ಪತ್ನಿ ಜತೆ ಹೀಗೆ ನಡೆದುಕೊಳ್ಳಿ... ಆಕೆ ಕೆರಿಯರ್ ಲೈಫ್ ಖಂಡಿತ ಸಕ್ಸಸ್ ಆಗುತ್ತೆ!

ಸಂಗಾತಿ ಹೊರಗೆ ದುಡಿದು ಬಂದಾಗ ಆಕೆಗೆ ಮನೆಯಲ್ಲಿ ಕಂಫರ್ಟೇಬಲ್ ವಾತಾವರಣ ನಿರ್ಮಿಸಿ. ಅಷ್ಟೇ ಅಲ್ಲ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಆಕೆಗೆ ನೆರವಾಗಿ. ಇದರಿಂದ ಆಕೆ ಕುಗ್ಗದೆ ಮತ್ತೆ ಹೊಸ ಚೈತನ್ಯ ಪಡೆಯುತ್ತಾಳೆ.

By Kavya

ವೇಗ ಗತಿಯಲ್ಲಿ ಅಭಿವೃದ್ದಿ ಹೊಂದಿರುವ ಈ ಕಾಲದಲ್ಲಿ ಎಲ್ಲರೂ ಟಾಪ್ ಸ್ಥಾನ ಅಲಂಕರಿಸಕೊಳ್ಳಲು ಹಗಲು ರಾತ್ರಿ ಎನ್ನದೇ ಶ್ರಮಪಡುತ್ತಿರುತ್ತಾರೆ. ಪ್ರತಿಯೊಬ್ಬರಿಗೂ ನಕ್ಷತ್ರವನ್ನ ಮುಟ್ಟೋ ಆಸೆ ಅದೇ ರೀತಿ ತಾವೂ ಕೂಡಾ ಪಳ ಪಳ ಹೊಳೆಯಬೇಕು ಎನ್ನುವ ಆಸೆ. ಆದ್ರೆ ಈ ಕಾಂಪಿಟೇಶನ್ ನಲ್ಲಿ ಅದೆಷ್ಟೋ ಮಂದಿ ಹಿಂದೆ ಬಿದ್ದಿರುತ್ತಾರೆ. ಕಾರಣ ಅವರಿಗೆ ಯಾರೂ ಸಪೋರ್ಟ್ ಮಾಡೋರು ಇರುವುದಿಲ್ಲ.

ಸಂಗಾತಿ ಸಕ್ಸಸ್ ಗೆ ಪತಿ ಹೇಗೆ ನರವಾಗಬಹುದು!

ಹೀಗೆ ಸ್ಟ್ರಗಲ್ ಹಂತದಲ್ಲಿ ತಮ್ಮ ಜೊತೆ ಯಾರಾದ್ರೂ ಬೆಂಬಲಕ್ಕೆ ನಿಂತಾಗ ನಾವು ಶೀಘ್ರವಾಗಿ ಗುರಿ ತಲುಪಬಹುದು. ಸಂಗಾತಿ ಹೊರಗೆ ದುಡಿದು ಬಂದಾಗ ಆಕೆಗೆ ಮನೆಯಲ್ಲಿ ಕಂಫರ್ಟೇಬಲ್ ವಾತಾವರಣ ನಿರ್ಮಿಸಿ. ಅಷ್ಟೇ ಅಲ್ಲ ಮಾನಸಿಕವಾಗಿ ಹಾಗೂ ಶಾರೀರಿಕವಾಗಿ ಆಕೆಗೆ ನೆರವಾಗಿ. ಇದರಿಂದ ಆಕೆ ಕುಗ್ಗದೆ ಮತ್ತೆ ಹೊಸ ಚೈತನ್ಯ ಪಡೆಯುತ್ತಾಳೆ.

ಸಂಗಾತಿ ಕಷ್ಟವನ್ನ ಯಾವ ರೀತಿಯಾಗಿ ಶೇರ್ ಮಾಡಿಕೊಳ್ಳಬಹುದು ಎಂಬುವುದು ಇಲ್ಲಿದೆ ನೋಡಿ:

ಕೇಳಿಸಿಕೊಳ್ಳಿ:

ನಾವು ಮನಸ್ಸು ಬಿಚ್ಚಿ ಮಾತನಾಡಬಹುದು, ಹಾಗೆಯೇ ನಮ್ಮ ಅನಿಸಿಕೆ ಅವರ ಜತೆ ಹಂಚಿಕೊಳ್ಳಬಹುದು. ಆದ್ರೆ ಅದಕ್ಕಿಂತ ಪ್ರಮುಖವಾದುದು ನಾವು ಆಲಿಸುವ ಗುಣ ಹೊಂದಿರಬೇಕು. ಸಂಗಾತಿ ಅದೆಷ್ಟೋ ಸಮಸ್ಯೆಗಳನ್ನ ನಮ್ಮ ಮುಂದೆ ಹೇಳಲು ಬಂದಾಗ ಅವರ ಜತೆ ನಾವು ಕುಳಿತು ಅವರ ಸಮಸ್ಯೆಗಳನ್ನ ಆಲಿಸಬೇಕು. ಕೊನೆಯಲ್ಲಿ ಸಲಹೆ ನೀಡಬೇಕು.ಇದರಿಂದ ಅವರಿಗೆ ಸೆಕ್ಯುರ್ ಫೀಲ್ ಆಗುವುದು ಮಾತ್ರವಲ್ಲದೆ, ಅವರ ಮನಸ್ಸು ಕೂಡಾ ನಿರಾಳವಾಗುವುದು

ಲೋಡ್ ಶೇರ್ ಮಾಡಿಕೊಳ್ಳಿ:

ಇದು ಫಸ್ಟ್ ಹಾಗೂ ಪ್ರಮುಖ ವಿಚಾರವಾಗಿದೆ. ನಿಮ್ಮ ಸಂಗಾತಿಯ ಜವಬ್ದಾರಿಯನ್ನ ಹಂಚಿಕೊಳ್ಳಿ. ಅಂದ್ರೆ ಆಕೆಗೆ ಮನೆ ಕೆಲಸದಲ್ಲಿ ಸಹಾಯ ಮಾಡಿ, ಮಕ್ಕಳನ್ನ ಶಾಲೆಗೆ ಬಿಡುವ ಹಾಗೂ ಶಾಲೆಯಿಂದ ಕರೆ ತರುವ ಜವಬ್ದಾರಿ ನಿಮ್ಮದಾಗಿಸಿಕೊಳ್ಳಿ. ಮಾರುಕಟ್ಟೆಗೆ ಹೋಗಿ ತರಕಾರಿ ತನ್ನಿ. ಹೀಗೆ ಮನೆಗೆ ಸಂಬಂಧಪಟ್ಟಂತೆ ಹಲವಾರು ಕೆಲಸಗಳಲ್ಲಿ ಆಕೆಗೆ ನೆರವಾಗಿ.

ಶಾಂತ ವಾತಾವರಣ ನಿರ್ಮಿಸಿ:

ಕಚೇರಿಯಿಂದ ಇಬ್ಬರೂ ಕೆಲಸ ಮುಗಿಸಿ ಬಂದೊಡನೆ, ನಿಮಗೆ ಅವರ ಜತೆ ಟೈಂ ಕಳೆಯಬೇಕು ಎಂದು ಅನಿಸಿರುತ್ತದೆ. ಆದ್ರೆ ನಿಮ್ಮ ಸಂಗಾತಿಗೆ ಅವರ ಪಾಡಿಗೆ ರೆಸ್ಟ್ ಬೇಕು ಎಂದು ಅನಿಸಬಹುದು. ಒಬ್ಬರೇ ಕುಳಿತುಕೊಳ್ಳಬೇಕೆಂದು ಅನಿಸಬಹುದು, ಶಾಂತ ವಾತಾವರಣ ಬೇಕು ಎಂದು ಅನಿಸಬಹುದು ಈ ಟೈಂ ನಲ್ಲಿ ಅವರನ್ನ ಅವರ ಪಾಡಿಗೆ ಬಿಟ್ಟು ಬಿಡಿ. ಬದಲಿಗೆ ಯಾವುದೇ ಕಾರಣಕ್ಕೂ ಯಾವುದೇ ವಿಚಾರಕ್ಕೂ ಅವರಿಗೆ ಫೋರ್ಸ್ ಮಾಡಲು ಹೋಗಬೇಡಿ.

ಆಕೆಯನ್ನ ಹೊಗಳಿ ಹಾಗೂ ಆಕೆಗೆ ಕಾಂಪ್ಲಿಮೆಂಟ್ ನೀಡಿ:

ನೀವು ಚಿಕ್ಕ ಚಿಕ್ಕ ವಿಷಯಕ್ಕೂ ಆಕೆಗೆ ಕಾಂಪ್ಲಿಮೆಂಟ್ ನೀಡಿ. ಇದರಿಂದ ಆಕೆ ತುಂಬಾ ಸಂತಸಗೊಳ್ಳುತ್ತಾಳೆ. ಪ್ರತಿಯೊಂದು ವಿಚಾರಕ್ಕೂ ನಿಮ್ಮ ಸಂಗಾತಿಗೆ ಪಾಸಿಟೀವ್ ಆಗಿ ಬೆಂಬಲಿಸಿ. ಆಕೆಯ ಪ್ರತಿಯೊಂದು ಚಟುವಟಿಕೆಗೂ ಆಕೆಗೆ ಕಾಂಪ್ಲಿಮೆಂಟ್ ನೀಡಿ. ಇದರಿಂದ ನಿಮ್ಮ ಸಂಗಾತಿಯ ಕಾಂಫಿಡೆನ್ಸ್ ಹೆಚ್ಚುವುದು.

ರಿಲಾಕ್ಸಿಂಗ್ ಟ್ರೀಟ್:

ನಿಮ್ಮ ಪತ್ನಿ ಕೂಡಾ ಹೊರಗಡೆ ದುಡಿದು, ದಣಿದು ಬಂದಿರುತ್ತಾರೆ. ಹಾಗಾಗಿ ಅವರಿಗಾಗಿ ಒಂದು ರೊಮಾಂಟಿಕ್ ಡಿನ್ನರ್ ಆಯೋಜಿಸಿ. ಅವರನ್ನ ಹೊರಗಡೆ ಸಿನಿಮಾಕ್ಕೆ ಕರೆದುಕೊಂಡು ಹೋಗಿ. ಅವರಿಗೆ ಇಷ್ಟವಾದ ಫುಡ್ ನೀವೇ ನಿಮ್ಮ ಕೈಯಾರೆ ಮಾಡಿ ಬಡಿಸಿ. ಇದರಿಂದ ಅವರು ತಮ್ಮೆಲ್ಲಾ ಕಷ್ಟಗಳನ್ನ ಮರೆತು ನಿಮ್ಮ ಜೊತೆ ಹಾಯಾಗಿ ರಿಲಾಕ್ಸ್ ಆಗಿ ಇರುತ್ತಾರೆ.

For Quick Alerts
ALLOW NOTIFICATIONS  
For Daily Alerts

English summary
In this world everybody is struggling to make success. All Are wants to reach the stars and shine as bright as they can. just the feeling that someone is there to take care when we are stressed, is what makes one strive harder to reach their goals.
--Or--
Select a Field of Study
Select a Course
Select UPSC Exam
Select IBPS Exam
Select Entrance Exam
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X