National Technology Day 2021: ಈ ದಿನದ ಇತಿಹಾಸ, ಆಚರಣೆ ಮತ್ತು ಮಹತ್ವವೇನು ?

ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಎಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸಾಧನೆಗಳನ್ನು ಎತ್ತಿ ಹಿಡಿಯಲು ಪ್ರತಿ ವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸಲಾಗುತ್ತದೆ. ಇಂದು ಭಾರತ ತನ್ನ 30 ನೇ ರಾಷ್ಟ್ರೀಯ ತಂತ್ರಜ್ಞಾನ ದಿನವನ್ನು ಆಚರಿಸುತ್ತಿದೆ. ಈ ದಿನವು ದೇಶದ ತಾಂತ್ರಿಕ ಪ್ರಗತಿಯನ್ನು ನೆನಪಿಸುತ್ತದೆ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಇತಿಹಾಸ ಮತ್ತು ಮಹತ್ವ ಏನು ?

1999 ರಿಂದ ಪ್ರತಿವರ್ಷ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ) ರಾಷ್ಟ್ರೀಯ ಬೆಳವಣಿಗೆಗೆ ಕಾರಣವಾದ ತಾಂತ್ರಿಕ ಆವಿಷ್ಕಾರಗಳನ್ನು ಗೌರವಿಸುವ ಮೂಲಕ ಈ ದಿನವನ್ನು ಸ್ಮರಿಸುತ್ತದೆ. ಮಂಡಳಿಯು ಪ್ರತಿ ವರ್ಷದ ಕಾರ್ಯಕ್ರಮಕ್ಕೂ ಒಂದು ಥೀಮ್ ಅನ್ನು ಆಯ್ಕೆ ಮಾಡುತ್ತದೆ. ಕಳೆದ ವರ್ಷ ಸಮ್ಮೇಳನದ ವಿಷಯವು 'RESTART ಶೀರ್ಷಿಕೆಯ ವಿಜ್ಞಾನ, ತಂತ್ರಜ್ಞಾನ ಮತ್ತು ಸಂಶೋಧನಾ ಅನುವಾದಗಳ ಮೂಲಕ ಆರ್ಥಿಕತೆಯನ್ನು ರೀಬೂಟ್ ಮಾಡುವುದು'.

ಸಾಮಾನ್ಯವಾಗಿ ಈ ದಿನದಂದು ವಿವಿಧೆಡೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ ಈ ವರ್ಷವೂ ಕೊರೊನಾವೈರಸ್ ನಿಂದ ವಿಧಿಸಲಾದ ಲಾಕ್‌ಡೌನ್ ನಿಂದಾಗಿ ದೊಡ್ಡ ಮಟ್ಟದಲ್ಲಿ ಆಚರಣೆಯನ್ನು ಮಾಡಲಾಗುತ್ತಿಲ್ಲ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಇತಿಹಾಸ:

1998ರ ಮೇ 11 ಭಾರತದ ಪಾಲಿಗೆ ಅತ್ಯಂತ ಮಹತ್ವದ ದಿನ. ಅಂದು ಭಾರತವು ರಾಜಸ್ಥಾನದ ಪೊಖ್ರಾನ್‌ನಲ್ಲಿ ಸರಣಿ ಅಣುಬಾಂಬ್‌ ಸ್ಫೋಟದ ಪರೀಕ್ಷೆಗಳನ್ನು ಯಸಸ್ವಿಯಾಗಿ ನಡೆಸಿತು. ಅಷ್ಟೇ ಅಲ್ಲದೆ ಅದೇ ದಿನ ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ 'ಹನ್ಸಾ-3' ಹೆಲಿಕಾಪ್ಟರಿನ ಯಶಸ್ವಿ ಹಾರಾಟ ನಡೆಯಿತು ಹಾಗೂ ಅದೇ ದಿನ ಸಂಪೂರ್ಣ ಸ್ವದೇಶಿ ನಿರ್ಮಿತ ತ್ರಿಶೂಲ್‌ ಕ್ಷಿಪಣಿಯನ್ನು ಯಶಸ್ವಿಯಾಗಿ ನಡೆಸಲಾಗಿತ್ತು. ಈ ಎಲ್ಲಾ ತಾಂತ್ರಿಕ ಸಾಧನೆಗಳ ಹಿನ್ನೆಲೆಯಲ್ಲಿ 1998ರ ಮೇ 11 ರಿಂದ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.

ಭಾರತವು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಯನ್ನು ಮನಗಂಡು ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಘೋಷಿಸಿದರು. ವಾಜಪೇಯಿ ಅವರು ಭಾರತವನ್ನು ಪರಮಾಣು ರಾಜ್ಯವೆಂದು ಕರೆದರು. ಭಾರತವು ರಾಷ್ಟ್ರಗಳ 'ನ್ಯೂಕ್ಲಿಯರ್ ಕ್ಲಬ್'ಗೆ ಸೇರ್ಪಡೆಗೊಂಡ ಆರನೇ ದೇಶವಾಗಿದೆ.

ಭಾರತವು ಅಣುಬಾಂಬ್‌ ಸ್ಫೋಟ, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡುವ ಮೂಲಕ ಜಗತ್ತಿನ ಸೂಪರ್‌ ಪವರ್‌ ರಾಷ್ಟ್ರವಾಗಿ ಹೊರಹೊಮ್ಮಿದ್ದು, ತಾಂತ್ರಿಕ ಕ್ಷೇತ್ರದಲ್ಲಿ ಎದುರಾಗುವ ಎಲ್ಲ ಅಡ್ಡಿಗಳನ್ನು ಸಮರ್ಥವಾಗಿ ಎದುರಿಸಲು ಮುನ್ನಡೆಯುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳ ನೆನಪಿಗಾಗಿ ಪ್ರತಿವರ್ಷ ಈ ದಿನವನು ಆಚರಿಸಲಾಗುತ್ತದೆ.

ರಾಷ್ಟ್ರೀಯ ತಂತ್ರಜ್ಞಾನ ದಿನದ ಉದ್ದೇಶ:

ಈ ಆಚರಣೆಯ ಪ್ರಮುಖ ಉದ್ದೇಶವೆಂದರೆ ವಿವಿಧ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಅಭಿವೃದ್ಧಿಯನ್ನು ಉತ್ತೇಜಿಸುವುದು. ಇದಕ್ಕಾಗಿ ಇಲಾಖೆಯ ವಸ್ತುಗಳು, ಸಾಧನಗಳು ಮತ್ತು ಪ್ರಕ್ರಿಯೆಗಳನ್ನು ಒಳಗೊಂಡಿರುವ ತಂತ್ರಜ್ಞಾನ ಅಭಿವೃದ್ಧಿ ಯೋಜನೆಗಳನ್ನು ಉತ್ಪಾದಿಸುವುದು.

ತಾಂತ್ರಿಕ ಚಟುವಟಿಕೆಗಳನ್ನು ಬೆಂಬಲಿಸಲು ಸುಧಾರಿತ ಅಥವಾ ಉದಯೋನ್ಮುಖ ಪ್ರದೇಶಗಳಲ್ಲಿ ಮತ್ತು ಸಾಂಪ್ರದಾಯಿಕ ಕ್ಷೇತ್ರಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಹೊಸ ಆಲೋಚನೆಗಳು ಅಥವಾ ಪರಿಕಲ್ಪನೆಗಳನ್ನು ಸಹ ನಿರ್ಣಯಿಸಲಾಗುತ್ತದೆ. ಇದರಿಂದ ಅವುಗಳನ್ನು ಉತ್ಪನ್ನ ಅಥವಾ ತಂತ್ರಜ್ಞಾನದಲ್ಲಿ ಬಳಸಬಹುದು.

ರಾಷ್ಟ್ರೀಯ ತಂತ್ರಜ್ಞಾನ ದಿನದ ಆಚರಣೆ:

* ಈ ದಿನದಂದು ವರ್ಷದ ಅತ್ಯಂತ ಗಮನಾರ್ಹ ವ್ಯಕ್ತಿಗಳಿಗೆ, ಸಂಸ್ಥೆಗಳಿಗೆ ಮತ್ತು ವ್ಯವಹಾರಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುತ್ತದೆ.

* ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ಭೂ ವಿಜ್ಞಾನ ಸಚಿವಾಲಯ, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮತ್ತು ಹಲವಾರು ವೈಜ್ಞಾನಿಕ ವಿಭಾಗಗಳು ಈ ದಿನವನ್ನು ಆಚರಿಸುವ ಮೂಲಕ ಇತರರಿಗೆ ರಾಷ್ಟ್ರೀಯ ತಂತ್ರಜ್ಞಾನ ದಿನದ ಪ್ರಾಮುಖ್ಯತೆಯನ್ನು ತಿಳಿಸುತ್ತದೆ.

* ಜನರು ಮಾಡಿದ ಸಾಧನೆಗೆ ಅವರಿಗೆ ಪ್ರಶಸ್ತಿ ನೀಡಲಾಗುತ್ತದೆ. ಇದರಿಂದ ಅವರು ಸಂಶೋಧನೆಯಲ್ಲಿ ಹೆಚ್ಚು ತೊಡಗಲು ಪ್ರೇರಿತರಾಗುತ್ತಾರೆ.

* ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯವು ಭಾರತದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತದೆ.

* ಸ್ಕ್ರಿಪ್ಟ್, ಭಾಷಣ ಅಥವಾ ಪ್ರಬಂಧ ಸ್ಪರ್ಧೆಗಳನ್ನು ಹಲವಾರು ಸಂಸ್ಥೆಗಳಲ್ಲಿ ಆಯೋಜಿಸಲಾಗುತ್ತದೆ.
* ಥೀಮ್ ಆಧಾರಿತ ಲೇಖನಗಳನ್ನು ಸಹ ಪ್ರಚಾರ ಮಾಡಲಾಗುತ್ತದೆ.

ಆದ್ದರಿಂದ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಆಸಕ್ತಿ ಮತ್ತು ಜಾಗೃತಿ ಮೂಡಿಸುವುದು ಅವಶ್ಯಕ. ನಿಸ್ಸಂದೇಹವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯು ದೇಶದ ಯುವಜನರನ್ನು ಮುಂದೆ ಬರಲು ಪ್ರೋತ್ಸಾಹಿಸಲು ಒಂದು ಉತ್ತಮ ಮಾರ್ಗವಾಗಿದೆ. ಈ ಆಚರಣೆಯಿಂದ ಭಾರತದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾನದ ಸಂಶೋಧಕರನ್ನು ಪ್ರಶಂಸಿಸುವ ಮಾರ್ಗವಾಗಿದೆ.

For Quick Alerts
ALLOW NOTIFICATIONS  
For Daily Alerts

English summary
National technology day is celebrated on may 11. Here is the history and significance of the day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X