World Food Day : ನ್ಯೂಟ್ರೀಶನಿಸ್ಟ್ ಅಥವಾ ಡಯೆಟೀಶಿಯನ್ ಆದರೆ ಎಷ್ಟೆಲ್ಲಾ ಉದ್ಯೋಗಾವಕಾಶಗಳಿವೆ ಅನ್ನೋದು ಗೊತ್ತಾ ?

ಇಂದಿನ ಜೀವನ ಶೈಲಿಯಲ್ಲಿ ಆರೋಗ್ಯಕ್ಕೆ ಕಾಳಜಿ ವಹಿಸುವುದಿರಲಿ ಆರೋಗ್ಯದ ಬಗೆಗೆ ಕಿಂಚಿತ್ತೂ ಗಮನ ಕೊಡಲು ಸಮಯದ ಅಭಾವ ಹಾಗಾಗಿ ಅನೇಕರು ಈ ಬಗೆಗೆ ಸಲಹೆ ಪಡೆಯಲು ತಜ್ಞರ ಮೊರೆ ಹೋಗುತ್ತಾರೆ. ಆರೋಗ್ಯ ಶೈಲಿ ಮತ್ತು ಆಹಾರ ಸೇವನೆಯ ಬಗೆಗೆ ಮಾರ್ಗದರ್ಶನ ನೀಡುವವರನ್ನು ನ್ಯೂಟ್ರೀಶನಿಸ್ಟ್ ಅಥವಾ ಡಯೆಟೀಶಯನ್ ಎಂದು ಕರೆಯುತ್ತಾರೆ.

ಸಮೂಹ ಸಂವಹನ ಅಧ್ಯಯನದಿಂದ ಎಷ್ಟೆಲ್ಲಾ ಉದ್ಯೋಗಾವಕಾಶವಿದೆ ಅನ್ನೋದು ನಿಮಗೆ ಗೊತ್ತಾ?ಸಮೂಹ ಸಂವಹನ ಅಧ್ಯಯನದಿಂದ ಎಷ್ಟೆಲ್ಲಾ ಉದ್ಯೋಗಾವಕಾಶವಿದೆ ಅನ್ನೋದು ನಿಮಗೆ ಗೊತ್ತಾ?

ನ್ಯೂಟ್ರೀಶನಿಸ್ಟ್ ಮತ್ತು ಡಯಟೀಶಿಯನ್ ಆಗಲು ಏನೆಲ್ಲಾ ಅರ್ಹತೆಗಳಿರಬೇಕು, ಏನು ಅಧ್ಯಯನ ಮಾಡಬೇಕು ಮತ್ತು ಈ ಉದ್ಯೋಗದಲ್ಲಿ ವೇತನ ಹೇಗಿರುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ ಓದಿ ತಿಳಿಯಿರಿ. ನೀವೂ ನ್ಯೂಟ್ರೀಶನಿಸ್ಟ್ ಅಥವಾ ಡಯೆಟೀಶಿಯನ್ ಆಗಲು ಆಸಕ್ತಿ ಇದ್ದಲ್ಲಿ ಕೋರ್ಸ್ ಮುಗಿಸಿ ಉದ್ಯೋಗವನ್ನು ಪಡೆದು ಉತ್ತಮ ಭವಿಷ್ಯ ನಿಮ್ಮದಾಗಿಸಿಕೊಳ್ಳಿ.

ನ್ಯೂಟ್ರೀಶನಿಸ್ಟ್ ಅಥವಾ ಡಯೆಟೀಶಿಯನ್ ಆದರೆ ಬಂಪರ್ ಉದ್ಯೋಗಾವಕಾಶ ನಿಮ್ಮ ಮುಂದೆ

ನ್ಯೂಟ್ರೀಶನಿಸ್ಟ್ ಮತ್ತು ಡಯೆಟೀಶಿಯನ್ ಎರಡೂ ಒಂದೇ ಎಂದು ಹಲವರು ತಿಳಿದಿದ್ದಾರೆ ಅದು ತಪ್ಪು. ನ್ಯೂಟ್ರೀಶನಿಸ್ಟ್ ಗೂ ಡಯೆಟೀಶಿಯನ್ ಗೂ ಇರುವ ವ್ಯತ್ಯಾಸವೆಂದರೆ ನ್ಯೂಟ್ರೀಶನಿಸ್ಟ್ ಆಗಲು ಅಭ್ಯರ್ಥಿಗಳು ಯಾವುದೇ ಪರವಾನಗಿಯನ್ನು ಪಡೆದಿರುವ ಅಗತ್ಯವಿಲ್ಲ ಆದರೆ ಡಯಟೀಶಿಯನ್ ಆಗಲು ಇಚ್ಚಿಸುವ ಅಭ್ಯರ್ಥಿಗಳು ಪರವಾನಗಿಯನ್ನು ಪಡೆದುಕೊಂಡು ರಿಜಿಸ್ಟರ್ಡ್‌ ಡಯಟೀಶಿಯನ್ ಆಗಿ ಉದ್ಯೋಗವನ್ನು ನಿರ್ವಹಿಸಬೇಕಿರುತ್ತದೆ. ಭಾರತದಲ್ಲಿ ಅಭ್ಯರ್ಥಿಗಳು ಐಡಿಎ ಅಂದರೆ ಭಾರತೀಯ ಡೈಯೆಟಿಕ್ ಅಸೋಸಿಯೇಟ್‌ನಿಂದ ಪರವಾನಗಿಯನ್ನು ಪಡೆಯಬಹುದಾಗಿರುತ್ತದೆ. ಹಾಗಿದ್ರೆ ನ್ಯೂಟ್ರೀಶನಿಸ್ಟ್ ಮತ್ತು ಡೈಯೆಟೀಶಿಯನ್‌ಗಳ ಕರ್ತವ್ಯವೇನು ? ಮುಂದೆ ಓದಿ.

ನ್ಯೂಟ್ರೀಶನಿಸ್ಟ್ ಮತ್ತು ಡಯೆಟೀಶಿಯನ್‌ಗಳ ಕರ್ತವ್ಯವೇನು:

* ನ್ಯೂಟ್ರೀಶನ್ ಮತ್ತು ಫುಡ್ ಸೈನ್ಸ್‌ ನಲ್ಲಿ ವೈಜ್ಞಾನಿಕವಾಗಿ ಅಧ್ಯಯನ ಮಾಡಬಹುದು.
* ಜನರಿಗೆ ಆಹಾರ ಸೇವನೆಯ ಪದ್ಧತಿ ಬಗೆಗೆ ಮಾರ್ಗದರ್ಶನ ನೀಡಬಹುದು.
* ರೋಗಿಗೆ ಅಥವಾ ಕ್ಲೈಂಟ್‌ಗಳಿಗೆ ಅಗತ್ಯ ಡಯಟ್ ಪ್ಲಾನ್ ಹೇಗಿರಬೇಕು ಎಂದು ತಿಳಿಸುವುದು
* ಈ ವಿಷಯಗಳಲ್ಲಿ ಸಂಶೋಧನೆಯನ್ನು ಮಾಡಬಹುದು.

ರಾಷ್ಟ್ರೀಯ ವೈದ್ಯರ ದಿನ 2019: ಆರೋಗ್ಯ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿವೆ ನಿಮಗೆ ಗೊತ್ತಾ?ರಾಷ್ಟ್ರೀಯ ವೈದ್ಯರ ದಿನ 2019: ಆರೋಗ್ಯ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳಿವೆ ನಿಮಗೆ ಗೊತ್ತಾ?

ಕೋರ್ಸ್‌ಗಳ ವಿವರ:

ಎಲ್ಲಾ ಪ್ರೊಫೆಷನಲ್ ಕೋರ್ಸ್‌ಗಳಂತೆಯೇ ನ್ಯೂಟ್ರೀಶನ್ ಮತ್ತು ಡಯೆಟಿಕ್ಸ್ ಕೋರ್ಸ್‌ಗಳನ್ನು ಈ 3 ರೀತಿಯಲ್ಲಿ ಅಧ್ಯಯನ ಮಾಡಬಹುದು. ಅವುಗಳೆಂದರೆ ಡಿಪ್ಲೋಮ ಕೋರ್ಸ್‌ಗಳು, ಪದವಿ ಕೋರ್ಸ್‌ಗಳು ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳು. ಭಾರತದಲ್ಲಿ ಯಾವೆಲ್ಲಾ ಕೋರ್ಸ್‌ಗಳಿವೆ? ಎಷ್ಟು ಅವಧಿಯಲ್ಲಿ ಆ ಕೋರ್ಸ್‌ಗಳನ್ನು ಮಾಡಬಹುದು ಮತ್ತು ಅರ್ಹತೆಗಳೇನಿರಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಡಿಪ್ಲೋಮ ಕೋರ್ಸ್‌ಗಳು:

* ಡಿಪ್ಲೋಮ ಇನ್ ನ್ಯೂಟ್ರೀಶನ್‌ ಮತ್ತು ಹೆಲ್ತ್ ಎಜುಕೇಶನ್
* ಡಿಪ್ಲೋಮ ಇನ್ ಡಯೆಟಿಕ್ಸ್
* ಡಿಪ್ಲೋಮ ಇನ್ ನ್ಯೂಟ್ರೀಶನ್ ಮತ್ತು ಡಯೆಟಿಕ್ಸ್
* ಡಿಪ್ಲೋಮ ಇನ್ ಫುಡ್ ಸೈನ್ಸ್ ಮತ್ತು ನ್ಯೂಟ್ರೀಶನ್
* ಡಿಪ್ಲೋಮ ಇನ್ ಡಯೆಟಿಕ್ಸ್ ಮತ್ತು ಕ್ಲಿನಿಕಲ್ ನ್ಯೂಟ್ರೀಶನ್
* ಡಿಪ್ಲೋಮ ಇನ್ ನ್ಯೂಟ್ರೀಶನ್ ಮತ್ತು ಫುಡ್ ಟೆಕ್ನಾಲಜಿ

ಕೋರ್ಸ್‌ನ ಅವಧಿ:

ಕೋರ್ಸ್‌ನ ಅವಧಿಯು ಸಂಸ್ಥೆಯ ಮೇಲೆ ಅವಲಂಭಿತವಾಗಿರುತ್ತದೆ. ಕೆಲವು ಸಂಸ್ಥೆಗಳಲ್ಲಿ ದೂರ ಶಿಕ್ಷಣದ ಮೂಲಕ ಕೂಡ ಈ ಕೋರ್ಸ್‌ಗಳನ್ನು ಮಾಡಬಹುದು. ಸಾಮಾನ್ಯವನ್ನು ಈ ಡಿಪ್ಲೋಮ ಕೋರ್ಸ್‌ಗಳನ್ನು 2 ರಿಂದ 3 ವರ್ಷದ ಅವಧಿಯಲ್ಲಿ ಮಾಡಬಹುದು.

ಅರ್ಹತೆಗಳೇನಿರಬೇಕು?

ಡಿಪ್ಲೋಮ ಕೋರ್ಸ್‌ ಅನ್ನು ಮಾಡಲು ಬಯಸುವ ಅಭ್ಯರ್ಥಿಯು 10+2 ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್‌ನಿಂದ ಪಡೆದಿರಬೇಕು.

ಉನ್ನತ ವ್ಯಾಸಂಗ:

ಡಿಪ್ಲೋಮ ನಂತರ ಅಭ್ಯರ್ಥಿಗಳು ಬಿ.ಎಸ್ಸಿ ಪದವಿ ಕೋರ್ಸ್‌ಗಳನ್ನು ಮಾಡಬಹುದು ನಂತರ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಬಹುದು.

ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ನೀವು ಮಾಡಬಹುದು ಗೊತ್ತಾ?ಸಿನೆಮಾ ಕ್ಷೇತ್ರದಲ್ಲಿ ಯಾವೆಲ್ಲಾ ಉದ್ಯೋಗಗಳನ್ನು ನೀವು ಮಾಡಬಹುದು ಗೊತ್ತಾ?

ಪದವಿ ಕೋರ್ಸ್‌ಗಳ ವಿವರ:

* ಬಿ.ಎಸ್ಸಿ ಇನ್ ಕ್ಲಿನಿಕಲ್ ನ್ಯೂಟ್ರೀಶನ್
* ಬಿ.ಎಸ್ಸಿ ಇನ್ ನ್ಯೂಟ್ರೀಶನ್ ಮತ್ತು ಡಯೆಟಿಕ್ಸ್
* ಬಿ.ಎಸ್ಸಿ ಇನ್ ಫುಡ್ ಸೈನ್ಸ್ ಮತ್ತು ನ್ಯೂಟ್ರೀಶನ್
* ಬಿ.ಎಸ್ಸಿ ಇನ್ ಅಪ್ಲೈಡ್ ನ್ಯೂಟ್ರೀಶನ್
* ಬಿ.ಎಸ್ಸಿ ಇನ್ ಡಯೆಟಿಕ್ಸ್
* ಬಿ.ಎಸ್ಸಿ ಇನ್ ಹೋಂ ಸೈನ್ಸ್

ಕೋರ್ಸ್‌ ಅವಧಿ:

ಈ ಪದವಿ ಕೋರ್ಸ್‌ಗಳು 3 ವರ್ಷಗಳ ಅವಧಿಯನ್ನು ಒಳಗೊಂಡಿರುತ್ತದೆ.

ಅರ್ಹತೆಗಳೇನಿರಬೇಕು?

ಈ ಕೋರ್ಸ್‌ಗಳನ್ನು ಮಾಡಲು ಇಚ್ಚಿಸುವ ಅಭ್ಯರ್ಥಿಗಳು 10+2 ಅನ್ನು ವಿಜ್ಞಾನ ವಿಭಾಗದಲ್ಲಿ ಮಾನ್ಯತೆ ಪಡೆದ ಬೋರ್ಡ್‌ನಿಂದ ಹೊಂದಿರಬೇಕು.

ಉನ್ನತ ವ್ಯಾಸಂಗ:

ಪದವಿಯನ್ನು ಅಧ್ಯಯನ ಮಾಡಿದ ನಂತರ ಅಭ್ಯರ್ಥಿಗಳು ಪಿಜಿ ಪದವಿ ಅಥವಾ ಪಿಜಿ ಡಿಪ್ಲೋಮ ಕೋರ್ಸ್‌ಗಳನ್ನು ಮಾಡಬಹುದು ಮತ್ತು ಉನ್ನತ ವ್ಯಾಸಂಗ ಮಾಡಲು ಇಚ್ಚಿಸಿದ್ದಲ್ಲಿ ಎಂ.ಎಸ್ಸಿ ಕೋರ್ಸ್‌ಗಳನ್ನು ಮಾಡಬಹುದು. ಯಾವೆಲ್ಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಮಾಡಬಹುದು ಎಂದು ಮುಂದೆ ತಿಳಿಸಲಾಗಿದೆ.

ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಆದ್ರೆ ನಿಮಗಾಗಿ ಯಾವೆಲ್ಲಾ ಉದ್ಯೋಗಗಳಿವೆ ಅಂತ ಗೊತ್ತಾ?ಸಂಗೀತ ಕ್ಷೇತ್ರಕ್ಕೆ ಎಂಟ್ರಿ ಆದ್ರೆ ನಿಮಗಾಗಿ ಯಾವೆಲ್ಲಾ ಉದ್ಯೋಗಗಳಿವೆ ಅಂತ ಗೊತ್ತಾ?

ಸ್ನಾತಕೋತ್ತರ ಪದವಿ ಕೋರ್ಸ್‌ಗಳ ವಿವರ:

ಪದವಿ ಮುಗಿಸಿದ ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆಯುವುದರಿಂದ ಇನ್ನಷ್ಟು ಉತ್ತಮ ಭವಿಷ್ಯವನ್ನು ಕಾಣಬಹುದು. ಅಭ್ಯರ್ಥಿಗಳು ಎಂ.ಎಸ್ಸಿ ಮತ್ತು ಪಿಜಿ ಡಿಪ್ಲೋಮ ಕೋರ್ಸ್‌ಗಳನ್ನು ಕೆಳಗೆ ನೀಡಿರುವ ವಿಷಯಗಳಲ್ಲಿ ಸ್ಟೆಷಲೈಸೇಶನ್ ಮಾಡಬಹುದು.

* ಕ್ಲಿನಿಕಲ್ ನ್ಯೂಟ್ರೀಶನ್
* ಪೀಡಿಯಾಟ್ರಿಕ್ ನ್ಯೂಟ್ರೀಶನ್
* ಪಬ್ಲಿಕ್ ಹೆಲ್ತ್ ನ್ಯೂಟ್ರೀಶನ್
* ಫುಡ್ ಸೈನ್ಸ್ / ಟೆಕ್ನಾಲಜಿ
* ಸ್ಪೋರ್ಟ್ಸ್ ನ್ಯೂಟ್ರೀಶನ್ /ಡಯೆಟಿಕ್ಸ್
* ಜಿರೋಂಟಾಲಜಿಕಲ್ ನ್ಯೂಟ್ರೀಶನ್
* ರೆನಲ್ ನ್ಯೂಟ್ರೀಶನ್

ಭಾರತದಲ್ಲಿ ಲಭ್ಯವಿರುವ ಪಿಜಿ ಕೋರ್ಸ್‌ಗಳು ಯಾವುವು:

ಭಾರತದಲ್ಲಿ ಯಾವೆಲ್ಲಾ ಪಿಜಿ ಕೋರ್ಸ್‌ಗಳನ್ನು ಅಭ್ಯರ್ಥಿಗಳು ಮಾಡಬಹುದೆಂದರೆ ಎಂ.ಎಸ್ಸಿ ಕ್ಲಿನಿಕಲ್ ನ್ಯೂಟ್ರೀಶನ್, ಎಂ.ಎಸ್ಸಿ ಫುಡ್ ಸೈನ್ಸ್, ಎಂ.ಎಸ್ಸಿ ಪಬ್ಲಿಕ್ ಹೆಲ್ತ್ ನ್ಯೂಟ್ರೀಶನ್, ಎಂ.ಎಸ್ಸಿ ಇನ್ ಫುಡ್, ನ್ಯೂಟ್ರೀಶನ್ ಮತ್ತು ಡಯೆಟಿಕ್ಸ್, ಥೆರಾಪ್ಯುಟಿಕ್‌ ನ್ಯೂಟ್ರೀಶನ್‌ನಲ್ಲಿ ಪಿಜಿ ಡಿಪ್ಲೋಮ, ಸ್ಪೋರ್ಟ್ಸ್ ಸೈನ್ಸ್ ಮತ್ತು ನ್ಯೂಟ್ರೀಶನ್, ಫುಡ್ ಸೈನ್ಸ್ ಮತ್ತು ನ್ಯೂಟ್ರೀಶನ್‌ನಲ್ಲಿ ಪಿಜಿ ಡಿಪ್ಲೋಮ ಅನ್ನು ಮಾಡಬಹುದು.

ಕೋರ್ಸ್‌ ಅವಧಿ:

ಎಂ.ಎಸ್ಸಿ ಕೋರ್ಸ್‌ಗಳನ್ನು 2 ವರ್ಷ ಮತ್ತು ಪಿಜಿ ಡಿಪ್ಲೋಮ ಕೋರ್ಸ್‌ಗಳನ್ನು ಒಂದು ವರ್ಷದ ಅವಧಿಯಲ್ಲಿ ಮಾಡಬಹುದಾಗಿರುತ್ತದೆ.

ಅರ್ಹತೆಗಳೇನಿರಬೇಕು?

ಈ ಕೋರ್ಸ್‌ಗಳನ್ನು ಮಾಡಲು ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಶೇ 55% ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಸ್ನಾತಕೋತ್ತರ ಪದವಿ ಅಥವಾ ಪಿಜಿ ಡಿಪ್ಲೋಮ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ ಅಭ್ಯರ್ಥಿಗಳು ಇನ್ನಷ್ಟು ಅಧ್ಯಯನದಲ್ಲಿ ತೊಡಗಲು ಇಚ್ಚಿಸಿದ್ದಲ್ಲಿ ಎಂ.ಫಿಲ್ ಮತ್ತು ಪಿ.ಎಚ್‌ಡಿ ಅಧ್ಯಯನವನ್ನು ಮಾಡಬಹುದು.

ಪಿಯುಸಿ / ಎಸ್‌ಎಸ್‌ಎಲ್‌ಸಿ ನಂತರ ಜಾಬ್ ಓರಿಯೆಂಟೆಡ್ ಪ್ಯಾರಾಮೆಡಿಕಲ್ ಕೋರ್ಸ್‌ ಮಾಡಿದ್ರೆ ತುಂಬಾನೆ ಲಾಭ ಇದೆ ಗೊತ್ತಾ ?ಪಿಯುಸಿ / ಎಸ್‌ಎಸ್‌ಎಲ್‌ಸಿ ನಂತರ ಜಾಬ್ ಓರಿಯೆಂಟೆಡ್ ಪ್ಯಾರಾಮೆಡಿಕಲ್ ಕೋರ್ಸ್‌ ಮಾಡಿದ್ರೆ ತುಂಬಾನೆ ಲಾಭ ಇದೆ ಗೊತ್ತಾ ?

ಕರಿಯರ್ ಮತ್ತು ಉದ್ಯೋಗಾವಕಾಶ ಹೇಗಿದೆ?

ಭಾರತದಲ್ಲಿ ಈ ಕೋರ್ಸ್‌ಗಳನ್ನು ಮಾಡಿದವರಿಗೆ ಭಾರೀ ಬೇಡಿಕೆ ಇದೆ. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ನ್ಯೂಟ್ರೀಶನಿಸ್ಟ್ ಮತ್ತು ಡಯೆಟೀಶಿಯನ್‌ಗಳಿಗೆ ಹೆಚ್ಚು ಉದ್ಯೋಗಾವಕಾಶಗಳಿವೆ.

ನ್ಯೂಟ್ರೀಶನಿಸ್ಟ್ ಅಥವಾ ಡಯೆಟೀಶಿಯನ್‌ಗಳು ತಮ್ಮ ಕರಿಯರ್ ಅನ್ನು ಸಂಶೋಧನೆ, ಹೆಲ್ತ್ ಸೆಕ್ಟರ್,ಸರ್ಕಾರಿ ಸ್ಕೀಮ್ ಮತ್ತು ಸಂಸ್ಥೆಗಳಲ್ಲಿ, ಎನ್‌ಜಿಓ, ಶಿಕ್ಷಕ ಮತ್ತು ಶಿಕ್ಷಣ ವಲಯಗಳಲ್ಲಿ ಪ್ರಾರಂಭಿಸಬಹುದು.

ಅಭ್ಯರ್ಥಿಯು ಸಂಶೋಧನಾ ವಲಯದಲ್ಲಿ ವೃತ್ತಿಜೀವನವನ್ನು ನಿರ್ಮಿಸಲು ಎಂ.ಫಿಲ್ ಮತ್ತು ಪಿ.ಎಚ್‌ಡಿ ವಿದ್ಯಾರ್ಹತೆಗಳು ಅಗತ್ಯವಾಗಿರುತ್ತದೆ.ಇನ್ನು ಎಂ.ಎಸ್ಸಿ, ಎಂ.ಫಿಲ್ ಮತ್ತು ಪಿ.ಎಚ್‌ಡಿ ವಿದ್ಯಾರ್ಹತೆಯನ್ನು ಪಡೆದ ಅಭ್ಯರ್ಥಿಗಳು ಉಪನ್ಯಾಸಕ/ಉಪನ್ಯಾಸಕಿ ಅಥವಾ ಮಾರ್ಗದರ್ಶಕರಾಗಿ ಕೂಡ ಕೆಲಸ ಮಾಡಬಹುದು.

ಸರ್ಕಾರಿ ವಲಯಗಳಲ್ಲಿ ಇರುವ ಉದ್ಯೋಗಾವಕಾಶ:

* ಸರ್ಕಾರಿ ಆಸ್ಪತ್ರೆಗಳು
* ಸಮುದಾಯ ಆರೋಗ್ಯ ಕೇಂದ್ರಗಳು
* ಸರ್ಕಾರಿ ಯೋಜನೆಗಳು ಮತ್ತು ಕಾರ್ಯಗಳು (ಐಸಿಡಿಎಸ್,ಎನ್‌ಹೆಚ್‌ಆರ್‌ಎಂ ಇತ್ಯಾದಿ)
* ಸರ್ಕಾರಿ ಸಂಸ್ಥೆಗಳು (ಎಫ್‌ಎನ್‌ಬಿ,ಐಸಿಎಂಆರ್‌,ಪಬ್ಲಿಕ್ ಹೆಲ್ತ್ ಫೌಂಡೇಶನ್ ಇತ್ಯಾದಿ)
* ಸರ್ಕಾರಿ ಆರ್‌ ಅಂಡ್ ಡಿ ಯುನಿಟ್‌ಗಳು
* ಸರ್ಕಾರಿ ನರ್ಸಿಂಗ್ ಹೋಂ
* ಸರ್ಕಾರಿ ಪೌಷ್ಟಿಕಾಂಶ ಶಿಕ್ಷಣ ಸಂಸ್ಥೆಗಳು

ಖಾಸಗಿ ವಲಯಗಳಲ್ಲಿ ಇರುವ ಉದ್ಯೋಗಾವಕಾಶ:

* ಖಾಸಗಿ ಕ್ಲಿನಿಕ್ ಮತ್ತು ಆಸ್ಪತ್ರೆಗಳು
* ನರ್ಸಿಂಗ್ ಹೋಂಗಳು
* ಎನ್‌ಜಿಓಗಳು
* ಆಹಾರ ಉತ್ಪನ್ನಗಳ ಉತ್ಪಾದನಾ ಘಟಕಗಳು
* ಔಷಧೀಯ ಸಂಸ್ಥೆಗಳು
* ಖಾಸಗಿ ಆರ್ ಅಂಡ್ ಡಿ ಯುನಿಟ್‌ಗಳು
* ಖಾಸಗಿ ಪೌಷ್ಠಿಕಾಂಶ ಶಿಕ್ಷಣ ಸಂಸ್ಥೆಗಳು
* ಹೆಲ್ತ್ ಕ್ಲಬ್ಸ್
* ಫಿಟ್‌ನೆಸ್ ಕೇಂದ್ರಗಳು
* ಕ್ರೀಡಾ ಕೇಂದ್ರಗಳು
* ಹೋಟೆಲ್‌ಗಳು

ಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿಪಿಯುಸಿ ನಂತರ ವಿದೇಶದಲ್ಲಿ ನೀವು ಅಧ್ಯಯನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? ನಾವು ಹೇಳ್ತೀವಿ ನೋಡಿ

ಭಾರತದಲ್ಲಿ ರಿಜಿಸ್ಟರ್ಡ್ ಡೈಯೆಟೀಶಿಯನ್ ಆಗುವುದು ಹೇಗೆ:

ಅಭ್ಯರ್ಥಿಗಳು ಹೋಮ್ ಸೈನ್ಸ್‌ (ಫುಡ್ ಮತ್ತು ನ್ಯೂಟ್ರೀಶಿಯನ್) ನಲ್ಲಿ ಬಿ.ಎಸ್ಸಿ ಅಥವಾ ನ್ಯೂಟ್ರೀಶನ್ ಮತ್ತು ಡಯೆಟಿಕ್ಸ್ ನಲ್ಲಿ ಬಿ.ಎಸ್ಸಿ ಅಥವಾ ಅದಕ್ಕೆ ಸಂಬಂಧಪಟ್ಟ ಬಿ.ಎಸ್ಸಿ ಕೋರ್ಸ್‌ಗಳನ್ನು ಮಾಡಿರಬೇಕು. ಬಿ.ಎಸ್ಸಿ ಅಧ್ಯಯನದ ನಂತರ ಅಭ್ಯರ್ಥಿಗಳು ಕ್ಲಿನಿಕಲ್ ನ್ಯೂಟ್ರೀಶನ್ ಅಥವಾ ಫುಡ್ ಮತ್ತು ನ್ಯೂಟ್ರೀಶನ್‌ ನಲ್ಲಿ ಎಂ.ಎಸ್ಸಿ ಅಥವಾ ಪಿಜಿ ಡಿಪ್ಲೋಮ ಕೋರ್ಸ್‌ಗಳನ್ನು ಮಾಡಬಹುದು.

ಬಿ.ಎಸ್ಸಿ ಮತ್ತು ಎಂ.ಎಸ್ಸಿ ಕೋರ್ಸ್‌ಗಳನ್ನು ಅಧ್ಯಯನ ಮಾಡಿದ ನಂತರ ಅಭ್ಯರ್ಥಿಗಳು 6 ತಿಂಗಳ ಇಂಟರ್ನ್‌ಶಿಪ್ ಅನ್ನು ಮಾಡಬೇಕಿರುತ್ತದೆ. ಅಭ್ಯರ್ಥಿಗಳು ಐಡಿಎ ನಿಂದ ಮಾನ್ಯತೆ ಪಡೆದ ಆಸ್ಪತ್ರೆಗಳಲ್ಲಿ ಇಂಟರ್ನ್‌ಶಿಪ್ ಅನ್ನು ಮಾಡಬಹುದು ಅಥವಾ ಆಸ್ಪತ್ರೆಗಳಲ್ಲಿ ಡಯೆಟೀಶಿಯನ್ ಆಗಿ ಕನಿಷ್ಟ 2 ವ‍ರ್ಷಗಳು ಕೆಲಸವನ್ನು ನಿರ್ವಹಿಸಬಹುದು.

ಅಧ್ಯಯನದ ನಂತರ ಇಂಟರ್ನ್‌ಶಿಪ್ ಪೂರ್ಣಗೊಳಿಸಿದ ಆಭ್ಯರ್ಥಿಗಳು ಐಡಿಐ ನಡೆಸುವ ರಿಜಿಸ್ಟರ್ಡ್ ಡೈಯೆಟೀಶಿಯನ್ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಈ ಪರೀಕ್ಷೆಯನ್ನು ಪಾಸ್ ಮಾಡಿಕೊಂಡ ನಂತರ ಐಡಿಎ ನಲ್ಲಿ ರಿಜಿಸ್ಟರ್ಡ್‌ ಮಾಡಿಕೊಂಡರೆ ಅಭ್ಯರ್ಥಿಯು ರಿಜಿಸ್ಟರ್ಡ್‌ ಡೈಯೆಟೀಶಿಯನ್ ಆಗಬಹುದು.

ವೇತನ ಹೇಗಿರುತ್ತೆ?

ಈ ಉದ್ಯೋಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕೆಲಸ ಮಾಡುವ ಸಂಸ್ಥೆ, ಕೆಲಸ ನಿರ್ವಹಿಸುವ ಸ್ಥಳ ಮತ್ತು ಅಭ್ಯರ್ಥಿಗಳ ವಿದ್ಯಾರ್ಹತೆಯ ಆಧಾರದ ಮೇಲೆ ಅವರ ವೇತನವನ್ನು ನಿಗದಿತಪಡಿಸಲಾಗುವುದು. ಆರಂಭಿಕ ಹಂತದಲ್ಲಿ ಅಭ್ಯರ್ಥಿಗಳು ತಿಂಗಳಿಗೆ 15 ರಿಂದ 20 ಸಾವಿರವರೆಗೂ ವೇತನವನ್ನು ಪಡೆಯಬಹುದು. ಅಭ್ಯರ್ಥಿಗಳು ವೃತ್ತಿಯಲ್ಲಿ ಹೆಚ್ಚು ಅನುಭವ ಪಡೆದಷ್ಟು ವೇತನವನ್ನು ಹೆಚ್ಚಾಗಿ ಪಡೆಯಬಹುದು. ಇನ್ನು ಸರ್ಕಾರಿ ವಲಯಗಳಲ್ಲಿ ಉದ್ಯೋಗವನ್ನು ಪಡೆದರೆ ಉತ್ತಮ ಸಂಪಾದನೆಯನ್ನು ಕೂಡ ಮಾಡಬಹುದು.

For Quick Alerts
ALLOW NOTIFICATIONS  
For Daily Alerts

English summary
Here we are giving information about nutrition and dietician courses after class 12th in India. Check out the courses, career opportunities, eligibility and scope.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X