ಕೆರಿಯರ್ ಟ್ರೆಂಡ್ಸ್ 2018: ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಡೇಟಾ ಅನಾಲಿಸ್ಟ್

Posted By:

ಡಿಜಿಟಲ್ ಕ್ಷೇತ್ರ ಬೆಳೆದಂತೆಲ್ಲ ಉದ್ಯೋಗದಲ್ಲೂ ಸಾಕಷ್ಟು ಬೆಳವಣಿಗೆ ಆಗುತ್ತಿವೆ. ದಿನೇ ದಿನೇ ಡಿಜಿಟಲ್ ವ್ಯವಹಾರಗಳು ಹೆಚ್ಚುತ್ತಿದ್ದು ಅದನ್ನು ನಿರ್ವಹಿಸುವವರ ಬೇಡಿಕೆಯು ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಡೇಟಾ ಅನಾಲಿಸ್ಟ್ ಗಳಿಗೆ ಸಾಕಷ್ಟು ಬೇಡಿಕೆ ಇದ್ದು, ದೊಡ್ಡ ದೊಡ್ಡ ಕಂಪನಿಗಳಿಂದ ಹಿಡಿದು ಸಣ್ಣ ಉದ್ಯಮದವರು ಕೂಡ ಡೇಟಾ ಅನಾಲಿಸ್ಟ್ ಗಳನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ.

ಕೆರಿಯರ್ ಟ್ರೆಂಡ್ಸ್ 2018: ಸ್ಪರ್ಧಾತ್ಮಕ ಪರೀಕ್ಷೆಗಳ ಪಟ್ಟಿ

ಕಂಪ್ಯೂಟರ್ ಬಗ್ಗೆ ಜ್ಞಾನ ಇದ್ದರೆ ಡೇಟಾ ಅನಾಲಿಸ್ಟ್ ಆಗುವುದು ಸುಲಭ. ಇದರೊಂದಿಗೆ ಇಂಗ್ಲಿಷ್ ಭಾಷೆ ಮೇಲೆ ಹಿಡಿತವಿದ್ದರೆ ಹೆಚ್ಚಿನ ಅನುಕೂಲ.

2018 ಇ-ಲರ್ನಿಂಗ್ ಯುಗ: ಇಂಟರ್ನೆಟ್, ಸ್ಮಾರ್ಟ್ ಫೋನ್ ನಿಂದ ಬದಲಾಗುತ್ತಿದೆ ಶಿಕ್ಷಣ

ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವ ಡೇಟಾ ಅನಾಲಿಸ್ಟ್

ಬಿಸಿಎ, ಎಂಸಿಎ, ಬಿಎಸ್ಸಿ ಕಂಪ್ಯೂಟರ್ ಸೈನ್ಸ್, ಬಿಇ ಕಂಪ್ಯೂಟರ್ ಸೈನ್ಸ್ ಮಾಡಿದವರು ಡೇಟಾ ಅನಾಲಿಸ್ಟ್ ಗಳಾಗಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದು.

ಡೇಟಾ ಅನಾಲಿಸ್ಟ್ ಆಗುವುದು ಹೇಗೆ?

ಮೇಲೆ ಹೇಳಿದ ಹಾಗೆ ಕಂಪ್ಯೂಟರ್ ಜ್ಞಾನ ಇರಬೇಕು, ಕಂಪ್ಯೂಟರ್ನ ಭಾಷೆಯ ಬಗ್ಗೆ ತಿಳಿದಿರಬೇಕು. ಪ್ರೋಗ್ರಾಮಿಂಗ್ ಟೂಲ್ ಗಳ ಪರಿಚಯವಿರಬೇಕು.

ಪ್ರೋಗ್ರಾಮೇತರ ಎಕ್ಸೆಲ್‌ನಂತಹ ಟೂಲ್ಸ್ ಮಾತ್ರವಲ್ಲದೆ ಪಾಂಡಾಸ್(Pandas), ನುಂಪಿ(Numpy) ಮತ್ತು ಇತರೆ ಪ್ರೋಗ್ರಾಮಿಂಗ್‌ನ ಟೂಲ್‌ಗಳನ್ನು ಬಳಸುವುದನ್ನು ತಿಳಿದಿರಬೇಕಾಗುತ್ತದೆ. ಇಂತಹ ಟೂಲ್‌ಗಳಿಂದ ಹೆಚ್ಚು ಕ್ಷಮತೆಯಿಂದ ಡೇಟಾಗಳ ಆಳವಾದ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಪೈಥಾನ್(Python) ಮತ್ತು ಆರ್‌ಗಳು ಈಗ ಹೆಚ್ಚು ಜನಪ್ರಿಯತೆ ಪಡೆದಿರುವ ಪ್ರೋಗ್ರಾಮಿಂಗ್ ಭಾಷೆಗಳಾಗಿವೆ.

ಇನ್ನು ಪ್ರೋಗ್ರಾಮಿಂಗ್ ಟೂಲ್ ನಂತೆ ಸ್ಟಾಟಿಸ್ಟಿಕ್ಸ್, ಮಷೀನ್ ಲರ್ನಿಂಗ್, ಕಮ್ಯುನಿಕೇಷನ್ಸ್ ಮತ್ತು ಡೇಟಾ ವಿಷುಯಲೈಜೇಷನ್ ಬಗ್ಗೆ ತಿಳಿದಿರಬೇಕಾಗುತ್ತದೆ. ಮ್ಯಾಥಮ್ಯಾಟಿಕಲ್ ಮತ್ತು ಅನಾಲಿಟಿಕಲ್ ಸ್ಕಿಲ್ ಇರುವವರಿಗೆ ಇದು ಮತ್ತಷ್ಟು ಸುಲಭ.

ಒಂದೇ ವಾರದಲ್ಲಿ ನೀವು ಡೇಟಾ ಸೈಟಿಂಸ್ಟ್ ಆಗಬಹುದು

ಎಲ್ಲಿ ಕಲಿಯಬಹುದು?

ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಟಿಫಿಕೇಷನ್ ಕೋರ್ಸ್ ರೀತಿ ಶಿಕ್ಷಣ ನೀಡುತ್ತಿವೆ. ಡೇಟಾ ಅನಾಲಿಸ್ಟ್ ಆಗ ಬಯಸುವವರು ರೆಗ್ಯುಲರ್ ಕ್ಲಾಸ್ ರೂಮ್ ಶಿಕ್ಷಣದ ಜೊತೆಗೆ, ಆನ್‌ಲೈನ್ ಮತ್ತು ದೂರಶಿಕ್ಷಣದ ಮೂಲಕವೂ ಕಲಿಯಬಹುದು.

ಆನ್ಲೈನ್ ಕಲಿಕೆಗಾಗಿ ಹಲವಾರು ವೆಬ್ಸೈಟ್ ಗಳು ಇದ್ದು, ಸೂಕ್ತ ವೆಬ್ಸೈಟ್ ಬಗ್ಗೆ ತಿಳಿದುಕೊಂಡು ಕಲಿಯುವುದು ಉತ್ತಮ.

ಇನ್ನು ಈ ಕೋರ್ಸ್ಗೆ ತಗುಲುವ ವೆಚ್ಚ ಕೂಡ ಕಡಿಮೆ. ರೆಗ್ಯುಲರ್ ಕೋರ್ಸ್ಗಳು ರೂ. 20 ಸಾವಿರದಿಂದ ಆರಂಭವಾಗುತ್ತವೆ. ಇನ್ನು ಆನ್ಲೈನ್ ಕೋರ್ಸ್ಗಳು ಐದು ಸಾವಿರದಿಂದ ಆರಂಭವಾಗುತ್ತವೆ.

ಡೇಟಾ ಅನಾಲಿಸ್ಟ್ ಗಳಿಗೆ ಉತ್ತಮ ಬೇಡಿಕೆ ಇರುವುದರಿಂದ ವೇತನ ಕೂಡ ಉತ್ತಮವಾಗಿಯೇ ಇದೆ. ಆರಂಭದಲ್ಲಿಯೇ 20, 30 ಸಾವಿರದಿಂದ ಲಕ್ಷ ರೂ.ಗಳ ವರೆಗೂ ಪಡೆಯಬಹುದು.

English summary
The Data Analyst's role is to provide the risk team and managers with insights and performance reports from multiple data source as part of the risk management processes across all aspects of the business.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia