Mirabai Chanu : ಮೀರಾಬಾಯಿ ಚಾನು ಯಾರು ಮತ್ತು ಅವರ ಯಶಸ್ಸಿನ ಹಾದಿಯ ಕಿರು ಪರಿಚಯ

ಟೋಕಿಯೋ ಒಲಂಪಿಕ್ಸ್ ನ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಬಗ್ಗೆ ಮಾಹಿತಿ

ಜಪಾನ್ ನಲ್ಲಿ ನಡೆಯುತ್ತಿರುವ ಟೋಕಿಯೋ ಒಲಂಪಿಕ್ಸ್ ನ ಮೊದಲ ದಿನವೇ ಮಹಿಳೆಯರ 49 ಕೆ.ಜಿ. ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಸೈಕೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದಿದ್ದಾರೆ. ಯಾರು ಈ ಮೀರಾಬಾಯಿ ಚಾನು ? ಇವರ ಯಶಸ್ಸಿನ ಹಾದಿಯ ಹಿಂದಿನ ಕಥೆಯೇನು ಎಂದು ಇಲ್ಲಿ ತಿಳಿಯೋಣ.

 

ಟೋಕಿಯೋ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟಿರುವ ಮೀರಾಬಾಯಿ ಚಾನು ಒಲಂಪಿಕ್ ಗೇಮ್ ನ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗಳಿಸಿದ ಎರಡನೇ ಭಾರತೀಯರಾಗಿದ್ದಾರೆ. 2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ ನಲ್ಲಿ 69 ಕೆ ಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗಳಿಸಿದ್ದರು. ಭಾರತದಿಂದ (1900 ರಿಂದ 2021 ರವರೆಗೆ) 17 ನೇ ವೈಯಕ್ತಿಕ ಒಲಿಂಪಿಕ್ ಪದಕ ಪಡೆದ ವಿಜೇತೆ ಮೀರಾಬಾಯಿ.

2016ರ ರಿಯೋ ಒಲಂಪಿಕ್ಸ್ ನ ವೈಯಕ್ತಿಕ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಲು ಮೀರಾಬಾಯಿ ಚಾನು ವಿಫಲರಾದರು. ಆದರೆ ಇದೀಗ ಟೋಕಿಯೋ ಒಲಂಪಿಕ್ಸ್ ನಲ್ಲಿ ಮೊದಲ ದಿನವೇ ಬೆಳ್ಳಿ ಪದಕ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ.

ಮೀರಾಬಾಯಿ ಚಾನು 84 ಕೆಜಿ ಹಾಗೂ 87 ಕೆಜಿಯನ್ನು ಎತ್ತುವಲ್ಲಿ ಯಶಸ್ವಿಯಾದರು. ಆದರೆ 89 ಕೆಜಿ ಎತ್ತುವಲ್ಲಿ ವಿಫಲರಾದರು. ಹೀಗಾಗಿ ಅವರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ಮೊದಲ ಸ್ಥಾನವನ್ನು ಚಿನ್ನದ ಪದಕ ಪಡೆಯುವ ಮೂಲಕ ಚೀನಾದ ಹೌಸ್ ಜಿಹು ಗೆದ್ದಿದ್ದಾರೆ. ಹೌಸ್ ಜಿಹು 94 ಕೆಜಿ ಭಾರತ ಎತ್ತುವ ಮೂಲಕ ಅವರು ಹೊಸ ಒಲಿಂಪಿಕ್ಸ್ ದಾಖಲೆ ಮಾಡಿದ್ದಾರೆ.

 

ಭಾರತದ ಒಲಂಪಿಕ್ ಸ್ಟಾರ್ ಮೀರಾಬಾಯಿ ಚಾನು ಬಗ್ಗೆ ಮಾಹಿತಿ:

ಹೆಸರು : ಮೀರಾಬಾಯಿ ಚಾನು
ಜನ್ಮ ದಿನಾಂಕ: ಆಗಸ್ಟ್ 8,1994
ವಯಸ್ಸು : 26
ಜನ್ಮ ದಿನಾಂಕ: ಇಂಫಾಲ್, ಮಣಿಪುರ್
ಕ್ರೀಡೆ : ವೈಟ್‌ಲಿಫ್ಟಿಂಗ್ (49ಕೆಜಿ)

ಪ್ರಮುಖ ಸಾಧನೆಗಳು :

ಟೊಕಿಯೋ ಒಲಂಪಿಕ್ಸ್ ನಲ್ಲಿ 49 ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ
2020ರ ತಾಷ್ಕೆಂಟ್ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ (49 ಕೆಜಿ) ಕಂಚು ಪದಕ
2018ರ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ (48 ಕೆಜಿ) ಚಿನ್ನದ ಪದಕ
2017ರ ಅನಾಹಿಯಂ ವಿಶ್ವ ಚಾಂಪಿಶಿಯನ್‌ಶಿಪ್ (48 ಕೆಜಿ) ನಲ್ಲಿ ಚಿನ್ನದ ಪದಕ
2014ರ ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ (48 ಕೆಜಿ) ಬೆಳ್ಳಿ ಪದಕ

For Quick Alerts
ALLOW NOTIFICATIONS  
For Daily Alerts

English summary
Here we are giving information about indian weighlifter mirabai chanu who won silver medal in tokyo olympics.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X