ನೈಟ್ ಶಿಫ್ಟ್... ನಿದ್ದೆಕೆಟ್ಟು ಕೆಲಸ ಮಾಡಿದ್ರೆ ಹಗಲು ಹೊತ್ತು ಏನೆಲ್ಲಾ ಮಾಡಬಹುದು ನೋಡಿ!

Posted By:

ಈಗಂತೂ ಎಲ್ಲೆಡೆ ಮಲ್ಟಿ ನ್ಯಾಷನಲ್ ಕಂಪನಿಗಳು ತಲೆ ಎತ್ತಿ ನಿಂತಿವೆ. ಕಾರ್ಪೋರೇಟಿವ್ ಬ್ಯುಸಿನೆಸ್ ನೀವು ಎಲ್ಲಾ ಕಡೆ ನೋಡಬಹುದು. ಹಾಗಾಗಿ ಈಗಿನ ಕೆಲಸದ ಅವಧಿಯೂ ಕೂಡಾ ಮೊದಲಿನಂತಿಲ್ಲ. ಅಷ್ಟೇ ಅಲ್ಲ ಇದೀಗ ನೀವು ಪಾಳಿಯಲ್ಲಿ ಕೆಲಸ ಮಾಡಬೇಕಾಗಿದೆ. ಇನ್ನು ರಾತ್ರಿ ಪಾಳಿಯೂ ಇದೆ.

ರಾತ್ರಿ ಪಾಳಿಯಲ್ಲೂ ಇದೀಗ ಮಹಿಳೆ ಹಾಗೂ ಪುರುಷ ಸಮಾನಾಗಿ ದುಡಿಯುತ್ತಿದ್ದಾರೆ. ನಿದ್ದೆಕೆಟ್ಟು ಕೆಲಸ ಮಾಡುಬೇಕಾದುದು ಅನಿವಾರ್ಯ. ಆದ್ರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದಲೂ ಅನೇಕ ಲಾಭಗಳಿವೆ. ಆ ಲಾಭಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.

ಟ್ರಾಫಿಕ್ ಟೆನ್ಶನ್ ನಿಮಗೆ ಇರಲ್ಲ:

ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ನಿಮಗೆ ಟ್ರಾಫಿಕ್ ಟೆನ್ಶನ್ ಇರಲ್ಲ. ಮನೆಯಲ್ಲಿ ಹೆಚ್ಚು ಟೈಂ ಸ್ಪೆಂಡ್ ಮಾಡಬಹುದು. ಇನ್ನು ನೀವೇ ಗಾಡಿ ಚಲಾಯಿಸಿ ಆಫೀಸಿಗೆ ಹೋಗುವಾದ್ರೆ ರಾತ್ರಿ ಪಾಳಿ ಬೆಸ್ಟ್. ಹೆಚ್ಚು ಟ್ರಾಫಿಕ್ ಇರಲ್ಲ ಅಷ್ಟೇ ಅಲ್ಲ ಪೆಟ್ರೋಲ್ ಕೂಡಾ ಉಳಿತಾಯ ಮಾಡಬಹುದು.

ಅನುಕೂಲಕರ:

ನೈಟ್ ಶಿಫ್ಟ್ ತುಂಬಾ ಅನುಕೂಲಕರವಾಗಿರುತ್ತದೆ. ನೈಟ್ ಶಿಫ್ಟ್ ನಿಂದ ನೀವು ಹಗಲು ಮಾಡಬೇಕಾದ ಕೆಲಸವನ್ನೆಲ್ಲಾ ಆರಾಮವಾಗಿ ಮಾಡಬಹುದು. ಬ್ಯಾಂಕ್ ಕೆಲಸ, ಬಿಲ್ ಪಾವತಿ ಸೇರಿದಂತೆ ಇನ್ನಿತ್ತರ ಕೆಲಸಗಳನ್ನ ಆರಾಮವಾಗಿ ಯಾವುದೇ ಅವಸರ ಅವಸರ ಮಾಡದೇ ಮಾಡಿಮುಗಿಸ ಬಹುದಾಗಿದೆ.

ಹೆಚ್ಚು ವೇತನ:

ಹೆಚ್ಚಿನ ಕಂಪನಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ವೇತನ ಆಫರ್ ಮಾಡುತ್ತದೆ. ನೀವು ಹೆಚ್ಚು ಹಣ ಮಾಡಬೇಕು ಎಂದು ಯೋಚಿಸಿದ್ದರೆ ಇದು ಬೆಸ್ಟ್ ವಿಧಾನ. ರಾತ್ರಿ ಪಾಳಿಯಲ್ಲಿ ಆರಾಮವಾಗಿ ದುಡಿದು ಹೆಚ್ಚು ಹಣ ಗಳಿಸಿ

ಶಿಕ್ಷಣ ಕೂಡಾ ಕಂಪ್ಲೀಟ್:

ನೀವು ಹೆಚ್ಚಿನ ಶಿಕ್ಷಣ ಪಡೆಯಬೇಕು ಎಂದು ಯೋಚಿಸಿದ್ದರೆ, ರಾತ್ರಿ ಪಾಳಿ ಕೆಲಸ ನಿಮಗೆ ಬೆಸ್ಟ್. ರಾತ್ರಿ ಪಾಳಿ ಕೆಲಸವಿದ್ದರೆ ಹಗಲು ಹೊತ್ತು ನೀವು ನಿಮಗೆ ಬೇಖಾದ ಕೋರ್ಸ್ ಗಳನ್ನು ಕೂಡಾ ಅಟೆಂಡ್ ಮಾಡಬಹುದು. ಇದರಿಂದ ನಿಮ್ಮ ಎಜ್ಯುಕೇಶನ್ ಕೂಡಾ ಒಂದು ಸ್ಟೆಪ್ ಏರುವುದು.

ಹೆಚ್ಚಿನ ಉದ್ಯೋಗವಕಾಶ:

ನೀವು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೆ ಹಗಲು ಹೊತ್ತು ಏನಾದ್ರೂ ಪಾರ್ಟ್ ಟೈಂ ಕೆಲಸ ಕೂಡಾ ಮಾಡಬಹುದು. ಮನೆಯಲ್ಲೇ ಕುಳಿತು ಮಾಡುವಂತಹ ಕೆಲಸ ಕೂಡಾ ನೀವು ಆರಾಮವಾಗಿ ಮಾಡಬಹುದು

English summary
Shift Wroks creates numerous advantages. Night Shift have more advantages. workers on the night shift face the more advantages. here is the list of night shift advantages.

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia