NEET 2021 Admit Card : ನೀಟ್ ಗೆ ಹಾಜರಾಗುವ ಮುನ್ನ ತಪ್ಪದೇ ಈ ಮಾಹಿತಿ ಓದಿ

NEET ಪ್ರವೇಶ ಪತ್ರ 2021: ರಾಷ್ಟ್ರೀಯ ಅರ್ಹತೆ ಮತ್ತು ಪದವಿಪೂರ್ವ ಪ್ರವೇಶ ಪರೀಕ್ಷೆ (NEET UG) 2021ರ ಪ್ರವೇಶ ಪತ್ರವನ್ನು ಅತೀ ಶೀಘ್ರದಲ್ಲಿ ಎನ್‌ಟಿಎ ಪ್ರಕಟ ಮಾಡಲಿದೆ. ಪ್ರವೇಶ ಪತ್ರ ಪ್ರಕಟವಾದ ಬಳಿಕ ಅಭ್ಯರ್ಥಿಗಳು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು, ಪರೀಕ್ಷೆಗೆ ಹಾಜರಾಗುವ ಮುನ್ನ ಕೆಲವು ಪ್ರಮುಖ ಅಂಶಗಳನ್ನು ನೆನಪಿನಲ್ಲಿಡಬೇಕಾಗುತ್ತದೆ. ಯಾವೆಲ್ಲಾ ಪ್ರಮುಖ ಅಂಶಗಳು ಎಂದು ತಿಳಿಯಲು ಈ ಮಾಹಿತಿಯನ್ನು ತಪ್ಪದೇ ಓದಿ.

ನೀಟ್ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಈ ವಿಷಯಗಳು ನೆನಪಿರಲಿ

ನೀಟ್‌ 2021ರ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿ ತಿದ್ದುಪಡಿಗೆ ಆಗಸ್ಟ್ 14ರ ವರೆಗೆ ಮತ್ತು ಪರೀಕ್ಷಾ ಶುಲ್ಕ ಪಾವತಿಗೆ ಆಗಸ್ಟ್ 15ರ ವರೆಗೆ ಅವಕಾಶ ನೀಡಲಾಗಿತ್ತು. ರಾಷ್ಟ್ರೀಯ ಮಟ್ಟದ ವೈದ್ಯಕೀಯ ಪ್ರವೇಶ ಪರೀಕ್ಷೆಯಿದಾಗಿದ್ದು, ಪರೀಕ್ಷೆಯನ್ನು ಸೆಪ್ಟೆಂಬರ್ 12ರಂದು ನಿಗದಿಪಡಿಸಲಾಗಿದೆ. ಅಧಿಕೃತ ಮಾಹಿತಿಯ ಪ್ರಕಾರ ಪ್ರವೇಶ ಪತ್ರವನ್ನು ಪರೀಕ್ಷೆಗೆ ಮೂರು ದಿನಗಳ ಮುಂಚಿತವಾಗಿ ಬಿಡುಗಡೆ ಮಾಡಲಾಗುತ್ತದೆ.

NEET 2021 ರ ಪ್ರವೇಶ ಪತ್ರ ಪ್ರಕಟವಾದ ಬಳಿಕ ಅಭ್ಯರ್ಥಿಗಳು NTA ವೆಬ್‌ಸೈಟ್‌ನಲ್ಲಿ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಬಹುದು. ನಂತರ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ನೀಟ್ ಪರೀಕ್ಷಾ ದಿನದಂದು ಈ ಐದು ಅಂಶಗಳನ್ನು ನೆನಪಿಲ್ಲಿಡಿ.

* NEET 2021 ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿದ ನಂತರ ಪ್ರವೇಶ ಪತ್ರದಲ್ಲಿ ನೀಡಲಾಗಿರುವ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ. ಪ್ರವೇಶ ಪತ್ರದಲ್ಲಿ ಕೋವಿಡ್ -19 ರ ದೃಷ್ಟಿಯಿಂದ ಪರೀಕ್ಷಾ ದಿನದ ಮಾರ್ಗಸೂಚಿಗಳು ಮತ್ತು ಹೆಚ್ಚುವರಿ ಮುನ್ನೆಚ್ಚರಿಕೆ ಕ್ರಮಗಳನ್ನು ಉಲ್ಲೇಖಿಸಲಾಗಿರುತ್ತದೆ ಅವುಗಳನ್ನು ವಿದ್ಯಾರ್ಥಿಗಳು ಪರೀಕ್ಷೆಯ ದಿನದಂದು ಪಾಲಿಸಬೇಕಿರುತ್ತದೆ.

* ಹಾಲ್ ಟಿಕೆಟ್ ನಲ್ಲಿ ನಮೂದಿಸಿರುವ ಸಮಯಕ್ಕೆ ಪರೀಕ್ಷಾ ಹಾಲ್ ಗೆ ಹಾಜರಾಗಿ. ಪರೀಕ್ಷಾ ದಿನದಂದು ಗೊಂದಲ ತಪ್ಪಿಸುವ ಸಲುವಾಗಿ ಸಾಧ್ಯವಾದರೆ ಪರೀಕ್ಷೆಯ ಒಂದು ದಿನ ಮುಂಚಿತವಾಗಿ ಪರೀಕ್ಷಾ ಸ್ಥಳಕ್ಕೆ ಭೇಟಿ.

* NEET 2021ರ ಪ್ರವೇಶ ಪತ್ರದಲ್ಲಿ ಏನಾದರೂ ದೋಷ ಕಂಡುಬಂದಲ್ಲಿ ತಕ್ಷಣವೇ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯನ್ನು ಸಂಪರ್ಕಿಸಿ ಮತ್ತು ವರದಿ ಮಾಡಿ.

* ಪರೀಕ್ಷೆಯ ದಿನದಂದು ಅಭ್ಯರ್ಥಿಗಳು NEET 2021ರ ಪ್ರವೇಶ ಪತ್ರದ ಪ್ರಿಂಟ್‌ಔಟ್ ಜೊತೆಗೆ ತಮ್ಮ ಫೋಟೋ ಐಡಿ ಮತ್ತು ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರವನ್ನು ತೆಗೆದುಕೊಂಡು ಹೋಗಿ. ನೀಟ್ ಅಡ್ಮಿಟ್ ಕಾರ್ಡ್ ಮತ್ತು ಫೋಟೋ ಐಡಿ ಇಲ್ಲದೆ ಅಭ್ಯರ್ಥಿಗಳಿಗೆ ಪರೀಕ್ಷಾ ಹಾಲ್ ಪ್ರವೇಶಿಸಲು ಅನುಮತಿ ಇರುವುದಿಲ್ಲ.

* NEET 2021ರ ಪ್ರವೇಶ ಪತ್ರದಲ್ಲಿ ಸ್ವಯಂ ಘೋಷಣಾ ನಮೂನೆಯನ್ನು ಸಹ ಹೊಂದಿರಬಹುದು. ಅಲ್ಲಿ ವಿದ್ಯಾರ್ಥಿಗಳು ತಮ್ಮ ಇತ್ತೀಚಿನ ಆರೋಗ್ಯ ಮತ್ತು ಪ್ರಯಾಣದ ವಿವರವನ್ನು ನಮೂದಿಸಬೇಕಾಗುತ್ತದೆ. ಕಳೆದ ವರ್ಷ ನೀಟ್‌ನ ಪ್ರವೇಶ ಪತ್ರವನ್ನು ಕೋವಿಡ್ ಕಂಟೈನ್‌ಮೆಂಟ್ ವಲಯಗಳಲ್ಲಿ ಪ್ರಯಾಣದ ಪಾಸ್ ಆಗಿ ಬಳಸಲಾಗಿತ್ತು.

For Quick Alerts
ALLOW NOTIFICATIONS  
For Daily Alerts

English summary
NEE 2021 admit card will release soon and students has to remember these points on exam day.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X