ಹೊಸ ಕೆಲಸಕ್ಕೆ ಸೇರುವ ದಿನಾಂಕ, ನಿಮ್ಮ ಇಚ್ಛೆಯಂತೆಯೇ ಆಗಬೇಕಾ?

ನಿಮಗೊಂದು ಉತ್ತಮ ಕೆಲಸ ಸಿಕ್ಕಿದೆ. ಆದ್ರೆ ನೀವು ಸೇರಿರುವ ಕಂಪೆನಿಯವರು ನೀವು ಸೇರಿಕೊಳ್ಳಬೇಕು ಅಂದುಕೊಂಡಿರುವ ದಿನಾಂಕಕ್ಕಿಂತ ಸ್ವಲ್ಪ ಬೇಗವೋ ಇಲ್ಲ ಸ್ವಲ್ಪ ತಡವಾಗಿಯೋ ಸೇರಿಸಿಕೊಳ್ಳಬೇಕು ಎಂದಿದ್ದಾರೆಯೇ. ಹಾಗಾದ್ರೆ ನಿಮ್ಮನ್ನು ಕೆಲಸಕ್ಕೆ ತೆಗೆದುಕೊಂಡಿರುವ ಕಂಪೆನಿಯವರಿಗೆ ಬೇಸರವಾಗದ ರೀತಿಯಲ್ಲಿ ಆ ದಿನಾಂಕವನ್ನು ಬದಲಿಸಿಕೊಳ್ಳಲು ಸಾಧ್ಯವಿದ್ಯಾ? ನಿಮಗೆ ನೀಡಲಾಗಿರುವ ಸಮಯಕ್ಕಿಂತ ಬೇಗವೋ ಅಥವಾ ತಡವಾಗಿಯೋ ಕೆಲಸಕ್ಕೆ ಸೇರಿಕೊಳ್ಳಲು ಮಾಡಬಹುದಾದ ಉಪಾಯಗಳೇನು?

ಹೆಚ್ಚಿನ ಕಂಪೆನಿಗಳಲ್ಲಿ ಜಾಯನಿಂಗ್ ಡೇಟ್ , ಕೆಲಸದ ಆಫರ್ ಸ್ವೀಕರಿಸಿದ ಎರಡು ವಾರದೊಳಗೆ ಆಗಿರುತ್ತೆ. ಇನ್ನು ಕೆಲವು ಕಂಪೆನಿಗಳಲ್ಲಿ ಒಂದು ತಿಂಗಳ ಅವಕಾಶವಿರಬಹುದು. ಅಥವಾ ತುಂಬಾ ಅಗತ್ಯವಾಗಿ ವ್ಯಕ್ತಿ ಬೇಕೇಬೇಕು ಎಂದು ಕೆಲಸಕ್ಕೆ ಸೇರಿಸಿಕೊಳ್ಳುತ್ತಿರುವುದಾದರೆ ನಾಳೆಯೇ ಜಾಯಿನ್ ಆಗಿ ಅಂತ ಕೂಡ ಹೇಳಬಹುದು. ಒಂದು ವೇಳೆ ಅವರು ಹೇಳಿದ ದಿನಾಂಕಕ್ಕೆ ನಿಮಗೆ ಕೆಲಸಕ್ಕೆ ಸೇರಲು ಆಗುತ್ತಿಲ್ಲ ಮತ್ತು ಈ ಕೆಲಸವನ್ನು ಕಳೆದುಕೊಳ್ಳಲು ಕೂಡ ನಿಮಗೆ ಇಷ್ಟವಿಲ್ಲ ಎಂದಾಗಿದ್ದು, ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕೆಲಸಕ್ಕೆ ಸೇರುವ ಅವಕಾಶ ಗಿಟ್ಟಿಸಿಕೊಳ್ಳಬೇಕಾದಲ್ಲಿ ನೀವು ಜಾಗೃತರಾಗಿರಬೇಕು. ಕೂಡಲೇ ಆಗುವುದಿಲ್ಲ ಎಂದು ಉತ್ತರಿಸಬೇಡಿ. ಬದಲಾಗಿ ನಿಮ್ಮ ಚರ್ಚೆಗೆ ಅವಕಾಶವಿದ್ಯಾ ಎಂದು ಪರೀಕ್ಷಿಸಿಕೊಳ್ಳಿ ಮತ್ತು ಕಂಪೆನಿಗೆ ಸಂಬಂಧಿಸಿದ ವ್ಯಕ್ತಿಯ ಬಳಿ ವಿನಂಮೃತೆಯಿಂದ ನಿಮ್ಮ ಮನವಿಯನ್ನು ಇಡಿ.

ನಿಮ್ಮಿಷ್ಟದ ದಿನಾಂಕಕ್ಕೆ ನೀವು ಕೆಲಸಕ್ಕೆ ಸೇರ್ಬೇಕಾ ?..

 

ಕೇವಲ ಸಂಬಳ ಮಾತ್ರ ನಿಮ್ಮ ಇಂಟರ್ ವ್ಯೂ ನಲ್ಲಿ ಚರ್ಚಿಸಬೇಕಾಗಿರುವ ವಿಷಯವಾಗಿರುವುದಿಲ್ಲ ಅನ್ನೋದು ನಿಮಗೆ ನೆನಪಿರಲಿ. ಕೆಲಸಕ್ಕೆ ಯಾವತ್ತು ಬಂದು ಸೇರಿಕೊಳ್ಳಬೇಡಿ. ಕಂಪೆನಿಯಿಂದ ನಿಮಗೆ ಯಾವೆಲ್ಲ ಸೌಲಭ್ಯಗಳು ಸಿಗಲಿವೆ ಇವೆಲ್ಲವನ್ನೂ ನೀವು ಚರ್ಚಿಸಬೇಕಾಗುತ್ತದೆ. ಕೆಲಸಕ್ಕೆ ನೀವು ಆಯ್ಕೆಗೊಂಡ ವಿಷಯ ತಿಳಿಸಿದ ಕೂಡಲೇ ಧನ್ಯವಾದ ಹೇಳುವುದನ್ನು ಮರೆಯಬೇಡಿ. ಇಂತಹ ಸಂದರ್ಭದಲ್ಲಿ ನೀವು ನೀಡುವ ಸಮರ್ಪಕ ಉತ್ತರಗಳು ಅವರನ್ನು ಮತ್ತಷ್ಟು ಆಕರ್ಷಿಸುವಂತಿರಬೇಕು.

1. ನೀವು ಕೆಲಸಕ್ಕೆ ಸೇರುವ ದಿನಾಂಕ ಮುಂದೂಡಲು ಆಯ್ಕೆಗಳು

ನೀವು ಬಯಸಿದ ದಿನಾಂಕಕ್ಕಿಂತ ಬೇಗನೆ ಸೇರಿಕೊಳ್ಳಲು ಕಂಪೆನಿ ಬಯಸುತ್ತಿದ್ದಲ್ಲಿ, ನೀವು ಸರಿಯಾದ ಕಾರಣಗಳನ್ನು ನೀಡಲು ತಯಾರಾಗಿರಿ. ನೀವು ಕೆಲಸ ನಿರ್ವಹಿಸುತ್ತಿರುವ ಕಂಪೆನಿಯಲ್ಲಿ ಇಂತಿಷ್ಟು ದಿನ ನೋಟಿಫಿಕೇಷನ್ ನೀಡಬೇಕಿದೆ. ನಿಮ್ಮ ಹಳೆ ಕಂಪೆನಿಗೆ ರಿಸೈನ್ ಮಾಡಿ ಇಲ್ಲಿ ಸೇರಿಕೊಳ್ಳಬೇಕಾದಲ್ಲಿ ಆ ಕಂಪೆನಿಯ ಎಲ್ಲಾ ರೂಲ್ಸ್ ಗಳನ್ನು ಮುಗಿಸಬೇಕಾಗಿರುವುದು ನಿಮ್ಮ ಜವಾಬ್ದಾರಿಯಾಗಿದೆ ಅನ್ನೋದನ್ನು ಇವರಿಗೆ ಮನದಟ್ಟು ಮಾಡಿಕೊಡಿ. ಸದ್ಯ ನೀವು ಕೆಲಸ ಮಾಡುತ್ತಿರುವ ಕಂಪೆನಿಯಲ್ಲಿರುವ ನಿಮ್ಮ ಜವಾಬ್ದಾರಿಗಳು ಮತ್ತು ಪ್ರೊಜೆಕ್ಟ್ಗಳು ಅವುಗಳನ್ನು ಮುಗಿಸಲು ನಿಮಗೆ ಬೇಕಾಗುವ ಕಾಲಾವಧಿ ಇದೆನ್ನೆಲ್ಲ ಹೊಸ ಕಂಪೆನಿಗೆ ಅರ್ಥ ಮಾಡಿಸಿ. ಹಾಗಾಗಿ ನನಗೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ವಿನಂತಿ ಮಾಡಿ. ನಿಮ್ಮ ಡೆಡಿಕೇಷನ್ ಗಮನಿಸಿದ ಯಾವುದೇ ಕಂಪೆನಿಯಾದರೂ ನಿಮಗೆ ಕಾಲಾವಕಾಶ ನೀಡುತ್ತದೆ. ಫ್ಯಾಮಿಲಿಯ ಯಾವುದೇ ಕಾರ್ಯಕ್ರಮದ ಉದ್ದೇಶದಿಂದ ನೀವು ರಜೆ ತೆಗೆದುಕೊಳ್ಳಲು ಬಯಸುತ್ತಿದ್ದು, ಹೊಸ ಕಂಪೆನಿಗೆ ಕೂಡಲೇ ಸೇರಿಕೊಳ್ಳಲು ಸಾಧ್ಯವಾಗದೇ ಇದ್ದಲ್ಲಿ ಅದನ್ನು ಸರಿಯಾದ ರೀತಿಯಲ್ಲಿ ಅವರಿಗೂ ಕಾರ್ಯಕ್ರಮಕ್ಕೆ ಇನ್ವೈಟ್ ಮಾಡಿ ನೀವು ಸೇರಿಕೊಳ್ಳುವುದು ತಡವಾಗುತ್ತೆ ಅನ್ನೋದನ್ನು ತಿಳಿಸಿ.

2. ಕಂಪೆನಿಯೇ ನೀವು ಕೂಡಲೇ ಸೇರುವುದನ್ನು ಇಚ್ಛಿಸುತ್ತಿಲ್ಲ..

 

ಹೀಗೆ ಆಗುವ ಸಾಧ್ಯತೆ ತುಂಬಾ ವಿರಳ. ನಿಮ್ಮನ್ನ ಕೆಲಸಕ್ಕೆ ತೆಗೆದುಕೊಳ್ಳುತ್ತಿರುವ ಕಂಪೆನಿ ಕೂಡಲೇ ಬೇಡ. ಕೆಲವು ದಿನಗಳ ನಂತರ ನೀವು ಕೆಲಸಕ್ಕೆ ಸೇರಿದರೆ ಸಾಕು ಎಂದು ಇಚ್ಛಿಸುತ್ತಿದ್ಯಾ.. ಹಾಗಾದ್ರೆ ಇದಕ್ಕೂ ಕೆಲವು ಕಾರಣಗಳಿರುತ್ತೆ. ಕಂಪೆನಿಯು ಯಾವುದೋ ರಿಸಲ್ಟ್ ಗಾಗಿ ಕಾಯುತ್ತಿರಬಹುದು. ಅಥ್ವಾ ನೀವು ಯಾರ ಬದಲಿಗಾಗಿ ಆ ಕಂಪೆನಿಗೆ ಸೇರಿಕೊಳ್ಳುತ್ತಿದ್ದೀರೋ ಆ ವ್ಯಕ್ತಿ ದೀರ್ಘಾವಧಿಯ ನೋಟೀಸ್ ನೀಡಿರಬಹುದು. ಅವರನ್ನು ರಿಲೀವ್ ಮಾಡದೇ ನಿಮ್ಮನ್ನ ಸೇರಿಸಿಕೊಳ್ಳಲು ಕಂಪೆನಿಗೆ ಸಾಧ್ಯವಾಗದೇ ಇರಬಹುದು.

3. ನೀವು ಬೇಗನೆ ಕಂಪೆನಿಗೆ ಸೇರಿಕೊಳ್ಳಲು ರೆಡಿ ಇದ್ದೀರಿ

ಕೆಲವು ಕಂಪೆನಿಯ ನಿಯಮಗಳಿರುತ್ತೆ.ಮೊದಲು ಕಂಪೆನಿಗೆ ಸೇರಿದ ಅಭ್ಯರ್ಥಿ ಕಂಪೆನಿಯ ಪಾಲಿಸಿ ಮತ್ತು ಕೆಲಸವನ್ನು ಸರಿಯಾಗಿ ತಿಳಿದುಕೊಳ್ಳಬೇಕು ಅನ್ನೋದು, ಹಾಗಾಗಿ ಅವರು ಆಫೀಸಿಗೆ ಬರಲು ಹೇಳಿದ್ರೂ ಸಂಬಳ ಶುರುವಾಗೋದು ಕೆಲವು ದಿನಗಳ ನಂತರದಿಂದ..ನಿಮಗೆ ಸ್ಯಾಲರಿ ತುಂಬಾ ಇಂಪಾರ್ಟೆಂಟ್ ಆಗಿದ್ದಲ್ಲಿ , ನಿಮ್ಮ ಸ್ಯಾಲರಿ ಆರಂಭವಾಗುವ ದಿನಾಂಕವನ್ನು ಬೇಗನೇ ಆರಂಭಿಸುವುದಕ್ಕೆ ಯಾವುದಾದ್ರೂ ಅವಕಾಶಗಳಿದ್ಯಾ ಅನ್ನೋದನ್ನು ಮುಜುಗರ ಬಿಟ್ಟು ಕಂಪೆನಿಯ ಸಂಬಂಧಪಟ್ಟ ವ್ಯಕ್ತಿಯ ಬಳಿ ಕೇಳಿ ತಿಳಿದುಕೊಳ್ಳಿ. ನೀವು ಕೆಲಸಕ್ಕೆ ಸೇರಲು ಬೇಗನೆ ಲಭ್ಯವಿರೋದನ್ನು ಅವರಿಗೆ ತಿಳಿಸದೇ ಮೌನಿಯಾಗಿದ್ದರೆ ಖಂಡಿತವಾಗಿಯೂ ನೀವು ಬೇಗನೆ ಸೇರಿಕೊಳ್ಳಬಹುದಾದ ಅವಕಾಶದ ಬಾಗಿಲು ಮುಚ್ಚಿರುತ್ತೆ.

4. ಯಾವುದಕ್ಕೂ ಸಿದ್ಧರಾಗಿರಿ.

ಕೊಂಡು -ತೆಗೆದುಕೊಳ್ಳುವ ಮನಸ್ಥಿತಿಗೆ ನೀವು ಒಗ್ಗಬೇಕು. ಹೊಸದಾಗಿ ಸೇರಿಕೊಳ್ಳುವ, ಮತ್ತು ರಿಸೈನ್ ಮಾಡಿ ಹೊರಬರುವ ಎರಡೂ ಕಂಪೆನಿಯಲ್ಲೂ ನೀವು ಏನು ಸಂಭವಿಸಬಹುದೋ ಆ ಸಂದರ್ಭವನ್ನು ಎದುರಿಸಲು ಸಿದ್ಧರಾಗಿರಬೇಕು. ನೀವು ಯಾವ ದಿನಾಂಕಕ್ಕೆ ಸೇರಿಕೊಳ್ಳಲು ಒಪ್ಪಿಕೊಂಡಿರೋ ಆ ದಿನಾಂಕದಂದು ಸೇರಿಕೊಳ್ಳುವಾಗ , ಒತ್ತಡರಹಿತರಾಗಿರಿ, ಪೀಸ್ ಫುಲ್ ಮೈಂಡ್ ನಿಂದ ಹೊಸ ಕಂಪೆನಿಗೆ ಸೇರಿಕೊಳ್ಳಿ. ಆಲ್ ದಿ ವೆರಿ ಬೆಸ್ಟ್..

For Quick Alerts
ALLOW NOTIFICATIONS  
For Daily Alerts

English summary
Salary isn't the only thing that's negotiable in a job offer, your start date, along with some benefits and perks may be something you can negotiate.If you accept the job offer first, then discuss a start date, you'll likely be able to negotiate something that fits both your needs and those of your new employer.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X