ಸುಂದರ ದಂತ ಜೋಡಣೆ ಹಿಂದಿನ ಕೈ... ಆರ್ತೋಡೊಂಟಿಕ್ಸ್ ಅಧ್ಯಯನದ ಬಗ್ಗೆ ಒಂದಿಷ್ಟು!

Posted By:

ದಂತ ಹಾಗೂ ದವಡೆಯ ಅಧ್ಯಯನವೇ ಆರ್ತೋಡೊಂಟಿಕ್ಸ್. ಇವರನ್ನು ಡೆಂಟಿಸ್ಟ್ ಇಲ್ಲ ಹಲ್ಲಿನ ವೈದ್ಯರು ಎಂದು ಕರೆಯುತ್ತಾರೆ. ಸುಂದರವಾಗಿ ಕಾಣಬೇಕಾದ್ರೆ ಮುಖ್ಯ ಕಾರಣ ನಗುವಾಗಿರುತ್ತದೆ. ನಮ್ಮ ದಂತಗಳ ಜೋಡಣೆ ಸರಿಯಾಗಿದ್ದಾಗ ಮಾತ್ರ ಸುಂದರವಾದ ನಗು ಮೂಡಲು ಸಾಧ್ಯ. ಆದ್ರೆ ವಕ್ರವಾದ ಹಲ್ಲುಗಳು, ತುಂಡರಿಸಿದ ಹಲ್ಲುಗಳು, ಹಾಳಾದ ಹಲ್ಲುಗಳು ಸೌದರ್ಯದ ನೆಗಟೀವ್ ಪಾಯಿಂಟ್ ಆಗಿರುತ್ತದೆ. ನಮ್ಮ ಹಲ್ಲುಗಳ ಸೌಂದರ್ಯವನ್ನ ಮರಳಿ ತರಿಸಲು ಡೆಂಟಿಸ್ಟ್ ಗಳಿಂದ ಮಾತ್ರ ಸಾಧ್ಯ. ಅಷ್ಟೇ ಅಲ್ಲ ಹಲ್ಲು ಹಾಗೂ ದವಡೆಗೆ ಸಂಬಂಧಪಟ್ಟ ಯಾವುದೇ ಸಮಸ್ಯೆ ಇದ್ದರೂ ಅದನ್ನು ಪರಿಹರಿಸಲು ವೈದ್ಯರಿಂದ ಮಾತ್ರ ಸಾಧ್ಯ.

ದಂತ ಹಾಗೂ ದವಡೆಯ ಅಧ್ಯಯನಕ್ಕೆ ಸಂಬಂಧಪಟ್ಟಂತೆ ಮಾಡುವ ಕೋರ್ಸ್ ಆರ್ತೋಡೊಂಟಿಕ್ಸ್. ಈ ಕೋರ್ಸ್ ನ ಉದ್ದೇಶವೇನು, ಯಾಕೆ ಮುಖ್ಯ, ಹೇಗೆ ಆರ್ಥೊಡಾಂಟಾಲಜಿಸ್ಟ್ ಆಗಲು ಸಾಧ್ಯ ಎಂಬ ಮಾಹಿತಿ ಇಲ್ಲಿದೆ

ಮಲೋಕ್ಲೂಷನ್ :

ಮೇಲಿನ ದವಡೆ ಹಾಗೂ ಕೆಳಗಿನ ದವಡೆ ಸೇರುವುದನ್ನು ಮಲೋಕ್ಲೂಷನ್ ಎನ್ನುತ್ತಾರೆ. ಬಾಯಿ ಮುಚ್ಚಿದಾಗ ಹಲ್ಲು ಜೋಡಣೆ ಸ್ಪಷ್ಟವಾಗಿ ಗುರುತಿಸಬಹುದು. ಬಾಯಿ ಮುಚ್ಚುವಾಗ ಹಲ್ಲು ಹಾಗೂ ದವಡೆ ಸರಿಯಾಗಿ ಸಂಧಿಸಿದ್ರೆ ಮಲೋಕ್ಲೂಷನ್ ಚೆನ್ನಾಗಿದೆ ಎಂದರ್ಥ.

ಮಲೋಕ್ಲೂಷನ್ ಯಾಕೆ ಮುಖ್ಯ:

ಮುಖಕ್ಕೆ ಸರಿಯಾದ ಶೇಪ್ ಬರುವಂತೆ ಮಾಡಲು ಮಲೋಕ್ಲೂಷನ್ ಮುಖ್ಯ. ಅಷ್ಟೇ ಅಲ್ಲ ವ್ಯಕ್ತಿಯ ಸುಂದರವಾದ ನಗುವಿಗೂ ಮಲೋಕ್ಲೂಷನ್ ಅಗತ್ಯ

ಆರ್ಥೊಡಾಂಟಾಲಜಿಸ್ಟ್:

ಆರ್ಥೊಡಾಂಟಾಲಜಿಸ್ಟ್ ಅಂದ್ರೆ ಅವರು ಡೆಂಟಿಸ್ಟ್. ಹಲ್ಲುಗಳನ್ನು ಜೋಡಿಸುವುದು ಮತ್ತು ಸ್ಮೈಲ್ಗಳನ್ನು ಸರಿಪಡಿಸುವುದು ಅವರ ಕೆಲಸ. ಕೆಲವು ಸೆಲೆಬ್ರಟಿಗಳ ಸುಂದರ ನಗುವಿನ ಹಿಂದಿನ ಕಾರಣ ಅವರೇ ಆಗಿರುತ್ತಾರೆ. ಬಾಲಿವುಡ್, ಹಾಲಿವುಡ್ ಸ್ಟಾರ್‌ ಗಳು ಇವರ ಸಹಾಯದಿಂದಲೇ ಮತ್ತಷ್ಟು ಸುಂದರವಾಗಿ ಕಾಣುತ್ತಾರೆ. ಹಲ್ಲು ಕ್ಲೀನಿಂಗ್, ಹಲ್ಲುಗಳ ಜೋಡಣೆ ಸೇರಿದಂತೆ ಇನ್ನಿತ್ತರ ಕೆಲಸಗಳನ್ನ ಇವರು ನೋಡಿಕೊಳ್ಳುತ್ತಾರೆ.

ಯಾಕೆ ಆರ್ತೋಡೊಂಟಿಕ್ಸ್ ಬೇಕು?

ಜಗತ್ತಿನಲ್ಲಿ ಅದೆಷ್ಟೋ ಮಂದಿ ಪರ್ಫೆಕ್ಟ್ ದವಡೆ ಇರುವುದಿಲ್ಲ. ಕೆಲವರಿಗೆ ಹುಟ್ಟಿನಿಂದಲೇ ಸರಿಯಿರುವುದಿಲ್ಲ ಇನ್ನು ಕೆಲವರಿಗೆ ಅವರ ಲೈಫ್ ಸ್ಟೈಲ್ ನಿಂದ ಅವರ ಹಲ್ಲುಗಳು ಸರಿಯಾಗಿರುವುದಿಲ್ಲ. ಹಾಗಾಗಿ ಅವರು ಇತರರ ಮುಂದೆ ಕಾಂಫಿಡೆಂಟ್ ಆಗಿ ನಗಲು ಕೂಡಾ ಸಾಧ್ಯವಾಗುದಿಲ್ಲ. ಇಂತಹ ಸಂದರ್ಭದಲ್ಲಿ ಅವರು ಒಳಗಿಂದಲೇ ಆತ್ಮಸ್ಥೈರ್ಯ ಕಳೆದುಕೊಳ್ಳುತ್ತಾರೆ. ಅಂತಹ ವ್ಯಕ್ತಿಗಳು ಆರ್ತೋಡೊಂಟಿಕ್ಸ್ ಸಲಹೆ ಪಡೆದರೆ ಒಳ್ಳೆಯದು. ಸುಂದರವಾದ ನಗು ಕೂಡಾ ನಿಮ್ಮದಾಗುವುದು.

ಹೇಗೆ ಆರ್ಥೊಡೆಂಟಿಸ್ಟ್ ಆಗುವುದು:

orthodontics in a dentistry courseನಲ್ಲಿ ವಿಶೇಷವಾದ ಕೋರ್ಸ್ ಮಾಡಿದ್ರೆ ನೀವು ಕೂಡಾ ಆರ್ಥೊಡೆಂಟಿಸ್ಟ್ ಆಗಬಹುದು.

ವಿದ್ಯಾರ್ಹತೆ:

ಡೆಂಟಲ್ ಸರ್ಜರಿಯಲ್ಲಿ ಬ್ಯಾಚುಲರ್ ಡಿಗ್ರಿ
ಡೆಂಟಲ್ ಸರ್ಜರಿಯಲ್ಲಿ ಮಾಸ್ಟರ್ ಡಿಗ್ರಿ
ಕ್ಲಿನಿಕಲ್ ಆರ್ಥೊಡೆಂಟಿಸ್ಟ್ ವಿಷಯದಲ್ಲಿ ಮಾಸ್ಟರ್ ಆಫ್ ಸೈನ್ಸ್ ಮಾಡಬೇಕು

ಎಷ್ಟು ಸಂಪಾದಿಸಬಹುದು:

ಭಾರತ ರೂ 550,000 ವರ್ಷಕ್ಕೆ
ವಿದೇಶ ಡಾಲರ್ 227490

ದಂತ ಜೋಡಣೆ ಚಿಕಿತ್ಸೆಗೆ ಒಳಗಾದ ಫೇಮಸ್ ಸೆಲೆಬ್ರಿಟಗಳು:

ಎಮ್ಮ ವಾಟ್ಸನ್

ಹಾಲಿವುಡ್ ತಾರೆ ಎಮ್ಮ ವಾಟ್ಸನ್ ತೆರೆ ಮೇಲೆ ಬರೋ ಮುನ್ನ ಅವರು ಕೂಡಾ ಈ ಚಿಕಿತ್ಸೆಗೆ ಒಳಗಾಗಿದ್ದರು

ಕ್ರಿಸ್ಟಿಯಾನೋ ರೊನಾಲ್ಡೋ

ಹಾರ್ಟ್ ಥ್ರೋಬ್ ಫುಟ್‌ಬಾಲ್ ಪ್ಲೇಯರ್ ಕ್ರಿಸ್ಟಿಯಾನೋ ರೊನಾಲ್ಡ್ ಕೂಡಾ ಹಲ್ಲಿಗೆ ಕ್ಲಿಪ್ ಹಾಕಿದ್ದರು. ಯಾರಿಗೆ ಕ್ಲಿಪ್ ಧರಿಸಲು ನಾಚಿಕೆಯಾಗುತ್ತದೋ ಅವರ ಮುಂದೆ ರಾಜಾರೋಶವ ಫೋಸ್ ಕೊಡುತ್ತಿದ್ದರು

ನಟಿ ವಿದ್ಯಾಬಾಲನ್:

ಡರ್ಟಿ ಪಿಕ್ಚರ್ ಖ್ಯಾತಿಯ ನಟಿ ವಿದ್ಯಾಬಾಲನ್ ಕೂಡಾ ಸಿನಿ ಇಂಡಸ್ಟ್ರಿಗೆ ಬರೋ ಮುನ್ನ ಹಲ್ಲಿಗೆ ಕ್ಲಿಪ್ ಧರಿಸಿದ್ದರು

ಟಾಮ್ ಕ್ರೂಸ್ :

ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ಫೇಮಸ್ ಆಗೋ ಮುನ್ನ ಅವರು ಕೂಡಾ ಹಲ್ಲಿನ ಕ್ಲಿಪ್ ಧರಿಸಿದ್ದರು

English summary
Orthodontics is the study that deals with the alignment of teeth and jaws. It is the dental speciality that deals with the diagnosis, prevention, interception, and correction of malocclusion, as well as neuromuscular and skeletal abnormalities of the developing or mature orofacial structures

ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
Kannada Careerindia