ಜೆಇಇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಬೇಕಾದ್ರೆ ನೀವು ಈ ಮಾತಿಗೆಲ್ಲ ತಲೆಕೆಡಿಸಿಕೊಳ್ಳಬೇಡಿ !

Posted By:

ಇಂಜಿನಿಯರ್ ಆಗಬೇಕೆಂದು ಕನಸು ಕಾಣುವವರು ಮೊದಲ ಸ್ಟೆಪ್ ಸರಿಯಾದ ಜಾಗದಲ್ಲೇ ಇರಿಸಬೇಕು. ಅಂದ್ರೆ ಬೆಸ್ಟ್ ಕಾಲೇಜನ್ನ ಆಯ್ಕೆ ಮಾಡಬೇಕು. ಯಾಕೆಂದ್ರೆ ಬೆಸ್ಟ್ ಕಾಲೇಜುಗಳು ಬೆಸ್ಟ್ ಶಿಕ್ಷಣದ ಜತೆ ಬೆಸ್ಟ್ ಫೆಸಿಲಿಟಿ ಕೂಡಾ ನೀಡುತ್ತದೆ. ಇನ್ನ ಈ ಬೆಸ್ಟ್ ಕಾಲೇಜು ಸಿಗಬೇಕಾದ್ರೆ ವಿದ್ಯಾರ್ಥಿಗಳು ಜಾಯಿಂಟ್ ಎಂಟ್ರೇಂಸ್ ಟೆಸ್ಟ್ ಬರೆಯಬೇಕು. ಈ ಪರೀಕ್ಷೆಯಲ್ಲ ಪಾಸಾದ್ರೆ ಟಾಪ್ ಕಾಲೇಜಿನಲ್ಲಿ ಕಲಿಯುವ ಅವಕಾಶ ನಿಮ್ಮದಾಗುವುದು

ಇನ್ನು ಜೆಇಇ ಪರೀಕ್ಷೆಯು ಎರಡು ವಿಧಗಳಲ್ಲಿ ನಡೆಯುತ್ತದೆ. ಜೆಇಇ ಮೇನ್ ಹಾಗೂ ಜೆಇಇ ಅಡ್ವಾನ್ಸ್ ಡ್. ಇನ್ನು ಎಕ್ಸಾಂಗೆ ಇನ್ನೇನೋ ದಿನಗಣನೆ ಪ್ರಾರಂಭವಾಯಿತು ಎನ್ನುವಾಗ ಸ್ನೇಹಿತರಿಂದ, ಸಂಬಂಧಿಕರಿಂದ ಹೆತ್ತವರಿಂದ ಸಲಹೆಗಳು ಬರಲು ಸಾಧ್ಯವಾಗುತ್ತದೆ. ಆದ್ರೆ ಅಂತಹ ಕೆಲವೊಂದು ಸಲಹೆಗಳಲ್ಲಿ ಸತ್ಯಕ್ಕೆ ದೂರವಾದ ಸಲಹೆಗಳು ಇರುತ್ತವೆ

ಇಂತಹ ಸುಳ್ಳು ಸಲಹೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ಯಾಕೆಂದ್ರೆ ಇದರಿಂದ ನೀವು ಗುರಿ ತಲುಪುವ ಬದಲು ಗುರಿ ತಪ್ಪುವ ಸಂಭವವಿರುತ್ತದೆ. ಅಂತಹ ಸುಳ್ಳು ಸಲಹೆಗಳು ಯಾವುವು ಎಂಬ ಮಾಹಿತಿ ಕೊಡಿ

ಹಾರ್ಡ್ ವರ್ಕ್ ನಿಂದ ಎಕ್ಸಾಂ ಪಾಸಾಗಬಹುದು:

ಹೌದು ಹೆಚ್ಚಿನ ಮಂದಿ ಈ ಮಾತನ್ನು ಹೇಳುತ್ತಾರೆ. ಹಾರ್ಡ್ ವರ್ಕ್ ಮಾಡಿ ಓದಿದ್ರೆ ಖಂಡಿತ ಪಾಸಾಗುತ್ತಾರೆ ಎಂದು. ಒಂದು ಕಡೆಯಿಂದ ನಿಜ ಆದ್ರೆ ಹಾರ್ಡ್ ವರ್ಕ್ ಮಾತ್ರ ಇದ್ರೆ ಪರೀಕ್ಷೆ ಪಾಸಾಗುವುದು ಸಾಧ್ಯವಿಲ್ಲ. ಹಾರ್ಡ್ ವರ್ಕ್ ಜತೆ ಪ್ಯ್ಲಾನಿಂಗ್ ಕೂಡಾ ಇಂಪೋರ್ಟೆಂಟ್. ಅಷ್ಟೇ ಅಲ್ಲ ಟೈಂ ಮ್ಯಾನೇಜ್ ಮೆಂಟ್ ಮಾಡಿಕೊಂಡು ಓದಬೇಕು

ಈ ಪರೀಕ್ಷೆಗೆ ಕೋಚಿಂಗ್ ತುಂಬಾ ಅಗತ್ಯ

ಇಂತಹ ಪರೀಕ್ಷೆಗೆ ಕೊನೆ ತಯಾರಿಯಾಗಿ ಕೋಚಿಂಗ್ ಸೇರುವಂತೆ ಎಲ್ಲರೂ ಸಲಹೆ ನೀಡುತ್ತಾರೆ. ಕೋಚಿಂಗ್ ಇಲ್ಲದೆನೆ ಈ ಎಕ್ಸಾಂ ಪಾಸಾಗುವುದು ತುಂಬಾ ಕಷ್ಟ ಎಂದು ಹಲವರು ಹೇಳುತ್ತಾರೆ. ಆದ್ರೆ ಇದು ಸುಳ್ಳು. ಹಾರ್ಡ್ ವರ್ಕ್ ಮಾಡಿ ಓದಿದ್ರೆ ನಿಮಗೆ ಯಾವ ಕೋಚಿಂಗ್ ಕ್ಲಾಸ್ ನ ಅಗತ್ಯ ಕೂಡಾ ಇಲ್ಲ. ಇಂಟರ್ ನೆಟ್‌ನಲ್ಲಿ ಲಭ್ಯವಿರುವ ಆನ್‌ಲೈನ್‌ ಟೆಸ್ಟ್‌ಗಖನ್ನ ಪ್ರ್ಯಾಕ್ಟೀಸ್ ಮಾಡಿ

ಬೋರ್ಡ್ ಎಕ್ಸಾಂ ಪರ್ಸಂಟೇಜ್:

ಹೆಚ್ಚಿನ ವಿದ್ಯಾರ್ಥಿಗಳು ಏನು ಅಂದುಕೊಂಡಿದ್ದಾರೆ ಎಂದ್ರೆ ಬೋರ್ಡ್ ಎಕ್ಸಾಂ ನಲ್ಲಿ ಅತೀ ಹೆಚ್ಚು ಅಂಕ ಸ್ಕೋರ್ ಮಾಡಿದ್ರೆ ಜೆಇಇ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡುತ್ತೇವೆ ಎಂದು ತಿಳಿದುಕೊಂಡಿದ್ದಾರೆ. ಆದ್ರೆ ಇದು ಸುಳ್ಳು. ಯಾಕೆಂದ್ರೆ ಜೆಇಇ ಪರೀಕ್ಷೆಯಲ್ಲಿ ೧೧ ಹಾಗೂ ೧೨ನೇ ತರಗತಿಯ ಸಿಲೇಬಸ್ ಬರುತ್ತದೆ.ಬೋರ್ಡ್ ಎಕ್ಸಾಂನಲ್ಲಿ ಚೆನ್ನಾಗಿ ಅಂಕ ಸ್ಕೋರ್ ಮಾಡಿಲ್ಲ ಎಂದಾದ್ರೆ ಜೆಇಇ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆಯುವ ಸಾಧ್ಯತೆ ಕಡಿಮೆ ಇದೆ. ಹಾಗಾಗಿ ಎರಡೂ ಪರೀಕ್ಷೆಗೆ ಫೋಕಸ್ ಮಾಡಬೇಕು

12 ಗಂಟೆಕ್ಕಿಂತ ಹೆಚ್ಚು ಸಮಯ ಓದುವುದು:

ನೀವು 12 ಗಂಟೆಗಿಂತ ಹೆಚ್ಚು ಟೈಂ ಓದಬೇಕು ಇಲ್ಲವೆಂದಾದ್ರೆ ನೀವು ಪರೀಕ್ಷೆ ಪಾಸ್ ಮಾಡುವುದು ಸುಲಭವಲ್ಲ ಎಂಬ ಹೇಳಿಕೆ ಸತ್ಯಕ್ಕೆ ದೂರವಾದುದು. ಇಂತಹ ಪರೀಕ್ಷೆಗೆ ಹಾರ್ಡ್ ವರ್ಕ್ ಮಾಡಬೇಕು ಅಂತಾರೆ ಹಾಗಂತಾ ಇಡೀ ದಿನ ಪುಸ್ತಕಕ್ಕೆ ಅಂಟಿಕೊಂಡಿರುವುದಲ್ಲ. ಪ್ರತಿದಿನ ೬ ಗಂಟೆ ಓದಿದ್ರೆ ಈ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಬಹುದು. ಓದುವ ಟೈಂನಲ್ಲಿ ಇತರ ಮನಸೆಳೆಯುವ ಚಟುವಟಿಕೆಯತ್ತ ಗಮನಕೊಡಬೇಡಿ

ನಿಮ್ಮ ಸ್ಟ್ರೆಂಥ್ ಮೇಲೆ ಫೋಕಸ್ ಮಾಡಿ:

ಇದು ಎಲ್ಲಾ ಪರೀಕ್ಷೆಗೂ ಮಾಡುವ ಕಾಮನ್ ಸಲಹೆ. ಪ್ರಶ್ನಾ ಪತ್ರಿಕೆಯಲ್ಲಿ ಯಾವ ಪ್ರಶ್ನೆ ನಿಮಗೆ ಸಂಪೂರ್ಣವಾಗಿ ಗೊತ್ತಿರುತ್ತದೋ ಅದಕ್ಕೆ ಉತ್ತರಿಸಿ. ಉದಾಹರಣೆಗೆ ಮೂರು ಪ್ರಶ್ನೆಗಳಿದ್ದು ಇದರಲ್ಲಿ ಎರಡು ಪ್ರಶ್ನೆಗಳಿಗೆ ಉತ್ತರಿಸಿ ಎಂದು ಆಯ್ಕೆ ನೀಡಿರುತ್ತಾರೆ. ಆ ಟೈಂನಲ್ಲಿ ನೀವು ಸ್ಟಾಂಗ್ ಏರಿಯಾ ಹಾಗೂ ವೀಕ್ ಏರಿಯಾ ಎಂದು ಗುರುತಿಸುವುದು ತಪ್ಪು. ಜೆಇಇ ಪರೀಕ್ಷೆಯಲ್ಲಿ ಅದ್ಯಾವುದು ಕೂಡಾ ವರ್ಕೌಟ್ ಆಗುವುದಿಲ್ಲ.

ತುಂಬಾ ಪುಸ್ತಕ ರೆಫರ್ ಮಾಡುವುದು:

ಜೆಇಇ ಪರೀಕ್ಷೆಯು ನಿಮ್ಮ ಬೋರ್ಡ್ ಎಕ್ಸಾಮ್ ಗೆ ಹೋಲಿಸಿದ್ರೆ ತುಂಬಾ ಕಷ್ಟವಿರುತ್ತದೆ. ಆದ್ರೆ ಈ ಎರಡೂ ಪರೀಕ್ಷೆಗೂ ಸಿಲೇಬಸ್ ಮಾತ್ರ ಒಂದೇ ಇರುತ್ತದೆ. ಹಾಗಾಗಿ ಇದಕ್ಕೂ ಬೋರ್ಡ್ ಎಕ್ಸಾಂ ನ ಪುಸ್ತಕಗಳನ್ನೇ ರೆಫರ್ ಮಾಡಬಹುದು. ನೀವು ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಬದಲಿಗೆ ರೆಫರ್ ಮಾಡುವ ಪುಸ್ತಕಗಳ ಸಂಖ್ಯೆಯನ್ನಲ್ಲ. ೧೦ ಇಲ್ಲ ೧೫ ಪುಸ್ತಕ ಅರ್ಧ ಅರ್ಧ ಓದುದಕ್ಕಿಂದ
ಎರಡು ಇಲ್ಲ ಮೂರು ಪುಸ್ತಕಗಳನ್ನ ಕಂಪ್ಲೀಟ್ ಆಗಿ ಓದಿಕೊಳ್ಳಿ. ಇದರಿಂದ ನಿಮ್ಮ ಕಾಂಫಿಡೆನ್ಸ್ ಕೂಡಾ ಹೆಚ್ಚುವುದು

ಇದೀಗ ಜೆಇಇ ಮೇನ್ ಹಾಗೂ ಜೆಇಇ ಅಡ್ವಾನ್ಸ್ ತುಂಬಾ ಸುಲಭವಾಗಿ ಪಾಸ್ ಮಾಡಬಹುದು:

ತುಂಬಾ ಮಂದಿ ಹೇಳುತ್ತಾರೆ ಜೆಇಇ ಮೇನ್ ಪರೀಕ್ಷೆಯಲ್ಲಿ ಯಾರು ಅತೀ ಹೆಚ್ಚು ಅಂಕ ಪಡೆಯುತ್ತಾರೋ ಅವರು ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ ಹೆಚ್ಚು ಅಂಕ ಸ್ಕೋರ್ ಮಾಡುತ್ತಾರೆ ಎಂದು. ಆದ್ರೆ ಇದು ಸುಳ್ಳು. ಜೆಇಇ ಮೇನ್ ಹಾಗೂ ಜೆಇಇ ಅಡ್ವಾನ್ಸ್ ಪೇಪರ್ ಕಂಪ್ಲೀಟ್ ಡಿಫರೆಂಟ್. ಜೆಇಇ ಅಡ್ವಾನ್ಸ್ ವಿಷಯದಲ್ಲಿ ಎರಡು ಪೇಪರ್ ಇದೆ. ಹಾಗಾಗಿ ಜೆಇಇ ಮೇನ್ ಪರೀಕ್ಷೆ ಪಾಸ್ ಮಾಡುವುದು ಸುಲಭದ ವಿಷಯವಲ್ಲ

English summary
Every student who aspires to become an engineer puts their best foot forward to enter the top institutions in the country such as the IITs and the NITs. There is no surprise here, because these institutes are the best in providing quality education, while providing significant opportunities and facilities as well. The Joint Entrance Examination (JEE) is the gateway to enter these prestigious institutions

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia