ನಬಾರ್ಡ್ ಗ್ರೇಡ್ ಎ ಹುದ್ದೆಗಳ ಪ್ರಿಲಿಮ್ಸ್ ಪರೀಕ್ಷೆ: ಅಂತಿಮ ಕ್ಷಣದ ತಯಾರಿಗೆ ಸಿಂಪಲ್ ಟಿಪ್ಸ್

ನಬಾರ್ಡ್ 2019 ರ ಗ್ರೇಡ್ ಎ ಹುದ್ದೆಗಳ ನೇಮಕಾತಿಗಾಗಿ ನಡೆಸಲಾಗುವ ಪ್ರಿಲಿಮ್ಸ್ ಪರೀಕ್ಷೆಗೆ ಇನ್ನು ಒಂದೇ ದಿನ ಬಾಕಿ ಇದ್ದು, ಅಂತಿಮ ಕ್ಷಣದಲ್ಲಿ ಅಭ್ಯರ್ಥಿಗಳು ಯಾವ ರೀತಿ ತಯಾರಿ ನಡೆಸಬಹುದು ಎನ್ನುವುದನ್ನು ಕರಿಯರ್ ಇಂಡಿಯಾ ನಿಮಗಾಗಿ ತಿಳಿಸಲಿದೆ.

ನಬಾರ್ಡ್  ಪ್ರಿಲಿಮ್ಸ್  ಪರೀಕ್ಷೆಯಲ್ಲಿ ಹೈಸ್ಕೋರ್ ಮಾಡೋಕೆ ಹೀಗೆ ಮಾಡಿ

ಪರೀಕ್ಷೆಗಳು ಎಂದಮೇಲೆ ಎಷ್ಟೇ ತಯಾರಿ ನಡೆಸಿದ್ದರೂ ಅಂತಿಮ ಕ್ಷಣದಲ್ಲಿ ನಡೆಸುವ ತಯಾರಿ ಪ್ರಮುಖವಾದದ್ದು, ಹಾಗಾಗಿ ಬಾಕಿ ಇರುವ ಒಂದೇ ದಿನದಲ್ಲಿ ಏನೆಲ್ಲಾ ಮಾಡಬೇಕು? ಹೇಗೆ ತಯಾರಿ ನಡೆಸಬೇಕು ಎನ್ನುವುದಕ್ಕೆ ನಾವಿಲ್ಲಿ ನಿಮಗಾಗಿ ಸಲಹೆಯನ್ನು ಕೊಡುತ್ತಿದ್ದೇವೆ ಸಂಪೂರ್ಣವಾಗಿ ಓದಿ ಫಾಲೋ ಮಾಡಿದರೆ ಸಕ್ಸಸ್ ಗ್ಯಾರೆಂಟಿ.

ಪ್ರಮುಖ ವಿಷಯಗಳ ಪುನರಾವರ್ತನೆ:

ಅಭ್ಯರ್ಥಿಗಳು ತಾವು ನೋಟ್ ಮಾಡಿಕೊಂಡುವ ಪ್ರಮುಖ ವಿಷಯಗಳನ್ನು ಮಾತ್ರ ಓದಿ ಸಂಪೂರ್ಣವಾದ ಸಾರವನ್ನು ನೆನಪು ಮಾಡಿಕೊಳ್ಳುವುದು. ಕಿರು ಪಟ್ಟಿ ಮಾಡಿಕೊಂಡ ವಿಷಯವನ್ನು ಮಾತ್ರ ಪರೀಕ್ಷಾ ಹಿಂದಿನ ದಿನದವರೆಗೆ ಓದುವುದು ಹೆಚ್ಚಿಗೆ ಲಾಭವಾಗುವುದು.

ಪ್ರಮುಖ ಅಂಶಗಳೆಡೆಗೆ ಗಮನಿಸಿ:

ಅಭ್ಯರ್ಥಿಗಳು ಪರೀಕ್ಷೆಗೆ ಯಾವ ವಿಷಯಗಳು ಪ್ರಮುಖವಾದವೋ ಅಂತಹ ವಿಷಯಗಳನ್ನು ಮಾತ್ರ ಪರೀಕ್ಷೆಯ ಹಿಂದಿನ ದಿನದವರೆಗೂ ಹೆಚ್ಚು ಅಧ್ಯಯನ ಮಾಡಿ.

ಯಾವುದೇ ಗೊಂದಲಗಳು ಅನಗತ್ಯ:

ಅಭ್ಯರ್ಥಿಗಳು ಯಾವುದೇ ರೀತಿಯ ಗೊಂದಲ ಮತ್ತು ತಪ್ಪುಗಳಿಗೆ ಎಡೆಮಾಡದೇ ಏನನ್ನು ಅಧ್ಯಯನ ಮಾಡಿದಿದ್ದೀರೋ ಅಷ್ಟನ್ನು ಮಾತ್ರ ಕೊನೆಯ ಕ್ಷಣದ ವರೆಗೂ ಪುನರಾವರ್ತಿಸಿದರೆ ಒಳಿತು.

ಹಿಂದಿನ ಪ್ರಶ್ನೆ ಪತ್ರಿಕೆಯನ್ನು ಒಮ್ಮೆ ಚೆಕ್ ಮಾಡಿ:

ಅಭ್ಯರ್ಥಿಗಳು ಪರೀಕ್ಷಾ ಸಮಯದಲ್ಲಿ ಏನನ್ನೂ ಹೆಚ್ಚಾಗಿ ಓದಲು ಸಾಧ್ಯವಿರುವುದಿಲ್ಲ ಹಾಗಾಗಿ ಓದಿರುವುದನ್ನು ನೆನಪು ಮಾಡಿಕೊಳ್ಳುವ ಉದ್ದೇಶದಿಂದ ಹಿಂದಿನ ಪ್ರಶ್ನೆ ಪತ್ರಿಕೆಗಳ ಪ್ಯಾಟ್ರನ್‌ ಮತ್ತು ಪ್ರಶ್ನೆಗಳನ್ನು ಒಮ್ಮೆ ಪರಿಶೀಲಿಸಿ

ಪರೀಕ್ಷಾ ಹಿಂದಿನ ದಿನ ಓದುವುದು ಬೇಡ:

ಅಭ್ಯರ್ಥಿಗಳು ಪರೀಕ್ಷೆಯ ಹಿಂದಿನ ರಾತ್ರಿ ಹೊಸ ವಿಷಯಗಳನ್ನು ಓದುವುದಕ್ಕೆ ಪ್ರಾರಂಭಿಸಬೇಡಿ. ಇದರಿಂದ ಅನೇಕ ಸಂಶಯಗಳು ಗೊಂದಲಗಳು ತಲೆಯಲ್ಲಿ ಹುಟ್ಟಿಕೊಂಡು ಇನ್ನಷ್ಟು ಆತಂಕಕ್ಕೆ ದಾರಿ ಮಾಡುತ್ತವೆ.

ಪರೀಕ್ಷಾ ಹಿಂದಿನ ದಿನ ಉತ್ತಮ ನಿದ್ರೆ:

ಅಭ್ಯರ್ಥಿಗಳು ಯಾವುದೇ ಪರೀಕ್ಷೆಯನ್ನು ಎದುರಿಸುವಾಗ ಪರೀಕ್ಷೆಯ ಹಿಂದಿನ ದಿನ ಚೆನ್ನಾಗಿ ನಿದ್ದೆ ಮಾಡುವುದು ಒಳಿತು. ಇದರಿಂದ ಮೆದುಳು ಚುರುಕಾಗಿ ಕಾರ್ಯ ನಿರ್ವಹಿಸಿ ಪರೀಕ್ಷೆಯನ್ನು ಉತ್ತಮವಾಗಿ ಬರೆಯಲು ಸಹಾಯ ಮಾಡುವುದು.

ಟೈಂ ಮ್ಯಾನೇಜ್ಮೆಂಟ್ :

ಪರೀಕ್ಷೆಯಲ್ಲಿ ಟೈಂ ಮ್ಯಾನೇಜ್ಮೆಂಟ್ ಮಾಡುವುದು ತುಂಬಾನೆ ಸುಲಭ ಆದರೆ ವಿದ್ಯಾರ್ಥಿಗಳು ಹೆಚ್ಚು ಸಕಾರಾತ್ಮ ಆಲೋಚನೆಗಳನ್ನು ಹೊಂದಿದ್ದಲ್ಲಿ ಮಾತ್ರ ಪರೀಕ್ಷೆಯನ್ನು ನಿಗದಿತ ಸಮಯದೊಳಗೆ ಉತ್ತಮವಾಗಿ ಬರೆಯಲು ಸಾಧ್ಯವಾಗುವುದು.

For Quick Alerts
ALLOW NOTIFICATIONS  
For Daily Alerts

English summary
Here is the tips for aspirants who are appearing for NABARD GRADE A prelims examination. Take a look
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X