ಭಾರತೀಯ ವೈದ್ಯಕೀಯ ಪರಿಷತ್ (ಎಂ.ಸಿ.ಐ) ಮತ್ತು ಭಾರತೀಯ ದಂತ ವೈದ್ಯಕೀಯ ಪರಿಷತ್ (ಡಿ.ಸಿ.ಐ) ಅನುಮೋದನೆಯೊಂದಿಗೆ ನಡೆಸುವ ದೇಶದ ಎಲ್ಲಾ ಸರ್ಕಾರಿ, ಖಾಸಗಿ, ಡೀಮ್ಡ್ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳ ಪ್ರವೇಶ ಪರೀಕ್ಷೆಯಾದ ನೀಟ್ (ಎನ್‌ಇಇಟಿ) ಮೇ 3ರಂದು ಏಕಕಾಲಕ್ಕೆ ದೇಶಾದ್ಯಂತ 80 ನಗರಗಳ ಒಟ್ಟು 150 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಲಿದೆ.
ಈ ಪರೀಕ್ಷೆಗೆ ಇನ್ನು ಕೆಲವು ತಿಂಗಳು ಬಾಕಿ ಇದ್ದು ವಿದ್ಯಾರ್ಥಿಗಳು ಯಾವ ರೀತಿಯಾಗಿ ತಯಾರಿ ನಡೆಸಬಹುದು ಎಂಬುದಕ್ಕೆ ಇಲ್ಲಿ ಸಲಹೆಗಳನ್ನು ನೀಡಲಾಗಿದೆ.

ಪರೀಕ್ಷಾ ವಿವರ:
ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು ಸೇರಿದಂತೆ ದೇಶದ ಒಟ್ಟು 10 ಭಾಷೆಗಳಲ್ಲಿ ನೀಡಲಾಗುತ್ತದೆ. ದಿನಾಂಕ 03-05-2020 ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪರೀಕ್ಷೆಗಳು ನಡೆಯಲಿವೆ. ಪ್ರಶ್ನೆ ಪತ್ರಿಕೆಯು ಒಟ್ಟು 180 ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.

ನೀಟ್ ಪರೀಕ್ಷೆ ಯ ದಿನ ನೆನಪಿಟ್ಟುಕೊಳ್ಳಬೇಕಾದ ಅಂಶ:
ಹೌದು ವಿದ್ಯಾರ್ಥಿಗಳೆಲ್ಲಾ ಹಗಲು ರಾತ್ರಿ ಓದಿ ಇದೀಗ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿರುತ್ತೀರಿ. ಆದ್ರೆ ನಿಮ್ಮ ಕೆಲವೊಂದು ಸಣ್ಣ ತಪ್ಪುಗಳಿಂದ ನೀವು ಮೂಡ್ ಆಫ್ ಆಗಿ, ಹೆಚ್ಚು ಅಂಕ ಸ್ಕೋರ್ ಮಾಡುವಲ್ಲಿ ವಿಫಲರಾಗಬಹುದು. ಹಾಗಾಗಿ ಪರೀಕ್ಷೆಗೆ ಹೋಗುವ ಮುನ್ನ ಬೇಕಾದ ಎಲ್ಲಾ ಸಾಮಾಗ್ರಿಗಳನ್ನ ನೆನಪಿನಲ್ಲಿ ಕೊಂಡೊಯ್ಯಿರಿ, ಹಾಗೂ ಯಾವ ಸಾಮಾಗ್ರಿ ಗಳನ್ನು ನಿಷೇಧಿಸಲಾಗಿದೆಯೋ ಆ ಸಾಮಾಗ್ರಿಗಳನ್ನು ತಪ್ಪದೇ ಬ್ಯಾಗ್‌ನಿಂದ ಹೊರಗೆ ಇಡಿ. ಅಷ್ಟೇ ಅಲ್ಲ ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಡ್ರೆಸ್ ಕೋಡ್ ಕೂಡಾ ಇರುತ್ತದೆ ಅದರ ಬಗ್ಗೆ ತಿಳಿದುಕೊಂಡು ಸರಿಯಾದ ಉಡುಗೆ ಧರಿಸಿ ಹೋಗಿ.

ನೀಟ್ ಪರೀಕ್ಷೆಗೆ ಇಂದಿನಿಂದ ತಯಾರಿ ಹೇಗೆ:
ಇಂತಹ ಪರೀಕ್ಷೆಗಳಿಗೆ ತಯಾರಿ ತುಂಬಾ ಅಗತ್ಯ. ಬೇಸಿಕ್ ಕಾಂಸೆಪ್ಟ್ ಬಗ್ಗೆ ಹೆಚ್ಚು ಗಮನ ಕೊಡಿ. ಸಬ್ಜೆಕ್ಟ್ ಪ್ರಕಾರ ಓದಲು ಪ್ರಾರಂಭಿಸಿ. ಸ್ಮಾರ್ಟ್ ನೋಟ್‌ಗಳನ್ನು ಮಾಡಿಕೊಂಡು ಅಭ್ಯಸಿಸಲು ಮರೆಯದಿರಿ.

ಹಳೆಯ ಪ್ರಶ್ನೆಪತ್ರಿಕೆಗಳ ರಿವಿಜನ್:
ಪರೀಕ್ಷೆಗೆ ತಯಾರಾಗುವಾಗ ನೀವು ಪ್ರಮುಖ ಚಾಪ್ಟರ್ ಓದಲು ಪ್ರಾರಂಭಿಸಿರುತ್ತೀರಿ ತಾನೇ. ಅದರ ಜೊತೆಗೆ ಹಳೆಯ ಪ್ರಶ್ನೆಪತ್ರಿಕೆಗಳನ್ನು ಕೂಡಾ ಅಭ್ಯಸಿಸಿ. ಇದರಿಂದ ಯಾವೆಲ್ಲಾ ಪ್ರಶ್ನೆಗಳು ಪ್ರಮುಖವಾದುವು ಮತ್ತು ಹೇಗೆ ಪ್ರಶ್ನೆಗಳನ್ನು ಕೇಳಲಾಗಿದೆ ಎನ್ನುವುದು ತಿಳಿಯುತ್ತದೆ.

ಎಲ್ಲಾ ಗೊಂದಲಗಳಿಂದ ದೂರವಿರಿ:
ನೀಟ್ ಪರೀಕ್ಷೆಗೆ ಹಾಜರಾಗಲಿದ್ದೀರಿ ಎಂದಾಗ ಒಂದು ವಿಷಯ ನೆನಪಿಟ್ಟುಕೊಳ್ಳಿ ಅದೇನೆಂದರೆ, ಪರೀಕ್ಷೆಗೆ ಬಾಕಿ ಇರುವ ಕೆಲವೇ ತಿಂಗಳುಗಳಲ್ಲಿ ಮತ್ತು ಪರೀಕ್ಷಾ ದಿನ ನೀವು ಯಾವುದೇ ಗೊಂದಲಕ್ಕೆ ತಲೆ ಕೊಡಬೇಡಿ. ಮೊಬೈಲ್, ಟಿವಿ , ಲ್ಯಾಪ್‌ಟಾಪ್ ಮುಂತಾದೆಡೆ ಗಮನಹರಿಸದೇ ಸೀರಿಯಸ್ ಆಗಿ ಓದಿನತ್ತ ಗಮನ ಕೊಡಿ ಇದರಿಂದ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ.

ಪರೀಕ್ಷೆ ಎದುರಿಸಲು ಮಾನಸಿಕವಾಗಿ ಸಿದ್ಧರಾಗಿ:
ನೀಟ್ ಎಕ್ಸಾಂ ಬರೆದಿರುವವರ ಪ್ರಕಾರ ನಿಗದಿತ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ನಿಜವಾಗಿಯೂ ಸವಾಲಾಗಿರುತ್ತದೆ. ಸರಿಯಾಗಿ ಸಮಯ ನಿರ್ವಹಣೆ ಮಾಡುವ ಮೂಲಕ ಈ ಸವಾಲನ್ನು ಎದುರಿಸಬಹುದಾಗಿದ್ದು, ಈ ಬಗ್ಗೆ ತಜ್ಞರಿಂದ ಮಾರ್ಗದರ್ಶನ ಪಡೆದುಕೊಳ್ಳಿ. ಪರೀಕ್ಷೆ ಹತ್ತಿರವಾದಂತೆ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದ ಸಹಜ, ಆದರೆ ಆ ಭಯ ಬೇಡ. ನೀವು ಎಷ್ಟು ಸಮಾಧಾನದಿಂದ ಇರುತ್ತೀರೋ ಅಷ್ಟೇ ಸುಲಭವಾಗಿ ಪರೀಕ್ಷೆಯಲ್ಲಿ ಸಫಲರಾಗುತ್ತೀರಿ. ಪರೀಕ್ಷೆಗೆ ಹೋಗುವ ಹಿಂದಿನ ದಿನ ಮತ್ತು ಪರೀಕ್ಷೆಯ ದಿನ ನಿಮ್ಮ ಮನಸ್ಸನ್ನು ಹಗುರವಾಗಿಟ್ಟುಕೊಳ್ಳಿ. ಧ್ಯಾನ ಮಾಡುವ ಅಭ್ಯಾಸವಿದ್ದರೆ ಇನ್ನು ಸುಲಭ. ಪರೀಕ್ಷೆಗೂ ಮುನ್ನ ಕಣ್ಣು ಮುಚ್ಚಿ ದೀರ್ಘವಾಗಿ ಉಸಿರಾಡಿ, ಮನಸ್ಸಿನಲ್ಲಿ ನಾನು ಎಲ್ಲವನ್ನು ಓದಿದ್ದೇನೆ ಎಂಬ ಭಾವನೆ ಇರಲಿ ಆಗ ಮಾನಸಿಕವಾಗಿ ಸದೃಢರಾಗುತ್ತೀರಿ. ಶಾಂತಚಿತ್ತರಾಗಿ ಪರೀಕ್ಷೆ ಕೊಠಡಿ ಪ್ರವೇಶಿಸಿದರೆ ಪ್ರವೇಶ ಪರೀಕ್ಷೆಯಲ್ಲಿ ಅರ್ಧ ಗೆದ್ದಂತೆ.

ಮೊದಲ ಪ್ರಯತ್ನದಲ್ಲೇ ನೀಟ್ ಪರೀಕ್ಷೆ ಪಾಸ್ ಮಾಡಲು ಸಣ್ಣ ಸಲಹೆ:
ಪ್ರಮುಖ ಟಾಪಿಕ್ ಬಗ್ಗೆ ಏನಾದ್ರೂ ಅನುಮಾನ ಬಂದ್ರೆ ಕೂಡಲೇ ಕ್ಲಿಯರ್ ಮಾಡಿಕೊಳ್ಳಿ ಇತರೆ ಪುಸ್ತಕಗಳನ್ನ ಕೂಡಾ ರೆಫರ್ ಮಾಡಿ. ಆದರೆ ಎನ್‌ಸಿಇಆರ್ ಟಿ ಪುಸ್ತಕ ರೆಫರ್ ಮಾಡಲು ಮರೆಯದಿರಿ ಟಾಪಿಕ್ ವೈಸ್ ಸ್ಟಡಿ ಮಾಡಿ ಕೆಮೆಸ್ಟ್ರಿ ಹಾಗೂ ಫಿಸಿಕ್ಸ್ ವಿಷಯದ ಜೆಇಇ ಲೆವೆಲ್ ನ ಪ್ರಾಬ್ಲಮ್ಸ್ ಬಗೆಹರಿಸಲು ಪ್ರಯತ್ನ ಮಾಡಿ.

ವಿದ್ಯಾರ್ಥಿಗಳ ಗಮನಕ್ಕೆ:
ಒಎಂಆರ್ ಶೀಟ್‌ನಲ್ಲಿ ಒಮ್ಮೆ ಭರ್ತಿ ಮಾಡಿದ ಮೇಲೆ ಮತ್ತೆ ಉತ್ತರವನ್ನು ಬದಲಾಯಿಸಲು ಅವಕಾಶವಿರುವುದಿಲ್ಲ. ಹೀಗಾಗಿ ಉತ್ತರದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡೇ ಒಎಂಆರ್ ಶೀಟ್ ಭರ್ತಿ ಮಾಡಿ. ಪರೀಕ್ಷೆಗೆ ಹೋಗುವ ಮುನ್ನ ಮೇಲಿನ ಸೂಚನೆಗಳನ್ನು ಪಾಲಿಸಿದರೆ ನೀವು ಯಾವ ಪರೀಕ್ಷೆಯನ್ನಾದರು ಸುಲಭವಾಗಿ ಆತಂಕವಿಲ್ಲದೆ ಬರೆಯಬಹುದು.
ವಿದ್ಯಾರ್ಥಿಗಳು ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಹಂತದ ಮಹತ್ತರ ಪರೀಕ್ಷೆ ಇದಾಗಿದ್ದು, ತಾವು ಅತೀ ಹೆಚ್ಚು ಕಾಳಜಿ ವಹಿಸಿ ಈ ಪರೀಕ್ಷೆಯನ್ನು ಎದುರಿಸಿದ್ದಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತಮ ಕಾಲೇಜು ಆಯ್ಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ಕಾಣಬಹುದು ಹಾಗಾಗಿ ವಿದ್ಯಾರ್ಥಿಗಳು ಈ ಎಲ್ಲಾ ಸಲಹೆಗಳನ್ನು ಪಾಲಿಸಿ ಪರೀಕ್ಷೆಯನ್ನು ಎದುರಿಸಿ ಎನ್ನುವುದು ನಮ್ಮ ಉದ್ದೇಶ.