National Maritime Day 2022 : ರಾಷ್ಟ್ರೀಯ ಕಡಲ ದಿನದ ಇತಿಹಾಸ ಮತ್ತು ಮಹತ್ವವೇನು ಗೊತ್ತಾ ?

ರಾಷ್ಟ್ರೀಯ ಕಡಲ ದಿನದ ಇತಿಹಾಸ ತಿಳಿಯಿರಿ

ಭಾರತದಲ್ಲಿ ಜಾಗತಿಕವಾಗಿ ಆರ್ಥಿಕತೆಯನ್ನು ಬೆಂಬಲಿಸುವ ಕಡಲ ಮಾರ್ಗದ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲು ಪ್ರತಿ ವರ್ಷ ರಾಷ್ಟ್ರೀಯ ಕಡಲ ದಿನವನ್ನು ಏಪ್ರಿಲ್ 5 ರಂದು ಆಚರಿಸಲಾಗುತ್ತದೆ. ದೇಶದಾದ್ಯಂತ ವಾಣಿಜ್ಯ ಮತ್ತು ಆರ್ಥಿಕತೆಯ ಬಗ್ಗೆ ಜಾಗೃತಿ ಮೂಡಿಸಲು ಮೊದಲ ಆಚರಣೆಯನ್ನು 1964 ರಲ್ಲಿ ನಡೆಸಲಾಯಿತು.

ಈ ಜಗತ್ತಿನಲ್ಲಿ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸರಕುಗಳನ್ನು ಸಾಗಿಸುವ ಅತ್ಯಂತ ಸುಸಂಘಟಿತ, ಸುರಕ್ಷಿತ ಮತ್ತು ಪರಿಸರಕ್ಕೆ ಸ್ಪಂದಿಸುವ ಮಾರ್ಗ ಕಡಲು. ಬನ್ನಿ ರಾಷ್ಟ್ರೀಯ ಕಡಲ ದಿನದ ಇತಿಹಾಸ, ಮಹತ್ವ ಮತ್ತು ಇತರೆ ಮಾಹಿತಿಯನ್ನು ತಿಳಿಯೋಣ.

ರಾಷ್ಟ್ರೀಯ ಕಡಲ ದಿನದ ಇತಿಹಾಸ :

ರಾಷ್ಟ್ರೀಯ ಕಡಲ ದಿನದ ಇತಿಹಾಸ :

ಭಾರತೀಯ ಶಿಪ್ಪಿಂಗ್ ಪರಂಪರೆಯು ಮೊದಲು ಏಪ್ರಿಲ್ 5, 1919 ರಂದು ಪ್ರಾರಂಭವಾಯಿತು. ದಿ ಸಿಂಧಿಯಾ ಸ್ಟೀಮ್ ನ್ಯಾವಿಗೇಷನ್ ಕಂಪನಿ ಲಿಮಿಟೆಡ್ ತಯಾರಿಸಿದ ಮೊದಲ ಹಡಗು ದಿ ಎಸ್ಎಸ್ ಲಾಯಲ್ಟಿ ಮುಂಬೈನಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಪ್ರಯಾಣ ಬೆಳೆಸಿತು. ಈ ದಿನದ ನೆನಪಿಗಾಗಿ ಭಾರತದ ನೌಕಾದಳ 1964 ರಿಂದ ರಾಷ್ಟ್ರೀಯ ಕಡಲ ದಿನವನ್ನು ಆಚರಿಸಿಕೊಂಡು ಬಂದಿದೆ.

ಭಾರತವು 1959 ರಲ್ಲಿ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಗನೈಸೇಶನ್ (IMO) ನ ಸದಸ್ಯತ್ವವನ್ನು ಪಡೆದುಕೊಂಡಿತು. IMO ಸಮುದ್ರ ರಕ್ಷಣೆ ಮತ್ತು ಹಡಗುಗಳಿಂದ ಮಾಲಿನ್ಯವನ್ನು ತಡೆಗಟ್ಟುವ ಜವಾಬ್ದಾರಿಯನ್ನು ಹೊಂದಿದೆ.

ರಾಷ್ಟ್ರೀಯ ಕಡಲ ದಿನದ ಮಹತ್ವ :
 

ರಾಷ್ಟ್ರೀಯ ಕಡಲ ದಿನದ ಮಹತ್ವ :

ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ಸರಕುಗಳನ್ನು ಸಾಗಿಸುವ ಅತ್ಯಂತ ಸುಸಂಘಟಿತ, ಸುರಕ್ಷಿತ ಮತ್ತು ಪರಿಸರಕ್ಕೆ ಸ್ಪಂದಿಸುವ ಕಡಲ ಮಾರ್ಗವನ್ನು ಬೆಂಬಲಿಸುವ ಉದ್ದೇಶವನ್ನು ಈ ದಿನ ಹೊಂದಿದೆ.

ಕ್ರಿ.ಪೂ.3000 ಅವಧಿಯಲ್ಲಿ ಸಿಂಧೂ ಕಣಿವೆಯ ನಿವಾಸಿಗಳು ಮೆಸಪೊಟೋಮಿಯಾದಿಂದ ಕಡಲ ವ್ಯಾಪಾರದ ಸಂಪರ್ಕವನ್ನು ಪ್ರಾರಂಭಿಸಿದಾಗ ಭಾರತೀಯ ಕಡಲ ಇತಿಹಾಸ ಆರಂಭವಾಯಿತು ಎನ್ನಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ನೌಕಾಯಾನದ ಕೊಡುಗೆ ಅಪಾರ. ವಿವಿಧ ದೇಶಗಳ ಮಾರುಕಟ್ಟೆಗೆ ಸರಕುಗಳನ್ನು ರಫ್ತು ಮಾಡುವುದು, ಬೇರೆ ದೇಶದಿಂದ ಅಗತ್ಯವಿರುವ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದು ಮೊದಲಾದ ವಾಣಿಜ್ಯ ಚಟುವಟಿಕೆಗಳಿಗೆ ನೌಕಾಯಾನವೇ ಆಧಾರವಾಗಿದೆ.

ಹಡಗಿನ ಮೂಲಕ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಭಾರಿ ಪ್ರಮಾಣದ ಸರುಕುಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ಸಾಗಿಸಬಹುದು. ಹಡಗು ಉದ್ಯಮ ದೇಶದ ವ್ಯಾಪಾರ ಮತ್ತು ವಾಣಿಜ್ಯ ಬೆಳವಣಿಗೆಯನ್ನು ಬೃಹತ್‌ ಪ್ರಮಾಣದಲ್ಲಿ ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ಯಾವುದೇ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬಂದರುಗಳ ಪಾತ್ರ ಮುಖ್ಯ ಎಂಬುದನ್ನು ಅರಿತಿರುವ ಸರ್ಕಾರಗಳು, ಬಂದರುಗಳ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ ಸಾಕಷ್ಟು ಕಾಳಜಿ ವಹಿಸುತ್ತಿವೆ. ಈ ಹಿನ್ನೆಲೆಯಲ್ಲಿ ಈ ದಿನವನ್ನು ಹೆಚ್ಚು ಪ್ರಾಮುಖ್ಯತೆಯಿಂದ ಆಚರಣೆ ಮಾಡಲಾಗುತ್ತದೆ.

ರಾಷ್ಟ್ರೀಯ ಕಡಲ ದಿನ ಆಚರಣೆ :

ರಾಷ್ಟ್ರೀಯ ಕಡಲ ದಿನ ಆಚರಣೆ :

ರಾಷ್ಟ್ರೀಯ ಕಡಲ ದಿನದಂದು ಭಾರತೀಯ ಕಡಲ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲು ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಾಗುತ್ತದೆ. ವರುಣ ದೇವರ ಪ್ರತಿಮೆ ಹೊಂದಿರುವ ವರುಣ ಪ್ರಶಸ್ತಿಯನ್ನು ಅವರ ಸುದೀರ್ಘ ಮತ್ತು ಅಸಾಧಾರಣ ಕೊಡುಗೆಗಾಗಿ ನೀಡಲಾಗುತ್ತದೆ.

ರಾಷ್ಟ್ರೀಯ ಕಡಲ ದಿನ ಪ್ರಶಸ್ತಿಯನ್ನು ಜನರು ತಮ್ಮ ಜೀವಮಾನದ ಕೊಡುಗೆಗಾಗಿ ಮತ್ತು ಕಡಲ ವಲಯದಲ್ಲಿ ಹಿರಿಯ ಮಟ್ಟದಲ್ಲಿ ಕೈಗೊಂಡ ವಿಶಿಷ್ಟ ಸಾಧನೆಗಳಿಗಾಗಿ ನೀಡಲಾಗುತ್ತದೆ. ಪ್ರಶಸ್ತಿಯು ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಕಡಲ ಶಿಕ್ಷಣ ಮತ್ತು ತರಬೇತಿ ವಲಯದಲ್ಲಿ ಪ್ರತಿಷ್ಠಿತ ವ್ಯಕ್ತಿಗಳ ಪ್ರಯತ್ನಗಳನ್ನು ಗುರುತಿಸುವ ಸಲುವಾಗಿ ಸಮುದ್ರ ಶಿಕ್ಷಣ ಮತ್ತು ತರಬೇತಿಗೆ ಅತ್ಯುತ್ತಮ ಕೊಡುಗೆಯನ್ನು ನೀಡಲಾಗುತ್ತದೆ.

For Quick Alerts
ALLOW NOTIFICATIONS  
For Daily Alerts

English summary
National maritime day is celebrated on april 5. Here is the history, significance and more information about the day in kannada.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X