ಪೋಷಕರೆ ಮೊಬೈಲ್ ಮತ್ತು ಬ್ಲೂವೇಲ್ ಚಾಲೆಂಜ್ ನಂಥ ಆಟಗಳ ಬಗ್ಗೆ ಎಚ್ಚರವಿರಲಿ

ಬ್ಲೂವೇಲ್ ಚಾಲೆಂಜ್ ಗೇಮ್, ಇಡೀ ಜಗತ್ತನೇ ಬೆಚ್ಚಿ ಬೀಳಿಸಿರುವ ಈ ಆನ್-ಲೈನ್ ಆಟದಿಂದ ಪೋಷಕರು ಭಯ ಪಡುವಂತಾಗಿದೆ. ಕೇವಲ ಬ್ಲೂ ವೇಲ್ ಮಾತ್ರವಲ್ಲದೇ ಡಿಜಿಟಲ್ ಗೇಮ್ ಗಳಿಂದಾಗಿ ಮಕ್ಕಳು ದಾರಿತಪ್ಪುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ.

ಇಂದು ಮಕ್ಕಳನ್ನು ಖುಷಿ ಪಡಿಸಲು ಪ್ರತಿಯೊಂದು ವಿಚಾರಕ್ಕೂ ಮಕ್ಕಳಿಗೆ ಮೊಬೈಲ್ ನೀಡುವ ಪೋಷಕರು ಇದನ್ನು ಗಮನಿಸಲೇ ಬೇಕು. ಏಕೆಂದರೆ ಮನಸ್ಸನ್ನು ಖುಷಿಪಡಿಸಲು ಇಂದು ನೀಡುವ ಮೊಬೈಲ್ ಫೋನ್ ಗಳೇ ಮುಂದೆ ಅವರ ಜೀವಕ್ಕೆ ಹಾನಿಯನ್ನುಂಟು ಮಾಡಬಲ್ಲವು.

ಆನ್-ಲೈನ್ ಆಟಗಳ ಬಗ್ಗೆ ಎಚ್ಚರವಿರಲಿ

 

ಬ್ಲೂ ವೇಲ್ ಮತ್ತು ಇತರೆ ಆನ್-ಲೈನ್ ಅಥವಾ ಮೊಬೈಲ್ ಆಟದ ಬಗ್ಗೆ ಎಚ್ಚರ ವಹಿಸುವುದರಲ್ಲಿ ವಿದ್ಯಾರ್ಥಿಗಳ ಪೋಷಕರ ಕಾರ್ಯ ಕೂಡ ಇಲ್ಲಿ ಮಹತ್ತರವಾಗಿದೆ. ತಮ್ಮ ಮಕ್ಕಳು ಶಾಲೆಯಿಂದ ಬಂದ ನಂತರ ಮೊಬೈಲ್, ಲ್ಯಾಪ್ ಟಾಪ್, ಕಂಪ್ಯೂಟರ್ ಅಥವಾ ಟ್ಯಾಬ್ ನಿಂದ ಯಾವ ರೀತಿಯ ಗೇಮ್ ಗಳನ್ನು ಆಡುತ್ತಾರೆ ಎಂಬುದರ ಬಗ್ಗೆ ತೀವ್ರ ನಿಗಾ ವಹಿಸಬೇಕಿದೆ.

ಪೋಷಕರೇ ನಿಮ್ಮ ಮಕ್ಕಳ ಮೇಲೆ ನಿಗಾ ಇರಲಿ

 • ಮಕ್ಕಳು ಮೊಬೈಲ್ ಅಥವಾ ಇಂಟರ್ನೆಟ್ ಬಳಸುವಾಗ ಅವರು ಯಾವುದರಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂದು ಗಮನಿಸಿ.
 • ಇಂಟರ್ನೆಟ್ ಅವರಿಗೆ ಸುಲಭವಾಗಿ ಸಿಗದಂತೆ ನೋಡಿಕೊಳ್ಳಿ.
 • ಪ್ರತಿಯೊಂದಕ್ಕು ಚೈಲ್ಡ್ ಮೋಡ್ ಅಥವಾ ಸೆಕ್ಯುರಿಟಿ ಪಾಸ್ ವರ್ಡ್ ನೀಡಿ.
 • ಮಕ್ಕಳಿಗೆ ಯಾವುದು ಉಪಯುಕ್ತವಾದದು ಎನ್ನುವುದನ್ನು ನೀವೇ ನಿರ್ಧರಿಸಿ ನಂತರ ಅವರಿಗೆ ಮೊಬೈಲ್ ಬಳಸಲು ಅವಕಾಶ ಕೊಡಿ.
 • ಮಕ್ಕಳ ಬುದ್ಧಿ ಮತ್ತು ಜ್ಞಾನ ಹೆಚ್ಚಿಸುವ ಆ್ಯಪ್ ಗಳನ್ನೇ ಅಳವಡಿಸಿಕೊಳ್ಳಿ
 • ಮಕ್ಕಳಿಗೆ ಮೊಬೈಲ್ ಬಿಟ್ಟು , ಸಂಗೀತ, ನೃತ್ಯ, ಆಟಗಳು ಸೇರಿದಂತೆ ಇತರೆ ಹವ್ಯಾಸಗಳ ಕಡೆಗೆ ತೊಡಗಿಸಿ.
 • ನಿಮ್ಮ ಮಗುವಿನ ಮುಂದೆ ಮೊಬೈಲ್ ಬಳಸುವುದನ್ನು ನೀವೂ ಕಡಿಮೆ ಮಾಡಿ

ಈಗಾಗಲೇ ಕೇಂದ್ರ ಸರ್ಕಾರ ಈ ಆಟವನ್ನು ಅಂತರ್ಜಾಲದಲ್ಲಿ ಸಿಗದಂತೆ ಮಾಡಲು ಅನೇಕ ಪ್ರಯತ್ನ ಮಾಡುತ್ತಿದೆ, ಇದರ ಜೊತೆಯಲ್ಲಿ ಪೋಷಕರಾದವರು ಕೂಡ ಗಮನ ನೀಡಬೇಕಿದೆ.

ಬ್ಲೂವೇಲ್ ಚಾಲೆಂಜ್ ಬಗ್ಗೆ ತಿಳಿದಿರಲಿ

ರಷ್ಯಾದಲ್ಲಿ ಆರಂಭಗೊಂಡ ಬ್ಲೂ ವೇಲ್ ಆಟವು ಸದ್ಯ ವಿಶ್ವದಾದ್ಯಂತ ವ್ಯಾಪಿಸಿದ್ದು, ಈವರೆಗೆ ಸುಮಾರು 200ಕ್ಕಿಂತ ಹೆಚ್ಚಿನ ಹದಿಹರೆಯದ ಯುವಕ ಯುವತಿಯರು ಈ ಆಟಕ್ಕೆ ಬಲಿಯಾಗಿದ್ದಾರೆ. ಎಲ್ಲೆಡೆ ಈ ಆಟ ವ್ಯಾಪಕವಾಗಿ ಹರಡುತ್ತಿದ್ದು, ಕರ್ನಾಟಕ ಸೇರಿ ಹಲವೆಡೆ ಮಕ್ಕಳು ಈ ಗೇಮ್ ಗೆ ಬಲಿಯಾಗಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿರುವ ತಂಡವೊಂದು ಹದಿಹರೆಯದವರನ್ನು ಆತ್ಮಹತ್ಯೆಯಂಥ ಕೃತ್ಯಕ್ಕೆ ಪ್ರಚೋದನೆ ನೀಡುವ ಆಟವೇ 'ಬ್ಲೂ ವೇಲ್ ಸುಸೈಡ್ ಚಾಲೆಂಜ್'. ಆಟದಲ್ಲಿ ಗೆಲ್ಲುವ ಸಲುವಾಗಿ ಪ್ರಾಣವನ್ನೇ ಲೆಕ್ಕಿಸದೆ ಸವಾಲುಗಳನ್ನು ಎದುರಿಸಲು ಯುವ ಸಮುದಾಯ ಮುಂದಾಗುತ್ತಿದೆ.

ಇದರಲ್ಲಿ, ತಂಡದ ನಿರ್ವಾಹಕರು ಸದಸ್ಯರಿಗೆ ಪ್ರತಿ ದಿನ ಒಂದೊಂದು ಸವಾಲಿನ ಟಾಸ್ಕ್ (ಕೆಲಸ) ನಿರ್ವಹಿಸುವಂತೆ ಸೂಚಿಸುತ್ತಾರೆ. 50 ದಿನಗಳ ಕಾಲ ಟಾಸ್ಕ್ ಸೂಚಿಸಲಾಗುತ್ತದೆ. ಪ್ರಾಣಕ್ಕೆ ಹಾನಿ ತಂದೊಡ್ಡಬಹುದಾದಂಥ ಹಲವು ಟಾಸ್ಕ್‌ಗಳನ್ನು ಮಾಡುವಂತೆ ಸೂಚಿಸಲಾಗುತ್ತದೆ. ಹೀಗೆ ದಿನಕಳೆದಂತೆ ಟಾಸ್ಕ್‌ಗಳು ಕಠಿಣವಾಗುತ್ತಾ ಹೋಗುತ್ತವೆ. 50ನೇ ದಿನ ಆತ್ಮಹತ್ಯೆಗೆ ಪ್ರಚೋದನೆ ನೀಡಲಾಗುತ್ತದೆ ಎನ್ನಲಾಗಿದೆ.

For Quick Alerts
ALLOW NOTIFICATIONS  
For Daily Alerts

  English summary
  While there are digital games that keep children occupied, promote learning and many other things, there is an ugly side to these benefits that are just the tip of the ice berg. There has been a lot of instances of children dying around the world due to the psychological killer game named 'Blue Whale Challenge'.
  --Or--
  Select a Field of Study
  Select a Course
  Select UPSC Exam
  Select IBPS Exam
  Select Entrance Exam

  ವೃತ್ತಿ ಬದುಕಿನ ಉತ್ತಮ ಅವಕಾಶಕ್ಕಾಗಿ, ಶಿಕ್ಷಣ, ವೃತ್ತಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಇತ್ತೀಚಿನ ಮಾಹಿತಿಗಳನ್ನು ಪಡೆಯಿರಿ
  Kannada Careerindia

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Careerindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Careerindia website. However, you can change your cookie settings at any time. Learn more