NEET Last-Minute Preparation Tips 2021 : ನೀಟ್ ಪರೀಕ್ಷೆಗೆ ಸಿದ್ಧತೆ ಹೇಗಿರಬೇಕು ? ಇಲ್ಲಿ ತಿಳಿಯಿರಿ

ನೀಟ್ 2021ಗೆ ಕೊನೆಯ ದಿನಗಳ ತಯಾರಿ ಹೀಗಿರಲಿ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) 2021 ಅನ್ನು ಸೆಪ್ಟೆಂಬರ್ 12,2021 ರಂದು ನಡೆಸಲು ನಿಗದಿಪಡಿಸಿದೆ.ನೀಟ್ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂದು ಇಲ್ಲಿ ಸಲಹೆಯನ್ನು ನೀಡಲಾಗುತ್ತಿದೆ.

ಉತ್ತಮ ದಿನಚರಿ ಯೋಜನೆ:

ಉತ್ತಮ ದಿನಚರಿ ಯೋಜನೆ:

ನೀಟ್ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಉತ್ತಮ ದಿನಚರಿಯ ಯೋಜನೆ ಹಾಕಿಕೊಳ್ಳಿ. ದಿನನಿತ್ಯ ಕೆಲಸದ ಜೊತೆಗೆ ಪ್ರತಿಯೊಂದು ವಿಷಯಗಳಿಗೂ ಇಂತಿಷ್ಟು ಸಮಯ ಎಂದು ನಿಗದಿ ಮಾಡಿ, ಅದರ ಅನುಸಾರ ಓದಲು ಪ್ರಾರಂಭಿಸಿ. ವಿದ್ಯಾರ್ಥಿಗಳು ಗರಿಷ್ಠ ಸಮಯವನ್ನು ಅಧ್ಯಯನದ ಕಡೆಗೆ ವಿನಿಯೋಗಿಸಲು ಪ್ರಯತ್ನ ಮಾಡಿ. ಏಕೆಂದರೆ ಪರೀಕ್ಷೆಗೆ ಕೇವಲ ಹನ್ನೊಂದು ದಿನಗಳು ಬಾಕಿ ಇದ್ದು, ಈ ಕೊನೆಯ ಹಂತದ ತಯಾರಿ ನಿಮ್ಮ ಫಲಿತಾಂಶವನ್ನು ಬದಲಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಪುನರ್ ಮನನ ಅಧ್ಯಯನ:

ಪುನರ್ ಮನನ ಅಧ್ಯಯನ:

ಇದುವರೆಗೂ ಓದಿದ್ದನ್ನು ಸಣ್ಣ ಸಮಯದಲ್ಲಿ ಮತ್ತೆ ಅಧ್ಯಯನ ಮಾಡುವುದೇ ಪುನರ್ ಮನನ ಅಧ್ಯಯನ. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ನೀಟ್ ಸಿದ್ಧತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಅವರು ಗಮನವಹಿಸಬೇಕಾದ ಇನ್ನಷ್ಟು ವಿಷಯಗಳ ಕಡೆಗೆ ಹೆಚ್ಚು ಸಮಯ ಕೊಡಲು ಸಹಾಯವಾಗಲಿದೆ. ನೀಟ್ ಸಿದ್ಧತೆಯ ಕೊನೆಯ ಹಂತದಲ್ಲಿ ಪರಿಕಲ್ಪನೆಗಳನ್ನು ಪರಿಷ್ಕರಿಸುವಾಗ ವಿದ್ಯಾರ್ಥಿಗಳು ಪ್ರಶ್ನೆ ಆಧಾರಿತ ಮತ್ತು ಸಮಗ್ರ ಪರಿಷ್ಕರಣೆ ಎರಡರತ್ತ ಗಮನ ಹರಿಸಬೇಕು.

ನಿಮ್ಮ ಸಾಮರ್ಥ್ಯವನ್ನು ತಿಳಿಯಿರಿ:
 

ನಿಮ್ಮ ಸಾಮರ್ಥ್ಯವನ್ನು ತಿಳಿಯಿರಿ:

ನೀಟ್ 2021 ಪರೀಕ್ಷೆಗೆ ಕೆಲವೇ ದಿನಗಳು ಉಳಿದಿರುವುದರಿಂದ ವಿದ್ಯಾರ್ಥಿಗಳು ಹೊಸದಾಗಿ ಏನನ್ನೂ ಅಧ್ಯಯನ ಮಾಡಲು ಪ್ರಾರಂಭಿಸದಿರಿ. ಬದಲಾಗಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳುವತ್ತ ಗಮನ ಹರಿಸಬೇಕು.

ವಿದ್ಯಾರ್ಥಿಗಳು ತಾವು ಈಗಾಗಲೇ ಅರ್ಥೈಸಿಕೊಂಡಿರುವ ವಿಷಯಗಳನ್ನು ಹೆಚ್ಚು ಗಮನಿಸಬೇಕು ಮತ್ತು ಇನ್ನೂ ಕಷ್ಟ ಎನ್ನಿಸುವ ವಿಷಯಗಳ ಬಗ್ಗೆ ತಿಳಿಯಲು ಪ್ರಯತ್ನದ ಕೆಲಸ ಮಾಡಬೇಕು. ಅಭ್ಯರ್ಥಿಗಳು ಓದಿದನ್ನು ಆದಷ್ಟು ನೋಟ್ ಮಾಡಿಕೊಳ್ಳಿ ಅದರಿಂದ ಹೆಚ್ಚು ಸಹಾಯವಾಗಲಿದೆ.

ಸಮಯ ನಿರ್ವಹಣೆಯತ್ತ ಗಮನಹರಿಸಿ:

ಸಮಯ ನಿರ್ವಹಣೆಯತ್ತ ಗಮನಹರಿಸಿ:

ನೀಟ್ ಪರೀಕ್ಷೆಯನ್ನು ಉತ್ತಮ ರೀತಿಯಲ್ಲಿ ಬರೆಯುವುದೊಂದೇ ಅಲ್ಲ ಎಲ್ಲಾ ಪ್ರಶ್ನೆಗಳಿಗೂ ಸಮಯ ಮೀಸಲಿಡುವುದು ಅಷ್ಟೇ ಮುಖ್ಯ. ನೀವಿಗ ನೀಟ್ ಪರೀಕ್ಷೆಯ ಸಿದ್ಧತೆಗೆ ಕೊನೆಯ ಹಂತದಲ್ಲಿದ್ದು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದರ ಜೊತೆಗೆ ಸಮಯವನ್ನು ಹೇಗೆ ನಿರ್ವಹಿಸಬೇಕು ಎಂದು ಅಭ್ಯಾಸ ಮಾಡಿ.

ಎಷ್ಟೋ ಭಾರಿ ವಿದ್ಯಾರ್ಥಿಗಳು ಸಮಯ ನಿರ್ವಹಣಾ ಕೌಶಲ್ಯಗಳನ್ನು ಹೊಂದಿರುವುದಿಲ್ಲ ಹಾಗಾಗಿಯೇ ಉತ್ತರ ತಿಳಿದಿದ್ದರೂ ಪ್ರಶ್ನೆಗಳಿಗೆ ಉತ್ತರಿಸದೇ ಇರುವುದು ಅಥವಾ ತಪ್ಪು ಮಾಡುವ ಮೂಲಕ ಪ್ರಶ್ನೆಗಳಿಗೆ ಗಡಿಬಿಡಿಯಲ್ಲಿ ಉತ್ತರಿಸುವುದನ್ನು ಮಾಡುತ್ತಾರೆ. ಹೀಗಾಗಿಯೇ ಈಗಲೇ ಮಾಕ್‌ಟೆಸ್ಟ್ ಗಳನ್ನು ತೆಗೆದುಕೊಂಡು ಸಮಯ ನಿರ್ವಹಣೆಯನ್ನು ಅಭ್ಯಸಿಸಿ.

ನಿಮ್ಮ ಬಗ್ಗೆ ಕಾಳಜಿ ವಹಿಸಿ:

ನಿಮ್ಮ ಬಗ್ಗೆ ಕಾಳಜಿ ವಹಿಸಿ:

ನೀಟ್ ಪರೀಕ್ಷೆಯ ತಯಾರಿಯಲ್ಲಿ ಹೆಚ್ಚಿನ ಸಮಯವನ್ನು ವಿನಿಯೋಗಿಸಿ ಜೊತೆಗೆ ನಿಮ್ಮ ಆರೋಗ್ಯದ ಬಗ್ಗೆ ಸರಿಯಾದ ಕಾಳಜಿಯನ್ನು ವಹಿಸಿ.

ಪರೀಕ್ಷೆಗೆ ಹಾಜರಾಗುವ ಹಿಂದಿನ ದಿನ ವಿದ್ಯಾರ್ಥಿಗಳು ಸರಿಯಾದ ಪ್ರಮಾಣದ ನಿದ್ರೆ ಮಾಡುವುದು ಮುಖ್ಯ. ನಿದ್ರೆಯನ್ನು ಕಳೆದುಕೊಳ್ಳುವುದರಿಂದ ಆಯಾಸ ಮತ್ತು ಒತ್ತಡವು ಅಧಿಕವಾಗುತ್ತದೆ ಇದರಿಮದ ಏಕಾಗ್ರತೆಯ ಮಟ್ಟವು ಇಳಿಕೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೋಗುವ ಮುನ್ನ ತಮ್ಮ ಆಹಾರ ಮತ್ತು ನಿದ್ದೆಯ ಬಗ್ಗೆ ಹೆಚ್ಚು ಗಮನವಹಿಸಿ.

For Quick Alerts
ALLOW NOTIFICATIONS  
For Daily Alerts

English summary
NEET 2021 scheduled on september 12. Here is the tips how to prepare for medical entrance exam.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X