ಆಕರ್ಷಣೀಯ ಮತ್ತು ಭರವಸೆಯ ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್

Posted By:

'ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಎನ್ನುವಂತೆ ನಾಗರೀಕತೆ ಆರಂಭವವಾದಗಿನಿಂದಲೂ ಬಟ್ಟೆಗಳು ಮಾನವನ ಜೀವನ ಕ್ರಮದಲ್ಲಿ ಪ್ರಮುಖ ಪಾತ್ರ ಪಡೆದಿವೆ.

ಮಾರುಕಟ್ಟೆಗೆ ಪ್ರತಿದಿನವೂ ಹೊಸ ವಿನ್ಯಾಸದ ಬಟ್ಟೆಗಳು ಕಾಲಿಡುತ್ತಲೇ ಇವೆ. ವಸ್ತ್ರೋದ್ಯಮ ಪ್ರಪಂಚದ ಬೃಹತ್ ಉದ್ಯಮಗಳಲ್ಲಿ ಒಂದೆನಿಸಿದೆ. ಕೇವಲ ಉದ್ಯಮ ಮಾತ್ರವಲ್ಲದೇ ಹೆಚ್ಚಿನ ಉದ್ಯೋಗವನ್ನು ಸೃಷ್ಟಿಸುತ್ತಿರುವಲ್ಲಿ ಪಾತ್ರ ವಹಿಸಿದೆ.

ಬಟ್ಟೆ ನೇಯ್ಗೆ ಮತ್ತು ಜವಳಿ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಅವಕಾಶಗಳಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗಿದೆ. ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್ ಮೂಲಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವುದರ ಜೊತೆಗೆ ತಮ್ಮ ಭವಿಷ್ಯದ ಡಿಸೈನ್ ಕೂಡ ಮಾಡಿಕೊಳ್ಳಬಹುದಾಗಿದೆ.

ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್

ಹ್ಯಾಂಡ್ಲೂಮ್ ಅಂಡ್ ಟೆಕ್ಸ್ಟೈಲ್ ಡಿಸೈನಿಂಗ್ ಕೋರ್ಸ್ ಗೆ ಆಂಧ್ರಪ್ರದೇಶ ಹೆಸರುವಾಸಿಯಾಗಿದೆ. ಇನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಕೂಡ ಈ ಕೋರ್ಸ್ ನಡೆಸುತ್ತಿದೆ. ಜಾಗತಿಕ ಚಿತ್ರಣವನ್ನು ಹೊಂದಿದ ಫ್ಯಾಶನ್ ವ್ಯವಹಾರದಲ್ಲಿ ಮುಂದಾಳತ್ವದ ಸ್ಥಾನವನ್ನು ಕೈಗೊಳ್ಳುವಂತಹ ಉದ್ದಿಮೆದಾರರನ್ನು ಬೇಳೆಸುವ ಮೂಲಕ ಇದು ಡಿಸೈನ್ (ವಿನ್ಯಾಸ), ಮ್ಯಾನೇಜ್‌ಮೆಂಟ್ ಮತ್ತು ಟೆಕ್ನಾಲಜಿಯಲ್ಲಿನ ಸರ್ವಶ್ರೇಷ್ಠ ಸಂಸ್ಥೆಯಾಗಿ ಹೊರ ಹೊಮ್ಮಿದೆ.

ಸಂಸ್ಥೆಯು ದೇಶದಲ್ಲಿನ ಹನ್ನೆರಡು ವೃತ್ತಿ ನಿರ್ವಹಣೆಯ ಕೇಂದ್ರಗಳಾದ ಹೊಸ ದೆಹಲಿ, ಬೆಂಗಳೂರು, ಚೆನ್ನೈ, ಗಾಂಧಿನಗರ, ಹೈದರಾಬಾದ್, ಕಲ್ಕತ್ತ, ಮುಂಬಯಿ, ರಾಯಿಬರೇಲಿ, ಭೂಪಾಳ, ಕಣ್ಣೂರು, ಪಟ್ಣಾ, ಮತ್ತು ಶಿಲ್ಲಾಂಗ್‌ನ ಮೂಲಕ ಫ್ಯಾಶನ್ ವ್ಯವಹಾರದ ಶಿಕ್ಷಣದ ವಿಕಸನದ ಮುಂಚೂಣಿಯಲ್ಲಿದೆ ಎಂದು ಮನದಟ್ಟು ಮಾಡಿದೆ.

ಈ ಕೋರ್ಸ್ ನಲ್ಲಿ ಫ್ಯಾಶನ್ ಕಲೆ ಮತ್ತು ನಿದರ್ಶನ, ಮೂಲ ನೆಯ್ಗೆ ಮತ್ತು ಕೈ ಹೆಣಿಗೆ, ಜವಳಿ ವಿಜ್ಞಾನ, ಪರಿಷ್ಕರಣೆ ಮತ್ತು ಹೆಣಿಗೆ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುವುದು. ಕಂಪ್ಯೂಟರ್ ಅಪ್ಲಿಕೇಷನ್ಸ್, ಸಾಂಪ್ರದಾಯಿಕ ಜವಳಿಗಳು, ಮಾದರಿ ತಯಾರಿ ಮತ್ತು ನಿರ್ಮಾಣ, ಮೇಲ್ಮೈ ತಂತ್ರಗಳು ಮತ್ತು ಉತ್ಪನ್ನ ಅಭಿವೃದ್ಧಿ ಯೋಜನೆಗಳಲ್ಲೂ ಅವರು ವಿಷಯಗಳನ್ನು ಪಡೆಯುತ್ತಾರೆ.

ಕ್ರಿಯೇಟಿವಿಟಿ, ವಿನ್ಯಾಸದ ಕುರಿತಾದ ಒಲವನ್ನು ವಿದ್ಯಾರ್ಥಿಗಳು ಹೊಂದಿರಬೇಕಾಗುತ್ತದೆ. ಅತ್ಯುತ್ತಮ ಸಂವಹನ ಕೌಶಲ್ಯ, ಪ್ರಾಕ್ಟಿಕಲ್‌ ಮತ್ತು ಟೆಕ್ನಿಕಲ್‌ ಕೌಶಲ್ಯ ಕೂಡ ಈ ಕೋರ್ಸ್ಗೆ ಅವಶ್ಯಕ.

ಉದ್ಯಮದ ಬಗ್ಗೆ ಅವರ ತಿಳಿವಳಿಕೆಗೆ ಉತ್ತಮ ರೀತಿಯಲ್ಲಿ ಹೊಂದಿಸಿಕೊಳ್ಳಲು ಮತ್ತು ವೈಯಕ್ತಿಕ ಸಂಶೋಧನೆ ಮಾಡುವಂತಹ ಯೋಜನೆಗಳನ್ನೂ ಮಾಡುವಂತಹ ಹಲವು ಆಯ್ಕೆಯ ವಿಷಯಗಳನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಡಿಸೈನ್‌ ಕುರಿತಾದ ಹೊಸ ವಿಚಾರಗಳನ್ನು ತಿಳಿಯಲು ಸಮ್ಮೇಳನಗಳಿಗೆ ಹಾಜರಾಗಬೇಕಾಗುತ್ತದೆ.ಇಂಟರ್ನ್‌ಶಿಪ್‌ ಕೂಡ ಇರಲಿದ್ದು, ವಿದ್ಯಾರ್ಥಿಗಳಿಗೆ ಉದ್ಯಮಗಳ ನೈಜ ಪರಿಚಯವು ಆಗುತ್ತದೆ.

ಉದ್ಯೋಗಾವಕಾಶ

ಕೈಮಗ್ಗ, ಜವಳಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಲು ಉತ್ತಮ ಸಮರ್ಪಕ ವೃತ್ತಿಪರರನ್ನು ರಚಿಸಲು ಈ ಕೋರ್ಸ್ ಸಹಕಾರಿಯಾಗಿದೆ. ವಿನ್ಯಾಸಗಾರರು, ಕ್ರಿಯಾತ್ಮಕ ವ್ಯವಸ್ಥಾಪಕರು, ಸರಕು ಮಾರಾಟಗಾರರು, ಪ್ರೊಡಕ್ಷನ್ ಮ್ಯಾನೇಜರ್‌ಗಳು ಮತ್ತು ಉದ್ಯಮಿಗಳಾಗಿ ಅವರು ತಮ್ಮ ವೃತ್ತಿಗಳನ್ನು ಪಡೆಯಬಹುದಾಗಿದೆ.

ಉತ್ಪಾದನಾ ಕಂಪನಿಗಳು, ದೊಡ್ಡ ಎಂಎನ್‌ಸಿಗಳು, ಡಿಸೈನ್‌ ಸಂಸ್ಥೆಗಳಲ್ಲಿ ಕೆಲಸ ಸಿಗುತ್ತದೆ. ಸರಕಾರವೂ ದೊಡ್ಡ ಸಂಖ್ಯೆಯಲ್ಲಿ ಡಿಸೈನರ್‌ಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. ಅಲ್ಲದೆ ಈ ಕ್ಷೇತ್ರದಲ್ಲಿ ಆರಂಭದಲ್ಲಿಯೇ ಉತ್ತಮ ವೇತನಗಳು ಕೂಡ ಸಿಗಲಿವೆ. ವಿದೇಶಿ ಕಂಪನಿಗಳು ಭಾರತೀಯ ಡಿಸೈನರ್ ಮತ್ತು ಎಂಜಿನಿಯರ್ ಗಳನ್ನು ಹೆಚ್ಚಾಗಿ ನೇಮಕ ಮಾಡಿಕೊಳ್ಳುವುದು ಮತ್ತೊಂದು ವಿಶೇಷ.

ವಿದ್ಯಾರ್ಹತೆ

ಕೈಮಗ್ಗ ತಂತ್ರಜ್ಞಾನ ಡಿಪ್ಲೊಮಾ/ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನ/ಜವಳಿ ತಂತ್ರಜ್ಞಾನ/ಬಿ.ಎಸ್ಸಿಉತ್ತೀರ್ಣರಾಗಿರುವ ಅಭ್ಯರ್ಥಿಗಳು ಜೊತೆಗೆ ಬಿ.ಎಸ್ಸಿ ಹಂತದಲ್ಲಿ ಪೂರಕ ವಿಷಯವನ್ನಾಗಿ ಅಥವಾ +2 ಹಂತದಲ್ಲಿ ಗಣಿತ ವಿಷಯವನ್ನು ಓದಿರಬೇಕು ಸರ್ಕಾರದ ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ನಿಗದಿಪಡಿಸಿದ ಯಾವುದೇ ತತ್ಸಮಾನ ಡಿಪ್ಲೊಮಾ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕನಿಷ್ಠ ಅರ್ಹತಾ ಅಂಕಗಳು ಡಿಪ್ಲೊಮಾ/ಡಿಗ್ರಿಯಲ್ಲಿ ಕನಿಷ್ಠ 55% ಸರಾಸರಿ ಅಂಗಳನ್ನು ಗಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

English summary
textile industry is not just about making clothes. It has a deep rooted meaning in each of our lives.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia