Mother's Day 2022 : ತಾಯಂದಿರ ದಿನದ ಇತಿಹಾಸ ಮತ್ತು ಮಹತ್ವ ಏನು ಗೊತ್ತಾ ? ಇಲ್ಲಿದೆ ಮಾಹಿತಿ

ತಾಯಂದಿರ ದಿನದ ಶುಭಾಶಯ: ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ಅಮ್ಮಾ ಎಂದರೆ ಅಮೃತ ಆಕೆಗೆ ಸರಿಸಮನಾದದ್ದು ಈ ಭೂಮಿ ಮೇಲೆ ಯಾವುದೂ ಇಲ್ಲ. ಪ್ರತಿಯೊಬ್ಬರ ಬದುಕಿಗೂ ಅಮ್ಮನೇ ಪ್ರಪಂಚ. ಅವಳ ತ್ಯಾಗ, ಶ್ರಮ ಜೀವನಕ್ಕೆ ಕೃತಜ್ಞತೆ ಸಲ್ಲಿಸಲು ಸಾಧ್ಯವೇ ಇಲ್ಲ. ಇನ್ನು ಅವಳನ್ನು ಹೊಗಳಲು ಪದಗಳೇ ಇಲ್ಲ. ಹಾಗಾಗಿ ಅವಳಿಗಾಗಿಯೇ ಮೀಸಲಿಟ್ಟಿರುವ ದಿನವೇ ತಾಯಂದಿರ ದಿನ. ಈ ದಿನವನ್ನು ಎಂದು ಆಚರಿಸಲಾಗುತ್ತೆ ? ಇದರ ಇತಿಹಾಸ ಏನು ಮತ್ತು ಮಹತ್ವಗಳೇನು ಎನ್ನುವುದನ್ನು ಇಲ್ಲಿ ತಿಳಿಯಿರಿ.

ತಾಯಂದಿರ ದಿನದ ಶುಭಾಶಯ: ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ತಾಯಿಯ ದಿನ ಎಂದು ಆಚರಿಸಲಾಗುತ್ತೆ ?:

ಪ್ರತಿ ವರ್ಷವು ವಿಭಿನ್ನ ದಿನಾಂಕದಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಮೇ ತಿಂಗಳ ಎರಡನೇ ಭಾನುವಾರದಂದು ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಭಾರಿ ಮೇ 8,2022 ರಂದು ಆಚರಿಸಲಾಗುತ್ತಿದೆ.

ತಾಯಂದಿರ ದಿನದ ಶುಭಾಶಯ: ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ತಾಯಿಯ ದಿನದ ಇತಿಹಾಸ ಏನು?:

1900ರ ದಶಕದ ಆರಂಭದಲ್ಲಿ ಯುಎಸ್ ನ ಅನ್ನಾ ಜಾರ್ವಿಸ್ ಎಂಬ ಮಹಿಳೆ ಪ್ರಪಂಚದಾದ್ಯಂತದ ತಾಯಂದಿರಿಗಾಗಿ ಒಂದು ದಿನವನ್ನು ಅರ್ಪಿಸಲು ಪ್ರಯತ್ನಿಸುತ್ತಾಳೆ. 1905 ರಲ್ಲಿಆಕೆ ಅವಳ ತಾಯಿಯನ್ನು ಕಳೆದುಕೊಳ್ಳುತ್ತಾಳೆ. ತದನಂತರ 1908 ರಲ್ಲಿ, ಪಶ್ಚಿಮ ವರ್ಜೀನಿಯಾದ ಗ್ರಾಫ್ಟನ್‌ನಲ್ಲಿರುವ ಸೇಂಟ್ ಆಂಡ್ರ್ಯೂಸ್ ಮೆಥೋಡಿಸ್ಟ್ ಚರ್ಚ್‌ನಲ್ಲಿ ತನ್ನ ತಾಯಿಗಾಗಿ ಪ್ರಾರ್ಥನಾ ಸಭೆಯನ್ನು ಆಯೋಜಿಸಿದ್ದಳು. ತಾಯಿಯ ದಿನವನ್ನು ಆಚರಿಸಲು ಅನ್ನಾ ಒಂದು ದಿನವನ್ನು ಮೀಸಲಿಡಬೇಕೆಂದು ನಿರ್ಧರಿಸಿ ಮನವಿಯನ್ನು ಮಾಡಿದಳು. ಅದೇ ವರ್ಷದಲ್ಲಿ ಅಮೆರಿಕದ ಅಧಿಕಾರಿಗಳು ಅದನ್ನು ತಿರಸ್ಕರಿಸಿದರು. ಆದರೆ ನಂತರ ವಿಶ್ವದಾದ್ಯಂತದ ತಾಯಂದಿರಿಗೆ ಕೃತಜ್ಞತೆ ಸಲ್ಲಿಸುವ ಪ್ರಸ್ತಾಪವನ್ನು 1911 ರಲ್ಲಿ ಅಂಗೀಕರಿಸಲಾಯಿತು.

ಆದಾಗ್ಯೂ 1914 ರಲ್ಲಿ ಯುಎಸ್ ಅಧ್ಯಕ್ಷ ವುಡ್ರೊ ವಿಲ್ಸನ್ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಿಯ ದಿನವೆಂದು ಘೋಷಿಸಿದರು. ರಾಷ್ಟ್ರಪತಿಗಳು ಘೋಷಣೆಗೆ ಸಹಿ ಹಾಕಿದ ನಂತರ ಈ ದಿನವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಲಾಯಿತು. ಅಂದಿನಿಂದ ಈ ದಿನವನ್ನು ವಿಶ್ವದಾದ್ಯಂತ ತಾಯಿಯ ದಿನವೆಂದು ಆಚರಿಸಲಾಗುತ್ತದೆ.

ಮತ್ತೊಂದು ಕಥೆಯ ಪ್ರಕಾರದಲ್ಲಿ ಇದನ್ನು ಕ್ರಿಶ್ಚಿಯನ್ ಮದರಿಂಗ್ ಭಾನುವಾರದಂದು ಮದರ್ ಚರ್ಚ್ ನೆನಪಿಗಾಗಿ ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಅರಬ್ ದೇಶಗಳಲ್ಲಿ ಮಾರ್ಚ್ 21 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಸ್ಪ್ರಿಂಗ್ ವಿಷುವತ್ ಸಂಕ್ರಾಂತಿ ಎಂದೂ ಕರೆಯುತ್ತಾರೆ.

ತಾಯಂದಿರ ದಿನದ ಶುಭಾಶಯ: ಈ ದಿನದ ಇತಿಹಾಸ ಮತ್ತು ಮಹತ್ವ ತಿಳಿಯಿರಿ

ತಾಯಿಯ ದಿನದ ಮಹತ್ವ ಏನು ?:

* ತಾಯಿ ತನ್ನ ಮಗುವಿಗೆ ತೋರುವ ಪ್ರೀತಿ, ಕಾಳಜಿ ಮತ್ತು ತ್ಯಾಗವನ್ನು ಗುರುತಿಸುವ ದಿನವಾಗಿ ತಾಯಿಯ ದಿನವನ್ನು ಆಚರಿಸಲಾಗುತ್ತದೆ.
* ಪ್ರಪಂಚದಾದ್ಯಂತ ಜನರು ತನ್ನ ತಾಯಿಯ ನಿಸ್ವಾರ್ಥ ಪ್ರೀತಿಗಾಗಿ ಈ ದಿನದಂದು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.
* ಈ ದಿನವು ಸಾರ್ವಜನಿಕ ರಜಾದಿನವಾಗಿದ್ದು ಜನರು ಈ ದಿನವನ್ನು ಸ್ಮರಣೀಯವಾಗಿಸಲು ಮಾರ್ಗಗಳನ್ನುಹಲವು ಕಂಡುಕೊಳ್ಳುತ್ತಾರೆ.
* ಮಗುವಿನ ಜೀವನದಲ್ಲಿ ತಾಯಿಯ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿವಿಧ ಅಭಿಯಾನಗಳು ಮತ್ತು ಉಪನ್ಯಾಸಗಳನ್ನು ಪ್ರದರ್ಶಿಸಲಾಗುತ್ತದೆ.

ಕುಟುಂಬದಲ್ಲಿ ತಾಯಿಯ ಗೌರವಾರ್ಥವಾಗಿ ತಾಯಿಯ ದಿನವನ್ನು ಆಚರಿಸಲಾಗುತ್ತದೆ. ಮಾತೃತ್ವ ಹಾಗೂ ತಾಯಿಯ ಬಂಧಗಳನ್ನು ಗೌರವಿಸಲು ಮತ್ತು ಸಮಾಜದಲ್ಲಿ ತಾಯಂದಿರ ಮೇಲೆ ಪ್ರಭಾವ ಬೀರಲು ಸಹ ಇದನ್ನು ಆಚರಿಸಲಾಗುತ್ತದೆ. ತಾಯಿಯ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮಾರ್ಚ್ ಅಥವಾ ಮೇ ತಿಂಗಳುಗಳಲ್ಲಿ ಆಚರಿಸಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
Mother's day is celebrated on may 8, here is the information about date, history and significance of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X