ಒಂದೇ ತಿಂಗಳಲ್ಲಿ NEET ಪರೀಕ್ಷೆಗೆ ತಯಾರಿ ಹೇಗೆ?

Written By:

ಭಾರತದಲ್ಲಿ ವಿದ್ಯಾರ್ಥಿಗಳು ಎದುರಿಸುವ ಅತೀ ಕಷ್ಟದ ಪರೀಕ್ಷೆಗಳಲ್ಲಿ NEET ಕೂಡಾ ಒಂದು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ ಈ ಪರೀಕ್ಷೆಯನ್ನ ಆಯೋಜಿಸುತ್ತದೆ. ನ್ಯಾಷನಲ್ ಎಲಿಜಬಿಲಿಟಿ ಕಂ ಎಂಟ್ರೇಸ್ ಟೆಸ್ಟ್ ಈ ಬಾರಿ ಮೇ 6 ರಂದು ನಡೆಯಲಿದೆ. ಸುಮಾರು 12 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮೆಡಿಕಲ್ ಸೀಟಿಗಾಗಿ ಭಾರತದಾದ್ಯಂತ ನಡೆಯುವ ಪರೀಕ್ಷೆ ಇದಾಗಿದೆ

ಯಾವಾಗದಿಂದ ಓದಲು ಪ್ರಾರಂಭಿಸಿದ್ದೀರಿ ಅನ್ನೋದು ಪ್ರಮುಖವಲ್ಲ. ಆದ್ರೆ ಇನ್ನು ಪರೀಕ್ಷೆಗೆ ಎಷ್ಟು ದಿನ ಬಾಕಿ ಉಳಿದಿದೆ ಅನ್ನೋದು ಇಂಪೋರ್ಟೆಂಟ್. ಇನ್ನು ಕೆಲವು ವಿದ್ಯಾರ್ಥಿಗು ಕೇಳುತ್ತಾರೆ ಈ ಪರೀಕ್ಷೆಗೆ ಒಂದು ತಿಂಗಳಲ್ಲಿ ಓದಿ ಮುಗಿಸಬಹುದಾ ಎಂದ ಇದಕ್ಕೆ ನಾವು ಎಸ್ ಎಂದು ಉತ್ತರಿಸುತ್ತೇವೆ. ಹೇಗೆ ಒಂದು ತಿಂಗಳಲ್ಲಿ ಈ ಪರೀಕ್ಷೆಗೆ ಓದಿ ಮುಗಿಸಬಹುದು ಎಂಬ ಮಾಹಿತಿ ಇಲ್ಲಿದೆ

ಕಷ್ಟದ ಸಬ್‌ಜೆಕ್ಟ್ ಗೆ ಹೆಚ್ಚು ಸಮಯ ನೀಡಿ:

ಈ ಪರೀಕ್ಷೆಗೆ ಯಾವುದೇ ಗಡಿ ಇರಲ್ಲ. ಕಂಪ್ಲೀಟ್ ಚಾಪ್ಟರ್ ಓದಲೇ ಬೇಕು. ಹಾಗಾಗಿ ಸಬ್‌ಜೆಕ್ಟ್ ನಲ್ಲಿ ನಿಮಗೆ ಯಾವ ವಿಷಯ ಕಷ್ಟವಿರತ್ತೋ ಅದನ್ನ ಮೊದಲು ಆಯ್ಕೆ ಮಾಡಿಕೊಂಡು ಕಡಿಮೆ ಅಂದ್ರೂ 20 ನಿಮಿಷದಲ್ಲಿ ಓದಿ. ಇದೇ ಸಮಯದಲ್ಲಿ ನಿಮ್ಮದೇ ಒಂದು ನೋಟ್ಸ್ ಕೂಡಾ ಪ್ರಿಪೇರ್ ಮಾಡಿ ಎಂದು ಸಲಹೆ ನೀಡುತ್ತೇವೆ

ಸಮಯವನ್ನ ಸಮನಾಗಿ ಹಂಚಿಕೆ ಮಾಡಿ:

ಫಿಸಿಕ್ಸ್, ಕೆಮೆಸ್ಟ್ರಿ ಹಾಗೂ ಬಯಲಾಜಿಗೆ ಕಡಿಮೆ ಅಂದ್ರೂ 7 ದಿನ ಮೀಸಲಿಡಿ. ಹಾಗೋ ಕೊನೆಯ ಒಂದು ವಾರ ರಿವಿಜನ್ ಗೆ ಹಾಗೂ ಮಾಕ್ ಟೆಸ್ಟ್ ಗೆ ಮೀಸಲಿಡಿ

ತಯಾರಿ ಜತೆ ಜತೆ ರಿವಿಜನ್ ಇರಲಿ:

ಪರೀಕ್ಷೆ ತಯಾರಿ ಜತೆ ಮಲ್ಟಿ ಟಾಸ್ಕ್ ಕೂಡಾ ಮಾಡಿ. ಮತ್ತೊಂದು ಸಬ್‌ಜೆಕ್ಟ್ ಓದುವ ಟೈಂನಲ್ಲಿ ಹಿಂದಿನ ದಿನ ಓದಿರುವುದನ್ನು ಮತ್ತೊಮ್ಮೆ ರಿವಿಜನ್ ಮಾಡಿಕೊಳ್ಳಿ. ಇದರಿಂದ ನಿಮ್ಮ ಕಾಂಪಿಡೆನ್ಸ್ ಹೆಚ್ಚುವುದು. ಹೀಗೆ ಮಾಡುವದರಿಂದ ನೀವು ಓದಿರುವುದು ಹೆಚ್ಚು ನಿಮ್ಮ ಮನಸ್ಸಲ್ಲಿ ಉಳಿಯುತ್ತದೆ. ಸಮಯವು ಉಳಿಯುತ್ತದೆ

ಇತರ ಗೊಂದಲಗಳಿಂದ ದೂರವಿರಿ:

ಪರೀಕ್ಷೆಗೆ ಇನ್ನೇನೋ ಬರೀ ಕೆಲವೇ ದಿನಗಳು ಭಾಕಿ ಇರುವುದು ಹಾಗಾಗಿ ಓದಿನತ್ತ ಹೆಚ್ಚು ಗಮನ ಕೊಡಿ. ಪರೀಕ್ಷೆ ತಯಾರಿ ಬಗ್ಗೆ ಹೆಚ್ಚು ಚಿಂತಿಸಿ. ನಿಮ್ಮ ಸುತ್ತಮುತ್ತ ಇರುವ ಎಲ್ಲಾ ಗೊಂದಲಗಳನ್ನ ನಿವಾರಿಸಿ, ಮನಸ್ಸು ಹತೋಟಿ ತಪ್ಪುವಂತಹ ಚಟುವಟಿಕೆಗಳಿಂದ ದೂರವಿರಿ. ಪ್ರತಿ ನಿತ್ಯ ಇಂತಿಷ್ಟು ಓದಬೇಕು ಎಂದು ಮೊದಲೇ ನಿರ್ಧರಿಸಿದ್ದು, ನಿಗಧಿತ ಅವಧಿಯೊಳಗೆ ಓದಿ ಮುಗಿಸಿ

ದೊಡ್ಡ ದೊಡ್ಡ ಉತ್ತರದ ಪ್ರಶ್ನೆಗಳ ಮಾಕ್ ಟೆಸ್ಟ್ ಮಾಡಿಕೊಳ್ಳಿ:

೩ ಗಂಟೆ ನಡೆಯುವ ನೀಟ್ ಪರೀಕ್ಷೆಗೆ ಹೆಚ್ಚಿನ ಎನರ್ಜಿ ಬೇಕು. ಮಾದರಿ ಪ್ರಶ್ನಾ ಪತ್ರಿಕೆಗೆ ಉತ್ತರಿಸಲು ಟ್ರೈ ಮಾಡಿ. ಮೂರು ಬಾರಿ ಮಾಕ್ ಟೆಸ್ಟ್ ಟ್ರೈ ಮಾಡಿ. ಇದು ನಿಮಗೆ ಎಕ್ಸಾಂ ಟೈಂಗೆ ಸಹಕಾರಿಯಾಗುವುದು. ಅಷ್ಟೇ ಅಲ್ಲ ಹಿಂದಿನ ಪ್ರಶ್ನಾಪತ್ರಿಕೆಗೆ ಉತ್ತರಿಸಿ ರಿವಿಜನ್ ಮಾಡಿಕೊಳ್ಳಿ

ನಿಮ್ಮ ತಪ್ಪನ್ನು ಗುರುತಿಸಿಕೊಳ್ಳಿ:

ತಪ್ಪು ಮಾಡುತ್ತಾ ಮತ್ತೆ ಮತ್ತೆ ಮಾಕ್ ಟೆಸ್ಟ್ ಮಾಡಿಕೊಂಡ್ರೆ ಏನೂ ಪ್ರಯೋಜನವಿಲ್ಲ. ಹಾಗಾಗಿ ಒಮ್ಮೆ ಪರೀಕ್ಷೆ ನಡೆದ ಕೂಡಲೇ ಕಡಿಮೆ ಅಂದ್ರೂ ೧೫ ರಿಂದ ೨೦ ನಿಮಿಷ ನಿಮ್ಮ ತಪ್ಪು ಚೆಕ್ ಮಾಡಿಕೊಳ್ಳಿ. ನಿಮ್ಮ ತಪ್ಪು ಗುರುತಿಸಿ ಆ ವಿಷಯದ ಬಗ್ಗೆ ಹೆಚ್ಚು ರಿವಿಜನ್ ಮಾಡಿಕೊಳ್ಳಿ

ಆರೋಗ್ಯದತ್ತನೂ ಗಮನವಿರಲಿ:

ಮುಂಬರುವ ಪರೀಕ್ಷೆಗಾಗಿ ಹಗಲು ರಾತ್ರಿ ಎನ್ನದೇ ಹಾರ್ಡ್ ವರ್ಕ್ ಮಾಡ್ತಾ ಇದ್ದೀರಾ. ಹಾಗಿದ್ರೆ ಈ ಪಾಯಿಂಟ್ ನೀವು ಓದಲೇ ಬೇಕು. ಸರಿಯಾದ ನಿದ್ರೆ ಹಾಗೂ ಡಯೆಟ್ ಇಲ್ಲದೇ ನೀವು ಕಂಟಿನ್ಯೂಸ್ ಓದಿದ್ರೆ ಪರೀಕ್ಷೆ ಟೈಂನಲ್ಲಿ ಆರೋಗ್ಯ ಹದಗೆಡುವ ಸಂಭವವಿರುತ್ತದೆ. ಆರೋಗ್ಯ ಹದಗೆಟ್ರೆ ನಿವು ಓದಿರುವುದು ಕೂಡಾ ಪ್ರಯೋಜನಕ್ಕೆ ಬಾರದೇ ಇರಬಹುದು. ಹಾಗಾಗಿ ಪರೀಕ್ಷೆ ತಯಾರಿ ಜತೆ ನಿಯಮಿತ ನಿದ್ರೆ ಹಾಗೂ ಉತ್ತಮ ಆಹಾರ ಕೂಡಾ ಸೇವಿಸಿ

ಇನ್ನೇನೋ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದೆ. ಹಾಗಾಗಿ ಚೆನ್ನಾಗಿ ಓದಿ. ಯಾವತ್ತೂ ಕಾಂಫಿಡನ್ಸ್ ಕಳೆದುಕೊಳ್ಳಬೇಡಿ. ಮುಂಬರುವ ಪರೀಕ್ಷೆಗೆ ಕೆರಿಯರ್ ಇಂಡಿಯಾ ಕಡೆಯಿಂದ ಆಲ್ ದಿ ಬೆಸ್ಟ್

 

 

English summary
NEET 2018: How To Crack In Just 30 Days

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia