International Nurses Day: ಪಿಯುಸಿ ನಂತರ ನರ್ಸಿಂಗ್ ಕೋರ್ಸ್‌ ಮಾಡಿದ್ರೆ ಬಹು ಬೇಗ ಉದ್ಯೋಗ ಸಿಗುತ್ತೆ ಗೊತ್ತಾ?

International Nurses Day: ನರ್ಸಿಂಗ್ ಒಂದು ಉತ್ತಮ ಪ್ರೊಫೆಷನಲ್ ವೃತ್ತಿಯಾಗಿದೆ. ಒಂದೆಡೆ ರೋಗಿಗಳ ಸೇವೆಯ ಜೊತೆಗೆ ಇನ್ನೊಂದೆಡೆ ಉತ್ತಮ ದುಡಿಮೆಯೂ ಕೂಡ ಆಗಿದೆ. ನರ್ಸಿಂಗ್ ಎನ್ನುವುದು ಒಂದು ಮೆಡಿಕಲ್ ಓರಿಯೆಂಟೆಡ್ ಕೋರ್ಸ್‌ ಆಗಿರುತ್ತದೆ. ಹಾಗಾಗಿ ವೈದ್ಯರಿಗೆ ಹೇಗೆ ಬೇಡಿಕೆ ಇದೆಯೋ ಅದೇ ರೀತಿಯಾಗಿ ನರ್ಸಿಂಗ್ ಕೋರ್ಸ್ ಮಾಡಿದವರಿಗೆ ಬಹು ಬೇಡಿಕೆ ಇದೆ.

ದ್ವಿತೀಯ ಪಿಯುಸಿ ನಂತರ ಮುಂದೇನು? ಯಾವ ಕೋರ್ಸ್‌ ಮಾಡಿದ್ರೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ. ಎಂಬಿಬಿಎಸ್ ಮಾಡಲು ಆಗದಿರುವಾಗ ಹೇಗೆ ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಬಹುದು ಎಂದು ಚಿಂತಿಸುತ್ತಿರುವವರಿಗಾಗಿ ಇರುವ ನರ್ಸಿಂಗ್ ಕೋರ್ಸ್‌ಗಳ ಬಗೆಗೆ ನಾವಿಲ್ಲಿ ಮಾಹಿತಿ ನೀಡಲಿದ್ದೇವೆ.

ನರ್ಸಿಂಗ್ ಕೋರ್ಸ್ ಮಾಡಿದ್ರೆ ಕೈ ತುಂಬಾ ಸಂಪಾದಿಸಬಹುದು ಗೊತ್ತಾ

ನರ್ಸಿಂಗ್ ಅನ್ನೋದು ಸಾಮಾನ್ಯ ಕೆಲಸವಲ್ಲ ಇಲ್ಲಿ ರೋಗಿಗಳಿಗೆ ನೀಡುವ ಶುಶ್ರೂಷೆಯಿಂದ ಹಿಡಿದು ರೋಗಿಗಳ ಆರೋಗ್ಯದ ಕಾಳಜಿ ತೋರುವ ವರೆಗೆ ನರ್ಸ್‌ಗಳ ಕರ್ತವ್ಯವಾಗಿರುತ್ತದೆ. ಇನ್ನೂ ನರ್ಸ್ ಅಂದಾಕ್ಷಣ ಕೇವಲ ಮಹಿಳೆಯರು ಮಾತ್ರ ಈ ನರ್ಸಿಂಗ್ ಕೋರ್ಸ್ ಮಾಡಬೇಕೆಂದಿಲ್ಲ ಪುರುಷರೂ ಕೂಡ ಈ ಕೋರ್ಸ್‌ಗಳನ್ನು ಮಾಡಬಹುದು. ಪುರುಷ ನರ್ಸ್‌ಗಳಿಗೂ ಈ ಕ್ಷೇತ್ರದಲ್ಲಿ ಅಪಾರ ಬೇಡಿಕೆ ಇದೆ.

ನರ್ಸಿಂಗ್‌ನಲ್ಲಿ ಲಭ್ಯವಿರುವ ಕೋರ್ಸ್‌ಗಳು:

ನರ್ಸಿಂಗ್‌ ಕೋರ್ಸ್‌ಗಳನ್ನು ಮಾಡಬಯಸುವ ಅಭ್ಯರ್ಥಿಗಳು ಪದವಿ, ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು. ಪದವಿ ಮತ್ತು ಸ್ನಾತಕೋತ್ತರ ಪದವಿ ಎಂಬ ಪ್ರಮುಖ ಕೋರ್ಸ್‌ಗಳನ್ನು ಮಾಡಿದ್ದಲ್ಲಿಮೆಡಿಕಲ್ ಪ್ರೊಫೆಷನ್‌ನಲ್ಲಿ ಉತ್ತಮ ಹುದ್ದೆಗಳನ್ನು ಅಲಂಕರಿಸಬಹುದು.

ಭಾರತದಲ್ಲಿ ಯಾವೆಲ್ಲಾ ನರ್ಸಿಂಗ್ ಕೋರ್ಸ್‌ಗಳಿವೆ:

* ಬಿ.ಎಸ್ಸಿ ಇನ್ ನರ್ಸಿಂಗ್ (ಬೇಸಿಕ್)- 4 ವರ್ಷದ ಬ್ಯಾಚುಲರ್ಸ್ ಪದವಿಯ ಕೋರ್ಸ್
* ಬಿ.ಎಸ್ಸಿ ಇನ್ ನರ್ಸಿಂಗ್ (ಪೋಸ್ಟ್ ಬೇಸಿಕ್)- 2 ವರ್ಷದ ಬ್ಯಾಚುಲರ್ಸ್ ಪದವಿ ಕೋರ್ಸ್ (3 ವರ್ಷದ ದೂರಶಿಕ್ಷಣ ಪದವಿಯ ಕೋರ್ಸ್‌ ಮಾಡಬಹುದು)
* ಜಿಎನ್‌ಎಂ (ಡಿಪ್ಲೋಮ ಇನ್ ಜನರಲ್ ನರ್ಸಿಂಗ್ ಮತ್ತು ಮಿಡ್‌ವೈಫರಿ- 3.5 ವರ್ಷ ಅವಧಿಯ ಕೋರ್ಸ್
* ಎಎನ್‌ಎಂ (ಡಿಪ್ಲೋಮ ಇನ್ ಆಕ್ಸಿಲ್ಲರಿ ನರ್ಸಿಂಗ್ ಮತ್ತು ಮಿಡ್‌ವೈಫರಿ) - 2ವರ್ಷ ಅವಧಿಯ ಕೋರ್ಸ್‌
* ಎಂ.ಎಸ್ಸಿ ಇನ್ ನರ್ಸಿಂಗ್ - 2 ವರ್ಷ ಅವಧಿಯ ಸ್ನಾತಕೋತ್ತರ ಪದವಿ ಕೋರ್ಸ್
* ಎಂ.ಫಿಲ್ ಇನ್ ನರ್ಸಿಂಗ್ - 1ವರ್ಷ ಅವಧಿಯ ಕೋರ್ಸ್
* ಪಿ.ಹೆಚ್‌ಡಿ ಇನ್ ನರ್ಸಿಂಗ್ - 3 ರಿಂದ 5 ವರ್ಷ ಅವಧಿಯ ಕೋರ್ಸ್‌

ಮೇಲೆ ತಿಳಿಸಲಾಗಿರುವ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳಲ್ಲದೇ ಇತರೆ ಪಿಜಿ ಡಿಪ್ಲೋಮ ಮತ್ತು ಸರ್ಟಿಫಿಕೇಟ್‌ ಕೋರ್ಸ್‌ಗಳನ್ನು ಮಾಡಬಹುದು. ಇಂತಹ ಪಿಜಿ ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಮಾಡುವುದರಿಂಗ್ ವಿವಿಧ ಸ್ಟೆಷಾಲಿಟಿಗಳಲ್ಲಿ ಕೆಲಸ ನಿರ್ವಹಿಸಬಹುದು. ಯಾವೆಲ್ಲಾ ಏರಿಯಾಗಳಲ್ಲಿ ಸ್ಟೆಷಲೈಸೇಶನ್ ಮಾಡಬಹುದು ಅನ್ನುವುದನ್ನು ಇಲ್ಲಿ ತಿಳಿಯಿರಿ.

* ನಿಯೋನಾಟಲ್ ನರ್ಸಿಂಗ್
* ಆರ್ಥೋಪೆಡಿಕ್ ಮತ್ತು ರಿಹ್ಯಾಬಿಲಿಟೇಶನ್ ನರ್ಸಿಂಗ್
* ಆಪರೇಷನ್ ರೂಂ ನರ್ಸಿಂಗ್
* ಕ್ರಿಟಿಕಲ್ ಕೇರ್ ನರ್ಸಿಂಗ್
* ಎಮರ್ಜೆನ್ಸಿ ನರ್ಸಿಂಗ್
* ನ್ಯೂರೋ ಸೈನ್ಸ್ ನರ್ಸಿಂಗ್
* ನರ್ಸಿಂಗ್ ಅಡ್ಮಿನಿಸ್ಟ್ರೇಶನ್
* ಕಾರ್ಡಿಯೋ -ಥೋರಾಸಿಕ್ ನರ್ಸಿಂಗ್

ಪೋಸ್ಟ್ ಗ್ರಾಜುಯೇಟ್ ಡಿಪ್ಲೋಮ / ಪೋಸ್ಟ್ ಬೇಸಿಕ್ ಡಿಪ್ಲೋಮ ನರ್ಸಿಂಗ್ ಕೋರ್ಸ್‌ಗಳನ್ನು 1 ವರ್ಷ ಅವಧಿಯಲ್ಲಿ ಮಾಡಬಹುದು.

ನರ್ಸಿಂಗ್ ಕೋರ್ಸ್ ಮಾಡಲು ಬೇಕಿರುವ ಅರ್ಹತೆಗಳು:

ಬಿ.ಎಸ್ಸಿ ನರ್ಸಿಂಗ್ (ಬೇಸಿಕ್):

10+2 ಮಾದರಿಯಂತೆ ಪಿಯುಸಿ ವಿಜ್ಞಾನದಲ್ಲಿ ಭೌತಶಾಸ್ತ್ರ ,ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ್ ಅನ್ನು ಆಯ್ಕೆಮಾಡಿಕೊಂಡು ಮಾನ್ಯತೆ ಪಡೆದ ಬೋರ್ಡ್‌ನಿಂದ ಉತ್ತೀರ್ಣರಾದ 17 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ಈ ಕೋರ್ಸ್‌ ಅನ್ನು ಮಾಡಬಹುದು.

ಜಿಎನ್‌ಎಂ:

10+2 ಮಾದರಿಯಂತೆ ಪಿಯುಸಿಯಲ್ಲಿ ವಿಜ್ಞಾನ ಅಥವಾ ಕಲಾ ವಿಭಾಗದಲ್ಲಿ ಮಾನ್ಯತೆ ಪಡೆದ ಬೋರ್ಡ್‌ನಿಂದ ಉತ್ತೀರ್ಣರಾದ ಕನಿಷ್ಟ 17 ವರ್ಷ ವಯೋಮಿತಿಯ ಅಭ್ಯರ್ಥಿಗಳು ಈ ಕೊರ್ಸ್‌ ಅನ್ನು ಮಾಡಬಹುದು. ಬಹುಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಕೆಲವು ಕಾಲೇಜುಗಳಲ್ಲಿ ಪಿಯುಸಿಯನ್ನು ವಾಣಿಜ್ಯ ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೂ ಈ ಕೋರ್ಸ್‌ ಮಾಡಲು ಅವಕಾಶ ನೀಡುತ್ತದೆ.

ಎಎನ್‌ಎಂ:

10+2 ಮಾದರಿಯಂತೆ ವಿಜ್ಞಾನ ಅಥವಾ ಕಲಾ ವಿಭಾಗದಲ್ಲಿ ಮಾನ್ಯತೆ ಪಡೆದ ಬೋರ್ಡ್‌ನಿಂದ ಉತ್ತೀರ್ಣರಾಧ ಕನಿಷ್ಟ 17 ವರ್ಷ ವಯೋಮಿತಿಯ ಅಭ್ಯರ್ಥಿಗಳು ಈ ಕೋರ್ಸ್‌ ಅನ್ನು ಮಾಡಬಹುದು. ಈ ಕೋರ್ಸ್‌ ಮಾಡಲು ಕೆಲವು ಕಾಲೇಜುಗಳು ವಾಣಿಜ್ಯ ವಿಭಾಗದಲ್ಲಿ ಪಿಯುಸಿ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತದೆ.

ಬಿ.ಎಸ್ಸಿ ನರ್ಸಿಂಗ್ (ಪೋಸ್ಟ್‌ ಬೇಸಿಕ್):

10+2 ಮಾದರಿಯಲ್ಲಿ ವಿಜ್ಙಾನ ಅಥವಾ ಕಲಾ ವಿಭಾಗದಲ್ಲಿ ಪಿಯುಸಿ ವಿದ್ಯಾರ್ಹತೆಯ ಜೊತಗೆ ಜಿಎನ್‌ಎಂ ಕೋರ್ಸ್‌ ಅನ್ನು ಮಾಡಿರಬೇಕು. ಅಲ್ಲದೇ ಸ್ಟೇಟ್ ನರ್ಸ್‌ ರಿಜಿಸ್ಟ್ರೇಷನ್ ಕೌನ್ಸಿಲ್‌ನೊಂದಿಗೆ ರಿಜಿಸ್ಟಾರ್ ಮಾಡಿಕೊಂಡ ಅಭ್ಯರ್ಥಿಗಳು ಈ ಕೋರ್ಸ್‌ ಅನ್ನು ಮಾಡಬಹುದು.

ಎಂ.ಎಸ್ಸಿ ನರ್ಸಿಂಗ್ :

ಈ ಕೋರ್ಸ್‌ ಅನ್ನು ಬಿ.ಎಸ್ಸಿ ನರ್ಸಿಂಗ್ / ಪೋಸ್ಟ್ ಸರ್ಟಿಫಿಕೇಟ್ ಬಿ.ಎಸ್ಸಿ / ಪೋಸ್ಟ್ ಬೇಸಿಕ್ ಬಿ.ಎಸ್ಸಿ ನರ್ಸಿಂಗ್ ಐಎನ್‌ಸಿ ಇಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಶೇ.55% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಮಾಡಬಹುದು. ಅಲ್ಲದೆಯೇ ಬಿ.ಎಸ್ಸಿ ನಂತರ 1 ವರ್ಷ ಕೆಲಸದ ಅನುಭವವನ್ನು ಹೊಂದಿರುವುದರ ಜೊತೆಗೆ ಸ್ಟೇಟ್ ನರ್ಸ್‌ ರಿಜಿಸ್ಟ್ರೇಷನ್ ಕೌನ್ಸಿಲ್‌ನಲ್ಲಿ ರಿಜಿಸ್ಟರ್ ಮಾಡಿಕೊಂಡಿರುವ ಅಭ್ಯರ್ಥಿಗಳು ಈ ಕೋರ್ಸ್‌ ಅನ್ನು ಮಾಡಬಹುದು.

ಎಂ.ಫಿಲ್ ನರ್ಸಿಂಗ್:

ಎಂ.ಎಸ್ಸಿ ನರ್ಸಿಂಗ್ (ಯಾವುದೇ ಸ್ಪೆಷಾಲಿಟಿ) ನಲ್ಲಿ ಐಎನ್‌ಸಿಯಿಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಶೇ.60% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಎಂ.ಫಿಲ್ ನರ್ಸಿಂಗ್ ಕೋರ್ಸ್‌ ಅನ್ನು ಮಾಡಬಹುದು.

ಪಿಜಿ /ಪೋಸ್ಟ್ ಬೇಸಿಕ್ ಡಿಪ್ಲೋಮ ನರ್ಸಿಂಗ್:

ಬಿಎಸ್ಸಿ ನರ್ಸಿಂಗ್ / ಪೋಸ್ಟ್ ಬೇಸಿಕ್ ಬಿ.ಎಸ್ಸಿ ನರ್ಸಿಂಗ್ / ಜಿಎನ್‌ಎಂ ಅನ್ನು ಐಎನ್‌ಸಿ ಇಂದ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಕನಿಷ್ಟ ಶೇ.55% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ಈ ಕೋರ್ಸ್‌ಗಳನ್ನು ಮಾಡಬಹುದು.

ಉದ್ಯೋಗಾವಕಾಶಗಳು ಹೇಗಿದೆ:

ಯಾವುದೇ ನರ್ಸಿಂಗ್ ಕೋರ್ಸ್‌ಗಳನ್ನು ಮಾಡಿಕೊಂಡ ಅಭ್ಯರ್ಥಿಗಳಿಗೆ ವಿಶ್ವದೆಲ್ಲೆಡೆ ಭಾರೀ ಬೇಡಿಕೆ ಇದೆ. ಹಾಗಾಗಿ ಅಭ್ಯರ್ಥಿಗಳು ಯಾವುದೇ ನರ್ಸಿಂಗ್ ಕೋರ್ಸ್ ಮಾಡಿದ ಬಳಿಕ ಸ್ಟೇಟ್ ನರ್ಸ್ ರಿಜಿಸ್ಟ್ರೇಶನ್ ಕೌನ್ಸಿಲ್ ನಲ್ಲಿ ರಿಜಿಸ್ಟ್ರರ್ ಮಾಡಿಸಿದಾಗ ' ರಿಜಿಸ್ಟರ್ಡ್ ನರ್ಸ್' ಅಥವಾ 'ರಿಜಿಸ್ಟರ್ಡ್ ಮಿಡ್‌ವೈಫ್' ಎಂದು ನಾಮಫಲಕವನ್ನು ಪಡೆಯುತ್ತೀರಿ, ನಂತರ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ,ಹೆಲ್ತ್ ಸೆಂಟರ್, ಕಮ್ಯುನಿಟಿ ಹೆಲ್ತ್ ಸೆಂಟರ್,ರಿಹ್ಯಾಬಿಲಿಟೇಶನ್ ಕ್ಲಿನಿಕ್ ಮತ್ತು ಖಾಸಗಿ ಕ್ಲಿನಿಕ್ ಗಳಲ್ಲಿ ಕೆಲಸ ಮಾಡಬಹುದು.

ನರ್ಸಿಂಗ್ ಮಾಡಿರುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಕೂಡ ಭಾರೀ ಉದ್ಯೋಗಾವಕಾಶಗಳಿವೆ. ಯುಎಸ್‌ಎ, ಯುಕೆ, ಗಲ್ಫ್ ದೇಶಗಳು,ಆಸ್ಟ್ರೇಲಿಯಾ, ಕೆನಡ ಮತ್ತು ನ್ಯೂಜಿಲ್ಯಾಂಡ್ ದೇಶಗಳಲ್ಲಿ ಭಾರದಲ್ಲಿ ನರ್ಸಿಂಗ್ ಮಾಡಿರುವ ಅಭ್ಯರ್ಥಿಗಳಿಗೆ ಉತ್ತಮ ಹುದ್ದೆಗಳು ಲಭ್ಯವಿರುತ್ತದೆ.

ರಿಜಿಸ್ಟರ್ಡ್ ನರ್ಸ್‌ಗೆ ಯಾವೆಲ್ಲಾ ಜಾಬ್ ಪ್ರೊಫೈಲ್‌ಗಳಿವೆ:

* ಚೀಫ್ ನರ್ಸಿಂಗ್ ಆಫೀಸರ್
* ಅಸಿಸ್ಟೆಂಟ್ ನರ್ಸಿಂಗ್ ಆಫೀಸರ್
* ಕ್ರಿಟಿಕಲ್ ಕೇರ್ ನರ್ಸ್‌
* ಪೀಡಿಯಾಟ್ರಿಕ್ ಸರ್ಜರಿ / ನರ್ಸ್‌
* ನರ್ಸ್‌ ಮ್ಯಾನೇಜರ್ / ಸೂಪರ್‌ವೈಸರ್
* ರಿಹ್ಯಾಬಿಲಿಟೇಶನ್ ಸ್ಪೆಷಲಿಸ್ಟ್
* ಇನ್‌ಸ್ಟ್ರಕ್ಟರ್ / ಟೀಚರ್

ಎಲ್ಲಿ ಉದ್ಯೋಗಾವಕಾಶಗಳಿರುತ್ತವೆ:

* ಸರ್ಕಾರಿ ಆಸ್ಪತ್ರೆಗಳು
* ಖಾಸಗಿ ಆಸ್ಪತ್ರೆಗಳು
* ಪ್ರೈಮರಿ ಹೆಲ್ತ್ ಸೆಂಟರ್‌ಗಳು
* ಕಮ್ಯುನಿಟಿ ಹೆಲ್ತ್ ಸೆಂಟರ್‌ಗಳು
* ಎನ್‌ಜಿಓ
* ರಿಹ್ಯಾಬಿಲಿಟೇಷನ್ ಕ್ಲಿನಿಕ್‌ಗಳು
* ಟ್ರೈನಿಂಗ್ ಕಾಲೇಜುಗಳು / ಸಂಸ್ಥೆಗಳು

For Quick Alerts
ALLOW NOTIFICATIONS  
For Daily Alerts

English summary
Here we talking about the Nursing course details after 12th. Requirements and job opportunities.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X