ಎನ್‌ಇಇಟಿಗೆ ಒಂದು ತಿಂಗಳು ಬಾಕಿ ಅಷ್ಟೇ... ಕೊನೆ ಗಳಿಗೆಯಲ್ಲಿ ಫಿಸಿಕ್ಸ್ ತಯಾರಿ ಹೇಗೆ ?

ಬೋರ್ಡ್ ಎಕ್ಸಾಂ ಮುಗಿದದ್ದೇ ತಡ ಇದೀಗ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್ ನ ಪ್ರವೇಶ ಪರೀಕ್ಷೆಗೆ

ಸಿದ್ಧತೆ ಮಾಡಿಕೊಳ್ಳುವುದರಲ್ಲಿ ಮಕ್ಕಳು ಬ್ಯುಸಿಯಾಗಿದ್ದಾರೆ.

ಇದೀಗ ಬ್ಯಾಕ್ ಟು ಬ್ಯಾಕ್ ಎಕ್ಸಾಂ ನಿಂದಾಗಿ ಮಕ್ಕಳಿಗೆ ಬ್ರೇಕ್ ಇಲ್ಲದೇ ಓದುವಂತಾಗಿದೆ. ದೇಶದಾದ್ಯಂತ ಪ್ರತಿಷ್ಟಿತ ಮೆಡಿಕಲ್ ಕಾಲೇಜಿನಲ್ಲಿ ಮೆರಿಟ್ ಸೀಟು ಹಂಚಿಕೆಗಾಗಿ ಸಿಬಿಎಸ್ ಸಿ ದಿ ನ್ಯಾಷನಲ್ ಎಲಿಜಿಬಿಲಿಟಿ ಕಂ ಎಂಟ್ರೇನ್ಸ್ ಟೆಸ್ಟ್ (ಎನ್‌ಇಇಟಿ) ಆಯೋಜಿಸುತ್ತಿದೆ. ಮೇ.6, 2018 ರಂದು ಈ ಪರೀಕ್ಷೆ ನಡೆಯಲಿದೆ

ಇನ್ನೆನೋ ಪರೀಕ್ಷೆಗೆ ಬರೀ ಒಂದು ತಿಂಗಳು ಮಾತ್ರ ಬಾಕಿ ಇದೆ. ಈ ಮೆಡಿಕಲ್ ಸೀಟು ಬಾಚಿಕೊಳ್ಳಲು

ವಿದ್ಯಾರ್ಥಿಗಳು ಹಗಲು, ರಾತ್ರಿ ಎನ್ನದೇ ಸ್ಟಡಿ ಮಾಡಬೇಕಿದೆ. ಇದೀಗ ಎನ್‌ಇಇಟಿ ಸಿಲೇಬಸ್ ಬಗ್ಗೆ

ವಿದ್ಯಾರ್ಥಿಗಳು ಕೂಡಾ ಹೆಚ್ಚು ತಲೆ ಕೆಡಿಸಿಕೊಂಡಿದ್ದಾರೆ. ಇನ್ನು ಎನ್‌ಇಇಟಿ ಪರೀಕ್ಷೆಯಲ್ಲಿ ಬಯಾಲಾಜಿ

ಹಾಗೂ ಕೆಮೆಸ್ಟ್ರಿ ಸೆಕ್ಷನ್ ಸಬ್‌ಜೆಕ್ಟ್ ಗೆ ಸಂಬಂಧಪಟ್ಟಂತೆ, ಫಿಸಿಕ್ಸ್ ಬಗ್ಗೆ ವಿದ್ಯಾರ್ಥಿಗಳು ಹೆಚ್ಚು ಟೆನ್ಶನ್

ಆಗುತ್ತಾರೆ.

ಫಿಸಿಕ್ಸ್ ವಿಷಯಕ್ಕೆ ಹೇಗೆ ತಯಾರಾಗಬೇಕೆಂದು ನಾವು ನಿಮಗೆ ಇಲ್ಲಿ ಟಿಪ್ಸ್ ನೀಡುತ್ತೇವೆ ಚೆಕ್ ಮಾಡಿಕೊಳ್ಳಿ

ವಿಷಯವನ್ನ ಕ್ಲಿಯರ್ ಆಗಿ ಅರ್ಥ ಮಾಡಿಕೊಳ್ಳಿ:

ವಿಷಯವನ್ನ ಕ್ಲಿಯರ್ ಆಗಿ ಅರ್ಥ ಮಾಡಿಕೊಳ್ಳಿ:

ಸಬ್‌ಜೆಕ್ಟ್ ನ ಪ್ರತಿಯೊಂದು ಕಾಂಸೆಪ್ಟ್ ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ಈ ಟಿಪ್ಸ್ ಬರೀ ಈ ಸಬ್‌ಜೆಕ್ಟ್ ಗೆ ಮಾತ್ರವಲ್ಲ ಇನ್ನಿತ್ತರ ಸಬ್‌ಜೆಕ್ಟ್ ಗೂ ಅನ್ವಯಿಸುತ್ತದೆ. ಮಾರ್ಡನ್ ಫಿಸಿಕ್ಸ್, ಎಲೆಕ್ಟ್ರೋಡಿನಾಮಿಕ್ಸ್, ಹೀಟ್ ಆಂಡ್ ಥರ್ಮೋಡಿನಾಮಿಕ್ಸ್ ಹಾಗೂ ಮ್ಯಾಕಾನಿಕ್ಸ್ ಫಿಸಿಕ್ಸ್ ಸಬ್‌ಜೆಕ್ಟ್ ನಲ್ಲಿ ಬರುವ ಪ್ರಮುಖ ವಿಷಯಗಳು.

ಈ ಟಾಪಿಕ್ಸ್ ಬಗ್ಗೆ ಯಾವತ್ತೂ ಡೌಟ್ ಇಟ್ಟು ಕೊಳ್ಳಬೇಡಿ. ಯಾಕೆಂದ್ರೆ ಪರೀಕ್ಷೆಗೆ ಈ ಟಾಪಿಕ್ ನಿಂದಲೇ ಹೆಚ್ಚು ಅಂಕದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

 

ಫಾರ್ಮುಲ ನೆನಪಿಟ್ಟುಕೊಳ್ಳಿ:

ಫಾರ್ಮುಲ ನೆನಪಿಟ್ಟುಕೊಳ್ಳಿ:

ಫಾರ್ಮುಲಗಳು ಫಿಸಿಕ್ಸ್ ನ ಬೆನ್ನಲುಬು ಇದ್ದಂತೆ. ತಯಾರಿಯ ಪ್ರತಿಯೊಂದು ಹಂತದಲ್ಲೂ ಅವು ನಿಮಗೆ ತೊಂದರೆ ಕೊಡುತ್ತಿರುತ್ತೆ. ಹಾಗಾಗಿ ಮೊದಲು ಫಾರ್ಮುಲ ಚೆನ್ನಾಗಿ ಕಲಿಯಿರಿ. ಸಣ್ಣ ಡೈರಿಯೊಂದರಲ್ಲಿ ಫಾರ್ಮುಲ ಬರೆದಿಟ್ಟು ಕೊಂಡು ಪ್ರತಿದಿನ ಪ್ರಾಕ್ಟೀಸ್ ಮಾಡಿಕೊಳ್ಳಿ. ಪ್ರತಿದಿನ ಆ ಫಾರ್ಮುಲ ಒಂದು ಬಾರಿ ಓದಲು ಮರೆಯದಿರಿ

ಕಷ್ಟದ ಟಾಪಿಕ್ ಕಡೆಗಣಿಸಬೇಡಿ:

ಕಷ್ಟದ ಟಾಪಿಕ್ ಕಡೆಗಣಿಸಬೇಡಿ:

ಇಂತಹ ಪರೀಕ್ಷೆಗೆ ಓದುವಾಗ ನೀವು ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಬೇಡಿ. ಪ್ರತಿಯೊಂದು ಟಾಪಿಕ್ ಕೂಡಾ ಕಂಪ್ಲೀಟ್ ಆಗಿ ಓದಿ. ಮೊದಲಿಗೆ ನೀವು ಯಾವ ಸಬ್‌ಜೆಕ್ಟ್ ಅಲ್ಲಿ ಹಿಂದೆ ಉಳಿದಿದ್ದೀರಿ ಎಂದು ಲಿಸ್ಟ್ ಮಾಡಿಕೊಳ್ಳಿ. ಅಷ್ಟೇ ಅಲ್ಲ ಪ್ರಮುಖ ಟಾಪಿಕ್ ನಿಂದ ಓದಲು ಪ್ರಾರಂಭಿಸಿ

ಕೀ ಪ್ರಾಕ್ಟೀಸ್ ಮಾಡಿ:

ಕೀ ಪ್ರಾಕ್ಟೀಸ್ ಮಾಡಿ:

ಪ್ರತಿಯೊಂದು ಸಬ್‌ಜೆಕ್ಟ್ ಗೂ ಕೀ ಪ್ರಾಕ್ಟೀಸ್ ಮಾಡುವುದು ಮುಖ್ಯ ವಿಶೇಷವಾಗಿ ಫಿಸಿಕ್ಸ್ ಪ್ರ್ಯಾಕ್ಟೀಸ್ ಮಾಡುವಾಗ. ಹೆಚ್ಚು ಪ್ರಾಕ್ಟೀಸ್ ಮಾಡಿದಂತೆ ಆ ಟಾಪಿಕ್ ಬಗ್ಗೆ ನೀವು ಹೆಚ್ಚು ಹತೋಟಿ ಪಡೆಯುತ್ತೀರಿ. ಪ್ರತಿದಿನ ರಿವಿಜನ್ ಮಾಡಲು ಮರೆಯದಿರಿ

ಫೋಕಸ್ ಆಗಿ ಸ್ಟಡಿ ಮಾಡಿ:

ಫೋಕಸ್ ಆಗಿ ಸ್ಟಡಿ ಮಾಡಿ:

ರಿಲಾಕ್ಸ್ ಮೈಂಡ್ ನಿಂದ ಓದಿ. ಯಾಕೆಂದ್ರೆ ಪಿಸಿಕ್ಸ್ ನಲ್ಲಿ ಹೆಚ್ಚು ಸಂಖ್ಯೆಗಳು ಇರುತ್ತದೆ. ಪ್ರತಿಬಾರಿಯೂ ಫಿಸಿಕ್ಸ್ ಸಬ್‌ಜೆಕ್ಟ್ ತಯಾರಿ ಮಾಡಿಕೊಳ್ಳುವಾಗ ಈ ಬಗ್ಗೆ ಹೆಚ್ಚು ಫೋಕಸ್ ಮಾಡಿ ಹಾಗೂ ಪಾಸಿಟೀವ್ ಆಗಿರಿ.

ಪ್ರಮುಖ ಪುಸ್ತಕಗಳು:

ಪ್ರಮುಖ ಪುಸ್ತಕಗಳು:

ಎನ್‌ಸಿಇಆರ್ ಟಿ ಪುಸ್ತಕ ಈ ಪರೀಕ್ಷೆಗೆ ಓದಲೇ ಬೇಕಾದ ಪ್ರಾಥಮಿಕ ಪುಸ್ತಕ. ಯಾಕೆಂದ್ರೆ ನೇರವಾಗಿ ಟೆಕ್ಸ್ಟ್ ಬುಕ್‌ನಿಂದ ಪ್ರಶ್ನೆಗಳನ್ನ ಆಯ್ದು ಇಲ್ಲಿ ಕೊಡಲಾಗುತ್ತದೆ. ಇನ್ನು ಕಾಂಸೆಪ್ಟ್ ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಈ ಪುಸ್ತಕ ಬೆಸ್ಟ್. ಅಷ್ಟೇ ಅಲ್ಲ ಈ ಪುಸ್ತಕದ ಜತೆ ಇನ್ನಿತ್ತರ ಪುಸ್ತಕ ಕೂಡಾ ರೆಫರ್ ಮಾಡುವುದು ಅಗತ್ಯ.

ಪ್ರಮುಖ ಪುಸ್ತಕಗಳ ಲಿಸ್ಟ್ ಹೀಗಿದೆ:ಹೆಚ್‌ ಸಿ ವರ್ಮಾ ಅವರ

ಕಾಂಸೆಪ್ಟ್ ಆಫ್ ಫಿಸಿಕ್ಸ್

Schaum ಅವರ ಫಿಸಿಕ್ಸ್

ಈ ಮೇಲೆ ನಾವು ನೀಡಿರುವ ಟಿಪ್ಸ್ ಗಳು ನಿಮ್ಮ ಟೆನ್ಶನ್ ದೂರ ಮಾಡುತ್ತದೆ ಎಂದು ನಾವು ಅಂದುಕೊಂಡಿದ್ದೇವೆ. ಎನ್‌ಇಇಟಿ ಪರೀಕ್ಷೆಗೆ ಸಂಬಂಧಪಟ್ಟಂತೆ ಇನ್ನೂ ಅತೀ ಹೆಚ್ಚಿನ ಮಾಹಿತಿಗೆ ನಮ್ಮನ್ನ ಫಾಲೋ ಮಾಡಿ

For Quick Alerts
ALLOW NOTIFICATIONS  
For Daily Alerts

English summary
Soon after the board exams, be it medical or engineering, the entrance examinations will follow one after the other without giving the students any break. The National Eligibility cum Entrance Test (NEET), conducted by CBSE for admission to medical colleges or institutes spread across the country, will be conducted on May 6, 2018.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X