ಲಕ್ಷಕ್ಕೂ ಹೆಚ್ಚು ಆಕಾಂಕ್ಷಿಗಳು ಪ್ರತಿ ವರ್ಷ ರಾಷ್ಟ್ರೀಯ ವೈದ್ಯಕೀಯ ಆಯೋಗದಿಂದ (NMC) ಗುರುತಿಸಲ್ಪಟ್ಟ 89,395 ಎಂಬಿಬಿಎಸ್ ಸೀಟುಗಳಿಗೆ ಸ್ಪರ್ಧಿಸುತ್ತಾರೆ. ಎಂಬಿಬಿಎಸ್ ಪ್ರವೇಶ ಪಡೆಯಲು ಅಭ್ಯರ್ಥಿಗಳು ಎದುರಿಸುತ್ತಿರುವ ಮೊದಲ ಸವಾಲೆಂದರೆ ನೀಟ್‌ಗೆ ಅರ್ಹತೆ ಪಡೆಯುವುದು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ವರ್ಷಕ್ಕೊಮ್ಮೆ NEET/ನೀಟ್ ಪರೀಕ್ಷೆಯನ್ನು ನಡೆಸುತ್ತದೆ. NEET-UG ಎಂಬುದು ಭಾರತದಲ್ಲಿ MBBS ಪ್ರವೇಶಕ್ಕಾಗಿ ನಡೆಸುವ ಏಕೈಕ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದ್ದು, ಭಾರತದ ಸುಪ್ರೀಂ ಕೋರ್ಟ್‌ನಿಂದ ಗುರುತಿಸಲ್ಪಟ್ಟಿದೆ. AIIMS ಸಂಸ್ಥೆಗಳಲ್ಲಿ 1,899 MBBS ಸೀಟುಗಳಿಗೆ ಮತ್ತು ಜಿಪ್ಮರ್‌ನಲ್ಲಿ 249 ಸೀಟುಗಳಿಗೆ ಸಹ NEET ಪರೀಕ್ಷೆಯ ಮೂಲಕ ಪ್ರವೇಶವನ್ನು ನೀಡಲಾಗುತ್ತದೆ. ಒಟ್ಟು 542 ವೈದ್ಯಕೀಯ ಕಾಲೇಜುಗಳು, 15 AIIMS ಮತ್ತು 2 ಜಿಪ್ಮರ್ ಸಂಸ್ಥೆಗಳು NEET ಫಲಿತಾಂಶಗಳ ಆಧಾರದ ಮೇಲೆ MBBS ಪ್ರವೇಶವನ್ನು ನೀಡುತ್ತವೆ. ಎಂಬಿಬಿಎಸ್ ಸೀಟುಗಳು ಮತ್ತು ಪರೀಕ್ಷೆಯಲ್ಲಿ ಕಾಣಿಸಿಕೊಳ್ಳುವ ಆಕಾಂಕ್ಷಿಗಳ ಸಂಖ್ಯೆಯನ್ನು ಹೋಲಿಸಿದರೆ ಭಾರತದಲ್ಲಿ ಎಂಬಿಬಿಎಸ್ ಪ್ರವೇಶಕ್ಕಾಗಿ ಸ್ಪರ್ಧೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

ಕಡಿಮೆ ಅಂಕಗಳೊಂದಿಗೆ ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅನೇಕ ವಿದ್ಯಾರ್ಥಿಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹೆಣಗಾಡುತ್ತಿದ್ದಾರೆ. ಇನ್ನೊಂದೆಡೆ ಖಾಸಗಿ ಎಂಬಿಬಿಎಸ್ ಕಾಲೇಜುಗಳ ಶುಲ್ಕ ತುಂಬಾ ಹೆಚ್ಚಳವಾಗಿದೆ. ಭಾರತದಲ್ಲಿನ ಕಾಲೇಜುಗಳಲ್ಲಿ ಬೋಧನಾ ಶುಲ್ಕ ಹೆಚ್ಚಿರುವ ಕಾರಣ ಮಧ್ಯಮ ವರ್ಗದ ಅನೇಕ ವಿದ್ಯಾರ್ಥಿಗಳು ಎಂಬಿಬಿಎಸ್ ಪ್ರವೇಶವನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ನೀಟ್ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ಅರ್ಹತೆ ಪಡೆದರೆ ಮಾತ್ರ ಭಾರತದಲ್ಲಿ ಎಂಬಿಬಿಎಸ್ ಪ್ರವೇಶ ಪಡೆಯುವುದು ಇಲ್ಲಿನ ವಿದ್ಯಾರ್ಥಿಗಳ ಏಕೈಕ ಭರವಸೆಯಾಗಿದೆ.

ಎಂಬಿಬಿಎಸ್ ಪ್ರವೇಶಕ್ಕಾಗಿ NTA ಯ ಸ್ಕ್ರೀನಿಂಗ್ ಪ್ರಕ್ರಿಯೆಯು ತುಂಬಾ ಕಟ್ಟುನಿಟ್ಟಾಗಿದೆ ಮತ್ತು ನೀಟ್ ಪರೀಕ್ಷೆಯಲ್ಲಿನ ಅರ್ಹತೆಯ ಮೇಲೆ ಸಂಪೂರ್ಣವಾಗಿ ಆಧಾರಿತವಾಗಿದೆ. ನೀಟ್ ಫಲಿತಾಂಶವನ್ನು ಪ್ರಕಟಿಸಿದ ನಂತರ ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು (MCC) ಎಂಬಿಬಿಎಸ್ ನ ಮುಂದಿನ ಪ್ರವೇಶ ಪ್ರಕ್ರಿಯೆಯನ್ನು ನಡೆಸುತ್ತದೆ. ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಖಿಲ ಭಾರತ ಕೋಟಾ, ಡೀಮ್ಡ್/ಕೇಂದ್ರ ವಿಶ್ವವಿದ್ಯಾಲಯಗಳು/ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (AFMC) ಮತ್ತು ಉದ್ಯೋಗಿ ರಾಜ್ಯ ವಿಮಾ ನಿಗಮ (ESIC) ಸಂಸ್ಥೆಗಳಿಗೆ ಶೇಕಡಾ 15% ರಷ್ಟು ಎಂಬಿಬಿಎಸ್ ಪ್ರವೇಶವನ್ನು ನೀಡುತ್ತದೆ. ಉಳಿದ 85% ಅನ್ನು ರಾಜ್ಯ ಕೋಟಾ ಸೀಟುಗಳಿಗೆ ಎಂಬಿಬಿಎಸ್ ಪ್ರವೇಶವನ್ನು ಆಯಾ ರಾಜ್ಯದ ಕೌನ್ಸೆಲಿಂಗ್ ಅಧಿಕಾರಿಗಳು ಮಂಜೂರು ಮಾಡುತ್ತಾರೆ.

ಎಂಬಿಬಿಎಸ್ ಅರ್ಹತಾ ಮಾನದಂಡಗಳು :

ಎಂಬಿಬಿಎಸ್ ಅರ್ಹತಾ ಮಾನದಂಡಗಳು :

ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಭಾರತದಲ್ಲಿ ಎಂಬಿಬಿಎಸ್ ಪ್ರವೇಶಕ್ಕಾಗಿ ಅರ್ಹತಾ ಮಾನದಂಡಗಳನ್ನು ನಿಗದಿಪಡಿಸುತ್ತದೆ. ಅರ್ಹತಾ ಅವಶ್ಯಕತೆಗಳನ್ನು ಪೂರೈಸುವ ಅಭ್ಯರ್ಥಿಗಳನ್ನು ಮಾತ್ರ ಎಂಬಿಬಿಎಸ್ ಪ್ರವೇಶಕ್ಕೆ ಪರಿಗಣಿಸಲಾಗುತ್ತದೆ. ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ವಿದ್ಯಾರ್ಥಿಯು ಅನರ್ಹನೆಂದು ಕಂಡುಬಂದಲ್ಲಿ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸಲಾಗುತ್ತದೆ. ಎಂಬಿಬಿಎಸ್ ಕೋರ್ಸ್ ಪಡೆಯಲು ಇರುವ ಅರ್ಹತಾ ಮಾನದಂಡಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆಯಲು ಮುಂದೆ ನೋಡಿ.

ಶೈಕ್ಷಣಿಕ ಅರ್ಹತೆಗಳು : ಭಾರತದಲ್ಲಿ ಎಂಬಿಬಿಎಸ್ ಪ್ರವೇಶವನ್ನು ಪಡೆಯಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12 ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.

ಅಧ್ಯಯನ ಮಾಡಿದ ವಿಷಯಗಳು : ಎಂಬಿಬಿಎಸ್ ಕೋರ್ಸ್ ಅನ್ನು ಅಧ್ಯಯನ ಮಾಡಲು ಇಚ್ಚಿಸುವ ವಿದ್ಯಾರ್ಥಿಗಳು 11 ಮತ್ತು 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಅಧ್ಯಯನ ಮಾಡಿರಬೇಕು.

ಅಗತ್ಯವಿರುವ ಕನಿಷ್ಠ ಅಂಕಗಳು : ಭಾರತದಲ್ಲಿ ಎಂಬಿಬಿಎಸ್ ಪ್ರವೇಶಕ್ಕಾಗಿ ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಗಳಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ಎಂಬಿಬಿಎಸ್ ಪ್ರವೇಶಕ್ಕೆ ಕನಿಷ್ಠ 40% ಅಂಕಗಳನ್ನು ಗಳಿಸಿರಬೇಕು.

ವಯಸ್ಸು: ಭಾರತದಲ್ಲಿ ಎಂಬಿಬಿಎಸ್ ಗೆ ಪ್ರವೇಶ ಪಡೆಯಲು ಇಚ್ಚಿಸುವ ಆಕಾಂಕ್ಷಿಗಳು ಕನಿಷ್ಠ 17 ವರ್ಷ ವಯಸ್ಸನ್ನು ಪೂರೈಸಿರಬೇಕು ಮತ್ತು ಗರಿಷ್ಟ 25 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಈ ಕೋರ್ಸ್ ತೆಗೆದುಕೊಳ್ಳಲು ಅರ್ಹರು.

ಭಾರತದಲ್ಲಿ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆ 2022 :

ಭಾರತದಲ್ಲಿ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆ 2022 :

ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾದ ನೀಟ್ ನಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಎಂಬಿಬಿಎಸ್ ಕೋರ್ಸ್‌ಗೆ ಪ್ರವೇಶವನ್ನು ನೀಡಲಾಗುತ್ತದೆ. ಒಟ್ಟಾರೆ ಎಂಬಿಬಿಎಸ್ ಪ್ರವೇಶಾತಿ ಪ್ರಕ್ರಿಯೆ ಹೇಗಿರುತ್ತದೆ ಎಂದು ಇಲ್ಲಿ ತಿಳಿಯಿರಿ.

ಎಂಬಿಬಿಎಸ್ ಪ್ರವೇಶ ಪರೀಕ್ಷೆಗಳು :

ಈಗಾಗಲೇ ನೀವು ತಿಳಿದಂತೆ ಭಾರತದಲ್ಲಿ ಎಂಬಿಬಿಎಸ್ ಪ್ರವೇಶಕ್ಕೆ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಅನ್ನು ಬರೆಯಬೇಕಿರುತ್ತದೆ. 11 ಮತ್ತು 12 ನೇ ತರಗತಿಯ ಸಿಬಿಎಸ್ಇ ಪಠ್ಯಕ್ರಮದ ವಿಷಯಗಳನ್ನು ಒಳಗೊಂಡಿರುವ NEET-UG ಪಠ್ಯಕ್ರಮದ ಆಧಾರದ ಮೇಲೆ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಎನ್‌ಟಿಎ ನಡೆಸುತ್ತದೆ. ನೀಟ್ ಪರೀಕ್ಷೆಯ ಮಾದರಿಯ ಪ್ರಕಾರ ಎಂಬಿಬಿಎಸ್ ಪ್ರವೇಶ ಆಕಾಂಕ್ಷಿಗಳು 200 ಪ್ರಶ್ನೆಗಳಲ್ಲಿ 180 ಬಹು ಆಯ್ಕೆ ಪ್ರಶ್ನೆಗಳಿಗೆ 3 ಗಂಟೆಗಳಲ್ಲಿ ಉತ್ತರಿಸಬೇಕಾಗುತ್ತದೆ.

NEET 2022 ಪ್ರಶ್ನೆ ಪತ್ರಿಕೆಯನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ ಅವುಗಳೆಂದರೆ - ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ (ಸಸ್ಯಶಾಸ್ತ್ರ + ಪ್ರಾಣಿಶಾಸ್ತ್ರ). ನೀಟ್ ಜೀವಶಾಸ್ತ್ರ ವಿಭಾಗವು 360 ಅಂಕಗಳನ್ನು ಪಡೆಯುವ 90 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ನೀಟ್ ಪತ್ರಿಕೆಯ ಉಳಿದ ಎರಡು ವಿಭಾಗಗಳು ಸಮಾನ ತೂಕವನ್ನು ಹೊಂದಿವೆ, ಅಂದರೆ 45 ಪ್ರಶ್ನೆಗಳು ಮತ್ತು ತಲಾ 180 ಅಂಕಗಳನ್ನು ಹೊಂದಿವೆ.

ಭಾರತದಲ್ಲಿ ಎಂಬಿಬಿಎಸ್ ಪ್ರವೇಶವನ್ನು ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು NTA NEET ಕಟ್ಆಫ್‌ಗೆ ಅರ್ಹತೆ ಪಡೆಯಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಎಂಬಿಬಿಎಸ್ ಪ್ರವೇಶಕ್ಕಾಗಿ ನೀಟ್ ಪರೀಕ್ಷೆಯ ಕಟ್‌ಆಫ್ ಅಂಕಗಳು ಶೇ.೫೦ರಷ್ಟಿರುತ್ತದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ಕಟ್-ಆಫ್ ಶೇ.40ರಷ್ಟಿದೆ. ನೀಟ್ ಕಟ್‌ ಆಫ್ ಅಂಕಗಳು ಮತ್ತು ಶೇಕಡಾವಾರು ಹೊಂದಿರುವ ಅಭ್ಯರ್ಥಿಗಳು ಮಾತ್ರ ಎಂಬಿಬಿಎಸ್ ಪ್ರವೇಶಕ್ಕಾಗಿ ನಡೆಯುವ ಕೌನ್ಸೆಲಿಂಗ್‌ಗೆ ಅರ್ಹರಾಗಿರುತ್ತಾರೆ. AIIMS, JIPMER ಮತ್ತು ವೈದ್ಯಕೀಯ ಕಾಲೇಜುಗಳು ನೀಟ್ ಫಲಿತಾಂಶ ಮತ್ತು ಕಟ್ ಆಫ್ ಅಂಕಗಳ ಆಧಾರದ ಮೇಲೆ ಎಂಬಿಬಿಎಸ್ ಗೆ ಪ್ರವೇಶವನ್ನು ನೀಡುತ್ತವೆ.

ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಮುಂದೇನು ? :

ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ನಂತರ ಮುಂದೇನು ? :

ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಎಂಬಿಬಿಎಸ್ ಪ್ರವೇಶಕ್ಕಾಗಿ ನಡೆಸುವ ಕೇಂದ್ರ ಮತ್ತು ರಾಜ್ಯ ಮಟ್ಟದ ಮತ್ತು AIQ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು NEET-UG-ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಶಾರ್ಟ್‌ಲಿಸ್ಟ್ ಮಾಡಿದ ವಿದ್ಯಾರ್ಥಿಗಳು ನೀಟ್ ಕೌನ್ಸೆಲಿಂಗ್‌ಗೆ ಅರ್ಹರಾಗುತ್ತಾರೆ. ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ವೈದ್ಯಕೀಯ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.

ವೈದ್ಯಕೀಯ ಕೌನ್ಸೆಲಿಂಗ್ ಸಮಿತಿಯು ಅಖಿಲ ಭಾರತ ಕೋಟಾ, ಡೀಮ್ಡ್/ಕೇಂದ್ರ ವಿಶ್ವವಿದ್ಯಾಲಯಗಳು/AFMS ಮತ್ತು ESIC ಸಂಸ್ಥೆಗಳಿಗೆ ಶೇ.೧೫ರಷ್ಟು ನೀಟ್ ಕೌನ್ಸೆಲಿಂಗ್ ಅನ್ನು ನಡೆಸುತ್ತದೆ. ಎಂಬಿಬಿಎಸ್ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಗೆ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಮತ್ತು ನೀಟ್ ಸಂಬಂಧಿತ ವಿವರಗಳನ್ನು ಬಳಸಿಕೊಂಡು ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಯು ಕೌನ್ಸೆಲಿಂಗ್ ಶುಲ್ಕವನ್ನು ಪಾವತಿಸಬೇಕು ಹಾಗೂ ವಿದ್ಯಾರ್ಥಿಯು ತನ್ನಿಚ್ಚೆಯ ಕೋರ್ಸ್ ಮತ್ತು ಅವರು ಅಧ್ಯಯನ ಮಾಡಲು ಬಯಸುವ ಕಾಲೇಜುಗಳ ಆದ್ಯತೆಗಳನ್ನು ಭರ್ತಿ ಮಾಡಬೇಕು. ಅಭ್ಯರ್ಥಿಗಳು ಭರ್ತಿ ಮಾಡಿದ ಆಯ್ಕೆಗಳು ನೀಟ್ ಅಖಿಲ ಭಾರತ ಶ್ರೇಣಿ, ಮೀಸಲಾತಿ ಮತ್ತು ಸೀಟ್ ಮ್ಯಾಟ್ರಿಕ್ಸ್ ಅನ್ನು ಆಧರಿಸಿ MCC NEET UG ಸೀಟು ಹಂಚಿಕೆಯನ್ನು ನಡೆಸುತ್ತದೆ. ಎಂಬಿಬಿಎಸ್ ಪ್ರವೇಶದ ಸೀಟು ಹಂಚಿಕೆಯ ಸಮಯದಲ್ಲಿ ಸೀಟುಗಳನ್ನು ನೀಡಲಾಗುವ ಅಭ್ಯರ್ಥಿಗಳು ನಿಗದಿಪಡಿಸಿದ ಸಂಸ್ಥೆಗೆ ವರದಿ ಮಾಡಬೇಕಾಗುತ್ತದೆ.

ಭಾರತದಲ್ಲಿ ರಾಜ್ಯವಾರು ಎಂಬಿಬಿಎಸ್ ಪ್ರವೇಶಾತಿ :

ಭಾರತದಲ್ಲಿ ರಾಜ್ಯವಾರು ಎಂಬಿಬಿಎಸ್ ಪ್ರವೇಶಾತಿ :

ಉಳಿದ 85% ರಷ್ಟು ರಾಜ್ಯ ಕೋಟಾ ಸೀಟುಗಳನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿನ ಎಲ್ಲಾ ಸೀಟುಗಳಿಗೆ ಎಂಬಿಬಿಎಸ್ ಪ್ರವೇಶ ಪ್ರಕ್ರಿಯೆಯನ್ನು ಆಯಾ ರಾಜ್ಯ ಅಧಿಕಾರಿಗಳು ನಡೆಸುತ್ತಾರೆ. ಎಂಬಿಬಿಎಸ್ ಪ್ರವೇಶಕ್ಕಾಗಿ ಕೌನ್ಸೆಲಿಂಗ್ ಅನ್ನು ಆಫ್‌ಲೈನ್ ಅಥವಾ ಆನ್‌ಲೈನ್ ಮೋಡ್‌ನಲ್ಲಿ ನಡೆಸಬಹುದು. ಎಂಬಿಬಿಎಸ್ ಪ್ರವೇಶದ ರಾಜ್ಯ ಕೌನ್ಸೆಲಿಂಗ್ ಸಮಯದಲ್ಲಿ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬೇಕು ಜೊತೆಗೆ ಕೋರ್ಸ್ ಮತ್ತು ಕಾಲೇಜುಗಳ ಆಯ್ಕೆಗಳನ್ನು ಭರ್ತಿ ಮಾಡಬೇಕು ಹಾಗೂ ದಾಖಲೆ ಪರಿಶೀಲನೆಗೆ ಹಾಜರಾಗಬೇಕಿರುತ್ತದೆ. ರಾಜ್ಯ ಕೋಟಾದ ಸೀಟುಗಳ ಜೊತೆಗೆ ಆಯಾ ರಾಜ್ಯದ ಖಾಸಗಿ ಕಾಲೇಜುಗಳಲ್ಲಿ 100% ಸೀಟುಗಳಿಗೆ ಎಂಬಿಬಿಎಸ್ ಪ್ರವೇಶವನ್ನು ರಾಜ್ಯ ಅಧಿಕಾರಿಗಳು ನಡೆಸುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
MBBS Admission in india : If you are interested to do mbbs, here is the course details, fee, duration, eligibility criteria and admission process in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X