ಬಿಐಟಿಎಸ್ಎಟಿ ಪರೀಕ್ಷೆಗೆ ನೀವು ಕವರ್ ಮಾಡಲೇ ಬೇಕಾದ ಟಾಪಿಕ್ ಗಳಿವು!

ಬಿರ್ಲಾ ಇನ್ಸಿಟ್ಯುಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್ ನಡೆಸುವ ಪರೀಕ್ಷೆಯಲ್ಲಿ ಪಾಸ್ ಆಗುವುದು ಅಷ್ಟೊಂದು ಸುಲಭವಲ್ಲ. ಈ ಪರೀಕ್ಷೆ ಪಾಸ್ ಮಾಡುವುದು ಎಷ್ಟು ಕಷ್ಟವಿರುತ್ತದೆ ಎಂದ್ರೆ ಸಿಬಿಎಸ್ ಇ ನಡೆಸುವ ಜೆಇಇ ಪರೀಕ್ಷೆಯಂತಿರುತ್ತದೆ.

ಭಾರತದ ಬೆಸ್ಟ್ ಶಿಕ್ಷಣ ಸಂಸ್ಥೆಗಳಲ್ಲಿ ಬಿರ್ಲಾ ಇನ್ಸಿಟ್ಯುಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್ , ಪಿಲನಿ ಕೂಡಾ ಒಂದು. ಟೆಕ್ನಾಲಾಜಿ ಹಾಗೂ ಇಂಜಿನೀಯರಿಂಗ್‌ಗೆ ಸಂಬಂಧಪಟ್ಟಂತೆ ಕೋರ್ಸ್ ಗಳನ್ನ ಆಫರ್ ಮಾಡುತ್ತಿದೆ ಈ ಶಿಕ್ಷಣ ಸಂಸ್ಥೆಗಳು. ಕ್ವಾಲಿಟಿ ಶಿಕ್ಷಣ ಹಾಗೂ ಟ್ರೈನಿಂಗ್ ಕೂಡಾ ಇಲ್ಲಿ ನೀಡಲಾಗುತ್ತದೆ. ಈ ಕಾರಣಕ್ಕಾಗಿ ಪ್ರತಿ ವರ್ಷ ಸುಮಾರು 2 ಲಕ್ಷ ವಿದ್ಯಾರ್ಥಿಗಳು ನ್ಯಾಷನಲ್ ಲೆವೆಲ್ ಪ್ರವೇಶಾತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ.

ಬಿರ್ಲಾ ಇನ್ಸಿಟ್ಯುಟ್ ಆಫ್ ಟೆಕ್ನಾಲಾಜಿ ಆಂಡ್ ಸೈನ್ಸ್ ನಡೆಸುವ ಪರೀಕ್ಷೆಯಲ್ಲಿ ಪಾಸ್ ಆಗುವುದು ಅಷ್ಟೊಂದು ಸುಲಭವಲ್ಲ. ಈ ಪರೀಕ್ಷೆ ಪಾಸ್ ಮಾಡುವುದು ಎಷ್ಟು ಕಷ್ಟವಿರುತ್ತದೆ ಎಂದ್ರೆ ಸಿಬಿಎಸ್ ಇ ನಡೆಸುವ ಜೆಇಇ ಪರೀಕ್ಷೆಯಂತಿರುತ್ತದೆ. ಬಿಐಟಿಎಸ್ಎಟಿ ಪರೀಕ್ಷೆಯು ಮೇ ತಿಂಗಳಿನಲ್ಲಿ ನಡೆಯಲಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಇಲ್ಲಿ ಪ್ರಮುಖ ಟಾಪಿಕ್ ಬಗ್ಗೆ ಮಾಹಿತಿಯನ್ನ ಕೆರಿಯರ್ ಇಂಡಿಯಾ ನಿಮಗೆ ನೀಡುತ್ತಿದೆ.

ಬಿಐಟಿಎಸ್ಎಟಿ ಪರೀಕ್ಷೆಗೆ ಕೇಳುವ ಪ್ರಮುಖ ಟಾಪಿಕ್ ಗಳು ಇವು!

ಬಿಐಟಿಎಸ್ಎಟಿ ಪರೀಕ್ಷೆ ತಯಾರಿ ಹೀಗಿರಲಿ:

ಬಿಐಟಿಎಸ್ಎಟಿ ಪರೀಕ್ಷೆಯಲ್ಲಿ ೫ ಸೆಕ್ಷನ್ ಇದೆ. ಫಿಸಿಕ್ಸ್, ಕೆಮೆಸ್ಟ್ರಿ, ಮ್ಯಾಥಮ್ಯಾಟಿಕ್ಸ್/ಬಯಾಲಾಜಿ, ಲಾಜಿಕಲ್ ರೀಸೋನಿಂಗ್ ಮತ್ತು ಇಂಗ್ಲೀಷ್. ನಾವು ನಿಮಗೆ ಏನು ಹೇಳುವುದೆಮದ್ರೆ ಈ ಪರೀಕ್ಷೆಗೆ ನೀವು ತಯಾರಾಗುತ್ತಿದ್ದೀರಿ ಎಂದಾದ್ರೆ ಮೊದಲು ಮ್ಯಾಥಮ್ಯಾಟಿಕ್ಸ್ ಹಾಗೂ ಫಿಸಿಕ್ಸ್ ನಿಂದ ಸ್ಟಡಿ ಪ್ರಾರಂಭಿಸಿ. ಈ ಎರಡು ಸೆಕ್ಷನ್ ಕೊನೆಗೆ ಅಭ್ಯಸಿಸಲು ಇಟ್ಟರೆ ಸಮಯದ ಅಭಾವದಿಂದ ನೀವು ಅರ್ಧಂಬರ್ಧ ಓದಿಕೊಂಡು ಪರೀಕ್ಷೆಯಲ್ಲಿ ತುಂಬಾ ತಪ್ಪು ಮಾಡುವ ಸಂಭವವಿರುತ್ತದೆ. ಈ ಎರಡು ಸೆಕ್ಷನ್ ನಂತರ ಕೆಮೆಸ್ಟ್ರಿ ಓದಿಕೊಳ್ಳಿ. ಇಂಗ್ಲೀಷ್ ಸಬ್‌ಜೆಕ್ಟ್ ಕೊನೆಯಲ್ಲಿ ಓದಲು ಇಟ್ಟುಕೊಳ್ಲಿ ಯಾಕೆಂದ್ರೆ ಈ ಸಬ್‌ಜೆಕ್ಟ್ ೧೦ ನಿಮಿಷದಲ್ಲಿ ಓದಿ ಮುಗಿಸಬಹುದು.

ಬಿಐಟಿಎಸ್ಎಟಿ ಕೆಮೆಸ್ಟ್ರಿ ಪರೀಕ್ಷೆಯ ಪ್ರಮುಖ ಟಾಪಿಕ್:

ಈ ಸಬ್‌ಜೆಕ್ಟ್ ನಲ್ಲಿ ನೀವು ಸ್ಟ್ರಾಂಗ್ ಇದ್ದರೆ 10 ಅಂಕ ನಿಮ್ಮ ಪಾಕೆಟ್‌ನಲ್ಲಿ ಇದ್ದಂಗೆ. ದಿ ಆಟೋಮಿಕ್ ಸ್ಟ್ರಕ್ಚರ್, ಪಿ-ಬ್ಲಾಕ್ ಎಲೆಮೆಂಟ್ಸ್, ಕಾರ್ಬೋಕ್ಸಿಲಿಕ್ ಆಸಿಡ್ ಮತ್ತು ಡೆರಿವೇಟಿವ್ಸ, ಬಯೋಮೊಲೆಕ್ಯುಲಸ್ ವಿಷಯಕ್ಕೆ ಸಂಬಂಧಪಟ್ಟಂತೆ ಶೇ ೩೦ ಅಂಕಗಳಿಗೆ ಪ್ರಶ್ನೆಗಳನ್ನ ಕೇಳಬಹುದು. ಎಲೆಕ್ಟ್ರೋ ಕೆಮೆಸ್ಟ್ರಿ, ಕೆಮಿಕಲ್ ಥರ್ಮೋಡಿನಾಮಿಕ್ಸ್ ಮತ್ತು ಆಲ್ಕನೆಸ್ ಕೂಡಾ ಪ್ರಮುಖ ಟಾಪಿಕ್ ಆಗಿದೆ. ಇವಿಷ್ಟು ಓದಿದ ಮೇಲೆ ನಿಮ್ಮ ಬಳಿ ಮತ್ತೂ ಟೈಂ ಇದೆ ಎಂದಾದ್ರೆ ಸರ್‌ಫೇಸ್ ಕೆಮೆಸ್ಟ್ರಿ, ರೆಡಾಕ್ಸ್ ರಿಯಾಕ್ಷನ್ಸ್, ಸೊಲ್ಯುಶನ್ಸ್ ಹಾಗೂ ಪಾಲಿಮರ್ಸ್ ಕೂಡಾ ರಿವಿಜನ್ ಮಾಡಿ.

ಬಿಐಟಿಎಸ್ಎಟಿ ಫಿಸಿಕ್ಸ್ ಪ್ರಮುಖ ಟಾಪಿಕ್ಸ್:

ಯೋಚಿಸದೇ ಕ್ಷಣಮಾತ್ರದಲ್ಲಿ ಹೇಳಬಹುದು ಈ ಎಕ್ಸಾಮ್ ಗೆ ಫಿಸಿಕ್ಸ್ ನ ಥರ್ಮೋಡೈನಾಮಿಕ್ಸ್ ಪ್ರಮುಖ ಸಬ್‌ಜೆಕ್ಟ್ ಎಂದು. ಕರೆಂಟ್ ಎಲೆಕ್ಟ್ರಿಸಿಟಿ ಮತ್ತೊಂದು ಪ್ರಮುಖ ಟಾಪಿಕ್. ಫೋಕಸ್ ಆನ್ ಫ್ಲೂಯಿಡ್ಸ್, ವೇವ್ ಆಪ್ಟಿಕ್ಸ್, ಎಲೆಕ್ಟ್ರೋಸ್ಟಾಟಿಕ್ಸ್ ಮತ್ತು ಸಿಂಪಲ್ ಹಾರ್ಮೋನಿಕ್ ಮೋಷನ್ಸ್. ಅಷ್ಟೇ ಅಲ್ಲ ಎನರ್ಜಿ ಪವರ್, ರೊಟಾಷಿನಲ್ ಮೋಷನ್, ಎಲಾಸ್ಟಿಸಿಟಿ ಹಾಗೂ ರೇ ಆಪ್ಟಿಕ್ಸ್ ಕೂಡಾ ಓದಬೇಕು.

ಬಿಐಟಿಎಸ್ಎಟಿ ಮ್ಯಾಥಮ್ಯಾಟಿಕ್ ಪ್ರಮುಖ ಟಾಪಿಕ್ಸ್:

ಸರ್ಕಲ್ ಹಾಗೂ ಸ್ಟ್ರೇಟ್ ಲೈನ್ ಈ ಸಬ್‌ಜೆಕ್ಟ್ ನಲ್ಲಿ ಓದಬೇಕಾದ ಪ್ರಮುಖ ವಿಷಯ ಎಂದು ಎಲ್ಲರಿಗೂ ತಿಳಿದಿದೆ. ದಿ ಥಿಯರಿ ಆಫ್ ಈಕ್ವೇಷನ್ಸ್, ಕಾಂಪ್ಲೆಕ್ಸ್ ನಂಬರ್, ಬಿನೊಮಿಯಲ್ ಥಿಯೋರೆಮ್ ಕೂಡಾ ಪ್ರಮುಖ ಟಾಪಿಕ್. ಮ್ಯಾಥಮ್ಯಾಟಿಕಲ್ ಇಂಡಕ್ಷನ್ಸ್, ಸ್ಟಾಟಿಸ್ಟಿಕ್ಸ್, ಎಲಿಪ್ಸ್ ಮತ್ತು ಇನ್‌ವರ್ಸ್ ಟ್ರಿಗೊನೊಮೆಟ್ರಿ ಕೂಡಾ ಪ್ರಮುಖ ಟಾಪಿಕ್.

ಬಿಐಟಿಎಸ್ಎಟಿ ಇಂಗ್ಲೀಷ್ ಪ್ರಮುಖ ಟಾಪಿಕ್ಸ್:

ಈ ಬಿಐಟಿಎಸ್ಎಟಿ ಪರೀಕ್ಷೆಯಲ್ಲಿ ಇಂಗ್ಲೀಷ್‌ನ ಬೇಸಿಕ್ ಗ್ರಾಮರ್ ಹಾಗೂ ವಕಾಬುಲರಿ ಕೇಳಲಾಗುತ್ತದೆ. ಬರೆಯುದರ ಜತೆ ಇಂಗ್ಲೀಷ್ ವೇಗವಾಗಿ ಓದಲು ಕೂಡಾ ನೀವು ಪ್ರಾಕ್ಟೀಸ್ ಮಾಡಬೇಕು. ಸಿನೊನಿಮ್ಸ್ ಹಾಗೂ ಆಂಟೋನಿಮ್ಸ್ ವಿಷಯದಲ್ಲಿ ಹೆಚ್ಚು ಅಂಕ ಗಳಿಸಬಹುದು. ಒನ್ ವರ್ಡ್ ಸಬ್‌ಸ್ಟಿಟ್ಯುಟ್, ಜಂಬಲ್ಡ್ ಪದಗಳ ಮರು ಜೋಡಣೆ ಸೇರಿದಂತೆ ವಾಕ್ಯ್ ಜೋಡಣೆಗೆ ಹೆಚ್ಚು ಪೋಕಸ್ ಮಾಡಿ.

ಬಿಐಟಿಎಸ್ಎಟಿ ಲಾಜಿಕಲ್ ರೀಸೋನಿಂಗ್ ಇಂಪೋರ್ಟೆಂಟ್ ಟಾಪಿಕ್:

ಈ ಪರೀಕ್ಷೆಯಲ್ಲಿ ಲಾಜಿಕಲ್ ರೀಸೋನಿಂಗ್ ಕಡಿಮೆ ಪ್ರಾಮುಖ್ಯತೆ ಹೊಂದಿದೆ. 150 ಪ್ರಶ್ನೆಗಳಲ್ಲಿ ಈ ಸಬ್‌ಜೆಕ್ಟ್ ನಿಂದ ಬರೀ 10 ಪ್ರಶ್ನೆಗಳನ್ನ ಮಾತ್ರ ಕೇಳಲಾಗುತ್ತದೆ. ಈ ಸಬ್‌ಜೆಕ್ಟ್ ಬಗ್ಗೆ ಪ್ರಾಕ್ಟಿಕಲ್ ಆಗಿ ಸ್ಟಡಿಮಾಡಿ. ಫಿಗರ್ ಆಫ್ ಪಾರ್ಮೇಶನ್, ಅನಾಲೋಜಿ ಟೆಸ್ಟ್, ಸೀರಿಸ್ ಮತ್ತು ಫಿಗರ್ ಮ್ಯಾಟ್ರಿಕ್ಸ್ ತುಂಬಾ ಇಂಪೋರ್ಟೆಂಟ್ ಟಾಪಿಕ್. ಲಾಜಿಕಲ್ ಡೆಡಕ್ಷನ್ ಮತ್ತು ಕಾಂಪ್ಲೇಶನ್ ಗೆ ಹೆಚ್ಚಿನ ಫೋಕಸ್ ನೀಡಿ.

For Quick Alerts
ALLOW NOTIFICATIONS  
For Daily Alerts

English summary
engineering is popular across the country for its teaching quality and training. For this reason, around two lakh candidates take this national-level entrance examination for approximately two thousand seats spread across the BITS campuses in Pilani, Goa and Hyderabad.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X